ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಐದನೆಯ ಕಂತು

January 6, 2008 - 9:14am — rameshbalaganchi

ಅಹ್ಮದ್ನೊಂದಿಗೆ ಗೆಲುವಾಗಿದ್ದಷ್ಟು ನಾನು ನನ್ನ ಬದುಕಿನಲ್ಲೇ ಯಾರ ಜೊತೆಗೂ ಗೆಲುವಾಗಿರಲಿಲ್ಲ. ಅಂದರೆ ಮನೆಯಲ್ಲಿ ನನಗೆ ಸುಖದ ಗಳಿಗೆಗಳೇ ಇರಲಿಲ್ಲವೆಂದಲ್ಲ. ಇದ್ದವು. ಹೆನ್ರಿಯನ್ನು ಮದುವೆಯಾಗುವ ಮೊದಲು ನನಗೆ ತುಂಬಾ ಸ್ನೇಹಿತರಿದ್ದರು. ಪಾರ್ಟಿಗಳು, ನರ್ತನ, ಕುಡಿತ ಅಂತ ತುಂಬಾ ಸುಖಪಟ್ಟಿದ್ದೆ. ಆದರೆ ಅವೆಲ್ಲ ಅಹ್ಮ್ದದ್ನೊಂದಿಗಿನ ಸುಖದ ಕ್ಷಣಗಳಿಗೆ ಸಾಟಿಯಲ್ಲ. ಅವನಷ್ಟು ಹಗುರವಾಗಿ, ಸುಲಲಿತವಾಗಿ, ನಿರ್ಭಿಡೆಯಿಂದ, ನಿರುಮ್ಮಳವಾಗಿ ಯಾರೂ ಇರಲಿಲ್ಲ. ಅವನು ರಮಿಸುತ್ತ ಬದುಕಲು ತಯಾರಿದ್ದ. ಮನೆಯಲ್ಲಿ ನಮಗೆ ನಮ್ಮದೇ ಆದ ವ್ಯಕ್ತಿಗತ ಸಮಸ್ಯೆಗಳಿದ್ದವು. ಅವಲ್ಲದೆ ಸಾಮಾಜಿಕ, ಆರ್ಥಿಕ, ನೈತಿಕ ಹೀಗೆ ಸಾರ್ವತ್ರಿಕ ಸಮಸ್ಯೆಗಳೂ ಇದ್ದವು. ನಮ್ಮ ಮನಸ್ಸಿನಲ್ಲಿ ನಾವು ನಮ್ಮಸುತ್ತಮುತ್ತಲ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬುದನ್ನು ಮಾತ್ರ ಗಮನಿಸುತ್ತಿದ್ದೆವು. ಇಲ್ಲಿನ ಈ ಕ್ಷಣದ ಬದುಕಿಗೆ ನಾವು ಜವಾಬ್ದಾರರೆಂಬ ಭಾವ ನಮ್ಮ ಮನಸ್ಸಿನಲ್ಲಿ ತೂಗುತ್ತಿತ್ತು. ಈ ಕ್ಷಣವನ್ನು ಅತ್ಯುತ್ತಮಗೊಳಿಸಲು ಸರ್ವ ಪ್ರಯತ್ನ ಮಾಡಬೇಕೆನಿಸುತ್ತಿತ್ತು. ಅಹ್ಮದ್ನಿಗೆ ಅಂಥ ಯೋಚನೆಯೇ ಇರಲಿಲ್ಲ. ಅವನ ಮೇಲೆ ಯಾವ ನೆರಳೂ ಇರಲಿಲ್ಲ. ಆಗಾಗ್ಗೆ ವ್ಯಕ್ತಿಗತ ಸಮಸ್ಯೆಗಳು ಎದುರಾಗುತ್ತಿದ್ದವು. ಹಾಗಾದಾಗ ಅವನು ತೀರ ಖಿನ್ನನಾಗುತ್ತಿದ್ದ. ಅತ್ತೂ ಬಿಡುತ್ತಿದ್ದ. ಆದರೆ ಅವನ ಸಮಸ್ಯೆಗಳು ಅಂಥ ಗಂಭೀರ ಸಮಸ್ಯೆಗಳಲ್ಲ. ಮಾಮೂಲಿನಂತೆ ಮನೆಜಗಳವೋ, ಅಪ್ಪನ ಕೋಪವೋ ಆ ಬಗೆಯವು- ಕೊಳದ ಮೇಲೆ ಬೀಸಿಬರುವ ಮೆಲುಗಾಳಿಯಂತೆ ಬಂದು ಹೋಗಿ ಅವನನ್ನು ಗೆಲುವಾಗಿಸಿಬಿಡುತ್ತಿದ್ದವು. ಅವನು ಎಷ್ಟು ತೀವ್ರವಾಗಿ ಎಲ್ಲವನ್ನೂ ಸುಖಿಸುತ್ತಿದ್ದ!! ನಮ್ಮ ಕೋಣ್, ಹಾಸಿಗೆ, ಡ್ರೆಸಿಂಗ್ಟೇಬಲ್, ಮತ್ತು ರತಿ ಇವಷ್ಟೇ ಅಲ್ಲದೆ ಕೋಕಾ ಕೋಲಾ ಕುಡುಯುವುದು, ನನ್ನ ಮೈಗೆ ಸೆಂಟ್ ಸ್ಪ್ರೇ ಮಾಡುವುದು, ನನ್ನ ತಲೆ ಬಾಚುವುದು, ನನ್ನಿಂದ ತಲೆ ಬಾಚಿಸಿಕೊಳ್ಳುವುದು ಇತ್ಯಾದಿ. ನಮಗೆ ಆಡಲು ಹೊಸ ಆಟಗಳನ್ನು ಕಂಡುಹಿಡಿದ. ಚಪ್ಪಲಿಯೇ ಬ್ಯಾಟ್ ಆದರೆ ಮುದುಡಿ ಉಂಡೆಕಟ್ಟಿದ ಹೆನ್ರಿಯ ಪತ್ರವೊಂದು ಚೆಂಡಾಯಿತು. ನನಗೆ ಅವನ ಕಾಲ್ಬೆರಳಿನ ನೆಟಿಕೆ ತೆಗೆಯುವುದನ್ನು ಕಲಿಸಿದ. ಅದೆಂಥ ಭಾರತೀಯ ಕೋಮಲತೆ!! ನಾನು ಅವನ ಕಾಲ್ಬೆರಳ ನೆಟಿಕೆ ತೆಗೆದಾಗ ಅವನು ಖುಷಿಯಿಂದ ಅರಚಿದ. ಅದನ್ನೇ ಅವನು ನನಗೆ ಮಾಡಿದಾಗ ನಾನು ನೋವಿಂದ ಕೂಗಿದೆ. ಅವನು ಕೂಡಲೆ ಅದನ್ನು ನಿಲ್ಲಿಸಿ ಪೆಚ್ಚಾದ. ಅವನು ಯಾವಾಗಲೂ ಸೂಕ್ಶ್ಮಜ್ಞನೂ ಸುಕುಮಾರನೂ ಆಗಿದ್ದ. ನನ್ನ ಭಾವನೆಗಳ ಬಗ್ಗೆ ಅವನಿಗಿದ್ದ ಸೂಕ್ಷ್ಮತೆ ಬೇರೆ ಯಾರಿಗಾದರೂ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಅವನಿಗೆ ಅದು ಒಂದು ಥರ ಹುಟ್ಟುಗುಣದಂತಿತ್ತು. ನೇರ ನನ್ನ ಹೃದಯದಾಳಕ್ಕಿಳಿದು ಅದರಲ್ಲಿ ಏನು ನಡೆಯುತ್ತಿದೆ ಅನ್ನುವುದನ್ನು ಅರಿತಂತಿತ್ತು. ಏನನ್ನೂ ಕೇಳದೆ, ಯಾವ ವಿವರಣೆಯನ್ನೂ ಬಯಸದೆ ನನ್ನ ಭಾವಲಹರಿಯಲ್ಲಿ ಉಂಟಾದ ಬದಲಾವಣೆಯನ್ನು ತಿಳಿದು ಅದಕ್ಕೆ ಹೊಂದಿಕೊಳ್ಳಬಲ್ಲವನೂ ಸ್ಪಂದಿಸಬಲ್ಲವನೂ ಆಗಿದ್ದ. ಹೆನ್ರಿಯಾದರೆ ನನ್ನನ್ನು "ಏನಾಯ್ತು, ನಿನಗೇನಾಗಿದೆ?" ಎಂದು ಯಾವಾಗಲೂ ಕೇಳಬೇಕಾಗುತ್ತಿತ್ತು. ನಮ್ಮ ಸಂಬಂಧ ಎಲ್ಲ ರೀತಿಯಿಂದಲೂ ಸರಿಯಾಗಿದ್ದಾಗಲೇ ಹೆನ್ರಿ ನನ್ನನ್ನು ಅರ್ಥಮಾಡಿಕೊಳ್ಳಲು ಪ್ರಾಮಾಣಿಕವಾಗಿ ಹೆಣಗಬೇಕಾಗಿತ್ತು. ಆದರೆ ಅಹ್ಮದ್ ಈ ನಿಟ್ಟಿನಲ್ಲಿ ಹೆಣಗಬೇಕಾಗಿಯೇ ಇರಲಿಲ್ಲ. ಅವನು ಹಾಗೆ ಮಾಡಬೇಕಾಗಿಬಂದಿದ್ದರೂ ಯಶಸ್ವಿಯಾಗುತ್ತಿರಲಿಲ್ಲ. ಕಾರಣ ಅವನು ಯಾವಾಗಲೂ ಏನನ್ನ್ನಾದರೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದುದು ಮನಸ್ಸಿನಿಂದಲ್ಲ, ಭಾವನೆಗಳಿಂದ- ಬಹುಶ: ಅವನು ಸಂಗೀತಗಾರನಾದ್ದರಿಂದ ಇರಬೇಕು. ಎಷ್ಟಾದರೂ ಸಂಗೀತ ಮಾತು ಹಾಗೂ ವಿವರಣೆಯನ್ನು ಮೀರಿದ್ದು ತಾನೆ! ಅವನು ಭಾರತೀಯ ಸಂಗೀತದ ಬಗ್ಗೆ ನನಗೆ ಹೇಳಿದಂತೆ ಅದು ಬಹಳ ಸೂಕ್ಷ್ಮವಾದುದು. ಇದನ್ನು ನಾನೂ ಅರಿತಿದ್ದೆ. ಸಂಗೀತದಲ್ಲಿ ಸುಲಭದಲ್ಲಿ ಗ್ರಹಿಸಲೇ ಆಗದಂಥ ಸೂಕ್ಷ್ಮಪರಿಣಾಮಗಳಿರುತ್ತವೆ- ಎಷ್ಟು ಸೂಕ್ಷ್ಮವೆಂದರೆ ಅದನ್ನು ತಿಳಿಯಬೇಕೆಂದರೆ ನೀವು ನಿಮ್ಮ ಸಂವೇದನಶೀಲತೆಯನ್ನು ಯಾವಾಗಲೂ ಅತ್ಯಂಟ ಗರಿಷ್ಠ ಮಟ್ಟಕ್ಕೆ ಹುರಿಗೊಳಿಸಬೇಕಾಗುತ್ತದೆ. ಅಹ್ಮದ್‌ನ ಸಮಗ್ರ ಸಂವೇದನೆಗಳೂ ಸದಾ ಆ ಮಟ್ಟದಲ್ಲೇ ಇರುತ್ತಿದ್ದುದರಿಂದ ಅವನು ನನ್ನನ್ನು ತನ್ನ ಸರೋದ್‌ನಂತೆ ನುಡಿಸಬಲ್ಲವನಾಗಿದ್ದ, ಕೇಳಬಲ್ಲವನಾಗಿದ್ದ.
(ಮುಂದುವರೆಯುವುದು)

~.~
  • Login or register to post comments
  • 208 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಹನ್ನೆರಡನೆಯ ಕಂತು
  • ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ
  • ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಆರನೆಯ ಕಂತು
  • ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಎಂಟನೆಯ ಕಂತು
  • ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಏಳನೆಯ ಕಂತು
Syndicate content

ಲೇಖಕರು

rameshbalaganchi's picture

ಪೂರ್ಣ ಹೆಸರು
Ramesh Balaganchi

ಪರಿಚಯ

ನಾನು ಸರಳ ಮನುಷ್ಯ. ಬೆಂಗಳೂರಿನಲ್ಲಿ ಸಂಸ್ಕೃತ ಆನರ್ಸ್ ಮಾಡಿ 1979 ರಿಂದ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕನ ಕೆಲಸ ಮಾಡುತ್ತಿದ್ದೇನೆ. ಭಾಷಾ ಕಲಿಕೆ, ಪಕ್ಷಿವೀಕ್ಷಣೆ ತುಂಬಾ ಇಷ್ಟದ ಹವ್ಯಾಸಗಳು. ಇತ್ತೀಚೆಗೆ ಕಂಪ್ಯೂಟರ್ ಬಳಸಲು ಕಲಿಯುತ್ತಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್
  • ಹರತಾಳಗಳ 'ತಾಳ'ಕ್ಕೆ ಕುಣಿಯುತ್ತಿರುವ ಕೇರಳ!
  • ವಿಧ್ಯಾಭ್ಯಾಸ ಮತ್ತು ಕಾಲೇಜು

ಇತ್ತೀಚಿನ ಪ್ರತಿಕ್ರಿಯೆಗಳು

  • nagesamrat
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 4:08pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 3:42pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 2:31pm
  • ವೈಭವ
    ಉ: ನಿಮಗೆ ಕನ್ನಡ ಬರುತ್ತಾ?
    July 5, 2008 - 1:30pm
  • harshavardhan v...
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 5, 2008 - 1:13pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:11pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:05pm
  • hpn
    ಉ: ದಿನಕ್ಕೊಂದು ಪದ
    July 5, 2008 - 12:51pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 12:43pm
  • kannadakanda
    ಉ: SSLC 'ಕನ್ನಡ' question paper ಅಲ್ಲಿ ಮತ್ತು model answerಗಳು ತಪ್ಪು ತಪ್ಪು!!!
    July 5, 2008 - 12:42pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 35 ಅತಿಥಿಗಳು ಆನ್ಲೈನ್ ಇರುವರು.


ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ!

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator