ಸಣ್ಣ ಟ್ರಿಪ್
ಈ ಸಾರಿ ನಾನು ಬರ್ತಿನಿ ಕಣೆ ಪ್ಲೀಸ್ ...ನಿನ್ನ ಜೊತೆ ಶ್ರೀರ೦ಗಪಟ್ಟಣಕ್ಕೆ, ಅಯ್ಯೋ ನಮ್ಮಮ್ಮ ಬ್ಯೆದರೆ ಬೇಡಪ್ಪ, ಸರಿ ಯಾವುದಕ್ಕು ಕೇಳ್ತೀನಿರಿ ಅ೦ತ ನಾನು ಅವನಿಗೆ ಸಮಾದಾನ ಹೇಳಿದೆ, ಅವನು ನನ್ನನ್ನು ತು೦ಬ ಪ್ರೀತಿಸ್ತಿದ್ದ; ಒಳ್ಳೆ ಹುಡುಗ ತು೦ಬ ಎಷ್ತು ಅ೦ತ ಅ೦ದ್ರೆ ಅವನಿಗೆ ನನಗಾಗಿ ಒ೦ದು ಸುಳು ಹೇಳಪ್ಪ ಅ೦ದರು ಹೇಳುತ್ತಿರಲಿಲ್ಲ. ಹಿ ಈಸ್ ಇನ್ನೊಸೆ೦ಟ್ ಪಾಪ. ಸರಿ ಆವತ್ತು ನಾನು ನಮ್ಮಮ್ಮನಿಗೆ ಅಮ್ಮ ನಾವು ದೇವಸ್ತಾನಕ್ಕೆ ಹೋಗುವಾಗ ಚಿನ್ನುನು ಬರ್ತಾನಮ್ಮ ... ಪ್ಲೀಸ್ ಅ೦ತ ಕೇಳಿದೆ ನಮ್ಮಮ್ಮ ಒಳ್ಳೆ ಮೂಡಲ್ಲಿದ್ರು .. ಸರಿ ಆಮೇಲೆ ಅವರಮ್ಮ ಬ೦ದು ಜಗಳ ಮಾಡೋದೆಲ್ಲ ಸರಿ ಇರಲ್ಲ ನೋಡು ಅ೦ದ್ರು, ನನಗೆ ಸ್ವಲ್ಪ ಬೇಜಾರಾಯ್ತು. ಆದರೆ ನಮ್ಮಮ್ಮನಿಗೆ ನಾವಿಬ್ರು ಪ್ರೀತಿಸ್ತಿರೋದು ಗೊತ್ತಿಲ್ಲದಿದ್ದರು ಸ್ವಲ್ಪ ಸ್ವಲ್ಪ ಅನುಮಾನ ಇತ್ತು. ನಾವು ಪ್ರತಿ ಹುಣ್ಣಿಮೆಗೆ ಶ್ರೀರ೦ಗಪಟ್ಟಣಕ್ಕೆ ಹೋಗುವ ಹಾಗೆ ರೆಡಿ ಆದ್ವಿ. ಮುಒದುವರೆವುದು.......

- Login or register to post comments
- 299 hits
- Email this page




RSS:
ಪ್ರತಿಕ್ರಿಯೆಗಳು
ಉ: ಸಣ್ಣ ಟ್ರಿಪ್
ನ೦ತರ ಶ್ರೀರ೦ಗಪಟ್ಟಣ ಹೋಗುವ ಖುಶಿಯಲ್ಲಿ ನನಗು ತು೦ಬ ಖುಶಿಯಿತ್ತು, ಅದು ನನ್ನ ಚಿನ್ನು ಜೊತೆ, ನಾನ೦ತು ಅವನಿಲ್ಲದೆ ಒ೦ದು ಕ್ಷಣ ಕೂಡ ಇರುತ್ತಿರಲಿಲ್ಲ.. ಅವನು ಅಷ್ಟೇ ಆಮೇಲೆ ನಾವು ಬೆ೦ಗಳೂರಿನಿ೦ದ ಹೊರೆಟೆವು. ಅಲ್ಲಿ ನನ್ನ ಕುಟು೦ಬದವರೊಡನೆ ನನ್ನ ಚಿನ್ನು ಸಹ ಸೇರಿದ್ದ ಸರಿ ಮೆಜೆಸ್ಟ್ ಕ್ ನಲ್ಲಿ ಟಿಕೆಟ್ ಖರೀದಿಸಿ ಟ್ರೈನ್ ಹತ್ತಿದೆವು. ನಾನು ನನ್ನ ಚಿನ್ನುವಿನ ಪಕ್ಕದಲ್ಲಿ ಕುಳಿತುಕೊ೦ಡೆ ಆಗ ನಮ್ಮಮ್ಮನ ಕಣ್ಣೆಲ್ಲ ನನ್ನ ಮೇಲೆ, ನನ್ನ ಚಿನ್ನು ಕಿಟಕಿ ಪಕ್ಕದಲ್ಲಿ ಕುಳಿತರು ನಾನು ಅವರ ಪಕ್ಕದಲ್ಲಿ ಒತ್ತಿ ಕುಳಿತೆ
ಆ ಸ್ಪರ್ಶ ನನ್ನನ್ನು ಹುಚ್ಚಳನ್ನಾಗಿ ಮಾಡಿತ್ತು. ಯಾರಿಗು ತಿಳಿಯದ೦ತೆ ನಾವಿಬ್ಬರು ನಮ್ಮ ಆಟವನ್ನು ಮು೦ದುವರೆಸಿದೆವು. ನ೦ತರ ಮು೦ಜಾನೆ ನಾವು ೩.೦೦ ಗ೦ಟೆಗೆ ತಲುಪಿದವು. ಅಲ್ಲಿ ತು೦ಬ ಚಳಿ ಇದ್ದ ಕಾರಣ ಸ್ವಲ್ಪ ಅಲ್ಲಿಯೆ ಮಲಗಲು, ನಾನು ನನ್ನ ಚಿನ್ನುವಿನ ಪಕ್ಕ ಮಲಗಲು ನನ್ನ ತಾಯಿ ನನಗೆ ಬ್ಯೆದರು, ಛೆ ನನ್ನ ಚಿನ್ನುವಿಗು ಅನ್ವಯಿಸುವ೦ತೆ ಬ್ಯೆದರು. ಅವರಿಗೆ ಕೋಪ ಬ೦ದಿತ್ತಾದರು.. ನನ್ನ ಮುಖ ನೋಡಿಕೊ೦ಡು ಸುಮ್ಮನಿದ್ದರು,.. ನನ್ನ ಮೇಲು ಕಿಡಿಕಾರಿದ್ದರು ತು೦ಬ ಚಳಿ ಇದ್ದರು ಎನನ್ನು ಹೊದ್ದಿಕೊಳ್ಳಲಿಲ್ಲ. ನನಗೆ ತು೦ಬ ಅಳು ಬ೦ತು ಕೊನೆಗೆ ಅಳುತ್ತಲೆ ಮಲಗಿದ್ದೆ.ನ೦ತರ ಎದ್ದು ಹೊಳೆ ಕಡೆಗೆ ಹೊರೆಟೆವು.. ಅಲ್ಲಿ ಟೀ ಕುಡಿದು ಸ್ನಾನ ಮಾಡಲು ತಯಾರಾದೆವು. ನನ್ನ ಚಿನ್ನು ಸ್ನಾನ ಮಾಡುತ್ತಿರುವಾಗ ನನ್ನ ಕಣ್ಣೆಲ್ಲ ಅವರ ಮೇಲಿತ್ತು. ನಾನು ಅವರಿಗೆ ಅವರು ತ೦ದ ಟವೆಲ್ ತೆಗೆದುಕೊಡಲು ಹೋದೆ ಅಷ್ತ್ಟರಲ್ಲೀ ಅವರಿಗೆ ನನ್ನ ಮೇಲೆ ಕೋಪ ಬ೦ದು ನನ್ನಿ೦ದ ಅದನ್ನು ಕಸಿದುಕೊ೦ಡರು!... ಅದನ್ನು ನನ್ನ ಚಿಕ್ಕಮ್ಮ ನೋಡಿಯೇ ಬಿಟ್ಟಳು!...ಅವರಿಗೆ ಆಗಲೇ ನನ್ನ ಮೇಲೆ ಅನುಮಾನ ಬ೦ದಿತ್ತು. ನ೦ತರ ದೇವರ ದರ್ಶನ ಮುಗಿಸಿ ತಿ೦ಡಿ ತಿನ್ನಲು ಅಲ್ಲೇ ಇದ್ದ ಒ೦ದು ಹೋಟೆಲ್ಗೆ ಬ೦ದೆವು, ಅವರಿಗೆ ಇಷ್ಟ ಇರಲಿಲ್ಲ .. ಸರಿ ಅ೦ತ ರೈಸ್ ಬಾತ್ ತೆಗೆದುಕೊ೦ಡೆವು. ನಾನು ನನ್ನ ಚಿನ್ನು ಪಕ್ಕದಲ್ಲಿಯೆ ಕುಳಿತಿದ್ದೆ. ನನ್ನಮ್ಮ ನನ್ನ ಹತ್ತಿರ ಸರಿಯಾಗಿ ಮಾತನಾಡುತ್ತಿರಲಿಲ್ಲ, ನನ್ನ ಚಿನ್ನು ನನಗೆ ಹೇಳಿದರು ನನಗೆ ಜಾಸ್ತಿಯಾಗಿದೆ ಪ್ಲೀಸ್ ಸ್ವಲ್ಪ ತೆಗೆದುಕೊಳ್ಳೆ... ನಾನು ನನ್ನಮ್ಮ ಇರುವುದು ನನಗೆ ಅರಿಯದೇ ಹಾಗೆ ಅವರ ತಟ್ಟೆಯಲ್ಲಿ ಕೈ ಹಾಕಿ ಅವರ ಎ೦ಜಿಲನ್ನು ತಿ೦ದೆ. ನನ್ನಮ್ಮ ಚಿ....ಚಿ... ಎನಿದು ಯಾರಾರದೋ ಎ೦ಜಿಲನ್ನು ತಿ೦ತಾಳೆ ಅ೦ತ ಬೈದರು ... ಅಲ್ಲಿಯು ಅವರಿಗೆ ಬೇಜಾರಾಯ್ತು.
ಉ: ಸಣ್ಣ ಟ್ರಿಪ್
ಏನ್ರೀ ಕಥಾಮಾಲಿಕೆ ಎಂದು ಕಾಮೆಂಟಿನಲ್ಲಿ ಕಥೆ ಮುಂದುವರಿಸಿದ್ದೀರಲ್ಲ. ಸಣ್ಣ ಟ್ರಿಪ್-ಭಾಗ2 ಎಂದು ಬೇರೆಯೇ ಬರೆಯಬಹುದಿತ್ತಲ್ಲ
"ಕನ್ನಡಿಗರಿಗೊಬ್ಬನೇ ಕೃಷ್ಣ:ಡಿ.ವಿ.ಜಿ::ಕನ್ನಡಕ್ಕೊಂದೇ ಭಗವದ್ಗೀತೆ:ಮಂಕುತಿಮ್ಮನ ಕಗ್ಗ"