ಭರತೇಶ ವೈಭವದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ - ಕಲ್ಪು ೧೧
ಭರತೇಶ ವೈಭವದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಸಂಬಂಧಪಟ್ಟಂತೆ ಅನೇಕ ಪದ್ಯಗಳು ದೊರೆಯುತ್ತವೆ. ಸದ್ಯಕ್ಕೆ ಇಷ್ಟನ್ನು ಹಾಕಿರುತ್ತೇನೆ.
ಅಳೆವಂತೆ ರಾಗವ ತುಳಿವಂತೆ ಜಾಡ್ಯವ
ಹಿಳಿವಂತೆ ಮೋಹನರಸವ
ತೊಳೆವಂತೆ ಮನವ ಸಂಜೀವನಾಮೃತವು
ತಳಿವಂತೆ ರಾಗದೋರಿದರು
ಹಬ್ಬಿಸುವಂತೆ ರಾಗವ ಸ್ವರ್ಗಲೋಕಕೆ
ಯೆಬ್ಬಿಸುವಂತೆ ರೋಮಗಳ
ಕಬ್ಬಿನಬಿಲ್ಲು ಜೇವೊಡೆದಂತೆ ಪಾಡಿದ
ರೊಬ್ಬೊಬ್ಬರಿಂಪು ನುಂಪಿನೊಳು
ತಾಳಮೇಳವನನುಗೊಳಿಸಿ ಸಂಗೀತದ
ಬಾಲೆಯರಾಯೆಂದು ಕೂಡೆ
ಅಳಾಪದೆಗೆದರು ಕಾಂಬೋದಿರಾಗವ
ನಾಲಿಸಿ ನೃಪತಲೆದೂಗೆ
ಭರತೇಶ ವೈಭವದಲ್ಲಿ ಇನ್ನೂ ಅನೇಕ ರಾಗಗಳ ಪ್ರಸ್ತಾಪ ಆಗಿದೆ. ಅವುಗಳ ಬಗ್ಗೆಯೂ ಮುಂದೆ ಬರೆದೇನು.

- Login or register to post comments
- 314 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಭರತೇಶ ವೈಭವದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ - ಕಲ್ಪು ೧೧
ಸುನೀಲರೆ ನಿಮ್ಮ ರತ್ನಾಕರವರ್ಣಿಯ ಭರತೇಶ ವೈಭವದ ವಿವರಣೆ ಸ್ವಾರಸ್ಯಕರವಾಗಿದೆ. ನಿಮ್ಮ ವಿವರಣೆಗೆ ಕಲಶವಿಟ್ಟಂತೆ ಬೆನಕರ ಸಮಾನಾಂತರ ಸಂಸ್ಕೃತ ಪದ್ಯಗಳು ಮತ್ತು ವಿಸ್ತೃತ ವಿವರಣೆಯಿದೆ. ಬೇರೆ ಜನರ ಪ್ರಶ್ನೆಗಳು ಮತ್ತು ವಿವರಣೆಗಳು ಕೂಡ ಭರತೇಶ ವೈಭವದ ಮೆರಗನ್ನು ಮತ್ತಷ್ಟು ಹೆಚ್ಚಿಸಿವೆ. ನೀವು ಕೊಡುತ್ತಿರುವ ರೀತಿಯ ವಿವರಣೆ ಶಾಲೆಯಲ್ಲಿ ಸಿಕ್ಕರೆ ಭಾಷಾ ಕಲಿಕೆ ಸುಲಭವೂ ಮನೋರಂಜನಿಯವೂ ಆಗುವದರಲ್ಲಿ ಸಂಶಯವಿಲ್ಲ. ಇಲ್ಲಿರುವ ಎಲ್ಲ ಒಳ್ಳೆಯ ಅಂಶಗಳನ್ನು ಸೇರಿಸಿ ಇದನ್ನು ಪುಸ್ತಕ ರೂಪದಲ್ಲಿ ತರುವ ಬಗ್ಗೆ ವಿಚಾರ ಮಾಡ್ರಿ.
-ಸಂಜೀವ ಕುಲಕರ್ಣಿ
ಉ: ಭರತೇಶ ವೈಭವದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ - ಕಲ್ಪು ೧೧
ಸಂಜೀವ ಕುಲಕರ್ಣಿಯವರೆ, ನನ್ನಿ. ನಿಜ. ಬೆನಕ ಅವರಿಂದ ಕಲಿಯೋದು ಬಹಳಷ್ಟಿದೆ. ಕಳೆದ ವಾರ ಪುಸ್ತಕ ಸಂತೆಯಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನವರು ಪ್ರಕಟಿಸಿರುವ, "ರತ್ನಾಕರವರ್ಣಿ - ಕವಿಕಾವ್ಯವಿಚಾರ ವಿಚಾರ ಸಂಕಿರಣ" - ವಿವಿಧ ಲೇಖಕರು ಎಂಬ ಪುಸ್ತಕ ಸಿಕ್ಕಿತು. ಅದರಲ್ಲಿ ಇನ್ನೂ ಹೆಚ್ಚಿನ ವಿಚಾರಗಳಿವೆ. ಎಲ್ಲರೂ ಓದಿ ಖುಷಿಪಡಿ.