ಅವಳೇ ಇಲ್ಲದಾ ಇರುಳಿನಲ್ಲಿ
ಅವಳೇ ಇಲ್ಲದಾ ಇರುಳಿನಲ್ಲಿ
ಸೊಗಸು ಏಕೋ ಕಾಣದು
ಅವಳ ಕಾಣದ ಕಣ್ಣುಗಳಿಗೆ
ನಿದಿರೆ ಏಕೋ ಬಾರದು
ಆವ ಹಾಡೂ ಇಂಪು ತರದು
ಅವಳು ಬಳಿಯೆ ಸುಳಿಯದಿರಲು
ಆವ ನುಡಿಯು ಮನವ ಗೆಲದು
ಅವಳ ನುಡಿಯ ಕೇಳದಿರಲು
ಆವ ಗುರಿಯು ಗರಿಯೆನಿಸದು
ಅವಳು ಜೊತೆಗೆ ನಡೆಯದಿರಲು
ಆವ ಪರಿಯ ನಾನು ಅರಿಯೆ
ಅವಳ ಮತ್ತೆ ಹಿಂಪಡೆಯಲು
ಅವಳೇ ಇಲ್ಲದಾ ದಾರಿಯಲ್ಲಿ
ಪಯಣ ಮುಂದೆ ಸಾಗದು
ಅವಳೇ ಇಲ್ಲದಾ ಬದುಕಿನಲ್ಲಿ
ಕನಸು ಏಕೋ ಕೊನರದು
--ಜಯಪ್ರಕಾಶ ನೇ ಶಿವಕವಿ

- Login or register to post comments
- 183 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಅವಳೇ ಇಲ್ಲದಾ ಇರುಳಿನಲ್ಲಿ
ಚನ್ನು..
ಇಲ್ಲಿ ಅವಳು ಎಂಬುದು ಜಂಪೆ/ನಿದ್ರಾದೇವಿ ಎಂದು ಅಂದುಕೊಂಡೆ!
ಉ: ಅವಳೇ ಇಲ್ಲದಾ ಇರುಳಿನಲ್ಲಿ
Mahesha avare illi avalu andre mane munisikondu mane bittu hoda hendathi yannu kalpisikodnu naanu baredaddu.
dhanyavaadagalu,
ಜಯಪ್ರಕಾಶ ನೇ.ಶಿ.
ಉ: ಅವಳೇ ಇಲ್ಲದಾ ಇರುಳಿನಲ್ಲಿ
Mahesha avare illi avalu andre munisikondu mane bittu hoda hendathi yannu kalpisikodnu naanu baredaddu.
dhanyavaadagalu,
ಜಯಪ್ರಕಾಶ ನೇ.ಶಿ.
ಉ: ಅವಳೇ ಇಲ್ಲದಾ ಇರುಳಿನಲ್ಲಿ
Mahesha avare illi avalu andre munisikondu mane bittu hoda hendathi yannu kalpisikodnu naanu baredaddu.
dhanyavaadagalu,
ಜಯಪ್ರಕಾಶ ನೇ.ಶಿ.
ಉ: ಅವಳೇ ಇಲ್ಲದಾ ಇರುಳಿನಲ್ಲಿ
ಹವ್ದಾ!!
ನಂಗಿನ್ನು ಆ ಬಾಗ್ಯ ಬಂದಿಲ್ಲ
ಸದ್ಯಕ್ಕೆ.. ನಿದ್ರೆ(ನಿದ್ರಾ) ಬರದಿದ್ರೆ.. ಅವಳ್ಯಾಕಿನ್ನು ಬರಲಿಲ್ಲ.. ಬಂದು ತಬ್ಬಿದ್ರೆ, ತುಸು ಹಿಂಗೆ ಅವಳಿಂದ ಕನಸಿನ ಲೋಕದ ನೆಮ್ಮದಿ ಪಡೆಬೋದು ಅಂತ ಎಣಿಸ್ತೀನಿ!!
ಒಂದು ಗುಟ್ಟು ಯಾರಿಗೂ ಹೇಳಬೇಡಿ
ಯಾರಾದ್ರು ನಮ್ಮ ಜೊತೆ ಮುನಿಸ್ಕೊಂಡ್ರೆ ಮೂರು ಬಗೆಯಲ್ಲಿ ಅವರನ್ನು ಒಲಿಸ್ಕೋಬೋದು ಎಂದು ಅನ್ನಿಸ್ತದೆ.
೧) ಹಿಂಗೆ ತಂಗೂ ಸಿಕ್ಕಾಪಟ್ಟಿ ಬೇಸ್ರ ಅಂದ್ರೆ, ಆಕಿ ಬಲು ಮರುಕ ಪಟ್ಟು ಬರಬೋದು
೨) ನೀ ಮಸ್ತ್.. ನೀ ಸೂಪರ್ ಅಂತ ಹೊಗಳಿ ಹೊಗಳಿ ಒಲಿಸ್ಕೊಳ್ಳೋದು
೩) ನೀನಿಲ್ಲದಿದ್ರೆ, ಬೇರೊಬ್ಳು, ಹೋಗ್ ಅಂತ ತುಸು ಉಡಾಪೆ ತೋರಿಸಿದ್ರೆ, ಹೆದರಿ ಒಲಿಯಬೋದು
ನೀವು ೧ ಅನ್ನು ಈಗ ಮಾಡಿ ಆಯ್ತು..
)
ಇನ್ನು ೨ ಮತ್ತು ೩ ಕ್ಕೆ ಒಂದೊಂದು ಪದ್ಯ ಬರೆಯಿರಿ..( ಚಾಲೆಂಚು