Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ವಚನ ಚಿಂತನ ೪ : ಮನಸ್ಸು ಹೀಗೆ..

July 31, 2005 - 9:20am — olnswamy

ಕರಿ ಘನ ಅಂಕುಶ ಕಿರಿದೆನ್ನಬಹುದೆ
ಬಾರದಯ್ಯಾ
ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ
ಬಾರದಯ್ಯಾ
ಮರಹು ಘನ ನಿಮ್ಮ ನೆನೆವ ಮನವ ಕಿರಿದೆನ್ನಬಹುದೆ
ಬಾರದಯ್ಯಾ
ಕೂಡಲಸಂಗಮದೇವಾ

ನಮ್ಮ ತಿಳಿವಳಿಕೆ ಸ್ಥೂಲವಾದ್ದನ್ನು ಗಮನಿಸುವಷ್ಟು ಸುಲಭವಾಗಿ ಸೂಕ್ಷ್ಮವನ್ನು ಗಮನಿಸಲಾರದು. ದೊಡ್ಡ ಆನೆ ಕಣ್ಣಿಗೆ ಕಾಣುತ್ತದೆ, ಅದನ್ನು ನಿಯಂತ್ರಿಸುವ ಅಂಕುಶ ಕಾಣುವುದಿಲ್ಲ. ದಟ್ಟವಾದ ಕತ್ತಲು ಮಾತ್ರವೇ ಮುಖ್ಯವಾಗುತ್ತ ಸ್ವಲ್ಪವಾದರೂ ಬೆಳಕು ನೀಡುವ ಹಣತೆ ಗಮನಕ್ಕೇ ಬರುವುದಿಲ್ಲ. ಆಯಾ ಕ್ಷಣದ ಬದುಕಿನ ಜಂಜಡವೇ ಘನವಾಗಿ ಕಾಣುತ್ತ, ಅಂಥ ಜಂಜಡದ ನಡುವೆಯೂ ಉದಾತ್ತವಾದದ್ದನ್ನು ನೆನೆಯ ಬಲ್ಲ ಮನಸ್ಸು ಗಮನಕ್ಕೇ ಬರುವುದಿಲ್ಲ.
ಮನಸ್ಸು ಮುಖ್ಯವಲ್ಲ, ಮನಸ್ಸಿಗೆ ಇರುವ ಸಾಧ್ಯತೆಗಳು ಮುಖ್ಯವಲ್ಲ, ಮುಖ್ಯವಾದದ್ದು ಏನಿದ್ದರೂ ಸ್ಥೂಲವಾಗಿ ಎಲ್ಲರಿಗೆ ಎದ್ದುಕಾಣುವಂಥ ಸಂಗತಿಗಳು ಅಷ್ಟೇ ಎಂಬ ಮನೋಧರ್ಮ ನಮ್ಮ ಕಾಲದಲ್ಲಿ ಪ್ರಬಲಿಸುತ್ತಿದೆ. ಆನೆಯ ಅಪಾರವೆನ್ನಿಸುವ ಶಕ್ತಿಯನ್ನು ನಿಯಂತ್ರಿಸುವುದು ಪುಟ್ಟದೆಂದು ತೋರುವ ಅಂಕುಶ. ಕತ್ತಲೆಯನ್ನು ಕರಗಿಸುವುದು ಪುಟ್ಟ ಹಣತೆ.
ಮನಸ್ಸು ಅಂಕುಶವೂ ಹೌದು ಬೆಳಕೂ ಹೌದು. ವ್ಯಕ್ತಿಯ ಮತ್ತು ಸಮಾಜದ ದುರಂತಕ್ಕೆ ಕಾರಣವಾಗಬಹುದಾದ ಮರವೆಯನ್ನು ತೊಲಗಿಸುವ ಶಕ್ತಿಯೂ ಹೌದು. ಮನಸ್ಸನ್ನು ಕಿರಿದು ಎಂದು ತಿಳಿದರೆ ನಮ್ಮ ದೊಡ್ಡ ದೊಡ್ಡ ಸಾಧನೆಗಳೆಲ್ಲವೂ ಅರ್ಥಹೀನವಾಗುತ್ತವೆ.
ಈ ವಚನದಲ್ಲಿ ಬಂದಿರುವ “ನಿಮ್ಮ ನೆನೆವ ಮನ” ಎಂಬ ಮಾತನ್ನು ಬೇರೆ ರೀತಿಯಲ್ಲೂ ಅರ್ಥ ಮಾಡಿಕೊಳ್ಳಬಹುದು. ನಮ್ಮ ಮನಸ್ಸು ಸಾಮಾನ್ಯವಾಗಿ ಕೇವಲ ನಮ್ಮ ಬಗ್ಗೆಯೇ ಯೋಚಿಸುತ್ತಿರುತ್ತದೆ. ನಮ್ಮ ಎಲ್ಲ ಚಿಂತನೆಗಳ ಕೇಂದ್ರ ನಾವೇ! ನಾನು ಎಂಬುದನ್ನು ಬಿಟ್ಟು ಕ್ಷಣಕಾಲವಾದರೂ ನೀನು ಎಂಬುದನ್ನು, ಅಂದರೆ ಇನ್ನೊಬ್ಬ ವ್ಯಕ್ತಿ, ಜನಸಮುದಾಯ, ಲೋಕ, ದೇವರು ಇತ್ಯಾದಿ, ಆಲೋಚಿಸಬಲ್ಲ ಅರಿಯಬಲ್ಲ ಮನಸ್ಸು ಮಾತ್ರವೇ ಘನವಾಗಬಲ್ಲುದು.
ಹಾಗೆ ಆಗುವುದಕ್ಕೂ ಸೂಕಷ್ಮವಾದ ನಮ್ಮ ಮನಸ್ಸಿನ ಬಗ್ಗೆಯೇ ನಮಗೆ ಎಚ್ಚರ ಮೂಡಬೇಕು ಅಲ್ಲವೆ!

  • ಚಿಂತನೆ
Ornamental seperator
  • Login or register to post comments
  • 841 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಚನ ಚಿಂತನ: ೬: ಮನಸ್ಸು ಕೋತಿ
  • ಪ್ರೀತಿ
  • ಮನಸ್ಸಿನ ಮನಸ್ಸೆ...
  • ಬೇಂದ್ರೆ:ಪ್ರಾರ್ಥನೆ: ಕನ್ನಡ, ಸಂಸ್ಕೃತ
  • ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪ್ರತ್ಯಕ್ಷ ನೋಡಿದರೂ...
  • ನಶಿಸುತ್ತಿರುವ ಶಬ್ದ ಬಳಕೆ
  • ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ
  • ಭಾರತದ ಜ್ಞಾನಾವತಾರ
  • ಹೆಣ್ಣು ಜೀವವಿಮುಖಿ, ಜೀವವಿರೋಧಿಯಾಗುವ ಕ್ಷಣ
  • ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
  • ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಸುಭಾಷಿತಗಳು
    May 12, 2008 - 2:57am
  • kannadakanda
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 12, 2008 - 2:47am
  • hpn
    ಉ: ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !
    May 12, 2008 - 1:00am
  • hpn
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:52am
  • hpn
    ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
    May 12, 2008 - 12:48am
  • hamsanandi
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:20am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 12:09am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 11, 2008 - 11:33pm
  • ವೈಭವ
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 11, 2008 - 8:45pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 11, 2008 - 8:29pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 5 ಅತಿಥಿಗಳು ಆನ್ಲೈನ್ ಇರುವರು.

ಎಲ್ಲ ರೀತಿಯ ಕೆಚ್ಚೆದೆಯ ಎದೆಗಾರಿಕೆಯು ಆತಂಕದ ಮುಖವಾಡವಾಗಿರುತ್ತದೆ.

— ಜಾನ್ ಡ್ರೈಡನ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator