01
November
2014

ಸಂಪದ - Sampada

'ಹೊಸ ಚಿಗುರು, ಹಳೆ ಬೇರು'

೯ನೇ ಸಂಚಿಕೆ: ಕಥೆಗಾರ ವಿವೇಕ ಶಾನಭಾಗರೊಂದಿಗೆ - ಸಂದರ್ಶನ: ನರೇಂದ್ರ ಪೈ

January 16, 2008 - 11:52pm
narendra
To prevent automated spam submissions leave this field empty.

Podcast with Vivek Shanbag by Narendra Pai

ವಿವೇಕ್ ನಮ್ಮ ನಡುವಿನ ಅತ್ಯಂತ ಸೂಕ್ಷ್ಮಸಂವೇದನೆಯ ಕತೆಗಾರ, ಕಾದಂಬರಿಕಾರ. ಸೃಜನಶೀಲತೆ, ಸಾಹಿತ್ಯ ಸೃಷ್ಟಿಯ ಪ್ರಕ್ರಿಯೆ, ನಂತರ ಅದರ ಪ್ರಕಟಣೆ, ಮನ್ನಣೆ-ವಿಮರ್ಶೆಗಳ ಅಗತ್ಯ ಮತ್ತು ಮಿತಿಗಳು ಎಲ್ಲದರ ಕುರಿತು ಸ್ಪಷ್ಟವಾದ ಮತ್ತು ಖಚಿತವಾದ ನಿಲುವು ಉಳ್ಳವರು. ಅವರ ಮಾತುಗಳನ್ನು ಆಗಾಗ ಕೇಳುವ ಸಣ್ಣ ಪುಟ್ಟ ಅವಕಾಶ ಸಿಕ್ಕಿದ್ದ ನನಗೆ ಅವರಲ್ಲಿನ ಅನೇಕ ವಿಚಾರಗಳು ಸದ್ಯ ಬರೆಯುತ್ತಿರುವವರಿಗೆ, ಬರೆಯಬೇಕೆಂದಿರುವವರಿಗೆ ಅತ್ಯಂತ ಮಹತ್ವದವು ಎನಿಸುತ್ತಿತ್ತು. ನನ್ನ ಒಂದು ಕತೆಯನ್ನು ಓದಿ ಅವರು ಸುಮಾರು ಅರ್ಧ ಗಂಟೆಯಷ್ಟು ಕಾಲ ಫೋನಿನಲ್ಲೇ ನನಗೆ ನೀಡಿದ ಮಾರ್ಗದರ್ಶನ ನಾನು ಎಂದೂ ಮರೆಯಲಾರದ್ದು. ಮುಂದೆ ಅವರ ಬಳಿಯೇ ಕೇಳಿದ್ದೆ, ಅಸ್ವೀಕೃತವಾದ ಎಲ್ಲ ಕತೆಗಳ ಲೇಖಕರಿಗೂ ಈ ರೀತಿ ಮಾರ್ಗದರ್ಶನ ನೀಡುವ ಕ್ರಮವೇನಾದರೂ ಇದೆಯ ನಿಮ್ಮಲ್ಲಿ ಅಂತ. ಇಲ್ಲ ಮಹರಾಯ ಎಂದು ನಕ್ಕಿದ್ದರು ವಿವೇಕ್! ಆದರೆ ಅವರ ಮಾತುಗಳು ನನ್ನ ಅನೇಕ ಸಹಬರಹಗಾರರನ್ನು ತಲುಪಬೇಕು ಎಂದು ತೀವೃವಾಗಿ ಅನಿಸುತ್ತಲೇ ಇತ್ತು. ವಿವೇಕರ ಮಾತುಗಳನ್ನು ಕೇಳುತ್ತಿದ್ದರೆ ಗಹನವೂ, ನಮಗೆ ಸುಲಭಕ್ಕೆ ನಿಲುಕದ್ದೂ ಅನಿಸಿದ ಸಂಗತಿಗಳನ್ನೆಲ್ಲ ಇವರು ಇಷ್ಟು ಸರಳವಾಗಿ ಸ್ಪಷ್ಟವಾಗಿ ತೆರೆದಿಡುತ್ತಾರಲ್ಲ ಅನಿಸದಿರದು. ಆದರೆ ಹಾಗೆ ನೋಡಿದರೆ ವಿವೇಕ್ ಮಾತನಾಡುವುದೇ ಕಡಿಮೆ. ತಮ್ಮ ಕೃತಿಗಳ ಬಗ್ಗೆ, ಪತ್ರಿಕೆ ದೇಶಕಾಲದ ಬಗ್ಗೆ ಅವರು ಹೇಳಿಕೊಂಡವರಲ್ಲ. ಹೀಗಿರುತ್ತ ನಾಡಿಗ್ ತಾವಾಗಿ ಸಂಪದಕ್ಕಾಗಿ ವಿವೇಕರನ್ನು ಸಂದರ್ಶಿಸುವ ಒಂದು ಯೋಜನೆ ರೂಪಿಸಿದಾಗ ನಾನು ಕೊಂಚ ಅತಿ ಉತ್ಸಾಹದಿಂದಲೇ ಈ ಅವಕಾಶವನ್ನು ನನ್ನದಾಗಿಸಿಕೊಂಡೆ! ಇದನ್ನು ಕೊನೆಗೂ ಸಾಧ್ಯವಾಗಿಸಿದ್ದು ನಾಡಿಗರ ತಾಳ್ಮೆ, ಪರಿಶ್ರಮ. ವಿವೇಕ್ ತಮ್ಮ ಒಂದು ಇಡೀ ದಿನವನ್ನು ನಮಗಾಗಿ ಮುಡಿಪಿಟ್ಟು ಸಹಕರಿಸಿದರು. ಇನ್ನೂ ಚೆನ್ನಾಗಿ ಮಾಡಬಹುದಿತ್ತು, ವಿವೇಕರಿಂದ ಪಡೆದುಕೊಳ್ಳುವುದು ಇನ್ನೂ ಇತ್ತು ಎನ್ನುವ ಅತೃಪ್ತಿಯೊಂದಿಗೇ ಇಷ್ಟು ಸಾಧ್ಯವಾದ ಬಗ್ಗೆ ಖುಶಿಯೂ ಸೇರಿದೆ. ಇನ್ನು ಇದು ನಿಮ್ಮದು...

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

Submitted by hamsanandi on

ಒಂದು ಉತ್ತಮ ಪಾಡ್ಕಾಸ್ಟ್ ಕೊಟ್ಟ ಸಂಪದ ತಂಡಕ್ಕೆ ಧನ್ಯವಾದಗಳು. ನಾನು ವಿವೇಕರ ಕಥೆಗಳನ್ನು ಓದಿಲ್ಲ, ಆದರೂ ಅವರ ಮಾತುಗಳನ್ನು ಕೇಳಿದಮೇಲೆ, ಅವರ ಕಥಾಸಂಕಲನಗಳನ್ನು ಓದಬೇಕೆಂಬ ಹಂಬಲ ಮೂಡಿದೆ. ಅಲ್ಲದೆ ಜನಪ್ರಿಯ ಸಾಹಿತ್ಯ ಮತ್ತು ವಿಚಾರಕ್ಕೆ ಹಚ್ಚುವಂಥ ಸಾಹಿತ್ಯ ಅಥವ ಸಂಗೀತದ ಬಗ್ಗೆ ವಿವೇಕರ ನಿಲುವುಗಳು ಮೆಚ್ಚುಗೆಯಾದುವು. ಹರಿಪ್ರಸಾದ್, ನರೇಂದ್ರ ಮತ್ತು ಹಿನ್ನೆಲೆಯಲ್ಲಿ ಈ ಪಾಡ್ಕಾಸ್ಟ್ ತಂದವರಿಗೆಲ್ಲ ನನ್ನ ಅಭಿನಂದನೆಗೆಳು.

-ಹಂಸಾನಂದಿ

Submitted by anivaasi on

ನರೇಂದ್ರರೆ,
ತುಂಬಾ ಸೊಗಸಾದ ಒಳನೋಟಗಳನ್ನು ತೆರೆದಿಡುವ ಈ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು. ನಾಡಿಗ್‌ರ ಇಂತ ಯೋಚನೆ, ಪ್ರಯತ್ನ ಸಂಪದದ ಬೆನ್ನೆಲುಬಾಗಿರುವುದು ನನಗಂತೂ ತುಂಬಾ ಖುಷಿಯ ಸಮಾಚಾರ.

ಟ್ವಿಟ್ಟರಿನಲ್ಲಿ ಸಂಪದ