ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಒಂಭತ್ತನೆಯ ಕಂತು

January 9, 2008 - 7:20pm — rameshbalaganchi

ಭಜನೆ ಮಾಡುತ್ತಿದ್ದ ಕಾಲದಲ್ಲಿ ಇತರರಲ್ಲಿ ಕಾಣುವ ಶಾಂತಿ ಸಮಾಧಾನಗಳು ನನ್ನಲ್ಲಿ ಮೂಡಲಿಲ್ಲ. ಹಾಗೆ ನೋಡಿದರೆ ಬೇಸರವೇ ಆಗತೊಡಗಿತು. ಭಜನೆ ಮಾಡುವುದರಿಂದಲೂ ತರಕಾರಿ ತಿನ್ನುವುದರಿಂದಲೂ ಸಾಧಿಸಬಹುದಾದ ವಿಶೇಷವೇನಿಲ್ಲ ಅನ್ನಿಸತೊಡಗಿತು. ನನ್ನ ಅದೃಷ್ಟಕ್ಕೆ ಸುವಾರು ಇದೇ ಸಮಯಕ್ಕೆ ಯಾರೋ ನನ್ನನ್ನು ಒಬ್ಬ ಸಂತಳ ಬಳಿ ಕರೆದೊಯ್ದರು. ಅವಳು ನದಿಯ ಹತ್ತಿರದಲ್ಲಿದ್ದ ಒಂದು ಹಳೆಯ, ಜನತುಂಬಿದ ಮನೆಯ ಮೇಲ್ಭಾಗದಲ್ಲಿದ್ದಳು. ಜನ ಅವಳನ್ನು ಸಂತಳಂತೆ ಕಾಣುತ್ತಿದ್ದರು. ಆದರೆ ನಿಜವಾಗಿ ಸಂತಳಂತಿರಲಿಲ್ಲ. ಮಾಳಿಗೆಯ ಮೇಲಿದ್ದ ತನ್ನ ಕೋಣೆಯೊಳಗಿದ್ದುಕೊಂಡು ತನ್ನನ್ನು ಕಾಣಲು ಬರುವವರೊಂದಿಗೆ ಮಾತಾಡುತ್ತಿದ್ದಳು. ಅಷ್ಟೇ! ಅವಳಿಗೆ ಕಥೆ ಹೇಳುವುದೆಂದರೆ ಇಷ್ಟ ಅವಳು ಹೇಳುತ್ತಿದ್ದುದು ಅವರೆಲ್ಲರಿಗೆ ಜೀವನದುದ್ದಕ್ಕೂ ಪರಿಚಯವಿದ್ದ ಕೃಷ್ಣ, ಪಾಂಡವರು, ರಾಮ ಸೀತೆಯರ ಅದೇ ಹಳೆಯ ಪುರಾಣದ ಕತೆಗಳಾದರೂ ಕೇಳುವವರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತಿದ್ದಳು. ಆದರೆ ಅವುಗಳನ್ನು ಹೇಳುವಾಗ ಅತಿ ಉದ್ವೇಗದಲ್ಲಿರುತ್ತಿದ್ದಳು. ಅವು ಎಂದೋ ಲಕ್ಷಾಂತರ ವರ್ಷಗಳ ಹಿಂದೆ ನಡೆದ ಕತೆಗಳಲ್ಲ, ಇದೇ ಈಗ ನಡೆಯುತ್ತಿರುವ ನಿಜವಾದ ಸಂಗತಿ ಎನ್ನುವ ಧರ್ತಿಯಲ್ಲಿ. ಒಮ್ಮೆ ಅವಳು ಕೃಷ್ಣನ ಅಮ್ಮ ಅವನು ಬೆಣ್ಣೆ ಕದ್ದು ತಿನ್ನುತ್ತಿದ್ದಾನೋ ಇಲ್ಲವೋ ಎಂದು ತಿಳಿಯಲು ಅವನ ಬಾಯಿ ತೆರೆಸಿದ ಕತೆ ಹೇಳುತ್ತಿದ್ದಳು.

"ಅವನ ಬಾಯಲ್ಲಿ ಅವಳು ಕಂಡದ್ದೇನು?" ಉದ್ವೇಗದಿಂದ ಅರಚುತ್ತಾ ಅವಳೇ ಉತ್ತರಿಸಿದಳು. "ಲೋಕಗಳು! ಬರೀ ಈ ಲೋಕವಲ್ಲ!! ಪರ್ವತಗಳು, ನದಿಗಳು, ಸಮುದ್ರಸಹಿತವಾದ ಒಂದು ಪ್ರಪಂಚವಲ್ಲ!! ಉಹೂಂ. ಮಗುವಿನ ಬಾಯಲ್ಲಿ ಗಿರಿಗಿರಿ ಸುತ್ತುತ್ತಿದ್ದ, ಎಂದೂ ಕೊನೆಯಾಗದ ಮಹಾಸುತ್ತಾಟ, ಚಂದ್ರನ ಮೇಲೆ ಚಂದ್ರ!! ಸೂರ್ಯನ ಮೇಲೆ ಸೂರ್ಯ!! ಅವಳು ಚಪ್ಪ್ಪಾಳೆ ತಟ್ಟಿ ನಕ್ಕು ನಕ್ಕು ದಣಿದಳು. ನಂತರ ತೆಳು ಧ್ವನಿಯಿಂದ "ದೇವರು ಅದೆಂಥ ಮಹಾಮಹಿಮ! ಅವನ ಪ್ರೀತಿಪಾತ್ರಳಾದ ತಾನು ಅದೆಂಥ ಪುಣ್ಯವಂತೆ! ಎಂಬ ಭಾವದ ಯಾವುದೋ ಕೀರ್ತನೆ ಹಾಡತೊಡಗಿದಳು. ಎಲ್ಲ ಜನರೆದುರು ಸಂತೋಷದಿಂದ
ಕುಣಿಯತೊಡಗಿದಳು. ಅವಳೊಬ್ಬಳು ಮುದುಕಿ. ಕುರೂಪಿ. ಮುಖ ಸುಕ್ಕುಗಟ್ಟಿತ್ತು. ಹಲ್ಲು ಉದುರಿ ಬಾಯಿ ಬೋಳಾಗಿತ್ತು. ಗಲ್ಲದ ಮೇಲೆ ಕಾಳಿನಂಥ ಸಣ್ಣದೊಂದು ಬೆಳವಣಿಗೆ ಇತ್ತು. ಆದರೆ ಅವಳ ವರ್ತನೆ ಹೇಗಿತ್ತೆಂದರೆ- ಪ್ರಪಂಚದ ಯಾರಿಗೂ ಇಲ್ಲದ ಮೋಹಕತೆ, ಸೌಂದರ್ಯಗಳು ತನಗೊಬ್ಬಳಿಗೇ ದಕ್ಕಿದಂತೆ; ಲಕ್ಷ ಬಾರಿ ಪ್ರೇಮಿಸಿದವಳಂತೆ, ಪ್ರೇಮಾನುಭವ ಪಡೆದವಳಂತೆ! ಅವಳಲ್ಲಿದ್ದ ಆಕರ್ಷಣೆ- ಅದು ಏನೇ ಆಗಿರಲಿ- ಅದು ಪಡೆಯಲು ನಿಜಕ್ಕೂ ಲಾಯಕ್ಕಾಗಿದೆ ಅದಕ್ಕಾಗಿ ಪ್ರಯತ್ನಿಸುವುದು ಒಳ್ಳೆಯದು.

ಅದೊಂದು ನಗರ. ತೀರ್ಥಕ್ಷೇತ್ರವೂ ಹೌದು. ಅಲ್ಲಿ ಒಬ್ಬ ಗುರುವಿನ ಸನ್ನಿಧಿಯಲ್ಲಿರಲು ಹೋದೆ. ನದಿ ದಂಡೆಯ ಮೇಲೆ ಅವನ ಮನೆ. ಅದರಲ್ಲಿ ಶಿಷ್ಯರೊಂದಿಗೆ ಅವನ ವಾಸ. ಎಲ್ಲರೂ ಚೆನ್ನಾಗಿ ಬದುಕುತ್ತಿದ್ದರು. ತುಂಬಾ ಹೊತ್ತು ಧ್ಯಾನ ಮಾಡುತ್ತಿದ್ದರು. ಸಂಜೆಯ ಹೊತ್ತು ಗುರುವಿನ ಕೋಣೆಯಲ್ಲಿ ಕೂತು ಮಜವಾಗಿ ಕಾಲ ಕಳೆಯುತ್ತಿದ್ದರು. ಅವನ ಶಿಷ್ಯರಲ್ಲಿ ಸಾಕಷ್ಟು ಜನ ಪರದೇಶದವರು. ಪರದೇಶಕ್ಕೆ ಹೋಗಿ ತನ್ನ ಸಂದೇಶ ಪ್ರಚಾರ ಮಾಡಿ ಇನ್ನೂ ಹೆಚ್ಚಿನ ಶಿಷ್ಯರನ್ನು ಕರೆತರಬೇಕೆನ್ನುವುದು ಗುರುವಿನ ಹಿರಿಯಾಸೆ. ಹೆನ್ರಿ ಒಬ್ಬ ಪತ್ರಕರ್ತ ಎನ್ನುವುದು ತಿಳಿಯುತ್ತಲೇ ಗುರು ನನ್ನಲ್ಲಿ ಆಸಕ್ತಿವಹಿಸಿದ. ಪಾಶ್ಚಾತ್ಯಪ್ರಾಪಂಚಿಕತೆಯ ಹಿಟ್ಟಿನ ಮುದ್ದೆಗೆ ಭಾರತೀಯ ತತ್ತ್ವಜ್ಞಾನದ ಹುಳಿಹಿಟ್ಟು ಬೆರೆಸುವ ಅಗತ್ಯದ ಬಗ್ಗೆ ನನ್ನೊಡನೆ ಚರ್ಚಿಸಿದ. ಈ ಉದ್ದೇಶಸಾಧನೆಗೆ ತಾನು ಪಶ್ಚಿಮದೇಶದಲ್ಲಿರುವುದು ತೀರ ಅಗತ್ಯವೆಂದೂ ತನ್ನ ಸಂದೇಶದ ವ್ಯಾಪಕ ಪ್ರಚಾರಕ್ಕಾಗಿ ಸಮೂಹ ಮಾಧ್ಯಮಗಳ ತುಂಬು ಒತ್ತಾಸೆ ತನಗೆ ಬೇಕೆಂದೂ ತಿಳಿಸಿದ. ನಾನು ಆಧುನಿಕ ಯುಗದಲ್ಲಿ ಬದುಕುತ್ತಿರುವುದರಿಂದ ಅದರ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕೆಂದು ಆಗ್ರಹಿಸಿದ. ನಾನು ಹೆನ್ರಿಯನ್ನು ಆಶ್ರಮಕ್ಕೆ ಕರೆತರುವ ಬಗ್ಗೆ ತಾನು ಉತ್ಸುಕನಾಗಿದ್ದೇನೆಂದು ಹೇಳಿದ. ನನ್ನ ಪ್ರತಿಕ್ರಿಯೆ ಸ್ಪಷ್ಟವಾಗಿರಲಿಲ್ಲ. ಹೆನ್ರಿ ಇಲ್ಲಿಗೆ ಬರುವುದು ನನಗೆ ಸುತರಾಂ ಇಷ್ಟವಿರಲಿಲ್ಲ. ಇಲ್ಲಿಗೆ ಬರಲು ಅವನು ಇಷ್ಟಪಡುವುದಿ ಅಷ್ಟರಲ್ಲೇ ಇತ್ತು. ಈ ವಿಷಯವಾಗಿ ಗುರು ನನ್ನನ್ನು ಬಲಾತ್ಕರಿಸತೊಡಗಿದ. ಸಾಕಷ್ಟು ಸಿಟ್ಟನ್ನೂ ಮಾಡಿಕೊಂಡ. ಮೇಲಿಂದ ಮೇಲೆ ಇದೇ ವಿಷಯ ಪ್ರಸ್ತಾಪಿಸತೊಡಗಿದ.

  • ಸಣ್ಣ ಕಥೆ
~.~
  • Login or register to post comments
  • 308 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಹತ್ತನೆಯ ಕಂತು
  • ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಹನ್ನೊಂದನೆಯ ಕಂತು
  • ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಎಂಟನೆಯ ಕಂತು
  • ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ
  • ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಹನ್ನೆರಡನೆಯ ಕಂತು
Syndicate content

ಲೇಖಕರು

rameshbalaganchi's picture

ಪೂರ್ಣ ಹೆಸರು
Ramesh Balaganchi

ಪರಿಚಯ

ನಾನು ಸರಳ ಮನುಷ್ಯ. ಬೆಂಗಳೂರಿನಲ್ಲಿ ಸಂಸ್ಕೃತ ಆನರ್ಸ್ ಮಾಡಿ 1979 ರಿಂದ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕನ ಕೆಲಸ ಮಾಡುತ್ತಿದ್ದೇನೆ. ಭಾಷಾ ಕಲಿಕೆ, ಪಕ್ಷಿವೀಕ್ಷಣೆ ತುಂಬಾ ಇಷ್ಟದ ಹವ್ಯಾಸಗಳು. ಇತ್ತೀಚೆಗೆ ಕಂಪ್ಯೂಟರ್ ಬಳಸಲು ಕಲಿಯುತ್ತಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್
  • ಹರತಾಳಗಳ 'ತಾಳ'ಕ್ಕೆ ಕುಣಿಯುತ್ತಿರುವ ಕೇರಳ!
  • ವಿಧ್ಯಾಭ್ಯಾಸ ಮತ್ತು ಕಾಲೇಜು

ಇತ್ತೀಚಿನ ಪ್ರತಿಕ್ರಿಯೆಗಳು

  • nagesamrat
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 4:08pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 3:42pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 2:31pm
  • ವೈಭವ
    ಉ: ನಿಮಗೆ ಕನ್ನಡ ಬರುತ್ತಾ?
    July 5, 2008 - 1:30pm
  • harshavardhan v...
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 5, 2008 - 1:13pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:11pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:05pm
  • hpn
    ಉ: ದಿನಕ್ಕೊಂದು ಪದ
    July 5, 2008 - 12:51pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 12:43pm
  • kannadakanda
    ಉ: SSLC 'ಕನ್ನಡ' question paper ಅಲ್ಲಿ ಮತ್ತು model answerಗಳು ತಪ್ಪು ತಪ್ಪು!!!
    July 5, 2008 - 12:42pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 37 ಅತಿಥಿಗಳು ಆನ್ಲೈನ್ ಇರುವರು.


ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator