ನನ್ನ ದೇಶ
ಇದು ಜಡ ಆಡಳಿತದ ಕ್ರೌರ್ಯ
ನಡೆಸಿ ಭ್ರಷ್ಟಾಚಾರದ ರಾಜಕೀಯ
ಹಚ್ಚಿ ಕೋಮು ಗಲಭೆಗಳ ಬತ್ತಿ
ಎಲ್ಲೆಡೆ ಜಾತಿ ಮತಭೇದಗಳ ಭಿತ್ತಿ
ರಾರಾಜಿಸುತಿಹ ಅಧಿಕಾರಶಾಹಿ
ವಿಜೃಂಭಿಸುತಿಹ ಬಂಡವಾಳಶಾಹಿ
ಹಗಲು ಧರೋಡೆ ಮಾಡುತಿಹರು
ಜನರು ಮೊಖ ಪ್ರೇಕ್ಷಕರಾಗಿಹರು
ಮೇಲಿರುವವರು ಮೇಲೇರುತಿಹರು
ಕೆಳಗಿರುವವರು ಕೆಲಜಾರುತಿಹರು
ಅಸಮತೋಲನ, ಅಸಮಾಧಾನ
ಇಲ್ಲಿ ಅಗಾಧವಾಗಿ ಬೆಳೆಸುತಿಹರು
ಮಾಯವಾಗುತಿದೆ ಜಾತ್ಯಾತೀತತೆ
ಎಲ್ಲಿ ಹಡಗಿದೆ ಸರ್ವ ಸೌಹಾರ್ಧತೆ
ಕನಸೇ ಸಮ ಸಮಾಜ ನಿರ್ಮಾಣ
ಸಾಧ್ಯವೇ ಸರ್ವ ಧರ್ಮ ಸಮ್ಮಿಲನ

- Login or register to post comments
- 212 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: