ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಭಗವದ್ಗೀತೆಯಲ್ಲಿ ಯಜ್ಞ ಮತ್ತು ಅದರ ಅರ್ಥ (೧)

January 17, 2008 - 8:46pm — csomsekraiah

( ನನ್ನ ’ಭಗವದ್ಗೀತೆಯ ಬೆಳಕಿನಲ್ಲಿ’ ಪುಸ್ತಕದ ಲೇಖನ)

ಪ್ರಾಚೀನ ಭಾರತದ ಸಾಮಾಜಿಕ ಪದ್ದತಿಗಳಲ್ಲಿನ ಅತ್ಯಂತ ವಿವಾದಾಸ್ಪದ ವಿಷಯಗಳಲ್ಲಿ , ಮೊದಲನೆಯದು ವರ್ಣಾಶ್ರಮವಾದರೆ , ಎರಡನೆಯದು, ಯಜ್ಞ ಯಾಗಾದಿಗಳು .ಎಲ್ಲಾ ಪ್ರಾಚೀನ ಸಾಹಿತ್ಯ ಪ್ರಾಕಾರಗಳಲ್ಲಿ , ಇದರ ಪರ ಮತ್ತು ವಿರುದ್ದವಾದ ದನಿಗಳು , ವರ್ತಮಾನ ಕಾಲದಲ್ಲಿನ ಪ್ರತಿಭಟನೆಗಳ ರೂಪದಲ್ಲಿಯೇ ಪ್ರಕಟಗೊಳ್ಳುತ್ತಿದ್ದುದನ್ನು ಸೂಕ್ಷ್ಮವಾಗಿ ಗಮನಿಸಬಹುದು .

ಇಂತಹ ಆಚರಣೆಗಳು ಯಾವ ಕಾಲದಲ್ಲಿ ? ಯಾವ ಉದ್ದೇಶಗಳಿಗಾಗಿ ? ಯಾವ ಅನಿವಾರ್ಯತೆಗಳಿಂದ ಹುಟ್ಟಿಕೊಂಡವು? ಎಂಬುದು ಅಸ್ಪಷ್ಟ .

ಈ ವಾದ ವಿವಾದಗಳೇನೇ ಇರಲಿ ; ಈ ಆಚರಣೆಗಳು ತೊಡಗಿರುವ ಕಾರಣಗಳೇನೇ ಇರಲಿ , ಇದರಿಂದ ಮನುಷ್ಯ ಕುಲದ ಬಹು ದೊಡ್ಡ ಭಾಗವೊಂದು , ಅನೇಕ ಶತಮಾನಗಳ ಕಾಲ ನರಕ ಕುಂಡದಲ್ಲಿ ಬದುಕಿದುದು (ಬದುಕುತ್ತಿರುವುದು) ಮತ್ತು ಅಸಹನೀಯ ನೋವಿನಿಂದ ಮನುಷ್ಯ ಜನ್ಮವನ್ನೇ ಶಪಿಸುತ್ತಾ ಕಾಲ ತಳ್ಳಬೇಕಾಗಿ ಬಂದುದು ಮಾನವನ ಇತಿಹಾಸದ ಮಹಾ ದುರಂತಗಳಲ್ಲೊಂದು .

ಈ ಲೇಖನದಲ್ಲಿ ಯಜ್ಞಗಳ ಬಗ್ಗೆ ಭಗವದ್ಗೀತೆಯ ನಿಲುವುಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬಹುದು .

ಈ ಯಜ್ಞ್ಗಗಳೆಂಬುವು ವರ್ಣಾಶ್ರಮಗಳನ್ನು ಘಟ್ಟಿಗೊಳಿಸುವ ಸಾಧನಗಳಾಗಿದ್ದವು . ಯಜ್ಞಗಳ ಪೌರೋಹಿತ್ಯವು ಬುದ್ದಿಜೀವಿ ವರ್ಗಗಳೆನಿಸಿಕೊಂಡವರ ಅಧಿಕಾರಕ್ಕೊಳಪಟ್ಟಿದ್ದರೆ , ಅವುಗಳ ರಕ್ಷಣೆ ಮತ್ತು ಆರ್ಥಿಕ ವ್ಯವಸ್ಥೆಯ ಜವಾಬ್ದಾರಿ ಆಳುವ ವರ್ಗದವರದಾಗಿತ್ತು . ಜನ ಸಾಮಾನ್ಯರು ಇಲ್ಲಿ ಕೇವಲ ಪ್ರೇಕ್ಷಕರು ಅಥವಾ ಅಲಕ್ಷಿತರು ಮಾತ್ರವಾಗಿದ್ದರು .ಅಷ್ಟೇ ಅಲ್ಲ ಯಜ್ಞಾಚರಣೆಯಿಂದ ಸಿಗುತ್ತವೆಂದು ನಂಬಿಸಲಾಗಿದ್ದ ಫಲಗಳು , ಪ್ರಶ್ನಾರ್ಹವಾಗಿದ್ದವು ಮತ್ತು ಕೆಲವು ಹಾಸ್ಯಾಸ್ಪದವೂ ಸಹ ಆಗಿದ್ದವು .

ಆದರೆ ಕ್ಷತ್ರಿಯರಿಗೆ ತಮ್ಮ ಬಲವನ್ನು ತೋರ್ಪಡಿಸಲು ; ತಮ್ಮ ಸಂಪತ್ತನ್ನು ಪ್ರದರ್ಶಿಸಲು ; ತಮ್ಮ ಪ್ರಭುತ್ವವನ್ನು ಇತರರ ಮೇಲೆ ಹೇರಲು ಈ ಯಜ್ಞಗಳು ಅನುಕೂಲಕರವಾಗಿದ್ದವು .

ಅಂದಿನ ಆಳುವ ವರ್ಗದವರಿಗೆ, ಬುದ್ದಿಜೀವಿ ವರ್ಗದವರು ಯಜ್ಞಗಳ ಆಚರಣೆಯಿಂದ , ಅಲೌಕಿಕ ಭೋಗ ಭಾಗ್ಯಗಳು , ಪದವಿಗಳು ದೊರೆಯುತ್ತವೆ ಎಂಬ ಆಮಿಶಗಳನ್ನಂತೂ ಒಡ್ಡಿದ್ದರು .ನೂರು ಅಶ್ವಮೇಧ ಯಾಗಗಳನ್ನು ಮಾಡಿದವರಿಗೆ , ಸ್ವರ್ಗದಲ್ಲಿ ದೇವೇಂದ್ರನ ಪಟ್ಟ ದೊರಕುತ್ತದೆ ಎಂಬುದು ಒಂದು ದೊಡ್ಡ ಆಮಿಷ .

ಯಾವನಾದರೂ ರಾಜ ಇಂಥ ಪ್ರಯತ್ನಗಳಿಗೆ ತೊಡಗಿದರೆ, ತನ್ನ ಸ್ಥಾನಕ್ಕೆ ಪೈಪೋಟಿ ಎದುರಾಗುತ್ತಿದ್ದುದನ್ನು ಕಂಡು, ಕಂಗೆಡುತ್ತಿದ್ದ ಹಾಲಿ ಇರುವ ದೇವೇಂದ್ರ್ತ ಈ ಯಾಗಗಳನ್ನು ಭಗ್ನ ಮಾಡಲು ಇನ್ನಿಲ್ಲದಷ್ಟು ಪ್ರಯತ್ನಪಡುತ್ತಿದ್ದ ಅನೇಕ ಕಥೆಗಳೇ ಇವೆ . ದೇವೇಂದ್ರನಾದರೇನು ? ಯಾವೇಂದ್ರನಾದರೇನು ?ಇರುವ ಪಟ್ಟ ಬಿಟ್ಟು ಕೊಡಲು ಯಾರಿಗೆ ತಾನೆ ಇಷ್ಟ ?

ಸ್ವರ್ಗವನ್ನು ಕುಮಾರ ವ್ಯಾಸ ತನ್ನ ಅನೇಕ ಪದ್ಯಗಳಲ್ಲಿ ,’ ನೂರು ಯಜ್ಞದ ಮೇಹು ನಾಡು’ ಎಂದೇ ಉದ್ಗರಿಸುತ್ತಾನೆ . ದುರ್ಬಲ ಮನಸ್ಕರೂ, ಭೋಗ ಜೀವಿಗಳೂ ಆದ ರಾಜರುಗಳು, ಅಲೌಕಿಕ ಲೋಕದ ಭೋಗ ಭಾಗ್ಯಗಳು ಮತ್ತು ಸುಂದರಿಯರಿಗಾಗಿ ಈ ಲೋಕದಲ್ಲಿ ಪಡುತ್ತಿದ್ದ ಶ್ರಮ, ಅದಕ್ಕಾಗಿ ಆಚರಿಸುತ್ತಿದ್ದ ಯಜ್ಞ ಯಾಗಾದಿಗಳು, ಪುರಾಣಗಳಲ್ಲಿ ಹೇರಳವಾಗಿ ಲಭ್ಯ .

ವೇದಗಳ ಕರ್ಮಕಾಂಡಗಳಲ್ಲಿ ಉಕ್ತವಾದ ಯಜ್ಞಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ ಭಗವದ್ಗೀತೆ , ಯಜ್ಞ ಎಂಬ ಶಬ್ದಕ್ಕೆ ಅರ್ಥವನ್ನು ಬಹು ಆಯಾಮಗಳಿಗೆ ಒಳಪಡಿಸಿ, ಅತ್ಯಂತ ಉದಾತ್ತವಾದ ಮತ್ತು ವಿಶಾಲವಾದ ಭಾವ ವ್ಯಾಪ್ತಿಯನ್ನು ಈ ಪದಕ್ಕೆ ತಂದು ಕೊಟ್ಟುದಲ್ಲದೆ ,ಅದುವರೆಗೆ ನಂಬಿಕೊಂಡು ಬಂದಿದ್ದ , ಮೂಢನಂಬಿಕೆಗಳಿಗೆ ಬಲವಾದ ಪೆಟ್ಟನ್ನು ಕೊಟ್ಟಿತು .

ವೇದಗಳ ಕರ್ಮ ಕಾಂಡವನ್ನು ಖಚಿತ ಶಬ್ಧಗಳಲ್ಲಿ ತಿರಸ್ಕರಿಸುವ ಗೀತೆ :

ತ್ರೈಗುಣ್ಯ ವಿಷಯಾ ವೇದಾ / ನಿಸ್ತ್ರೈಗುಣ್ಯೋ ಭವಾರ್ಜುನ /
ನಿರ್ದ್ವಂದ್ವೋನಿತ್ಯ ಸತ್ವಸ್ತೋ / ನಿರ್ಯೋಗಕ್ಷೇಮ ಆತ್ಮವಾನ್ // ಅ ೨ ಶ್ಲೋ ೪೫

ವೇದಗಳು ಕೇವಲ ತ್ರಿಗುಣಾತ್ಮಕ ವಿಷಯವನ್ನು ಭೋಧಿಸುವಂತಹವು , ನೀನು ತ್ರಿಗುಣಾತೀತನೂ , ದ್ವಂದ್ವ ರಹಿತನೂ , ಯೋಗ ಕ್ಷೇಮ ರಹಿತನೂ, ( ಆಸೆಗಳನ್ನು ತೊರೆದವನು) ಸತ್ವ ಪ್ರಧಾನನೂ , ಆತ್ಮವಂತನೂ ಆಗು ಎಂದು ಹೇಳುವುದಲ್ಲದೆ

ಯಾವಾನರ್ಥ ಉದಪಾನೇ ಸರ್ವತಃ ಸಂಪ್ಲುತೋದಕೇ /
ತಾವಾನ್ ಸರ್ವೇಷು , ವೇದೇಷು , ಬ್ರಾಹ್ಮಾಣಸ್ಯ ವಿಜಾನತಃ // ಅ ೨ ಶ್ಲೋ ೪೬

ಎಲ್ಲ ಕಡೆಗಳಲ್ಲಿಯೂ ನೀರು ತುಂಬಿರುವಾಗ , ಒಂದು ಭಾವಿಯ ಪ್ರಯೋಜನವು ಎಷ್ಟೋ? ಅಷ್ಟೇ ಜ್ಞಾನಿಗೆ ವೇದಗಳ ಪ್ರಯೋಜನ , ಎಂದು ಸ್ಪಷ್ಟಪಡಿಸುತ್ತಾ ’ ಅವಿಪಶ್ಚಿತಃ’ ಎಂದರೆ , ಅವಿವೇಕಿಗಳು ಮಾತ್ರವೇ ಮರುಳು ಮಾಡುವ ಮಾತುಗಳಿಗೆ ಸೋತವರಾಗಿ , ಭೋಗೈಶ್ವರ್ಯಗಳ ಬೆನ್ನು ಬಿದ್ದು ,ನಿಶ್ಚಯ ಬುದ್ದಿಯನ್ನು ಕಳೆದುಕೊಳ್ಳುವರು ,ಎಂದು ತಪ್ಪು ಮಾರ್ಗಗಳ ವಿರುದ್ದ ಗೀತೆಯು ಎಚ್ಚರಿಸಿರುವುದು .

ಭಗವದ್ಗೀತೆಯ ಮುಂದಿನ ಶ್ಲೋಕಗಳನ್ನು ಗಮನಿಸಿ :

ಯಾಮಿಮಾಂ, ಪುಷ್ಪಿತಾಂವಾಚಂ ಪ್ರವದಂತ್ಯವಿಪಸ್ಛಿತಃ /
ವೇದವಾದರತಾಃ ಪಾರ್ಥನಾನ್ಯದಸ್ತೀತಿವಾದಿನಃ //

ಕಾಮಾತ್ಮಾನಃ ಸ್ವರ್ಗಪರಾ ಜನ್ಮ ಕರ್ಮ ಫಲಪ್ರದಾಂ /
ಕ್ರಿಯಾವಿಶೇಷ ಬಹುಲಾಂ ಭೋಗೈಶ್ಯರ್ಯ ಗತಿಂಪ್ರತಿ // ಅ ೨ ಶ್ಲೋ ೪೨,೪೩

( ಮುಂದುವರಿಯುವುದು)

  • ಜ್ಞಾನವಾಹಿನಿ
~.~
  • Login or register to post comments
  • 216 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭಗವದ್ಗೀತೆಯಲ್ಲಿ ಯಜ್ಞ ಮತ್ತು ಅದರ ಅರ್ಥ (೨)
  • ಭಗವದ್ಗೀತೆಯ ದೃಷ್ಟಿಯಲ್ಲಿ ಮನಸ್ಸ್ಸು ( ಮತ್ತೂ ಮುಂದುವರಿದುದು)
  • ಭಗವದ್ಗೀತೆಯ ದೃಷ್ಟಿಯಲ್ಲಿ ಮನಸ್ಸು (ಇನ್ನೂ ಮುಂದುವರಿದುದು )
  • ಭಗವದ್ಗೀತೆಯ ದೃಷ್ಟಿಯಲ್ಲಿ ಮನಸ್ಸು
  • ಮೀಸಲಾತಿಯ ಆಚೆಗೆ ನೋಡೋಣ
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..
  • ’ಕೊಲಂಬಿಯ ಪೋಸ್ಟ್ ಆಫೀಸ್’
  • ಗಣಪನ ಗಂಡಾಂತರಗಳು ಅನೇಕ
  • Google Chrome ಮತ್ತು Java Applet
  • ಗೂಗಲ್ ಕ್ರೋಮ್ ಕ್ರಾಶ್ ಆಯ್ತಂತೆ

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: ಚಂದಿರನ ನೋಡಿದವ
    September 5, 2008 - 8:56pm
  • cmariejoseph
    ಉ: IT - ಸಿಂಪ್ಟಮ್ಸ
    September 5, 2008 - 8:39pm
  • yogeshkrbhat1
    ಉ: ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
    September 5, 2008 - 8:04pm
  • hpn
    ಉ: IT - ಸಿಂಪ್ಟಮ್ಸ
    September 5, 2008 - 7:54pm
  • venkatesh
    ಉ: Splendours of Royal Mysore
    September 5, 2008 - 7:45pm
  • yogeshkrbhat1
    ಉ: ಜ್ಯೋತಿಷ್ಯ..ವೈಜ್ಞಾನಿಕ ?
    September 5, 2008 - 7:15pm
  • ಸಂಗನಗೌಡ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 7:02pm
  • uniquesupri
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 6:36pm
  • savithasr
    ಉ: ನೀರವತೆ!
    September 5, 2008 - 6:31pm
  • ಸಂಗನಗೌಡ
    ಉ: ನೀರವತೆ!
    September 5, 2008 - 6:13pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 124 ಅತಿಥಿಗಳು ಆನ್ಲೈನ್ ಇರುವರು.


ಸು:ಖ ದು:ಖ ಗಳನು ತಟಸ್ಥಭಾವದಿ
ಸಕಲಕು ವಿತರಿಸುವುದು ಪ್ರಕೃತಿ
ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ
ಯುಕುತಿಯೆನಿಸುವುದು ಸ೦ಸ್ಕೃತಿ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator