Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಅಂತರ್ಜಾಲದಲ್ಲಿ ಸಂಶೋಧನೆಗೆ ಬೇಕಾದ ಉಪಯುಕ್ತ ತಂತ್ರಾಂಶಗಳು

January 4, 2008 - 2:09pm — ಶ್ಯಾಮ ಕಶ್ಯಪ

ಇಂದು ಅಂತರ್ಜಾಲ, ಮುದ್ರಿತ ಮಾಧ್ಯಮ ಮೊಬೈಲುಗಳು ಎಲ್ಲಾ ಕಡೆಯಿಂದಲೂ ಬೇಕಾದ, ಬೇಡವಾದ ಮಾಹಿತಿಗಳು ಸುದ್ದಿಗಳು ಬರುತ್ತಲೇ ಇರುತ್ತವೆ (ಈ ಲೇಖನ ಕೂಡ ಅವುಗಳಲ್ಲಿ ಒಂದು Eye-wink ).
ಈ ಮಾಹಿತಿ ಸ್ಫೋಟವನ್ನು ಸಮರ್ಪಕವಾಗಿ ಎದುರಿಸಿ ಬೇಕಾದದ್ದನ್ನು ಶ್ರಮವಿಲ್ಲದೇ ಹೆಕ್ಕಿ ಮಿಕ್ಕವನ್ನು ಬದಿಗಿಡುವುದು ಒಂದು ಸವಾಲೇ ಸರಿ. ಇದಕ್ಕಾಗಿ ಹಲವು ಉಪಯುಕ್ತ ತಂತ್ರಾಂಶಗಳಿವೆ. ಅವುಗಳಲ್ಲಿ ಎರಡು ತಂತ್ರಾಂಶಗಳನ್ನು ನಾನು ನನ್ನ ಕೆಲಸ ಕಾರ್ಯಗಳಲ್ಲಿ ಉಪಯೋಗಿಸುತ್ತಿದ್ದೇನೆ. ನನಗೆ ಇವು ಹಿಡಿಸಿವೆ, ಉಪಯುಕ್ತವಾಗಿವೆ. ಈ ತಂತ್ರಾಂಶಗಳು ಸಂಪದದ ಇತರ ಓದುಗರಿಗೂ ಉಪಯೋಗಕ್ಕೆ ಬರಬಲ್ಲವು ಎಂಬುವ ಆಶಯದಿಂದ ಇಲ್ಲಿ ಅವುಗಳ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇನೆ.

೧. ನ್ಯೂಸ್‍ರ್ಯಾಕ್: ಇಂದು ಭಾರತದ ಹಲವು ಪತ್ರಿಕೆಗಳು ಅಂತರ್ಜಾಲ ಪ್ರತಿಗಳನ್ನು ಹೊರತರುತ್ತಿವೆ. ಇದರಿಂದ ನಮಗಿಷ್ಟವಾದ ಪತ್ರಿಕೆಗಳನ್ನು ಅಂತರ್ಜಾಲದಲ್ಲಿ ಮುಕ್ತವಾಗಿ ಓದಬಹುದು. ಆದರೆ ಐವತ್ತಕ್ಕೂ ಹೆಚ್ಚಿರುವ ಪತ್ರಿಕೆಗಳನ್ನು ದಿನಾ ಓದುವುದು ಕಷ್ಟವಾಗಬಹುದು. ನಮಗೆ ಬೇಕಾಗಿರುವ ಒಂದೆರೆಡು ವಿಷಯಗಳನ್ನು ಇಡೀ ದಿನಪತ್ರಿಕೆಯಲ್ಲಿ ಹುಡುಕುವುದೂ ದುಸ್ತರವೇ. ಇದಕ್ಕಾಗಿ ಕರ್ನಾಟದವರೇ ಆದ ಸುಬ್ರಮಣ್ಯ ಶಾಸ್ತ್ರಿಗಳು Newsrack ಎನ್ನುವ ಮುಕ್ತ web-solution ಹೊರತಂದಿದ್ದಾರೆ. ಈ ವೆಬ್-ಸೈಟಿನಲ್ಲಿ ನಮಗೆ ಬೇಕಾಗಿರುವ ಪತ್ರಿಕೆಗಳ ಫೀಡ್ (RSS) ಗಳನ್ನು ಆಯ್ಕೆ ಮಾಡಿ, ನಮಗೆ ಬೇಕಾಗಿರುವ ವಿಷಯಗಳ key-word ಪದಗುಂಪುಗಳನ್ನು ರಚಿಸಿ ನಮ್ಮ ಪ್ರೊಫೈಲ್ ರಚಿಸಿಕೊಳ್ಳಬಹುದು. ನ್ಯೂಸ್‍ರಾಕ್ ನಂತರ ನಮ್ಮ ಪ್ರೊಫೈಲಿಗೆ ಹೊಂದುವ ಲೇಖನಗಳನ್ನು ನಾವು ಆರಿಸಿರುವ ಫೀಡ್‍ಗಳಲ್ಲಿ ಹುಡುಕಿ ಅದನ್ನು archive ಮಾಡುತ್ತದೆ. ದಿನದಲ್ಲಿ ಹಲವು ಬಾರಿ ಪತ್ರಿಕೆಗಳ ಫೀಡ್‍ಗಳು update ಆಗುವುದರಿಂದ ಸುಮಾರು ೨೦೦೨ರಿಂದ ಹಿಡಿದು ಇಂದಿನ ವರೆಗೆ ನಿಮಗೆ ಬೇಕಾದ ವಿಷಯದ ಬಗ್ಗೆ ಪ್ರಕಟಿತವಾದ ಲೇಖನಗಳು ತಾನಾಗಿಯೇ archive ಆಗಿರುತ್ತದೆ, ಅದರ RSS ಫೀಡ್ ಕೂಡ ನಿಮಗೆ ಲಭ್ಯವಾಗುತ್ತದೆ. ಉದಾಹರಣೆಗೆ ನಾನು ಕರ್ನಾಟಕದ ಕೃಷಿ ಸಂಬಂಧಿತ ವಿಷಯಗಳನ್ನು ಸಂಗ್ರಹಿಸಲು ಬಳಸುವ ಫೀಡ್ ಇಲ್ಲಿದೆ.
೨.
ಜ಼ೊಟೇರೊ: ಈಗ ನ್ಯೂಸ್‍ರ್ಯಾಕ್ ಮೂಲಕ, ಪತ್ರಿಕೆಗಳನ್ನೆಲ್ಲಾ ಶೋಧಿಸಿ ನಿಮಗೆ ಬೇಕಾದ ವರದಿಗಳನ್ನೆಲ್ಲ ಹೆಕ್ಕಿ ತೆಗೆದಿದ್ದಾಯಿತು. ಅವುಗಳನ್ನು ಸಮರ್ಪಕವಾಗಿ ಬಳಸಿ, ಮುಂದೆ ನಿಮ್ಮ ಸ್ವಂತ ಸಂಶೋಧನೆಯಲ್ಲೋ, ನಿಮ್ಮದೇ ಲೇಖನದಲ್ಲೋ ಬಳಸಬೇಕೆಂದಾಗ ಈ ವರದಿಗಳನ್ನೆಲ್ಲ ಸಮರ್ಪಕವಾಗಿ tag ಮಾಡಿ ತಕ್ಷಣ ಸಿಗುವಂತೆ (offline ಕೂಡ) ಜೋಡಿಸಿಟ್ಟುಕೊಳ್ಳುವುದರಲ್ಲಿ ಜ಼ೊಟೇರೊ ಸಹಾಯಕಾರಿಯಾಗುತ್ತದೆ. ಇದು firefox browserಗೆ plug-in ಆಗಿ ಲಭ್ಯವಿದೆ.
ಇದು ನಿಮಗೆ ಉಪಯುಕ್ತವಾದ ಸಂಶೋದನಾ ಲೇಖನಗಳು, ಹಾಡುಗಳು, ಬ್ಲಾಗ್, ವಾರ್ತೆ, ವರದಿ ಇತ್ಯಾದಿಗಳನ್ನು ಸಮರ್ಪಕವಾಗಿ ಶೇಖರಿಸುವುದಲ್ಲದೇ ಉಲ್ಲೇಖಗಳನ್ನು auto-format ಮಾಡಿ ನಿಮ್ಮ ಲೇಖನಗಳಿಗೆ ಲಗತ್ತಿಸುವುದಕ್ಕೆ ಸಹಾಯಕಾರಿಯಾಗುತದೆ. ಯಾವುದೇ ಲೇಖನವನ್ನು ಬರೆಯುವಾಗ Referenceಗಳನ್ನು ಟೈಪಿಸುವುದು ಎಷ್ಟು ಕಷ್ಟದ ಕೆಲಸ ಎಂಬುವುದು ನಿಮಗೆ ಗೊತ್ತಿರಬಹುದು. ಲೇಖನ ಬರೆಯುವುದಕ್ಕಿಂತ referenceಗಳನ್ನು ಬೇಕಾದ formatನಲ್ಲಿ ಟೈಪಿಸುವುದೇ ದೊಡ್ಡ ತಲೆನೋವು Sad )
ಉದಾಹರಣೆಗೆ ಇತ್ತೀಚೆಗೆ ರೈತರ ಆತ್ಮಹತ್ಯೆಗಳ ಬಗ್ಗೆ ದಿ ಹಿಂದು ದಿನಪತ್ರಿಕೆಯಲ್ಲಿ ಸಾಯಿನಾಥ್ ಬರೆದ ಲೇಖನವನ್ನು (Sainath 2007) ನಾನು ಜ಼ೊಟೇರೊದಲ್ಲಿ ಸಂಗ್ರಹಿಸಿದ್ದೆ. ಅದರ reference ಅನ್ನು ಜ಼ೊಟೇರೊ ತಾನಾಗಿಯೇ ರಚಿಸಿ ಕೊಡುತ್ತದೆ:
೧. Sainath, P. 2007. One farmer’s suicide every 30 minutes. The Hindu, November 15. http://www.thehindu.com/2007/11/15/stories/2007111554771300.htm (accessed November 28, 2007).

ಈ ತಂತ್ರಾಂಶಗಳು ಮುಕ್ತವಾಗಿ ಲಭ್ಯವಿದ್ದು ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಸಹಾಯಕಾರಿಯಾಗಬಲ್ಲದು. ಖುಷಿ ಏನೆಂದರೆ ಇವೆರೆಡೂ ಯೂನಿಕೋಡ್ ಅಕ್ಷರಗಳನ್ನು ತೊಂದರೆಯಿಲ್ಲದೇ ನಿರ್ವಹಿಸುತ್ತವೆ.

  • ಜ್ಞಾನವಾಹಿನಿ
Ornamental seperator
  • Login or register to post comments
  • 333 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 4, 2008 - 4:24pm — Sunil Jayaprakash

ಉ: ಅಂತರ್ಜಾಲದಲ್ಲಿ ಸಂಶೋಧನೆಗೆ ಬೇಕಾದ ಉಪಯುಕ್ತ ತಂತ್ರಾಂಶಗಳು

Sunil Jayaprakash's picture

ಚಾಂಗ್ ಮಾಹಿತಿ, ಶ್ಯಾಮ್. ತುಂಬಾ ಬಳಕೆಗೆ ಬಂತು/ಬರತ್ತೆ.

  • Login or register to post comments
  • link
  • Email this ಪ್ರತಿಕ್ರಿಯೆ
January 8, 2008 - 12:55am — hpn

ಉ: ಅಂತರ್ಜಾಲದಲ್ಲಿ ಸಂಶೋಧನೆಗೆ ಬೇಕಾದ ಉಪಯುಕ್ತ ತಂತ್ರಾಂಶಗಳು

hpn's picture

Unicode (ಯೂನಿಕೋಡ್) ಬಗ್ಗೆ ಹೆಚ್ಚು ಕೇಳಿಲ್ಲದ ಓದುಗರಿಗಾಗಿ: ಇದೊಂದು standard (ನಿರ್ದಿಷ್ಟಮಾನ). ಕನ್ನಡವನ್ನು ಈಗ ಇಲ್ಲಿ ಓದುತ್ತಿದ್ದೀರಲ್ಲ ಇದೂ ಯೂನಿಕೋಡ್ ಮೂಲಕವೇ ಸಾಧ್ಯವಾದದ್ದು. ಒಟ್ಟಾರೆ zotero ಯೂನಿಕೋಡ್ ಅಕ್ಷರಗಳನ್ನು ತೊಂದರೆಯಿಲ್ಲದೆ ನಿರ್ವಹಿಸುತ್ತದೆ ಎಂದರೆ ಕನ್ನಡವನ್ನೂ ಇದರಲ್ಲಿ ಸಲೀಸಾಗಿ ಬಳಸಬಹುದು ಎಂದು Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
January 9, 2008 - 7:13pm — ಶ್ಯಾಮ ಕಶ್ಯಪ

ಉ: ಅಂತರ್ಜಾಲದಲ್ಲಿ ಸಂಶೋಧನೆಗೆ ಬೇಕಾದ ಉಪಯುಕ್ತ ತಂತ್ರಾಂಶಗಳು

ಶ್ಯಾಮ ಕಶ್ಯಪ's picture

ಹಾಂ, ಯೂನಿಕೋಡ್ ಬಳಸಬಹುದು ಅಂದ್ರೆ ಕನ್ನಡವನ್ನೂ ಬಳಸಬಹುದು ಎಂದು ಹೇಳುವುದನ್ನೇ ಮರೆತೇ ಬಿಟ್ಟಿದ್ದೆ ಹರಿ.
ನೀವು ಸೇರಿಸಿದ್ದಕ್ಕೆ ಧನ್ಯವಾದಗಳು.

ಸುನಿಲ, ತಂತ್ರಾಂಶ ನಿಮಗೆ ಸಹಾಯಕಾರಿಯಾದರೆ ನನಗೂ ಸಂತೋಷ!
--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇವನ್ನು ನೋಡಿ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • ನವೆಂಬರ ೧ರಂದು ವಿಕಿಪೀಡಿಯಾದ ಮುಖ್ಯಪುಟದಲ್ಲಿ ಕರ್ನಾಟಕ
  • ಸುದ್ದಿಪುಟಗಳಲ್ಲಿ 'ಸಂಪದ'
  • ಸಂಪದ, ಈಗ ಮತ್ತಷ್ಟು ಹತ್ತಿರ
Syndicate content

ಲೇಖಕರು

ಶ್ಯಾಮ ಕಶ್ಯಪ's picture

ಪೂರ್ಣ ಹೆಸರು
ಶ್ಯಾಮ ಕಶ್ಯಪ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 17 ಅತಿಥಿಗಳು ಆನ್ಲೈನ್ ಇರುವರು.

ಅನುಭವದ ಪಾಲೊಳು ವಿಚಾರ ಮಂಥನವಾಗೆ |
ಜನಯಿಕುಂ ಜ್ಞಾನನವನೀತವೆ ಸುಖದಂ ||
ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ |
ನಿನಗೆ ಧರುಮದ ದೀಪ -- ಮಂಕುತಿಮ್ಮ ||

— ಡಿ ವಿ ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator