ಜಂಭದ ತುತ್ತೂರಿ
ರಚನೆ: ಜಿ. ಪಿ. ರಾಜರತ್ನಂ (ರತ್ನ)
ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸ-ರಿ-ಗ-ಮ-ಪ-ದ-ನಿ-ಸ ಊದಿದನು
ತನಗೇ ತುತ್ತುರಿ ಇದೆಯೆಂದ
ಬೇರಾರಿಗು ಅದು ಇಲ್ಲೆಂದ
ತುತ್ತೂರಿ ಊದುತ ಕೊಳದ ಬಳಿ
ಕಸ್ತೂರಿ ನಡೆದನು ಸಂಜೆಯಲಿ
ಜಂಭದ ಕೋಳಿಯ ರೀತಿಯಲಿ
ಜಾರಿತು ನೀರಿಗೆ ತುತ್ತೂರಿ
ಗಂಟಲು ಕಟ್ಟಿತು ನೀರೂರಿ
ಸ-ರಿ-ಗ-ಮ ಊದಲು ನೋಡಿದನು
ಗ-ಗ-ಗ-ಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು
ಜಂಭದ ಕೋಳಿಗೆ ಗೋಳಾಯ್ತು

- Login or register to post comments
- 537 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS: