22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ರತನ್ ಟಾಟಾ ರವರಿಗೆ ಅಭಿನಂದನೆಗಳು !

January 11, 2008 - 7:55am
venkatesh
ಭಾರತದಲ್ಲಿ ಟಾಟಾ ಸಂಸ್ಥೆಯ ಪರಿವಾರದವರ್ಯಾರೆ ಆಗಿರಲಿ, ದೇಶದ ಹಿತದೃಷ್ಟಿಯನ್ನು ತಮ್ಮ ಕಂಪೆನಿಯ ಹಿತದೃಷ್ಟಿಯೆಂದು ಮೊದಲಿನಿಂದಲೂ ಭಾವಿಸಿ ಆ ದಿಶೆಯಲ್ಲಿ ಮುಂದುವರೆಯುತ್ತಿದ್ದಾರೆ. ರತನ್, ಇದಕ್ಕೆ ಹೊಸಬರಲ್ಲ. ಮೂಲಪುರುಷ ಜಮ್ ಸೆಟ್ ಜಿ ಯವರ ದೂರದೃಷ್ಟಿ, ಹಾಗೂ ದೇಶಪ್ರೇಮ ಇವರಲ್ಲಿ ಮೈಗೂಡಿದೆ. ಜನಸಾಮಾನ್ಯರಿಗೆ ಒಂದು ಅಗ್ಗದ ಹಾಗೂ ಉತ್ತಮ ತಾಂತ್ರಿಕ ವ್ಯವಸ್ಥೆಯುಳ್ಳ ಕಾರನ್ನು ಕೊಡಬೇಕೆಂಬ ಹಂಬಲ ಸುಮಾರು ೫ ವರ್ಷದಿಂದ ಇತ್ತು. ಅದು ಈಗ ನನಸಾಗಿದೆ. ರತನ್, ರವರಿಗೆ ನಮ್ಮೆಲ್ಲರ ಪರವಾಗಿ ಅಭಿನಂದನೆಗಳು !
ಲೇಖನ ವರ್ಗ (Category): 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ಗಣೇಶ on
ಟಾಟಾರವರಿಗೆ ಅಭಿನಂದನೆಗಳು. ದೇಶದ ಹಿತದೃಷ್ಟಿಗೆ ಲಕ್ಷದ ಕಾರಾಯಿತು. ಬೆಂಗಳೂರಿಗರಿಗಾಗಿ ಲಕ್ಷದ ಮಿನಿ ಹೆಲಿಕಾಫ್ಟರ್ ತಯಾರಿಸಲು ಕೋರಿಕೆ. ಆಫೀಸಿನ ಟೆರೆಸ್ ನಿಂದ ಮನೆ ಟೆರೆಸ್ ಗೆ ಹಾರಿ ಬರಬಹುದಲ್ವಾ?:)

Submitted by venkatesh on
ಇದ್ ಬ್ಯಾಡಾ ಬಿಡ್ರಿ. ಯಾಖೇಳ್ದೆ ಅಂದ್ರೆ. ಟಾಟಾ ಪರಿವಾರದವರು ನಮ್ಮ ದೇಶಕ್ಕೆ ಮಾಡಿರುವ ಸೇವೆ , ಮರೆಯಲಾರದ್ದು. ಅವರು ೧, ೦೦೦ ವರ್ಷಗಳ ಹಿಂದೆ ಭಾರತದ [ಪ] ದಡಕ್ಕೆಬಂದಾಗ, ಗುಜರಾತ್ ರಾಜಗಿಗೆ ಕೊಟ್ಟಮಾತನ್ನು ಉಳಿಸಿಕೊಂಡು, ಅದರಂತೆ ನಮ್ಮ ದೇಶದ ಜನರ ಜೀವನದಲ್ಲಿ, ಸಿಹಿಯನ್ನು ತಂದುಕೊಟ್ಟಿದ್ದಾರೆ. ನಮ್ಮವರೇ ಆದ ಉದ್ಯಮಿಗಳನ್ನು ಹೋಲಿಸಿದಾಗ ವ್ಯತ್ಯಾಸ ಫಕ್ಕನೆ ಹೊಳೆಯುತ್ತದೆ. ಹಣಸಂಪಾದನೆ, ಬೇಕು. ಯಾರೂ ಅದಿಲ್ಲದೆ ಇಂದಿನ ಯುಗದಲ್ಲಿ ಜೀವಿಸಲಾರರು. ಆದರೆ, ಹಣವೇ ಎಲ್ಲವಲ್ಲ. ಎಲ್ಲವೂ ಹಣದ ಸುತ್ತು-ಮುತ್ತು, ಸುತ್ತುತ್ತಿದ್ದಾಗ್ಯೂ, ಅಲ್ಲವೆ ? ಮೂಲ ಮಹಾಶ್ರೇಷ್ಠ, ಉದ್ಯಮಪಿತಾಮಹ, ಶ್ರೀ ಜೆ. ಎನ್. ಟಾಟಾರವರು, ಹಾಕಿಕೊಟ್ಟಮಾರ್ಗದಲ್ಲಿಯೇ, ಎಲ್ಲಸದಸ್ಯರೂ ನಡೆಯುತ್ತಿದ್ದಾರೆ. ರತನ್ ಒಬ್ಬ ಕುಶಲ ಉದ್ಯಮಿ. ಹಾಗೂ ದೇಶಪ್ರೇಮಿ. ದೇಶದ ಏಳಿಗೆ ತಮ್ಮ ವ್ಯಾಪಾರದಲ್ಲಿ ಪ್ರತಿಬಿಂಬಿಸಿರುವುದನ್ನು ನಾವು ಕಾಣಬಹುದು. ಜೆ. ಆರ್. ಡಿ, ಒಬ್ಬ ಅಸಮಾನ್ಯ ಮಹಾಪುರುಷ ! ಇದಕ್ಕೆ ಸಬೂತು ? ಇದೆ. ಯಾವ ಉದ್ಯಮಿ ತನ್ನ ಪರಿವಾರದ ಜನಗಳು, ಬಂಧುಗಳು, ಊರಿನವರು, ಅಂತ, ಚಡಪಡಿಸುವುದಿಲ್ಲ ? ನಮ್ಮ ಸರ್. ಎಮ್. ವಿ ಯರನ್ನು ಬಿಟ್ಟು ? ತಮ್ಮ ಪತ್ನಿ ೪೦ ವರ್ಷ ಪ್ರಜ್ಞಾಶೂನ್ಯಳಾಗಿ ಹಾಸಿಗೆ ಹಿಡಿದಾಗಲೂ ಜೆ. ಆರ್. ಡಿ ಯವರು, ಇನ್ನೂ ಹೊಸ ಉದ್ಯಮಗಳನ್ನು ಸ್ಥಾಪಿಸುವ ಉತ್ಸಾಹದಲ್ಲಿದ್ದರು. ಜೆಮ್ ಶೆಡ್ ಜಿ ಯವರ ಮಾತನ್ನು ನಡೆಸುವುದು ಅವರಿಗೆ ಮುಖ್ಯ. ಜೆ. ಆರ್. ಡಿ, ಪ್ರತಿದಿನ, ಜೆ. ಎನ್ ರ ಪುಸ್ತಕವನ್ನು ಓದುತ್ತಿದ್ದರಂತೆ ! ಇಂತಹ ಕರ್ಮಯೋಗಿ, ತಮ್ಮ ಕೆಲಸಮುಗಿದ ನಂತರ ಅನ್ನ-ನೀರುಬಿಟ್ಟು ಜಿನೀವದ ಆಸ್ಪತ್ರೆಯಲ್ಲಿ, ಕೊನೆಯುಸಿರೆಳೆದರು. ಹೆಂಡತಿಗೋಸ್ಕರ ಆಫೀಸ್ ಮುಗಿದಕೂಡಲೆ, ಟೆನ್ನಿಸ್ ಕೂಡ ಅಡದೆ, ಬಂದು ಅವರ ದಿಂಬಿನಹತ್ತಿರ ಕುಳಿತು, ಅವರಿಗೆ ಪ್ರಿಯವಾದ " ಒ’ ಹಿನ್ರ್ರಿ, ಕಧೆಗಳನ್ನು ಓದಿಹೇಳುತ್ತಿದ್ದರಂತೆ. ಥೆಲ್ಮ ಟಾಟ, ಹೆಚ್ಚು-ಕಡಿಮೆ ಕೋಮಾದಲ್ಲಿದ್ದರು. ಶ್ರೀ ಜೆಸ್ಸಿ, ಲಾಲಾ ಅವರ ಪುಸ್ತಕ ಓದಿ ತಿಳಿಯುತ್ತೆ. ಅಂತಹ ಪ್ರಚಂಡ ಪ್ರತಿಭೆಯ, ಕರ್ತವ್ಯಪ್ರಜ್ಞೆ, ಅಸಾಧರಣ ವ್ಯಕ್ತಿತ್ವದ ಜೆ. ಅರ್. ಡಿ ಟಾಟಾ ಪರಿವಾರದವರಿಗೆ ಶಿರಬಾಗಿ ಪ್ರಣಾಮಮಾಡುತ್ತೇನೆ !