ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಭಗವದ್ಗೀತೆಯಲ್ಲಿ ಯಜ್ಞ ಮತ್ತು ಅದರ ಅರ್ಥ (೨)

January 17, 2008 - 10:43pm — csomsekraiah

ಯಜ್ಞ್ದದ ಹೊರ ಮೂಢಾಚರಣೆಗಳನ್ನು ಈ ರೀತಿಯಾಗಿ ನಿರಾಕರಿಸಿದ ಗೀತೆ ,ಅದರ ಅಂತರಂಗದ ಅರ್ಥವನ್ನು ಸೊಗಸಾದ ಉಪಮೆಗಳ ಮೂಲಕ ಮನದಟ್ಟು ಮಾಡಿ ಕೊಡುವಲ್ಲಿ ಯಶಶ್ವಿಯಾಗಿದೆ .

ಯಜ್ಞವೆಂದರೆ ಸಾಮಾನ್ಯತೆಯಿಂದ ಅಸಾಮಾನ್ಯತೆಯೆಡೆಗೆ ನಡೆಯುವುದು ,ಸಾಮಾನ್ಯ ವಸ್ತುಗಳಿಂದ ಅಸಾಮಾನ್ಯ ಸೃಷ್ಟಿಯನ್ನು ವಿರಚಿಸುವುದು ,ಈ ದೃಷ್ಟಿಯಿಂದ ನೋಡಿದಾಗ ವಿಶ್ವದ ಸಕಲ ವ್ಯಾಪಾರಗಳೂ ಸಹ ಯಜ್ಞಮಯವಾಗಿ ಗೋಚರಿಸತೊಡಗುವವು ; ನಮ್ಮ ಸುತ್ತಣ ಪ್ರಕೃತಿಯಲ್ಲಿ ಎಡೆಬಿಡದೆ ಯಜ್ಞ ತತ್ವವು ಕ್ರಿಯಾ ಶೀಲವಾಗಿರುವುದನ್ನು ಗಮನಿಸಬಹುದು .

ಈ ಭೂಮಿಯ ಮೇಲಣ ಸಮಸ್ತ ಜೀವಿಗಳೂ ಸಹ ಆಹಾರವನ್ನು ಸೇವಿಸುತ್ತವೆ .ಅವುಗಳ ಜಠರದಲ್ಲಿರುವ ವೈಶ್ವಾನರ ಅಗ್ನಿಯು ,ಅನ್ನವನ್ನು ಪಚನ ಮಾಡಿ ,ಪ್ರಾಣವನ್ನಾಗಿ ಪರಿವರ್ತಿಸುತ್ತದೆ .ಪ್ರಾಣವು ದಹಿಸಿ ಮನಸ್ಸಾಗಿ ಪರಿವರ್ತಿತವಾಗುತ್ತದೆ .ಇದು ಸಕಲ ಪ್ರಾಣಿಗಳಲ್ಲಿ ನಿರಂತರವಾಗಿ ನಡೆಯುವ ಯಜ್ಞ ಕ್ರಿಯೆ .

ನಮಗೆ ಆಹಾರವನ್ನು ಒದಗಿಸುವ ಸಸ್ಯ ಸಂಕುಲವು ,ಮಣ್ಣು , ನೀರು, ಗೊಬ್ಬರ ಮತ್ತು ಗಾಳಿ ಇತ್ಯಾದಿಗಳನ್ನು ಸ್ವೀಕರಿಸಿ ಸೌರಾಗ್ನಿಯ ಸಹಾಯದಿಂದ ನಯನ ಮನೋಹರವಾದ , ಸೌಂದರ್ಯ ಭರಿತ ,ಪತ್ರ, ಪುಷ್ಪ ಸಮುದಾಯವನ್ನು : ರಸಭರಿತವಾದ ಫಲರಾಸಿಯನ್ನು , ಜೀವ ಸಂಕುಲದ ಉಳಿವಿಗೆ ಸಹಾಯಕವಾಗಿ ಕಾಳು ಕಡಿಗಳನ್ನು ತಯಾರಿಸುತ್ತವೆ .

ಈ ಭೂಮಂಡಲದ ಜೀವ ಪ್ರಪಂಚದ ಯಜ್ಞ್ಚ ಚಕ್ರವು ನಿರಂತರವಾಗಿ ಸುತ್ತಲು ಸಹಾಯಕವಾಗುವಂತೆ ಸೂರ್ಯನು ಸಮುದ್ರದ ನೀರನ್ನು ಸೇದಿ ಮೋಡಗಳಾಗಿಸಿ, ಮಳೆಯನ್ನು ಸುರಿಸುವನು .( ಅ ೯ ಶ್ಲೋ ೧೯) ಈ ರೀತಿಯಾಗಿ ಅಧಿಭೌತಿಕವಾಗಿ ನಡೆಯುವ ಯಜ್ಞಚಕ್ರವು ; ಮಾನಸಿಕ ವಾಗಿ ,ಆಧ್ಯಾತ್ಮಿಕವಾಗಿ ಜರುಗುವ ಪರಿಯನ್ನು ಗೀತೆ ಕಟ್ಟಿ ಕೊಡೂವುದು ಹೀಗೆ :

ಯಾರ ಕರ್ಮಗಳು ಸ್ವಾರ್ಥದಿಂದ ದೂರವಾಗಿ, ಜ್ಞಾನದ ಅಗ್ನಿಯಿಂದ ಸುಡಲ್ಪಟ್ಟಿರುವವೋ ಅವನೇ ಪಂಡಿತನು, ಸ್ವಹಿತಗಳಿಲ್ಲದೆ ನಿರಾಶ್ರಯನಾಗಿ ಸದಾ ತೃಪ್ತನಾಗಿರುವವನು ಕರ್ಮ ಮಾಡುತ್ತಿದ್ದರೂ ಬದ್ದನಲ್ಲ .ಆಸೆಯನ್ನು ತೊರೆದು , ವಿಷಯ ಪಾಶವನ್ನು ಹರಿದು ,ಕೇವಲ ಶರೀರ ರಕ್ಷಣೆಗಾಗಿ ಮಾಡುತ್ತಿರುವ ಕರ್ಮಗಳು ಅನಿಷ್ಟವನ್ನುಂಟುಮಾದುವುದಿಲ್ಲ .ತಾನಾಗಿ ಬಂದುದರಲ್ಲಿ ತೃಪ್ತಿ ,ಮಾತ್ಸರ್ಯವಿಲ್ಲದಿರುವುದು,ಸಿದ್ದಿ ಅಸಿದ್ದಿಗಳನ್ನು ಸಮವೆಂದು ಭಾವಿಸುವುದು ಇಂತಹ ಮನಃಸ್ಥಿತಿಯವನು ಕರ್ಮದಿಂದ ಬದ್ದನಲ್ಲ ( ಅ ೪ ಶ್ಲೋ ೧೯,೨೦,೨೧,೨೨)

ಗೀತೆ ಪ್ರತಿಪಾದಿಸುವ ನಾಲ್ಕು ಬಗೆಯ ಯಜ್ಞಗಳು ಇವು ೧) ದ್ರವ್ಯ ಯಜ್ಞ : ನ್ಯಾಯ ಮಾರ್ಗದಿಂದ ಗಳಿಸಿದ ಹಣವನ್ನು ಲೋಕ ಸಂಗ್ರಹಕ್ಕಾಗಿ ವ್ಯಯಿಸುವುದು ,ಅರ್ಹರಾದ ಆದರೆ ನಿರ್ಗತಿಕರಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ನೆರವಾಗುವುದು ,ಅಶಕ್ತರಿಗೆ ನೆರವಾಗುವುದು ,ಸಮಾಜದ ಉನ್ನತಿಗಾಗಿ ಶ್ರಮಿಸುವ ಎಲ್ಲ ಕಾರ್ಯಗಳೂ ದ್ರವ್ಯ ಯಜ್ಞಗಳೇ .೨) ತಪೋಯಜ್ಞ : ಆತ್ಮ ಕಲ್ಯಾಣಾಕ್ಕಾಗಿ ಕೈಗೊಳ್ಳುವ ತಪಸ್ಸು ಮತ್ತು ಧ್ಯಾನಗಳು . ೩) ಯೋಗಯಜ್ಞ : ಚಿತ್ತ ವೃತ್ತಿ ನಿರೋಧಕ್ಕಾಗಿ ಮಾಡುವ ಪ್ರಯತ್ನಗಳು ೪) ಸ್ವಾಧ್ಯಾಯ ಯಜ್ಞ : ಅಧ್ಯಯನ ಮತ್ತು ಜ್ಞಾನ ಪ್ರಸಾರವೂ ಒಂದು ಯಜ್ಞ . ಧೃಢವ್ರತರಾದವರು ವಿಶ್ವದ ಈ ಯಜ್ಞ ಚಕ್ರದಲ್ಲಿ ಭಾಗಿಗಳಗುವರು .

  • ಜ್ಞಾನವಾಹಿನಿ
~.~
  • Login or register to post comments
  • 296 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭಗವದ್ಗೀತೆಯಲ್ಲಿ ಯಜ್ಞ ಮತ್ತು ಅದರ ಅರ್ಥ (೧)
  • ಒಳ್ಳೆಯ ಸುಭಾಷಿತಗಳು- ೧೩-೧೫
  • ಮೀಸಲಾತಿಯ ಆಚೆಗೆ ನೋಡೋಣ
  • ಭಗವದ್ಗೀತೆಯ ದೃಷ್ಟಿಯಲ್ಲಿ ಮನಸ್ಸ್ಸು ( ಮತ್ತೂ ಮುಂದುವರಿದುದು)
  • ದೇಹ ಮತ್ತು ಆತ್ಮ - ಭಾಗ ೨
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..
  • ’ಕೊಲಂಬಿಯ ಪೋಸ್ಟ್ ಆಫೀಸ್’
  • ಗಣಪನ ಗಂಡಾಂತರಗಳು ಅನೇಕ

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 152 ಅತಿಥಿಗಳು ಆನ್ಲೈನ್ ಇರುವರು.


ಶೋಧನ ಭೋಧನ ಮೋಧನ ಮಾರ್ಗದಿ
ಓದುಗ ಮನದಾರಾಧನಕೆ
ಪ್ರಾದುರ್ ಭವಿಸುತ ಕವಿವಾಕ್ ನಡೆವುದು
ನಾದ ಬ್ರಹ್ಮ ನಿಕೇತನಕೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator