ಪ್ರಗತಿಯ ರಥ
ವಿಶೇಷ ಆರ್ಥಿಕ ವಲಯ
ದೇಶದ ಪ್ರಗತಿಗೆ ಆಲಯ
ಈ ಅಸ್ತ್ರವ ಬಳಸಿ ರೈತರನು
ಸಜೀವ ದಹನ ಮಾಡುವರು
ಹಸಿರನು ಹಳಿಸಿ ರಕ್ತವ ಹರಿಸಿ
ಕಟ್ಟಡಗಳ ಕಾಡನು ಕಟ್ಟುವರು
ಬಡವರ ಬಾಳಗೆ ಕೊಲ್ಲಿಯನಿಟ್ಟು
ಹಲವರು ಸಿರಿಯಲಿ ಮೆರೆಯುವರು
ದೇಶಕೆ ಬೆನ್ನೆಲುಬು ಈತನು
ಕಾಲದಿ ಭೂಮಿಯ ಒಡೆಯನು
ಹಸಿರನು ಬೆಳೆಸಿ ಬದುಕುವನು
ಭೂಮಿಗೆ ಜೀವ ಬಿಡುವವನು
ಕತ್ತಲ ಕೂಪಕೆ ಬೀಳುವ ಮುನ್ನ
ನೆತ್ತರ ಹೋಕುಲಿ ಹಾಡುವ ಮುನ್ನ
ಕೃಷಿಕರ ಮನಸನು ಅರಿತು ನೀನು
ಎಳೆಯೋ ಪ್ರಗತಿಯ ರಥವನು

- Login or register to post comments
- 206 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: