ಹೊತ್ತಿತೊ ಹೊತ್ತಿತು ಕನ್ನಡದ ದೀಪ
ರಚನೆ: ಸಿದ್ಧಯ್ಯ ಪುರಣಿಕ
ಹೊತ್ತಿತೊ ಹೊತ್ತಿತು ಕನ್ನಡದ ದೀಪ
ಮುಗಿಯಿತೊ ಮುಗಿಯಿತು ಶತಮಾನಗಳ ಶಾಪ
ಕಣ್ಣು ಕುಕ್ಕಿಸುವಂತೆ ದೇದಿಪ್ಯಮಾನ
ಹರ್ಷವುಕ್ಕಿಸುವಂತೆ ಶೊಭಾಯಮಾನ
ಕನ್ನಡದ ಮನೆಯಾಗೆ ಜ್ಯೋತಿರ್ನಿದಾನ
ಕನ್ನಡದ ಪ್ರಾಣ ಕನ್ನಡದ ಮಾನ
ಉರಿವವರು ಬೇಕಿದನು ಇದರೆಣ್ಣೆಯಾಗಿ
ಸುಡುವವರು ಬೇಕಿದನು ನಿಡುಬತ್ತಿಯಾಗಿ
ಧರಿಸುವರು ಬೇಕಿದನು ಸಿರಿಹಣತೆಯಾಗಿ
ನನ್ನೆಸುರಾಗಿ ಧರ್ಮಕ್ಕೆ ಬಾಗಿ
ಚಿರಕಾಲ ಬೆಳಗಲಿ ಕನ್ನಡದ ದೀಪ
ಜಗಕೆಲ್ಲ ಬೆಳಕಾಗಿ ಪುಣ್ಯಪ್ರದೀಪ
ಭಾರತಕೆ ಬಲವಾಗಿ ಭವ್ಯಪ್ರದೀಪ
ಕಳೆಯುತ್ತ ತಾಪ ಬೆಳೆಸುತ್ತ ಸಹಿಪ

- Login or register to post comments
- 636 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: