Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

2007:ಸಿಂಹಾವಲೋಕನ

January 1, 2008 - 9:02pm — ASHOKKUMAR

(ಇ-ಲೋಕ-55)(1/1/2008) 

ಉದಯವಾಣಿ 

ಚಂದ್ರಯಾನದತ್ತ ಇಸ್ರೋ ದೃಷ್ಟಿ
ಇಸ್ರೋದ ಪಿಎಸ್‍ಎಲ್‍ವಿ ರಾಕೆಟ್ ಕಾರ್ಟೋಸ್ಯಾಟ್ ಸಹಿತ ನಾಲ್ಕು ಉಪ್ಗ್ರಹಗಳನ್ನು ಯಶಸ್ವಿಯಾಗಿ ಉಡ್ಡಯಿಸಿ ವರ್ಷಾರಂಭದಲ್ಲೇ ಸುದ್ದಿ ಮಾಡಿತು.ಇನ್ಸಾಟ್-4B ಫ್ರೆಂಚ್ ಗಯಾನಾದಿಂದ ಏರಿಯಾನ್ ರಾಕೆಟ್ ಮೂಲಕ ಉಡ್ಡಯನ.ಇಟೆಲಿಯ ಅಜೈಲ್ ಉಪಗ್ರಹವನ್ನು ಕಕ್ಷೆಗೆ ಯಶಸ್ವಿಯಾಗಿ ಮುಟ್ಟಿಸಲು ಇಸ್ರೋವಿನ ಪಿಎಸ್‍ಎಲ್‍ವಿ ಉಪಗ್ರಹ ಎಪ್ರಿಲ್‍ನಲ್ಲಿ ಉಡಾವಣೆ ಮಾಡಿತು.ಚಂದ್ರನ ನೆಲದಲ್ಲಿಳಿದು ಮಾಹಿತಿ ಸಂಗ್ರಹಿಸಿ,ಭೂಮಿಗೆ ಕಳುಹಿಸಿ,ಭೂಮಿಗೆ ವಾಪಸ್ಸಾಗುವ ಮಾನವ ರಹಿತ ಯಾನದತ್ತ ಇಸ್ರೋದ ಗಮನ ಕೇಂದ್ರೀಕರಿಸಿದೆ.
ಭಾರತದ ಸೂಪರ್ ಕಂಪ್ಯೂಟರಿಗೆ  ಟಾಪ್ ಟೆನ್ ಸೂಪರ್ ಕಂಪ್ಯೂಟರುಗಳಲ್ಲಿ ಸ್ಥಾನ
 ಪುಣೆಯ ಕಂಪ್ಯುಟೇಶನಲ್ ರಿಸರ್ಚ್ ಲ್ಯಾಬ್ 117.9 ಟೆರಾಫ್ಲಾಪ್ ಸಂಖ್ಯೆಯ ಲೆಕ್ಕಾಚಾರಗಳನ್ನು ಮಾಡಬಲ್ಲ ಸೂಪರ್ ಕಂಪ್ಯೂಟರನ್ನು ತಯಾರಿಸಿ ಸುದ್ದಿ ಮಾಡಿದ್ದು ಕಳೆದ ತಿಂಗಳು.ಇದನ್ನು ಅಭಿವೃದ್ಧಿ ಪಡಿಸಲು ಇಂಟೆಲ್‍ನ ಸಂಸ್ಕಾರಕಗಳನ್ನು ಬಳಸಲಾಗಿದೆ. ಹ್ಯುಲೆಟ್ ಪ್ಯಕರ್ಡ್ ಕಂಪೆನಿಯು ಒದಗಿಸಿದ ಕಂಪ್ಯೂಟರ್ ವ್ಯವಸ್ಥೆಯನ್ನಿದರಲ್ಲಿ ಬಳಸಲಾಗಿದೆ.
ಟಿವಿ ಧಾರಾವಾಹಿಗಳು ಅಂತರ್ಜಾಲದಲ್ಲಿ

 ಈ ವರ್ಷ ಎನ್‍ಬಿಸಿಯಂತಹ ಟಿವಿ ಕಂಪೆನಿಗಳು ಅಂತರ್ಜಾಲದ ಮೂಲಕ ತಮ್ಮ ಕೆಲವು ಜನಪ್ರಿಯ ಧಾರಾವಾಹಿಗಳನ್ನು ಉಚಿತವಾಗಿ ಒದಗಿಸಲು ಆರಂಭಿಸಿದುವು.ಕೆಲ ದೈನಿಕ ಧಾರಾವಾಹಿಗಳ ಎಲ್ಲಾ ಭಾಗಗಳೂ ಅಂತರ್ಜಾಲದಲ್ಲಿ ಲಭ್ಯವಾಗಿ,ಪ್ರಸಾರ ಸಮಯದಲ್ಲಿ ಟಿವಿ ನೋಡಲಾಗದವರು ತಮಗೆ ಬೇಕೆನಿಸಿದ ಹೊತ್ತು ಅವನ್ನು ನೋಡುವಂತ ಅನುಕೂಲತೆ ಲಭ್ಯವಾಯಿತು.ಧಾರಾವಾಹಿಗಳನ್ನು ನಿರ್ಮಿಸಿದವರ ಜತೆ ಈ ಹೊಸ ಮಾಧ್ಯಮದಿಂದ ಬಂದ ಲಾಭವನ್ನು ಹಂಚಿಕೊಳ್ಳಲು ನಿರಾಕರಿಸಿದ ಟಿವಿ ಕಂಪೆನಿಗಳು ಹೊಸ ವಿವಾದಕ್ಕೂ ಕಾರಣವಾದುವು.
ಐಪಾಡ್ ಮಾಯಾಜಾಲ
 ಸಂಗೀತಪ್ರಿಯರಿಗೆ ಸಂಗೀತ ಮುದ್ರಿಕೆಗಳ ಸಂಗ್ರಹವನ್ನು ಅಂಗೈಯಗಲದ ಸಾಧನದಲ್ಲಿ ಒದಗಿಸಿ,ಜನರ ಮನಗೆದ್ದ ತಂತ್ರಜ್ಞಾನವಾಗಿ ಐಪಾಡ್ ಹೆಸರು ಮಾಡಿತು.ಈ ವರ್ಷದ ಮಧ್ಯ ಭಾಗದಲ್ಲಿ ಏಪಲ್ ಕಂಪೆನಿಯು ಸಾಧನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು.ಮೊಬೈಲ್ ಹ್ಯಾಂಡ್‍ಸೆಟ್‍ನಂತೆಯೂ ಬಳಕೆಯಾಗಬಲ್ಲ ಐಫೋನ್ ಅಮೆರಿಕಾದ ಸೀಮಿತ ಮಾರುಕಟ್ಟೆಗೆ ಮಾತ್ರಾ ಉಪಯುಕ್ತವಾದರೂ,ನಾಲ್ಕು ಗಿಗಾಬೈಟು ಮತ್ತು ಎಂಟು ಗಿಗಾಬೈಟು ಸ್ಮರಣ ಸಾಮರ್ಥ್ಯವಿರುವ ಐಪಾಡ್ ವಿಶ್ವದ ಎಲ್ಲೆಡೆ ಜನಪ್ರಿಯವಾಯಿತು.ಇದನ್ನು ಹೋಲುವ ಸಾಧನವನ್ನು ಇತರ ಕಂಪೆನಿಗಳೂ ಮಾರಲಾರಂಭಿಸಿದುವು.
ಟೆರಾಬೈಟು ಸಾಮರ್ಥ್ಯದ ಹಾರ್ಡ್‍ಡಿಸ್ಕ್
 ನಾವಿನ್ನೂ ಗಿಗಾಬೈಟು ಸಾಮರ್ಥ್ಯದ ಹಾರ್ಡ್‍ಡಿಸ್ಕ್ ಬಳಸುತ್ತಿರುವಂತೆಯೇ ಹಾರ್ಡ್‍ಡಿಸ್ಕ್ ತಯಾರಕರು ಟೆರಾಬೈಟು ಸಾಮರ್ಥ್ಯದ  ಹಾರ್ಡ್‍ಡಿಸ್ಕ್ ತಯಾರಿಸಲು ತೊಡಗಿದ್ದಾರೆ.ಹಿಟಾಚಿ,ಸಿಗೇಟ್ ಮತ್ತು ವೆಸ್ಟೆರ್ನ್ ಡಿಜಿಟಲ್ ಕಂಪೆನಿಗಳು ಇಂತಹ ಸ್ಮರಣಕೋಶಗಳನ್ನು ತಯಾರಿಸಲಾರಂಭಿಸಿದುವು.
 ಬ್ಲೂರೇಡಿಸ್ಕ್ ಮತ್ತು ಎಚ್‍ಡಿ ಡಿವಿಡಿ ಎನ್ನುವ ಎರಡು ವಿಧದ ಅಧಿಕ ಸಾಮರ್ಥ್ಯದ ಡಿಸ್ಕ್‍ಗಳು ಮಾರುಕಟ್ಟೆಯಲ್ಲಿ ಲಭ್ಯ.ಬ್ಲೂರೇಡಿಸ್ಕ್ ಇಪ್ಪತ್ತೈದು ಅಥವಾ ಐವತ್ತು ಗಿಗಾಬೈಟು ಸಾಮರ್ಥ್ಯದದ್ದಾದರೆ,ಎಚ್‍ಡಿ ಡಿವಿಡಿ ಡಿಸ್ಕ್ ಹದಿನೈದು ಅಥವ ಮೂವತ್ತು ಗಿಗಾಬೈಟು ಸಾಮರ್ಥ್ಯ ಹೊಂದಿದೆ.
ಗೂಗಲ್ ಗುಲ್ಲು
 ವರ್ಷವಿಡೀ ಸುದ್ದಿಯಲ್ಲಿದ್ದ ಕಂಪೆನಿಯೆಂದರೆ ಗೂಗಲ್.ಅಂತರ್ಜಾಲ ಮೂಲಕ ಪದಸಂಸ್ಕರಣ ತಂತ್ರಾಂಶದಂತಹ ತಂತ್ರಾಂಶಗಳನ್ನು ಒದಗಿಸಿದ್ದಲ್ಲದೆ, ವಿಕಿಪೀಡಿಯ ಎನ್ನುವ ಅಂತರ್ಜಾಲ ವಿಶ್ವಕೋಶಕ್ಕೆ ಹೋಲುವ ನೋಲ್ ಎನ್ನುವ ತಾಣವನ್ನು ಆರಂಭಿಸಿದೆ.ಮೊಬೈಲ್ ಸಾಧನಕ್ಕೆ ತಂತ್ರಾಶ ಸಿದ್ಧಪಡಿಸಲು ಮುಕ್ತ ತಂತ್ರಾಂಶ ಆಂಡ್ರಾಯಿಡ್ ಎನ್ನುವ ವೇದಿಕೆಯೊದಗಿಸಿದ ಗೂಗಲ್,ನಿಸ್ತಂತು ಸ್ಪೆಕ್ಟ್ರಮ್ ಖರೀದಿಸಲೂ ನಿರ್ಧರಿಸಿದೆ.ತನ್ನ ಚಟುವಟಿಕೆಗಳಿಂದ ಹೊರಹೊಮ್ಮುವ ಅಂಗಾರಾಮ್ಲದ ಪ್ರಮಾಣವನ್ನು ಲೆಕ್ಕ ಹಾಕಿ,ಅಷ್ಟೇ ಅಂಗಾರಾಮ್ಲ ಬಿಡುಗಡೆ ಕಡಿಮೆ ಮಾಡುವ ಮರುಬಳಕೆ ಮಾಡಬಲ್ಲ ಶಕ್ತಿಮೂಲಗಳ ಸ್ಥಾಪನೆಗೆ ಕ್ರಮಕೈಗೊಳ್ಳುವ ನಿರ್ಧಾರವನ್ನೂ ಗೂಗಲ್ ಮಾಡಿದೆ.ಈ ಮೂಲಕ ಕಾರ್ಬನ್ ಶೂನ್ಯ ಸಾಧಿಸುವುದು ಕಂಪೆನಿಯ ಹೆಬ್ಬಯಕೆ.

ಹ್ಯಾಕರುಗಳು ಸುದ್ದಿಯಲ್ಲಿ
 ಹ್ಯಾಕರುಗಳು ಕಂಪ್ಯೂಟರುಗಳಿಂದ ಮಾಹಿತಿ ಕದಿಯುವಂತಹ ಕಿಡಿಗೇಡಿ ಕೃತ್ಯಗಳಿಂದ ವರ್ಷವಿಡೀ ಸುದ್ದಿಯಲಿದ್ದರು.ತೊಂಭತ್ತನಾಲ್ಕು ದಶಲಕ್ಷ ಜನರ ಕ್ರೆಡಿಟ್ ಕಾರ್ಡ್ ಮಾಹಿತಿಗಳು ಹ್ಯಾಕರುಗಳ ಕೈಸೇರಿದುವು ಎಂದರೆ ಸಮಸ್ಯೆಯ ಆಳ ಮನವರಿಕೆಯಾಗಬಹುದು.ಅಂತರ್ಜಾಲದ ಕಂಪ್ಯೂಟರುಗಳನ್ನು ವಶಕ್ಕೆ ತೆಗೆದುಕೊಂಡು ಅಕೃತ್ಯಗಳನ್ನು ಎಸಗುವ ಬೋಟ್‍ಜಾಲವೆನ್ನುವ ಹೊಸ ಪೀಡೆ ವರ್ಷವಿಡೀ ಸುದ್ದಿ ಮಾಡಿತು.
*ಅಶೋಕ್‍ಕುಮಾರ್ ಎ

  • ಪ್ರಚಲಿತ
Ornamental seperator
  • Login or register to post comments
  • 231 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮದ ಓಲೆ
  • ನನ್ನ ಕಾವ್ಯ
  • ನಾನು ಯಾವ ಆತ್ಮ
  • ಗಂಡು-ಗಾದೆ
  • ಪುರದ ಪಾಪಿಗಳು
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ
  • ಅಮ್ಮಜಿಖಷೆಸ್ಸ ಖನಮ ಒಜಿ

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:23pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:19pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 9 ಅತಿಥಿಗಳು ಆನ್ಲೈನ್ ಇರುವರು.

ಕಿವಿಯ೦ ದನಿಯೊಳು ಮನವನರ್ಥಧಿ೦
ಭವದರ್ಶನದೊಳು ಬುದ್ದಿಯನು
ನವರಸದಿ೦ ಹ್ಹೃದಯವ ತಣಿಸದ ಕೃತಿ
ಬುವಿಗೆ ತರದು ರಸಬುದ್ದಿಯನು

— - ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator