ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಅಷ್ಟೇನೂ ಪರಿಚಿತವಲ್ಲದ ಈಸೋಪನ ನೀತಿಕಥೆಗಳು

February 5, 2008 - 9:15pm — rameshbalaganchi

ಹುಂಜವೂ ವಜ್ರದ ಹರಳೂ
ತನಗೂ ತನ್ನ ಕೋಳಿಗಳಿಗೂ ಆಹಾರಕ್ಕಾಗಿ ತಿಪ್ಪೆ ಕೆದಕುತ್ತಿದ್ದ ಒಂದು ಹುಂಜಕ್ಕೆ ಒಂದು ವಜ್ರದ ಹರಳು ಸಿಕ್ಕಿತು. ಅದು ವಜ್ರದ ಹರಳಿಗೆ ಹೇಳಿತು " ನೀನು ನನ್ನ ಬದಲು ನಿನ್ನ ಯಜಮಾನನಿಗೆ ಸಿಕ್ಕಿದ್ದರೆ ಅವನು ನಿನ್ನನ್ನು ತನ್ನ ಮುಡಿಗೇರಿಸಿಕೊಂಡು ಮೆರೆಸುತ್ತಿದ್ದ. ಆದರೆ ನೀನು ನನಗೆ ಸಿಕ್ಕಿದೆ. ನಿನ್ನಿಂದ ನನಗೆ ಯಾವ ಉಪಯೋಗವೂ ಇಲ್ಲ. ನನಗೆ ಪ್ರಪಂಚದ ಎಲ್ಲ ಒಡವೆಗಳಿಗಿಂತ ಒಂದು ಕಾಳು ಬಾರ್ಲಿ ಸಿಕ್ಕಿದ್ದರೆ ಚೆನ್ನಾಗಿತ್ತು

ಕತ್ತೆಯೂ ಮಿಡಿತೆಗಳೂ
ಮಿಡಿತೆಗಳ ಚಿರಿಗುಟ್ಟುವ ಧ್ವನಿ ಕೇಳಿದ ಕತ್ತೆಯೊಂದಕ್ಕೆ ಆಸಕ್ತಿ ಮೂಡಿತು. ಅಂಥದೇ ಇಂಪಾದ ಧ್ವನಿ ತನಗೂ ಬೇಕೆಂದು ಬಯಸಿ ಇಂಥ ಇಂಪಾದ ಕಂಠ ಪಡೆಯಲು ನೀವು ಅದೇನು ಆಹಾರ ಸೇವಿಸುತ್ತೀರಿ ಎಂದು ಅದು ಮಿಡಿತೆಗಳನ್ನು ಕೇಳಿತು. "ನಾವು ಮಂಜಿನ ಹನಿ ಕುಡಿಯುತ್ತೇವೆ" ಎಂದು ಮಿಡಿತೆಗಳು ಹೇಳಿದವು. ತಾನು ಇನ್ನು ಮುಂದೆ ಮಂಜಿನ ಹನಿಗಳನ್ಬು ಕುಡಿದೇ ಬದುಕುತ್ತೇನೆ ಎಂದು ನಿರ್ಧರಿಸಿತು. ಹಾಗೇ ಮಾಡುತ್ತ ಕೆಲವೇ ದಿನಗಳಲ್ಲಿ ಹಸಿವಿನಿಂದ ಸತ್ತೂ ಹೋಯಿತು.

ಖಗೋಳಶಾಸ್ತ್ರಜ್ಞ

ಒಬ್ಬ ಖಗೋಳಶಾಸ್ತ್ರಜ್ಞನಿಗೆ ರಾತ್ರಿಯಲ್ಲಿ ಹೊರಹೋಗಿ ನಕ್ಷತ್ರಗಳನ್ನು ವೀಕ್ಷಿಸುವ ಹವ್ಯಾಸವಿತ್ತು. ಒಂದು ರಾತ್ರಿ ಅವನು ನಕ್ಷತ್ರವೀಕ್ಷಣೆ ಮಾಡುತ್ತ ಮಾಡುತ್ತ ಅವನು ಊರಹೊರಗಿನ ಪ್ರದೇಶಕ್ಕೆ ಹೊರಟುಹೋದ. ಗಮನವೆಲ್ಲ ಆಕಾಶದ ಮೇಲೆ ನೆಟ್ಟಿದ್ದರಿಂದ ಅವನು ಆಯತಪ್ಪಿ ಒಂದು ಬಾವಿಯಲ್ಲಿ ಬಿದ್ದುಬಿಟ್ಟ. ತನಗಾದ ನೋವು, ತರಚುಗಾಯಗಳಿಗಾಗಿ ಅವನು ಗೋಳಿಡುತ್ತ ಕಾಪಾಡಿ!! ಕಾಪಾಡಿ !!ಎಂದು ಕೂಗುತ್ತಿರುವಾಗ ಒಬ್ಬ ನೆರೆಯವನು ಅವನ ಕೂಗು ಕೇಳಿ ಬಾವಿಯಬಳಿ ಹೋದನು. ಅಲ್ಲಿ ನಡೆದುದನ್ನು ಕೇಳಿ ಬಾವಿಯಲ್ಲಿನ ಖಗೋಳಶಾಸ್ತ್ರಜ್ಞನಿಗೆ ಹೇಳಿದನು " ಅಯ್ಯಾ ಮೂರ್ಖ ಮುದುಕ, ಆಕಾಶದ ಮೇಲಿರುವ ನಕ್ಷತ್ರದ ಮೇಲೆ ಗಮನ ಕೊಡುವ ನೀನು ನೆಲದ ಮೇಲೇನಿದೆ ಎಂದು ನೋಡುವುದಿಲ್ಲವಲ್ಲ!!

  • ಕಥಾ ಮಾಲಿಕೆ
~.~
  • Login or register to post comments
  • 399 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 9, 2008 - 11:51pm — uniquesupri

ಉ: ಅಷ್ಟೇನೂ ಪರಿಚಿತವಲ್ಲದ ಈಸೋಪನ ನೀತಿಕಥೆಗಳು

uniquesupri's picture

ಹೌದು ಇವನ್ನು ನಾನೆಲ್ಲೂ ಓದಿಲ್ಲ. ಮೊದಲನೆಯ ಕತೆಯನ್ನು ಎಲ್ಲೋ ಕೇಳಿದ್ದ ನೆನಪು.
ಇನ್ನೆರಡು ಕತೆಗಳು ಝೇನ್ ಕಥೆಗಳಿದ್ದ ಹಾಗಿವೆ. ನಿಮಗೆ ಎಲ್ಲಿ ಸಿಕ್ಕವು ಈ ಕತೆಗಳು?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 10, 2008 - 4:26am — rameshbalaganchi

ಉ: ಅಷ್ಟೇನೂ ಪರಿಚಿತವಲ್ಲದ ಈಸೋಪನ ನೀತಿಕಥೆಗಳು

rameshbalaganchi's picture

ನನಗೆ ಈ ಕತೆಗಳು ಇಂಟರ್‌ನೆಟ್‌ನಲ್ಲಿ ಸಿಕ್ಕವು. ನಿಮ್ಮಲ್ಲಿ ಇವು ಆಸಕ್ತಿ ಮೂಡಿಸಿದವೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 13, 2008 - 3:12pm — uniquesupri

ಉ: ಅಷ್ಟೇನೂ ಪರಿಚಿತವಲ್ಲದ ಈಸೋಪನ ನೀತಿಕಥೆಗಳು

uniquesupri's picture

ನಿಜಕ್ಕೂ ನನ್ನನ್ನು ಆಶ್ಚರ್ಯಕ್ಕೀಡು ಮಾಡಿವೆ ಈ ಕಥೆಗಳು. ಈಸೋಪ ಎಂಬ ಗುಲಾಮನಾಗಿದ್ದಂತಹ ವ್ಯಕ್ತಿಯಲ್ಲಿ ಇಷ್ಟು ಆಳವಾದ ಒಳನೋಟಗಳ ಕಥೆಯಿದ್ದವು ಎಂಬುದ ತಿಳಿದು... ನಿಮ್ಮ ಕೆಲಸ ಅಭಿನಂದನೀಯ ದಯವಿಟ್ಟು ಮುಂದುವರೆಸಿ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 13, 2008 - 5:46pm — rameshbalaganchi

ಉ: ಅಷ್ಟೇನೂ ಪರಿಚಿತವಲ್ಲದ ಈಸೋಪನ ನೀತಿಕಥೆಗಳು

rameshbalaganchi's picture

ಪುಟ್ಟ ಪ್ರಯತ್ನಕ್ಕೆ ಸಿಕ್ಕ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಈಗಾಗಲೇ ಈ ಕತೆಗಳ ಎರಡನೆಯ ಕಂತು ಕನ್ನಡಿಸಿದ್ದೇನೆ. ನೀವೂ ಗಮನಿಸಿರಬಹುದು. ನೀವು ಹೇಳಿದ್ದು ನಿಜ. ಆದರೆ ಗುಲಾಮರಲ್ಲಿ ಪ್ರತಿಭೆ ಮಿಂಚಬಾರದೆಂದೇನೂ ಇಲ್ಲವಲ್ಲ!! ಅವರ ಸಮಯವೆಲ್ಲ ದುಡಿತ ಮತ್ತು ಚಿಂತೆಯಲ್ಲೇ ಕಳೆಯುವುದರಿಂದ ಹೆಚ್ಚಿನವರಲ್ಲಿ ಸಾಹಿತ್ಯದ ಹೊಳಹು ಮೂಡಲು ಅವಕಾಶಗಳಾದರೂ ಎಲ್ಲಿದೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಷ್ಟೇನೂ ಪರಿಚಿತವಲ್ಲದ ಈಸೋಪನ ನೀತಿಕಥೆಗಳು-ಭಾಗ ೨
  • ಪ್ರಿಯತಮೆಗೊಂದು ಪತ್ರ
  • ಅಷ್ಟೇನೂ ಪರಿಚಿತವಲ್ಲದ ಈಸೋಪನ ನೀತಿಕಥೆಗಳು-ಭಾಗ ೩
  • ಒಂದು ಭಯಂಕರ ಜೋಕು ಓದಿ.
  • ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಹನ್ನೆರಡನೆಯ ಕಂತು
Syndicate content

ಲೇಖಕರು

rameshbalaganchi's picture

ಪೂರ್ಣ ಹೆಸರು
Ramesh Balaganchi

ಪರಿಚಯ

ನಾನು ಸರಳ ಮನುಷ್ಯ. ಬೆಂಗಳೂರಿನಲ್ಲಿ ಸಂಸ್ಕೃತ ಆನರ್ಸ್ ಮಾಡಿ 1979 ರಿಂದ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕನ ಕೆಲಸ ಮಾಡುತ್ತಿದ್ದೇನೆ. ಭಾಷಾ ಕಲಿಕೆ, ಪಕ್ಷಿವೀಕ್ಷಣೆ ತುಂಬಾ ಇಷ್ಟದ ಹವ್ಯಾಸಗಳು. ಇತ್ತೀಚೆಗೆ ಕಂಪ್ಯೂಟರ್ ಬಳಸಲು ಕಲಿಯುತ್ತಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಯಾರ ಮುಡಿಗೆ ಸೌಂದರ್ಯ ಕಿರೀಟ...
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ‘ಇರುವೆ’ (ನೀ ಎಲ್ಲೆಲ್ಲೂ ಇರುವೆ)ಗಳು ಅಂತರ್ಜಲ ಮಟ್ಟ ಹೆಚ್ಚಿಸುವ ‘ಬ್ಯಾಂಕರ್’ಗಳು!
  • ‘ಸಂತೆ’ ಎಂಬ ವ್ಯಾವಹಾರಿಕ ಚೌಕಾಶಿಯ ‘ನಾಟಕ’!

ಇತ್ತೀಚಿನ ಪ್ರತಿಕ್ರಿಯೆಗಳು

  • sathishcv
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 8:40pm
  • ಮನಹ್ಪಠಲ
    ಉ: ಎಂ ಪಿ ಶಂಕರ್ - ಟಾಟಾ
    July 20, 2008 - 5:47pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:45pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:32pm
  • rasheedgm
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 4:49pm
  • anil.ramesh
    ಉ: ಧಾರವಾಡದ ನವಿಲೂರ ಕೆರೆಯಲ್ಲಿ ಆಹಾರ ಹೆಕ್ಕುತ್ತಿರುವ ಶಾಪಗ್ರಸ್ಥ ! ಟಿಟ್ಟಿಭ ಹಕ್ಕಿ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
    July 20, 2008 - 11:49am
  • ASHOKKUMAR
    ಉ: ನನ್ನಜ್ಜನ ಬೆಚ್ಚಗಿನ ನೆನಪುಗಳು
    July 20, 2008 - 11:32am
  • Ananth.R
    ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
    July 20, 2008 - 11:22am
  • ರೇಖಾ
    ಉ: ಒ೦ದು ಬೆಚ್ಚನೆಯ ನೆನಪು..
    July 20, 2008 - 9:45am
  • Jayalaxmi.Patil
    ಉ: ಕತ್ತಲೆಯಿಂದ ಹೊರ ಬಂದ ಖಾದಿ
    July 19, 2008 - 11:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 47 ಅತಿಥಿಗಳು ಆನ್ಲೈನ್ ಇರುವರು.


ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator