ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು

February 2, 2008 - 11:34pm — Sunil Jayaprakash

ಕಾಳಿದಾಸನ ಒಂದು ಪದ್ಯವಿದೆ. ಶತಾವಧಾನಿ ಡಾ||ಆರ್.ಗಣೇಶರ ಒಂದು ಉಪನ್ಯಾಸದಲ್ಲಿ ಇದನ್ನು ನಾನು ಕೇಳಿದ್ದಿದೆ.

ರಾಜ್ಯಾಭಿಷೇಕೆ ಮದವಿಹ್ವಲಾಯಾಃ ಹಸ್ತಚ್ಯುತೆ ಹೇಮಘಟಸ್ತರುಣ್ಯಾಃ |
ಸೋಪಾನಮಾಸಾಧ್ಯ ಚಕಾರ ಶಬ್ದಂ ಟಟಣ್‌ಟಟಣ್‌ಟಣ್‌ಟಟಟಣ್‌ಟಟಣ್‌ಟಣ್ ||

(ಹಂಸಾನಂದಿಯವರು ಇದರ ನುಡಿಪಲ್ಲಟವಾಗಿಸುವಲ್ಲಿ ನೆರನ್ನೀಯಬಹುದೇ ?)

ಕಾಳಿದಾಸ ಬಿಡಿ, ಅವನೊಬ್ಬ ಭಾರತದ ಅಪ್ರತಿಮ ಪ್ರಜ್ವಲತೇಜ. ಸದ್ಯಕ್ಕೆ ಮೇಲಿನ ಪದ್ಯವನ್ನು ಮಾತ್ರವೇ ತೆಗೆದುಕೊಳ್ಳುವುದಾದರೆ, ಇಲ್ಲಿ ಅತಿಮುಖ್ಯವಾಗಿ ನಾವು ಗಮನಿಸಬೇಕಾಗಿರುವುದು ಕಾಳಿದಾಸನಲ್ಲಿದ್ದ ಶಬ್ದಗ್ರಹಣಸಾಮರ್ಥ್ಯವನ್ನು (ಮೇಲಿನ ಪದ್ಯದ ಕೊನೆಯ ಸಾಲಿನ ಕೊನೆಯ ಪದವನ್ನು ಮತ್ತೊಮ್ಮೆ ನೋಡಿ). ಬರೀ ವ್ಯಾಕರಣ, ಛಂದಸ್ಸು ಇಷ್ಟರಲ್ಲಿಯೇ ಕಾಳಿದಾಸ ತೃಪ್ತಿಪಟ್ಟಿದ್ದಿದ್ದರೆ ಅವನಿಗೆ ಇಷ್ಟು ವರ್ಷಗಳಾದರೂ ಅಚ್ಚಳಿಯದೇ ಉಳಿದಿರುವ ಮರ್ಯಾದೆ ಸಿಗದೇ ಹೋಗುತ್ತಿತ್ತೇನೋ.

ಭರತೇಶ ವೈಭವದ ಕರ್ತೃ ರತ್ನಾಕರವರ್ಣಿಯೂ ಅನೇಕ ಸಂಧಿಗಳಲ್ಲಿ ಹೀಗೆ ತನ್ನ ಶಬ್ದಗ್ರಹಣಸಾಮರ್ಥ್ಯವನ್ನು ಒರೆಗೆ ಹಚ್ಚಿದ್ದಾನೆ. ರತ್ನಾಕರವರ್ಣಿಯ ವಿಸ್ತಾರವಾದ ಪ್ರಾಯೋಗಿಕ ಜಗತ್ತನ್ನು ಭರತೇಶ ವೈಭವದ ಉದ್ದಗಲಕ್ಕೂ ಕಾಣಬಹುದು. ಆತನೇ ಹೇಳುವಂತೆ ಭರತೇಶ ವೈಭವದಲ್ಲಿ, ಬರೀ ರಳ, ಕುಳ, ಸಮಾಸಗಳಿಗಷ್ಟಲ್ಲದೆ ಅವುಗಳನ್ನು ಮೀರಿದ ಪ್ರಯೋಗಗಳಿಗೂ ಜಾಗ ಇದೆ. ಉದಾ:- ಗಮನಿಸಿ.

ಠೀವಿಠೀವಿಳಿಜೆಜೆಜೆಂಜೆಝಿಂಝಿಂಮಿರುಕು | (ಇಲ್ಲಿ ಗಮನಿಸಿ ಇದು ಕೇವಲ ಸಿಲಬಲ್ಲುಗಳ ಅಕ್ಷರ ರೂಪ)
ಚಾವುಚಾವುಲು ಜುಂಜುಮ್ಮೆಂದು||
ಆವುಜಕಾರ ಕೇಳಿಸಿದನು ಪಾತ್ರದ
ಭಾವಕಿಯರ ಪಜ್ಜೆ ನಲಿಯೆ ||

ರಿಂಚಿಯ ಚಿನುಚಂಪೆ ಕಕ್ಕುರು ತುಡುಮು ಪಾ |
ವುಂಚಿ ಕಿಂಕಿಣಿಗಳನೆತ್ತಿ ||
ಜೆಂಜೆಕುತಕದಿಕತೋದಿಗಿದಿಮಿಕೆಂದು || (ಇದು ನಾಟ್ಯದಲ್ಲಿ ಬಳಕೆಯಾಗತ್ತೆ ಅನ್ನಿಸುತ್ತೆ. ಮೃದಂಗ ಅಥವಾ ತಾಳದ ವ್ಯಾಪ್ತಿ ಬಲ್ಲವರು ತಿಳಿಸಬೇಕು)
ರಂಜಗೆ ಮಿಗೆ ಕೇಳಿಸಿದರು ||

ಈ ರೀತಿ, ಕೇವಲ ಸಿಲಬಲ್ಲುಗಳ ಅಕ್ಷರರೂಪಗಳನ್ನು ಹೊತ್ತಿರುವ ಅನೇಕ ಪದ್ಯಗಳು ಭರತೇಶ ವೈಭವದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಹಿಂದೆ ಒಂದು ಬಳಕೆಯನ್ನು ಈಗಾಗಲೇ ಸಂಪದಿಗರಿಗೆ ಪರಿಚಯ ಮಾಡಿಸಿದ್ದೆ - ಬೆಂಕಿ ಕಾಳುಕಡ್ಡಿಗಳನ್ನು ಸುಡುವಾಗ ಬರುವ ಶಬ್ದದ ಸಿಲಬಲ್ಲುಗಳು.

  • ಕಾವ್ಯ ಮತ್ತು ಕವನ
~.~
  • Login or register to post comments
  • 508 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 4, 2008 - 1:09pm — aniljoshi

ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು

aniljoshi's picture

ಸುನಿಲ್,
ತುಂಬ ಚನ್ನಾಗಿವೆ ಎರಡೂ ಪದ್ಯಗಳು. ಓದ್ಲಿಕ್ಕೆ ಮಜಾ ಬಂತು! ಇವೆರಡಕ್ಕೆ ಹೋಲಿಸಿದರೆ timeline ನಲ್ಲಿ ಇತ್ತೀಚಿನದಾದ ದಾಸ ಸಾಹಿತ್ಯದಲ್ಲಿನ ಒಂದು ಪ್ರಯೋಗ ನೋಡಿ,

ಲಟ ಲಟಾ ಲಟ ಲಟಾ ಲಟಕಟಿಸಿ ವನಜಜಾಂಡ|
ಕಟಹ ಪಟ ಪಟ ಪುಟುತ್ಕಟದಿ ಬಿಚ್ಚುತಲಿರಲು|
ಪುಟ ಪುಟಾ ಪುಟ ನೆಗೆದು ಚೀರಿ ಹಾರುತ್ತ ಪ-
ಲ್ಕಟ ಕಟಾ ಕಟ ಕಡಿದು ರೋಷದಿಂದ|
ಮಿಟ ಮಿಟ ಮಿಟನೆ ರಕ್ತಾಕ್ಷಿಯಲ್ಲಿ ನೋಡಿ|
ತಟಿತ್ಕೋಟಿ ಊರ್ಭಟಗೆ ಆರ್ಭಟವಾಗಿರಲು|
ಕುಟಿಲ ರಹಿತ ವ್ಯಕ್ತ ವಿಜಯವಿಠ್ಠಲ ಶಕ್ತ
ದಿಟ ನಿಟಲನೇತ್ರ ಸುರಕಟಕ ಪರಿಪಾಲ

(ನರಸಿಂಹಾವತಾರದ ಬಗೆಗಿನ ವಿಜಯದಾಸರ ಸುಳಾದಿಯಿಂದ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 4, 2008 - 2:21pm — Sunil Jayaprakash

ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು

Sunil Jayaprakash's picture

ವಿಜಯದಾಸರ ಸುಳಾದಿಯಿಂದ

ಇದರ ಪೂರ್ಣ ಪಾಠ, ಎಲ್ಲಿಯಾದರೂ ಲಭ್ಯವಿದೆಯೇ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 5, 2008 - 4:40am — sritri

ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು

sritri's picture

ಇದರ ಪೂರ್ಣ ಪಾಠ, ಎಲ್ಲಿಯಾದರೂ ಲಭ್ಯವಿದೆಯೇ ?

_ ಇಲ್ಲಿದೆ. http://www.dasasahitya.org/DetailedKirPoem.asp?id=3506&TableName=Keertha...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 5, 2008 - 11:28am — Sunil Jayaprakash

ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು

Sunil Jayaprakash's picture

ನನ್ನಿ, ಶ್ರೀತ್ರೀ ಅವರೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 4, 2008 - 2:27pm — Sunil Jayaprakash

ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು

Sunil Jayaprakash's picture

ಲಟಲಟಾಲಟಲಟಾಲಟಕಟಿಸಿ ಪ್ರಯೋಗ ಬಲು ಚಾಂಗಾಂಗಿದೆ Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 4, 2008 - 1:59pm — mahesha

ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು

mahesha's picture

"ಕಾಳಿದಾಸ ಬಿಡಿ, ಅವನೊಬ್ಬ ಭಾರತದ ಅಪ್ರತಿಮ ಪ್ರಜ್ವಲತೇಜ" Sad

ಇಲ್ಲಿ ಅಪ್ರತಿಮ ಅನ್ನೋದು ತುಂಬಾ ಉತ್ಪ್ರೇಕ್ಷೇ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 4, 2008 - 9:08pm — hamsanandi

ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು

hamsanandi's picture

ಸುನಿಲರು ಕೇಳಿದರು - ನಾನು ಮಾಡಿದ್ದೇನೆ Smiling

ನನ್ನ ಹೊಸ ಬ್ಲಾಗ್ ಬರಹ, "ಬಿಂದಿಗೆಯ ಸದ್ದು" ಇದನ್ನು ನೋಡಿ.

ಅದು ಇಲ್ಲಿದೆ: http://www.sampada.net/blog/hamsanandi/04/02/2008/7323

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 5, 2008 - 1:52pm — benaka

ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು

benaka's picture

ಸುನಿಲರೆ,
ಈ ಕೃತಿ ನೋಡಿ ನನಗೆ ತಕ್ಷಣ ನೆನಪಾದದ್ದು ಈ ಶ್ಲೋಕಗಳು:

೧.
ಅಕುಂಠಿತ ರಣೋಪಕಂಠ ದಶಕಂಠ ದನುಜ ಕಂಠೀರವ
ಕಂಠಲುಂಠನಾಯಮಾನ ಜಯಾವಹಂ ಶ್ರೀನಾರಸಿಂಹಂ ||
(ಭದ್ರಾಚಲ ರಾಮಭದ್ರನ ಚತುರ್ವಿಂಶತಿನಾಮ ಸ್ತೋತ್ರ)

೨.
ಜಟಾಕಟಾಹ ಸಂಭ್ರಮ ಭ್ರಮನ್ನಿಲಿಂಪನಿರ್ಝರೀ
ವಿಲೋಲವೀಚಿವಲ್ಲರೀ ವಿರಾಜಮಾನಮೂರ್ಧನಿ|
ಧಗದ್ಧಗದ್ಧಗಜ್‍ಜ್ವಲಲ್ಲಲಾಟಪಟ್ಟಪಾವಕೇ
ಕಿಶೋರಚಂದ್ರಶೇಖರೇ ರತಿಃಪ್ರತಿಕ್ಷಣಂ ಮಮ||
(ರಾವಣನ ಶಿವತಾಂಡವ ಸ್ತೋತ್ರ)

೩.
ನಿತಾಂತಕಾಂತದಂತಕಾಂತಿಮಂತಕಾಂತಕಾತ್ಮಜಂ
ಅಚಿಂತ್ಯರೂಪಮಂತಹೀನಮಂತರಾಯಕೃಂತನಂ|
ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ
ತಮೇಕದಂತಮೇವ ತಂ ವಿಚಿಂತಯಾಮಿ ಸಂತತಂ||
(ಶಂಕರಾಚಾರ್ಯರ ಗಣೇಶಪಂಚರತ್ನ)

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 5, 2008 - 4:30pm — Sunil Jayaprakash

ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು

Sunil Jayaprakash's picture

ಬೆನಕರೆ, ಶಂಕರಾಚಾರ್ಯರ ಗಣೇಶಪಂಚರತ್ನದ ಈ ಸ್ತೋತ್ರವನ್ನು ರಾಗವಾಗಿ ಹಾಡುವದನ್ನು ಅನೇಕ ಕಡೆ ಕೇಳಿದ್ದೇನೆ. ಇಲ್ಲಿ, "ಅಂತರಾಯಕೃಂತನಂ" ಎಂದರೇನು ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 6, 2008 - 9:20pm — benaka

ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು

benaka's picture

ಸುನಿಲರೇ,

ಕೃತ್/ಕೃಂತ್ -> ಸಕ್ಕದದ ಧಾತುವಿಗೆ "ಕತ್ತರಿಸು", "ಒಡೆದು ಪುಡಿಮಾಡು", "ನಾಶಮಾಡು" ಎಂದೆಲ್ಲ ಅರ್ಥಗಳಿವೆ.
ಕೃಂತನ => ಕತ್ತರಿಸುವವನು, ನಾಶಮಾಡುವವನು, ಧೂಳೀಪಟಗೈವವನು ಎಂದೆಲ್ಲ ಅರ್ಥ ಬರುತ್ತದೆ.

ಅಂತರಾಯ = ಅಡ್ಡಿ, ಅಡೆತಡೆ, ಅಡಚಣೆ, ವಿಘ್ನ

ಆದ್ದರಿಂದ, ಅಂತರಾಯಕೃಂತನ => ವಿಘ್ನನಾಶಕ

ಅಂದರೆ ಅಚ್ಚಕನ್ನಡದಲ್ಲಿ "ತಡೆಯೊಡಕ", ಬೆನಕ!

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 7, 2008 - 12:15pm — Sunil Jayaprakash

ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು

Sunil Jayaprakash's picture

ಕೃತ್-ಕೃಂತ್ ಧಾತು ತುಂಬಾ ವಿಶಿಷ್ಟವಾಗಿದೆ. ಕನ್ನಡದಲ್ಲಿಯೂ ಈ ಅನುನಾಸಿಕ ನಿಯಮ ಕನ್ನಡದಲ್ಲಿಯೂ ತುಂಬಾ ಬಳಕೆಯಲ್ಲಿದೆಯಲ್ಲವೇ.
ಉದಾ: ಮಡಂಗು -> ಮಡಗು, ಬರ್ದುಂಕು -> ಬದುಕು, ದಾಂಟು -> ದಾಟು, ಮೀಂಟು -> ಮೀಟು.

ಸುತ (ಸುಮ್ಮನೆ ತಮಾಶೆಗೆ) : ಬೆನಕರೇ, ನಿಮ್ಮ ಕಾಮೆಂಟ್ ಸ್ವಗತವಾಗಿಬಿಟ್ಟಿತು. ಅಂದರೆ ಗಣೇಶ ನಮ್ಮ "ಬೆಂಗಳೂರು ನಗರದ ಯುವಕನೇ" ಆದ ಹಾಗಾಯಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 7, 2008 - 12:32pm — mahesha

ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು

mahesha's picture

’ಅಯಿಗಿರಿನಂದಿನಿ’ ಹಾಡುತುಂಬ ಇದೆ..

ಸಿತರಜನೀರಜನೀರಜನೀಕರವಕ್ತ್ರವೃತೇ

ಅಯಿಸುಮನಸ್ಸುಮನ್ಸುಮನ್ಸುಮನೋಹರ

ಇರು ಶಂಕರರ ನೆಗೞ್ಚು ಅಲ್ವ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭರತೇಶ ವೈಭವದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ - ಕಲ್ಪು ೧೧
  • ಭರತೇಶ ವೈಭವ ಮತ್ತು ಕನ್ನಡ ನುಡಿಗಟ್ಟುಗಳು - ಕಲ್ಪು ೧೦
  • ಭರತೇಶ ವೈಭವ ಕಲ್ಪು ೭ - ರತ್ನಾಕರವರ್ಣಿಯ ಕಾಲದ ವಿಚಾರ
  • ಭರತೇಶ ವೈಭವ ಕಲ್ಪು ೧೪ - ಪ್ರಾಸದೊಡನೆ ಆಟ
  • ಭರತೇಶ ವೈಭವ ಕಲ್ಪು ೯ - ಕಾವ್ಯ ಹೇಗಿರಬೇಕು
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..
  • ’ಕೊಲಂಬಿಯ ಪೋಸ್ಟ್ ಆಫೀಸ್’
  • ಗಣಪನ ಗಂಡಾಂತರಗಳು ಅನೇಕ

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 127 ಅತಿಥಿಗಳು ಆನ್ಲೈನ್ ಇರುವರು.


ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator