ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಭರತೇಶ ವೈಭವದಲ್ಲಿ ಗಾದೆಗಳು ಹಾಗು ಕನ್ನಡದ ಅಪ್ಲೈಡ್ ಟರ್ಮಿನಾಲಜಿಗಳು - ಕಲ್ಪು ೧೩

February 3, 2008 - 2:13pm — Sunil Jayaprakash

ಭರತೇಶ ವೈಭವದ ಕಲ್ಪುಗಳನ್ನು ಓದುತ್ತಿರುವವರಿಗೆ, "ಕಾವ್ಯವೆಂಬುದು ಮಡಿವಂತಿಕೆಯ ಚೌಕಟ್ಟಲ್ಲ", ಎಂಬುದು ಗಮನಕ್ಕೆ ಬಂದಿರಬಹುದು. ಕಾವ್ಯಗಳಲ್ಲಿ ಜನಪದ ನುಡಿಗಟ್ಟುಗಳನ್ನು ತರುವುದು ಒಬ್ಬ ಕವಿಯ ಪ್ರಬುದ್ಧತೆ ಹಾಗು ತನ್ನ ಕೃತಿಯ ಮೇಲಿನ ಹಿಡಿತವನ್ನು ತೋರುತ್ತದೆ. ಈ ದಿನ ಗಾದೆಯನ್ನೊಳಗೊಂಡ ಒಂದು ಪದ್ಯ ಹಾಗು ಭರತೇಶ ವೈಭವದಿಂದ ಈಗಿನ ಫಿಸಿಕ್ಸ್ ಸ್ಟೂಡೆಂಟುಗಳು ಸೃಷ್ಟಿಸಬಹುದಾದ ಅಪ್ಲೈಡ್ ಟರ್ಮಿನಾಲಜಿಗಳನ್ನು ಗಮನಿಸೋಣ.

೧. ಉಂಡುಪವಾಸಿ ಬಳಸಿ ಬ್ರಹ್ಮಾಚಾರಿ ಭೂ
ಮಂಡಲವಿದ್ದು ನಿಸ್ಸಂಗ |
ಮಂಡೆಬೆಳೆದು ಮನಬೋಳಾದ ತಪಸಿಯ
ಕೊಂಡಾಡಲಳವೆ ಚಕ್ರಿಯನು ||

ರತ್ನಾಕರವರ್ಣಿ, ತನ್ನ ನಾಯಕನನ್ನು ಅತ್ಯುಚ್ಛ ಆದರ್ಶಜೈನನನ್ನಾಗಿ ಕಾಣುತ್ತಾನೆ. ಹಾಗಾಗಿಯೇ, ಭರತೇಶನಿಗೆ ಅಷ್ಟೆಲ್ಲ ಹೆಂಡತಿಯರಿದ್ದರೂ ಕವಿಯು ಮಾತ್ರ ತನ್ನ ರಾಜನ ಆತ್ಮಕಲೆಯನ್ನು ಮಾತ್ರ ಬಿಟ್ಟುಕೊಡುವುದಿಲ್ಲ. ಹಾಗಾಗಿ, ಭರತ, "ಉಂಡಿದ್ದರೂ ಉಪವಾಸಿ, ಬಳಸಿಯೂ ಬ್ರಹ್ಮಚಾರಿ".

ಸಂಪದದಲ್ಲಿ ಶ್ರೀಕಾಂತ ಮಿಶ್ರಿಕೋಟಿಯವರು, ಆಗಾಗ ಧಾರವಾಡ ಕನ್ನಡದ ಬಗ್ಗೆ ತಿಳಿಸಿಕೊಡುತ್ತಿರುತ್ತಾರೆ. ಹೀಗೆ ಒಮ್ಮೆ ಅವರ, ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨) ಎಳೆಯಲ್ಲಿ "ಅಳ" ಎಂಬ ಪದದ ಪ್ರಸ್ತಾಪವಾಗಿತ್ತು. ಭರತೇಶ ವೈಭವದಲ್ಲಿ ಎಷ್ಟೋ ಕಡೆ ಈ "ಅಳ" ಪದ ಬಂದಿದೆ. ಒಂದು ಕಡೆ, ಕವಿ ತನ್ನ ರಾಯನನ್ನು ಹೊಗಳುವುದಕ್ಕೆ ನನಗೆ "ತುಂಬಾ ಹೆಮ್ಮೆ, ಗರ್ವ" ಎನ್ನುವ ಧಾಟಿಯಲ್ಲಿ
೨. ಪುರು ಪರಮೇಶನ ಹಿರಿಯ ಕುಮಾರನು
ನರಲೋಕಕೊಬ್ಬನೆ ರಾಯ
ಮುರಿದು ಕಣ್ಣಿಟ್ಟರೆ ಕ್ಷಣಕೆ ಮುಕ್ತಿಯ ಕಾಂಬ
ಭರತ ಚಕ್ರಿಯ ಹೇಳಲಳವೇ

ಅಳ – power, strength, force, ability, possibility, practicability.
ಅಳವೇ - question on own’s ಅಳ.("ಮಾಡಿ ಮುಗಿಸೋದೇ", "ಕತ್ತರಿಸಿ ಬಿಸಾಕೋದೇ", “ಅದೇ ಮತ್ತೆ”, “ಹೌದು ಮತ್ತೆ” ಅಂತೀವಲ್ಲ, ಹಾಗೆ)

ಧಾರವಾಡದ ಕಡೆ, "ಅಳ" ಬಳಕೆಯಲ್ಲಿದ್ದರೂ, "ಘನಗಂಭೀರ ಸಾಹಿತ್ಯಕ ಪಾಂಡಿತ್ಯಮಾನ ಕನ್ನಡ"ದಲ್ಲಿ "ಅಳ" ಬಳಕೆಯಲ್ಲಿಲ್ಲವಲ್ಲ ಎಂದು ಯೋಚಿಸಿದಿರಾ. ಒಂದು ನಿಮಿಷ ತಡೆಯಿರಿ. "ಅಳವಡಿಸು" ಎಂಬ ಪದ ಹೇಗೆ ಬಂತು ಎಂಬುದನ್ನು ಯೋಚಿಸಿ. ಆಗ ತಿಳಿಯುತ್ತದೆ.
ಅಳ + ಪಡಿಸು -> ಅಳವಡಿಸು -> ಭದ್ರಪಡಿಸು, apply ಮಾಡು, fit ಮಾಡು, prepare ಮಾಡು. ಇದಂತೂ ಸಿಕ್ಕಾಪಟ್ಟೆ ಫೇಮಸ್ ಪದ.
೧. ಕಡಿಮೆ ವಿದ್ಯುತ್ ಬಳಸಿ ಹೆಚ್ಚು ಬೆಳಕು ನೀಡುವ ಫ್ಲೋರೋಸೆಂಟ್ ಬಲ್ಪುಗಳನ್ನು ಅಳವಡಿಸಿದ್ದರಿಂದ ಈ ಬಾರಿ ಕಂಪೆನಿಯ ಖರ್ಚು ಕಡಿಮೆಯಾಗಿದೆ.
೨. ಈ ಬಾರಿ ಹತ್ತನೇ ತರಗತಿಗೆ “ಆಂಡಯ್ಯನ ಕಬ್ಬಿಗರ ಕಾವನ್” ಪಠ್ಯವನ್ನು ಅಳವಡಿಸಲಾಗಿದೆ.

ಅಳ ಎಂಬುದು ಸಕಾರಾತ್ಮಕ ಅಂಶಗಳನ್ನು ಹೊರಸೂಸಿದರೆ, "ಅಳು" ಪದ ನಕಾರಾತ್ಮಕ ಪ್ರಧಾನವಾದುದು. ಗಮನಿಸಿ, ಅಳು + ಉಂಕು -> ಅಳುಂಕು -> ಅಳುಕು.(ಹಿಂಜರಿಕೆ), ಹಾಗೆಯೇ ಅಳುಮುಂಜಿ ಪದವನ್ನೂ ನೆನಪಿಸಿಕೊಳ್ಳಿ. ಅಳು - negating probabilities, ಅಳ - positive assertion.

ಕೊಕೊ - ಈ ರೀತಿ ಧಾರವಾಡ-ಮೈಸೂರು ಸೀಮೆಗಳ ನಡುವೆ ಕೊಟ್ಟುತಂದು ಮಾಡಿಕೊಂಡರೆ "ಇಂಟರ್ ಕನ್ನಡ ಭಾಷಾ ಸಾಮರಸ್ಯ" Eye-wink ಹೆಚ್ಚೋದು ಅಳ (ಗ್ಯಾರೆಂಟಿ).

  • ಜ್ಞಾನವಾಹಿನಿ
~.~
  • Login or register to post comments
  • 327 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭರತೇಶ ವೈಭವ ಮತ್ತು ಕನ್ನಡ ನುಡಿಗಟ್ಟುಗಳು - ಕಲ್ಪು ೧೦
  • ಭರತೇಶ ವೈಭವ ಕಲ್ಪು ೧೪ - ಪ್ರಾಸದೊಡನೆ ಆಟ
  • ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು
  • ಭರತೇಶ ವೈಭವದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ - ಕಲ್ಪು ೧೧
  • ಭರತೇಶ ವೈಭವದಲ್ಲಿ ಬೊಂಬೆಯಾಟ - ಕಲ್ಪು ೫
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮುಂದೇನಾಗಬಹುದು ???
  • ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
  • ಕತೆಗಾರ್ತಿ ದೊಡ್ಡಮ್ಮ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
  • harshavardhan v...
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:24pm
  • shashikannada
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 4:20pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:17pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:15pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 31 ಅತಿಥಿಗಳು ಆನ್ಲೈನ್ ಇರುವರು.


ಯಾವುದು ಕಾಲದ ಕಠಿಣ ಪರೀಕ್ಷೆಯಲ್ಲೂ ಅಚಲವಾಗಿರುತ್ತದೆಯೋ ಅದೇ ಸತ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator