ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಪ್ರೊ.ಕೆ. ರಾಮದಾಸ್ ಬಾಲ್ಯದ ಪುಟತೆರೆದ ವಿಲಿಯಂ

January 30, 2008 - 7:23pm — narendra
Ramdas.JPG

ಸಾತ್ವಿಕ ಸಿಟ್ಟಿನ, ವ್ಯವಸ್ಥೆಯ ಹೆಳವಂಡಗಳ ವಿರುದ್ಧ ಸದಾ ಸಿಡಿಯುವ ನಾಯಕರು ಆಳದಲ್ಲಿ ಪುಟ್ಟ ಮಕ್ಕಳಂತಿರುತ್ತಾರೆಯೆ? ಪ್ರೊ.ಕೆ.ರಾಮದಾಸ್ ಬಗ್ಗೆ ಅಥವಾ ಸ್ವತಃ ರಾಮದಾಸರೇ ಬರೆದ ಒಂದೂ ಪುಸ್ತಕವಿಲ್ಲ ಎನ್ನುವ ಕೊರತೆಯನ್ನು ತಮ್ಮದೇ ರೀತಿಯಲ್ಲಿ ನೀಗಿಸಿದ್ದಾರೆ ರಾಮದಾಸ್‌ರವರ ಬಾಲ್ಯ ಸಖ ಶ್ರೀ ವಿಲಿಯಂ. ಅದೂ ಹೇಗೆ, ಈ ಬೆಂಕಿಕಿಡಿ ಚಾರ್ವಾಕ ರಾಮದಾಸ್‌ರ ಬಾಲ್ಯದ ಸುಮಧುರ ನೆನಪುಗಳನ್ನು ದಾಖಲಿಸಿ ಎಲ್ಲಿ ಹೋದವೋ ಆ ದಿನಗಳು ಎಂದು ಯಾರಾದರೂ ಹಂಬಲಿಸುವಂತೆ ಅವುಗಳನ್ನು ಮತ್ತೆ ಕಟ್ಟಿಕೊಡುವುದರ ಮೂಲಕ. ಎಲ್ಲರಿಗೂ ಅವರವರ ಬಾಲ್ಯ ಸೊಗಸು. ಆ ನೆನಪುಗಳು ಯಾತಕ್ಕೆ ಮತ್ತೊಮ್ಮೆ ಬರಲಾರದೋ ಬಾಲ್ಯ ಎನಿಸುವಂಥವು. ರಾಮದಾಸ್‌ರ ಬಾಲ್ಯವೂ ಇದಕ್ಕೆ ಹೊರತಾದುದಲ್ಲ. ಹೊರತಾದುದು ಏನಾದರೂ ಇತ್ತೆ ಎನ್ನುವುದು ಇಲ್ಲಿನ ಶೋಧ. ಹಾಗಾಗಿ ಈ ಪುಸ್ತಕಕ್ಕೆ ಬಾಲ್ಯದ ಹಂಬಲಿಕೆ ಮೀರಿದ ಮಹತ್ವ.

ಸಾಗರದಲ್ಲಿ ತನ್ನ ಬಾಲ್ಯ ಕಳೆದ ರಾಮದಾಸನನ್ನು ಕುರಿತು ಬರೆಯಬೇಕೆನ್ನುವುದು ನನ್ನ ಬಹಳ ದಿನಗಳ ಕನಸು. ಆದರೆ ಪ್ರಿಯಮಿತ್ರ ತೀರಿಕೊಂಡ ಮೇಲೆ ಬರೆಯುತ್ತಿರುವುದು ತುಂಬ ನೋವಿನ ಸಂಗತಿ ಎನ್ನುತ್ತಾರೆ ವಿಲಿಯಂ. ನಿಜ, ಈ ಪುಟ್ಟ ಪುಸ್ತಕದ ಸುಮಾರು ಮುವ್ವತ್ತಾರು ಪುಟಗಳಲ್ಲಿನ ಪುಟ್ಟ ಪುಟ್ಟ ಹದಿನೈದು ಅಧ್ಯಾಯಗಳಲ್ಲಿ ಸುಳಿದಾಡುವ ಆ ಬಾಲ್ಯವನ್ನು ಹಾದು, ಮುಂದಿನ ಪುಟಗಳಲ್ಲಿರುವ ರಾಮದಾಸ್ ಅವರ ಐದಾರು ಪತ್ರಗಳನ್ನು ಓದಿ, ಬಣ್ಣದ ಫೋಟೋಗಳನ್ನೆಲ್ಲ ಕಂಡು ಆ ಧೀಮಂತ ಚೇತನ ಇನ್ನಿಲ್ಲವೆನ್ನುವುದನ್ನು ಅನಿವಾರ್ಯವಾಗಿ ನೆನೆಯುವಾಗ ಯಾರಿಗಾದರೂ ನಿಟ್ಟುಸಿರು ಬರುವುದೇ, ವಿಲಿಯಂರ ನೋವಿನ ಅರಿವಾಗುವುದೇ.

ಈ ಪುಸ್ತಕದ ಬಗ್ಗೆ ರವೀಂದ್ರ ರೇಷ್ಮೆ ಹೀಗೆನ್ನುತ್ತಾರೆ:

"ವರದಾ ನದಿ ದಂಡೆಯ ಮೇಲಿನ ಹೊಳೆಬಾಗಿಲು ಕೇರಿ ಪರಿಸರದಲ್ಲಿ ನರ್ಸ್ ಮಂಜಮ್ಮನವರ ಮಗ ರಾಮದಾಸ್ ಹಾಗೂ ಸ್ಕೂಲ್ ಟೀಚರ್ ಜಲಜಾಕ್ಷಮ್ಮನವರ ಮಗ ವಿಲಿಯಂರ ಶಾಲಾದಿನಗಳ ಸ್ನೇಹದುದ್ದಕ್ಕೂ ಅವರುಗಳ ವಿನೋದ ಪ್ರಜ್ಞೆ, ಹುಡುಗಾಟಗಳಿಗೆ ತಾಣಗಳಾದ ಪಟಾಕಿ ಮಮ್ಮಿ ಸಾಹೇಬರ ಮನೆ, ಸೋಮಣ್ಣನ ಮಲ್ಲಿಗೆ ಮನೆ, ಅಜ್ಜ ವೆಂಕಟಾಚಲಪತಿಯವರ ಕುಲುಮೆ, ಚಿಕ್ಕಪ್ಪ ಲಕ್ಷ್ಮಣರಾಯರ ಸೈಕಲ್ ಶಾಪ್‌ಗಳ ಘಟನಾವಳಿಗಳು ಮತ್ತು ದೃಶ್ಯಾವಳಿಗಳನ್ನು ಚಿತ್ರಿಸಿರುವ ವಿಲಿಯಂರ ಬರವಣಿಗೆಯ ಶೈಲಿಯೆ ಅವರು ಯಾಕೆ ರಾಮದಾಸರ 55 ವರ್ಷಗಳ ಮಿತ್ರರಾಗುಳಿದಿದ್ದರೆಂಬುದನ್ನು ಬಿಂಬಿಸುತ್ತದೆ.

"ಮುಂದೆ ಮೈಸೂರಿನಲ್ಲಿ ಕಾಲೇಜು ಅಧ್ಯಾಪಕರಾಗಿ ತಮ್ಮ ಬದುಕಿನ ಮಹತ್ವದ ದಿನಗಳನ್ನು ಅನುಭವಿಸಿದ ರಾಮದಾಸರನ್ನು ಸಾಗರದ ಆರಂಭಿಕ ವರ್ಷಗಳೆ ಅದು ಹೇಗೆ ಒಬ್ಬ ಕಠೋರ ಜಾತ್ಯತೀತವಾದಿಯನ್ನಾಗಿ, ಪ್ರಚಂಡ ಹೋರಾಟಗಾರನನ್ನಾಗಿ, ಪ್ರಗತಿಪರ ಚಿಂತಕನನ್ನಾಗಿ, ದಿಟ್ಟ ಕನ್ನಡಪ್ರೇಮಿಯನ್ನಾಗಿ, ಯುವಕರಿಗೆ ನಿರಂತರ ಸ್ಪೂರ್ತಿಯ ಚಿಲುಮೆಯನ್ನಾಗಿ, ಬುದ್ಧಿಜೀವಿ ಸ್ನೇಹಿತರಿಗೆ ‘ಸಾಕ್ಷಿ ಪ್ರಜ್ಞೆ’ಯನ್ನಾಗಿ ರೂಪಿಸಿದುವೆಂಬುದನ್ನು ಸಮರ್ಥವಾಗಿ ವಿವರಿಸುತ್ತದೆ ವಿಲಿಯಂರ ಈ ಪುಟ್ಟ ಕಥಾನಕ" (ವಿಕ್ರಾಂತ ಕರ್ನಾಟಕ ಕನ್ನಡ ವಾರಪತ್ರಿಕೆ, 21 ಡಿಸೆಂಬರ್ 2007ರ ಸಂಚಿಕೆ)

ಪ್ರತಿಗಳಿಗೆ : ಅಭಿರುಚಿ ಪ್ರಕಾಶನ, ನಂ.386, 14ನೆಯ ಮುಖ್ಯ ರಸ್ತೆ, 3ನೆಯ ಅಡ್ಡ ರಸ್ತೆ, ಸರಸ್ವತೀಪುರ, ಮೈಸೂರು - 9. (94486 08926) abhiruchiprakashana@yahoo.co.in

ಬೆಲೆ: ನಲವತ್ತೈದು ರೂಪಾಯಿ.

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • Login or register to post comments
  • 255 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೆ.ರಾಮದಾಸ್ ಇನ್ನಿಲ್ಲ
  • ನಾನು ಮತ್ತು ದುಂಬಿ
  • ಪುಟ್ಟ ರಾಜಕುಮಾರ -little prince
  • ರಾಮದಾಸ್ - ಇನ್ನೆಲ್ಲಿ ಆ ತಾಪ... ಆ ಬೆಳಕು!
  • ನಿಮಗೆ ಇವರು ಸಿಕ್ಕರೆ ನನಗೆ ಹೇಳಿ...
Syndicate content

ಲೇಖಕರು

narendra's picture

ಪರಿಚಯ

ಕನ್ನಡ ಸಾಹಿತ್ಯದಲ್ಲಿ ಆಸಕ್ತ. ಸುಮಾರು ಮುವ್ವತ್ತು ಕಥೆಗಳನ್ನು ಬರೆದಿದ್ದೇನೆ. ಉತ್ತಮ ಅಭಿರುಚಿಯ ನಾಟಕ, ಸಿನಿಮಾ, ಕಲೆ ಮುಂತಾಗಿ ಇಲ್ಲಿನ ಬದುಕನ್ನು ಸಂಪನ್ನಗೊಳಿಸಬಲ್ಲ ಎಲ್ಲದರಲ್ಲೂ ಆಸಕ್ತಿ ಇದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 24 ಅತಿಥಿಗಳು ಆನ್ಲೈನ್ ಇರುವರು.


ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator