Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಓದುಗರ ಗಮನಕ್ಕೆ: ವ್ಯತ್ಯಯವಾದಲ್ಲಿ ತಿಳಿಸಿ.

ಸಂಪದ

ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ

January 21, 2008 - 12:28am — hpn

 

 

"ಗಾಳಿಪಟ" ಶುದ್ಧ ಮನರಂಜನೆಯ ಚಿತ್ರ. ಮತ್ತೇನನ್ನಾದರೂ ಬಯಸಿ ಹೋದವರಿಗೆ ಸಿನಿಮಾ ಇಷ್ಟವಾಗಲಿಕ್ಕಿಲ್ಲ. ಗಂಭೀರವಾಗಿ ಅವಲೋಕಿಸಿ ಪ್ರಶ್ನೆಗಳನ್ನು ಕೇಳಿಕೊಂಡು ಹೊರಟರೆ ಸಿನಿಮಾ ಸ್ವಲ್ಪವೂ ಇಷ್ಟವಾಗಲಿಕ್ಕಿಲ್ಲ. ಪ್ರಸ್ತುತ ಕಾಲದಲ್ಲಿ ಹೆಣೆದ ಜನ ಕೇಳಬಯಸುವ ಫಿಕ್ಷನ್ ಇದರ ಕಥೆ. ಕಥೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಕುಳಿತು ನೋಡಿ ನಗುವುದನ್ನು ಬಿಟ್ಟರೆ ಸಿನಿಮಾ ವೀಕ್ಷಕನಿಂದ ಇನ್ನೇನನ್ನೂ ಬಯಸುವುದಿಲ್ಲ. ಆದರೆ ಸಿನಿಮಾ ಹೆಚ್ಚು ವಲ್ಗಾರಿಟಿ ಇಲ್ಲದೆ ನಗಿಸಿ, ಹಲವೆಡೆ ಸಹಜ ಡೈಲಾಗುಗಳನ್ನ ಹೊತ್ತುಕೊಂಡು ಬಹಳ ಖುಷಿ ಕೊಡುವ ಚಿತ್ರವಾಗಿ ಮುಗಿಯುತ್ತದೆ.

ಗಣೇಶನ ಬಾಯಿಂದ witty ಡೈಲಾಗ್ಸ್ ಒಂದರಮೇಲೊಂದು ಸುರಿಯುತ್ತ ವೀಕ್ಷಕರು ಸ್ಕ್ರೀನಿಗೆ ಕಣ್ಣಿಟ್ಟು ಕೂತಿರುವಂತೆ ಮಾಡುತ್ತದೆ. ಸ್ಕ್ರೀನ್ ಪ್ಲೇ ಜೀವ ತುಂಬಿಕೊಂಡಿರುವಂತಿದೆ, ಅರ್ಥಪೂರ್ಣವಲ್ಲದಿದ್ದರೂ. ಸಂಗೀತ ಬಹಳ ಡಿಫರೆಂಟ್ ಆಗಿದ್ದು ವೀಡಿಯೋ ಹಾಡುಗಳಿಗೆ ಚೆನ್ನಾಗಿ ಹೊಂದಿಕೊಂಡಂತೆ ಮೂಡಿಬಂದಿದೆ.
ಸಿನೆಮಾಟೋಗ್ರಫಿ ಬಹಳ ಚೆನ್ನಾಗಿದೆ. ಡಿಜಿಟಲ್ ಎಫೆಕ್ಟ್ ಚೆಂದವಾಗಿ ನಂಬಿಕೆ ತರುವಂತಿದೆ (ಸಂಪೂರ್ಣವಾಗಿ ಸರಿಯಾಗಿಲ್ಲದಿದ್ದರೂ).

ನಟ ಗಣೇಶ್ ತಮ್ಮ ಪಾತ್ರಕ್ಕೆ ಸರಿಯಾಗಿ ಹೊಂದುತ್ತಾರೆ. ಡೈಸಿ ಬೋಪಣ್ಣರ ಪಾತ್ರ ಸಿನಿಮಾ ಹಾಲ್ ಬಿಟ್ಟು ಹೊರಬಂದರೂ ನೆನಪಿನಲ್ಲುಳಿಯುತ್ತದೆ. ಜೊತೆಗಿರುವ ಉಳಿದ ಕಲಾವಿದರು ಒಳ್ಳೆಯ ನಟನೆಯಿಂದ ಚಿತ್ರವನ್ನು ಮತ್ತಷ್ಟು ಉತ್ತಮವಾಗಿಸಿದ್ದಾರೆ.

 

 

ಬಹುಶಃ ಇಡೀ ಚಿತ್ರದ ಜೀವಾಳ ಅದರ ಡೈಲಾಗ್. ಚೆನ್ನಾಗಿ ಬರೆಯಲ್ಪಟ್ಟಿದೆ. ನಿರ್ದೇಶಕ ಯೋಗರಾಜ ಭಟ್ ಇಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ ಎನ್ನಬಹುದು. ಈ ಚಿತ್ರ "ಮುಂಗಾರು ಮಳೆ"ಗಿಂತ ಎಷ್ಟೋ ಉತ್ತಮ ಎನ್ನಿಸುವುದರಲ್ಲಿ ಸಂಶಯವಿಲ್ಲ.

ಚಿತ್ರಗಳು: ಚಿತ್ರಲೋಕ.com

( ಇಂಗ್ಲೀಷಿನಲ್ಲಿ ನಾನು ಬರೆದ ರಿವ್ಯೂ ಇಲ್ಲಿ ಓದಬಹುದು)

  • ಸಿನೆಮಾ ವಿಮರ್ಶೆ
Ornamental seperator
  • Login or register to post comments
  • 815 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 21, 2008 - 10:23am — ವೈಭವ

ಉ: ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ

ವೈಭವ's picture

ಗಾಳಿಪಟ ನೋಡಿದ ಮೇಲೆ

--> ನನಗೆ ಸಿನಿಮ ನೋಡಿದ ಮೇಲೆ ಮತ್ತೆ ಗಾಳಿಪಟ ಹಾರಿಸಬೇಕು ಅನ್ಸುತ್ತಿದೆ. Smiling
--> ನಾಯಕ ಗಾಳಿಪಟದ ಮೂಲಕ ಒಲವನ್ನು ತೋರಿಸಿಕೊಡಿವ ಬಗೆ ತುಂಬ ಡಿಪರೆಂಟಾಗಿದೆ.
--> ನಗೆಗಾರ ಗಣೇಶನ ಡೈಲಾಗ್ ಟೈಮಿಂಗ್ ಇಲ್ಲೂ ಸಕ್ಕತ್ತಾಗಿದೆ.
--> ಮುಂಗಾರು ಮಳೆಗಿಂತ ಗಾಳಿಪಟ ತುಂಬ ಎತ್ತರದಲ್ಲಿದೆ.
--> "ಮಿಂಚಾಗಿ..." ಹಾಡಂತು ತುಂಬ ಚೆನ್ನಾಗಿ ಮೂಡಿಬಂದಿದೆ. ನೋಡುಗರ ಶಿಳ್ಳೆ ಈ ಹಾಡಿಗೆ ಹೆಚ್ಚು Smiling
--> ತೇಜಸ್ವಿಯವರ 'ಕರ್ವಾಲೊ' ಕಾದಂಬರಿಯ ಕೆಲವು ಅಂಶಗಳನ್ನು (ಅಲ್ಲಿ ವೋತಿಕ್ಯಾತನ ಹಿಂದೆ ಓಡುವುದು, ಇಲ್ಲಿ ಹಂದಿಯ ಹಿಂದೆ ಓಡುವುದು) ತೆಗೆದೊಕೊಳ್ಳಲಾಗಿದೆ. ಕೊನೆಗೂ ಕಾಡುಹಂದಿಯನ್ನು ಹೊಡೆಯದೆ ಇರುವುದು ಕಾಡುಪ್ರಾಣಿ ಹಿತಬಯಸುವವರಿಗೂ ಕುಸಿ ತಂದಿದೆ.( ಇದನ್ನು ಇನ್ನು ಹೆಚ್ಚು ಮನದಟ್ಟುವಂತೆ ತೋರಿಸಬಹುದಾಗಿತ್ತು ಅನ್ಸುತ್ತೆ)
--> ಕೊಡಚಾದ್ರಿ ಮೇಲೆ ಅಶ್ಟೊಂದು ಹಸಿರು ನಾನು ನೋಡಿರಲಿಲ್ಲ. ತೆರೆಯ ಮೇಲೆ ಹಸಿರೋ ಹಸಿರು.
--> ಬರಚುಕ್ಕಿಯ ಬೋರ್ಗರೆತ ನಿಮ್ಮ ಮಯ್ ಮನಗಳನ್ನು ತೋಯಿಸದೇ ಇರುವುದಿಲ್ಲ.

ಇನ್ನು ಬೇಕಾ?

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
January 21, 2008 - 4:03pm — ಶಿವ

ಉ: ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ

ಶಿವ's picture

'ಮುಂಗಾರು ಮಳೆಯ ಜೊತೆ ಹೋಲಿಸಲೇ ಬೇಕಾದರೆ, ಇದು ಮುಂಗಾರುಮಳೆಗಿಂತ ಒಳ್ಳೆಯ ಸಿನೆಮ!

ಹಂದಿ ಬೇಟೆ,ಆ ಡೈಲಾಗ್‍ಗಳು,ಗಣೇಶ, ಕೊಡಚಾದ್ರಿ,ಡೈಸಿ,ಅನಂತ್ ನಾಗ್ ,ರಂಗಾಯಣ ರಘು- ಎಲ್ಲಾ ಇಷ್ಟವಾಗುತ್ತದೆ.'ನಧೀಮ್ ಧೀಮ್ ತನ' ಹಾಡಿನಲ್ಲಿ ಸಾಲೊಂದು ಹೀಗಿದೆ -'ಸುಮ್ಮನೆ ತಿಳಿ, ತಿಳಿ ನಾನಾಡದ ಪದಗಳನು'..ಭಾವನಾರಾವ್ ಮಾತನಾಡುವಾಗಲೂ ಇಷ್ಟಾವಾಗುತ್ತಾರೆ.ಮಾತನಾಡದೇ ಇರುವಾಗಲೂ ಕೂಡ..ಮನೆಯಲ್ಲಿ ಎಲ್ಲರೂ ಸನ್ನಿವೇಶಗಳಲ್ಲಿ ಆಕೆಯನ್ನು ಗಮನಿಸಿ .ಸಕತ್ತಾಗಿ ಮಾಡಿದ್ದಾರೆ..

HPN ಹೇಳಿದ ಹಾಗೆ, ಸಿನೆಮಾ ಪ್ಯೂರ್ ಮನರಂಜನೆ.ನಕ್ಕು ನಕ್ಕೂ ಸುಸ್ತಾಯಿತು.

  • Login or register to post comments
  • link
  • Email this ಪ್ರತಿಕ್ರಿಯೆ
January 21, 2008 - 6:07pm — ಸಂಗನಗೌಡ

ಉ: ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ

ಸಂಗನಗೌಡ's picture

ಬುದ್ದಿ ಓಡಿಸೋದು ಬಿಟ್ಟು ಎದೆಯಾಳದಿಂದ ನಗಬೇಕು ಅನ್ನೋರು ಈ ಸಿನಿಮಾ ನೋಡಬೇಕು. ನಿಮ್ಮ ರಿವೀವ್ ಚೆನ್ನಾಗಿದೆ.

  • Login or register to post comments
  • link
  • Email this ಪ್ರತಿಕ್ರಿಯೆ
January 21, 2008 - 6:10pm — mahesha

ಉ: ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ

mahesha's picture

ಚನ್ನಾಗಿ ಹೇಳಿದಿ!

  • Login or register to post comments
  • link
  • Email this ಪ್ರತಿಕ್ರಿಯೆ
January 24, 2008 - 2:40pm — veenadsouza

ಉ: ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ

veenadsouza's picture

veenadsouza
http://veenamanasu.blogspot.com/

ಒಂದೆರಡು ಹಿಟ್ ಡೈಲಾಗ್ಸ್ ಹೇಳಿ..

  • Login or register to post comments
  • link
  • Email this ಪ್ರತಿಕ್ರಿಯೆ
April 16, 2008 - 1:45pm — ಶ್ಯಾಮ ಕಶ್ಯಪ

ಉ: ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ

ಶ್ಯಾಮ ಕಶ್ಯಪ's picture

ಗಾಳಿಪಟ ಚಿತ್ರವನ್ನು ನಾನೂ ನೋಡಿದೆ. ಚೆನ್ನಾಗಿದೆ. ಜಾಸ್ತಿ ತಲೆ ತಿನ್ನದೇ, ಬೋರ್ ಹೊಡೆಸದೇ ಮಜ ಕೊಡ್ತಾನೇ ಮುಗೀತು. ಪಿಕ್ಚರ್ ಅಂದ್ರೆ ಹೀಗಿರಬೇಕಪ್ಪ.

ಗಾಳಿಪಟ ನೋಡಿದ ಮೇಲೆ ಮುಂಗಾರಮಳೆ ನೋಡಿದ್ದು ನಾನು. ಇದರ ಮುಂದೆ ಮುಂಗಾರುಮಳೆ *ಸ್ವಲ್ಪ* ಎಳಸು ಅನ್ನಿಸ್ತು.
--
ನೀ ಲೋಕದ ಕಾಳಜಿ ಮಾಡುವೆನಂತಿ, ಯಾರ ಬ್ಯಾಡಂದಾರ ಮಾಡಪ್ಪ ಚಿಂತಿ - ಸಂತ ಶಿಶುನಾಳ ಶರೀಫ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೈ ಕೊಟ್ಟ ಸಖಿ
  • ಹೊಸ ಛಂದ ಪುಸ್ತಕಗಳು
  • ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ"
  • ಲಾಲ್ ಬಾಗ್
  • ಮೊದಲ ಅನುಭವ
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಲೇಖನಗಳ ಆಹ್ವಾನ

ಅರ್ಘ್ಯಂ ಸಂಸ್ಥೆಯವರು ನೀರಿನ ಬಳಕೆ, ಉಪಯೋಗ, ನೈರ್ಮಲ್ಯ ಹಾಗೂ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸಲು ಪ್ರಾರಂಭಿಸಿರುವ ಇಂಡಿಯ ವಾಟರ್ ಪೋರ್ಟಲ್ ಕನ್ನಡದ ಪ್ರಾಯೋಗಿಕ ಆವೃತ್ತಿ ಆಗಲೇ ಕನ್ನಡ ಓದುಗರ ಮುಂದಿದೆ.

ಈ ಹೊಸ ಕನ್ನಡ ಪೋರ್ಟಲ್ ಗೆ ಕನ್ನಡ ಲೇಖನಗಳನ್ನು ಸಂಪದ ಸಮುದಾಯದ ಸದಸ್ಯರಿಂದ ಈ ಮೂಲಕ ಆಹ್ವಾನಿಸುತ್ತಿದ್ದೇವೆ.

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕಾರಂತರ ಜೀವಂತ ಪಾತ್ರಗಳು ೬ (೧)
  • ಗಾಂಧಿ ಎಂಬ ರೂಪಕ, ಜೀವನವೆಂಬ ನಾಟಕ!
  • ವಿಂಡೋಸ್ ಪರ ಸರಕಾರಗಳ ಲಾಬಿ!
  • ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ," ಡಾ. ಎಮ್. ವಿಶ್ವೇಶ್ವರಯ್ಯ ಇಂಟರ್ ನ್ಯಾಷನಲ್ ಏರ್ಪೋರ್ಟ್," ಎಂದು ಹೆಸರಿಡಬೇಕೆಂಬುದು ನಮ್ಮೆಲ್ಲರ ಕಳ-ಕಳಿಯ ಮನವಿ" !
  • ಕುಂತಲ್ಲಿ ಕೂರಂಗಿಲ್ಲ, ನಿಂತಲ್ಲಿ ನಿಲ್ಲಂಗಿಲ್ಲ ಈ ಜಿಂಕೆ ಮರಿಗಳು
  • ಲಿನಕ್ಸನಲ್ಲಿ ಕನ್ನಡ
  • ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು
    May 20, 2008 - 10:55pm
  • ಸಂಗನಗೌಡ
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 20, 2008 - 10:38pm
  • ಶ್ರೀನಿಧಿ
    ಉ: ನರಸಿಂಹ ಯಾರು ?
    May 20, 2008 - 10:09pm
  • ಶ್ರೀನಿಧಿ
    ಉ: ನಾಸ್ತಿಕ
    May 20, 2008 - 10:04pm
  • Sunil Jayaprakash
    ಉ: ನರಸಿಂಹ ಯಾರು ?
    May 20, 2008 - 9:52pm
  • Sunil Jayaprakash
    ಉ: ನರಸಿಂಹ ಯಾರು ?
    May 20, 2008 - 9:46pm
  • hpn
    ಉ: ಸುಮ್ನೆ ಗೀಚಿದ್ದು ...
    May 20, 2008 - 9:43pm
  • Sunil Jayaprakash
    ಉ: ನರಸಿಂಹ ಯಾರು ?
    May 20, 2008 - 9:42pm
  • Sunil Jayaprakash
    ಉ: ನರಸಿಂಹ ಯಾರು ?
    May 20, 2008 - 9:38pm
  • Sunil Jayaprakash
    ಉ: ಹೂವಿನ ಹುಡುಗಿ....
    May 20, 2008 - 9:32pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 7 ಅತಿಥಿಗಳು ಆನ್ಲೈನ್ ಇರುವರು.

ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕಿಂತ ಉಚ್ಚ ಆದರ್ಶವನ್ನಿರಿಸಿಕೊಂಡು ಅಸಫಲಗೊಳ್ಳುವುದೇ ಮನುಷ್ಯನಿಗೆ ಶೋಭದಾಯಕ

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator