ನಡೆದೇ ಹೋಗಲಿ ತೋo... ತನನ ...
ಬೊಗಸೆ ಕಣ್ಣ ಬೆಳ್ಳಿಯೇ..
ಹೃದಯ ಕದ್ದ ಮಳ್ಳಿಯೇ...
ನಿನ್ನಯ ಪಿಸುಮಾತಿನ
ಹಸಿ ಆಸೆಗೆ ಕಾದಿದೆ ಈ ಕರ್ಣ..
ನಿನ್ನಯ ಆ ಬಿಸಿ ಉಸಿರಿನ
ಹಿತವಿರದಿರೆ ನನ್ನೀ ಮರಣ...
ಜಡಿಮಳೆಗೆ ಕುಡಿಯೋಡೆದು
ಪಸರಿಸಿದೆ ನೈದಿಲೆ ನಿನ್ನ ಘಮ
ಬಿಳಿಮಲ್ಲಿಗೆ ಮೊಗ್ಗೊಡೆದು
ನಿಂತಿದೆ ಸೇರಲು ನಿನ್ನಾಶ್ರಮ
ಮಾತಾಡಾದೇ ಮುದ್ದಾಡುತ
ಕಟ್ಟುವ ಮುತ್ತಿನ ಮಾಲೆ..
ಬಿಸಿ ಅಪ್ಪುಗೆ ಹಿತವಾಗಿದೆ
ಮರೆತಿದೆ ಪ್ರಪಂಚ ಬಾಲೆ...
ತಂಗಾಳಿಯೂ ನಸುನಾಚುತ
ನಿಂತಿದೆ ನೋಡಲು ನಮ್ಮಿಲನ
ತಡೆಯೇತಕೆ ನಡೆ ಚೆಲುವೆ
ನಡೆದೇ ಹೋಗಲಿ ತೋo.. ತನನ ...

- Login or register to post comments
- 232 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: