ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಭರತೇಶ ವೈಭವ ಕಲ್ಪು ೧೪ - ಪ್ರಾಸದೊಡನೆ ಆಟ

February 6, 2008 - 9:23pm — Sunil Jayaprakash

ಹಿಂದೊಮ್ಮೆ ಹಂಸಾನಂದಿ ಮತ್ತು ಮಹೇಶ ಕನ್ನಡದ ಸಾಹಿತ್ಯದಲ್ಲಿರುವ ಪ್ರಾಸ ಪದ್ಯಗಳನ್ನು ಅನೇಕ ಬಳಕೆಗಳ ಮೂಲಕ ಘನಗಂಭೀರ ಕವಿತ್ವ ಎಂಬ ಎಳೆಯಲ್ಲಿ ವಿವರಿಸಿದ್ದರು. ಈ ದಿನ ಭರತೇಶ ವೈಭವದಲ್ಲಿ ಕಂಡುಬಂದ ಒಂದು ವಿಶಿಷ್ಟ ಪ್ರಾಸಪದ್ಯವನ್ನು ಗಮನಿಸೋಣ.

ಸರಲ ಸರಲವಾಗಿ ಸಪುರ ಸಪುರವಾಗಿ
ತರಲ ತರಲವಾಗಿ ತೋರಿ
ವಿರಲ ವಿರಲವಾಗಿ ಠಾಯೆಗಾಣಿಸಿದರು
ಕೊರಳ ಬೆರಳ ಸರಿತದೊಳು

ಇಲ್ಲಿ ಎರಡನೆಯ ಮತ್ತು ಮೂರನೆಯ ಅಕ್ಷರಗಳು ಪ್ರಾಸ ನಿಯಮವನ್ನು ಪಾಲಿಸುತ್ತಿವೆ. ಇದಕ್ಕೆ ಏನಾದರೂ ಹೆಸರಿದೆಯೇ ? ಇಲ್ಲದಿದ್ದರೆ ನನಗೊಂದು ಹೆಸರು ಹೊಳೆಯಿತು. ಇದಕ್ಕೆ ಎಮು-ಪ್ರಾಸ ಎನ್ನಬಹುದು.

ಇಲ್ಲಿ "ಕೊರಳ ಬೆರಳ ಸರಿತದೊಳು" ಸಾಲು ತುಂಬಾ ವಿಶಿಷ್ಟವಾದ ಪ್ರಯೋಗ. "ಸರಿತ" ಎಂದರೆ ಹರಿಯುತ್ತಿರುವ ನದಿ ಎಂಬುದು ಒಂದರ್ಥ.

ಕೊರಳ ಸರಿತ - ಗಾನಸರಸ್ವತೀ
ಬೆರಳ ಸರಿತ - ವೀಣಾಪಾಣಿ ಸರಸ್ವತೀ

ಹಾಡು ಹಾಗು ವೀಣೆ ಎರಡರ ನಾದವೂ ಕೂಡ ಸರಾಗವಾಗಿ ಸೂರೆಗೊಳಿಸುತ್ತಿದ್ದವು. ಭರತೇಶ ವೈಭವದಲ್ಲಿ ಇನ್ನೂ ಒಂದು ಕಡೆ "ವೀಣೆಗಳೆರೆಡೊಂದಾಗಿ" ಎಂಬ ಪ್ರಯೋಗವಿದೆ. ಕಾಳಿದಾಸನು "ಕಮಲೇ ಕಮಲೋತ್ಪತ್ತಿಃ" ಎಂದರೆ ರತ್ನಾಕರವರ್ಣಿಯು, "ವೀಣೆಯ" ಕೈಯಲ್ಲಿಯೇ "ವೀಣೆಯಿಡುತ್ತಾನೆ".

ಸರಸ್ವತಿಯನ್ನು ವೀಣಾಪಾಣಿಯಾಗಿ ಕೆಲವು ಕವಿಗಳು ಕಂಡರೆ, ಅಸಾಮಾನ್ಯ ಕವಿಗಳು ಸರಸ್ವತಿಯನ್ನೇ ವೀಣೆಯಾಗಿಸಿಕೊಳ್ಳುತ್ತಾರೆ.

  • ಜ್ಞಾನವಾಹಿನಿ
~.~
  • Login or register to post comments
  • 578 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 7, 2008 - 11:03am — mahesha

ಉ: ಭರತೇಶ ವೈಭವ ಕಲ್ಪು ೧೪ - ಪ್ರಾಸದೊಡನೆ ಆಟ

mahesha's picture

ಜಾಂಗು ಮಗ ಜಾಂಗು!!

ಲೇ ನನ್ ಟಟಟನೇ Smiling

’ಭರತೇಶ ವೈಭವ’ದ ವೈಭವೀಕರಣಕ್ಕಾಗಿ ನನ್ನಿ! Smiling

ಮಸ್ತ್ ಮಗ.. ರತ್ನಾಕರವರ್ಣೀ ಪಾಪಾ ಕನ್ನಡದ ಕವಿಯಾಗಿ ಹೆಚ್ಚು ಪೇಮಸ್ಸಾಗಲಿಲ್ಲ.!! ನಾವ್ ಕನ್ನಡದೋರು ಯಾವಾಗ ಪಂಪ, ರನ್ನ, ರತ್ನಾಕರವರ್ಣೀ ಅಂತೋರ ಬಗ್ಗೆ ಟಾಂಟಾಮ್ ಮಾಡೋದು.

ಆ ತಮಿಳ್ರು ನೋಡು ಇರೋ ಒಂದೆರಡು ಹಳೇ ತಮಿಳು ಕವಿಗಳ ಹೆಸರನ್ನು ಇರೋಬರೋ ಕಡೆಯಲ್ಲ ಕೇಳಿಸಿಟ್ಟವ್ರೆ!
ಆ ಇಂಗ್ಲೀಸೋರು ಇರೋ ಶೇಕ್ಸಪಿಯರು, ಮಿಲ್ಟನ್ ಅಂತ ಎಲ್ಲಾಕಡೆ ಶಂಕ ಊದವ್ರೆ.
ಸಂಸ್ಕೃತದೋರ್‍ ಬಿಡಪ್ಪ ಕಾಳಿದಾಸನ್ ಬಿಟ್ರೆ ಬೇರೆ ಯಾರ್‍ ಬರೆದಿದ್ದು ಕಬ್ಬ ಅಲ್ಲ ಗಬ್ಬು ಅಂದ್ಬಿಟ್ತಾರೆ
.................

ತೂ ನಮ್ ಕನ್ನಡದೋರ್‍ ಯೋಗ್ಯತೆಗಿಶ್ಟು! ಅಸಯ್ಯ!! Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 9, 2008 - 11:32pm — uniquesupri

ಉ: ಭರತೇಶ ವೈಭವ ಕಲ್ಪು ೧೪ - ಪ್ರಾಸದೊಡನೆ ಆಟ

uniquesupri's picture

ಮಹೇಶಣ್ಣ,
ಇರ್ಲಿ ಬಿಡ್ರೀ ಬರೀ ಹೆಸ್ರನ್ನು ಪೇಮಸ್ಸು ಮಾಡಿ ಅವರ ಯಾವ ಕೃತಿನೂ ಓದದೇ ಇರೋದಕ್ಕಿಂತ ಇದು ವಾಸಿ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 11, 2008 - 11:33am — mahesha

ಉ: ಭರತೇಶ ವೈಭವ ಕಲ್ಪು ೧೪ - ಪ್ರಾಸದೊಡನೆ ಆಟ

mahesha's picture

ಹೆಸ್ರೂ ಪೇಮಸ್‌ ಮಾಡಬೇಕು, ಓದ್ಲೋ ಬೇಕು...

ಪೇಮಸ್ಸಾದ್ರೆ ನಾವ್ ಅಲ್ಲದಿದ್ರೇ ಬೇರೊಬ್ರು ಓದ್ರಾರೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 10, 2008 - 10:10am — Sunil Jayaprakash

ಉ: ಭರತೇಶ ವೈಭವ ಕಲ್ಪು ೧೪ - ಪ್ರಾಸದೊಡನೆ ಆಟ

Sunil Jayaprakash's picture

ಲೇ ನನ್ ಟಟಟನೇ

ಏನೋ ಅದು, ಕೋಡ್ ವರ್ಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 11, 2008 - 1:49am — hamsanandi

ಉ: ಭರತೇಶ ವೈಭವ ಕಲ್ಪು ೧೪ - ಪ್ರಾಸದೊಡನೆ ಆಟ

hamsanandi's picture

ಈ ಎರಡು-ಮೂರು ಅಕ್ಷರದ ಪ್ರಾಸಕ್ಕೆ ಬೇರೆ ಹೆಸರಿದೆಯೋ ನನಗೆ ಗೊತ್ತಿಲ್ಲ.
ಆದರೆ, ಇದು ಅಷ್ಟೇನೂ ಅಪರೂಪವಲ್ಲ ಎನ್ನಿಸುತ್ತೆ. ತಕ್ಷಣ ಹೊಳೆದ ಪುರಂದರ ದಾಸರ ಈ ರಚನೆಯನ್ನು ನೋಡಿ:

ಕನಕ ವೃಷ್ಟಿಯ ಕರೆಯುತ ಬಾರೆ
ಮನಕಾಮನೆಯ ಸಿದ್ಧಿಯ ತೋರೆ
ದಿನಕರ ಕೋಟಿ ತೇಜದಿ ಹೊಳೆಯುವ
ಜನಕ ರಾಯನ ಕುಮಾರಿ ಬೇಗ | ಭಾಗ್ಯದ ಲಕ್ಷ್ಮೀ ಬಾರಮ್ಮ||

ಇದು ಯಮಕ ಎಂದು ಕರೆಯುವ ಶಬ್ದಾಲಂಕಾರವಿರಬೇಕು. ನನಗೆ ನೆನಪಿನಲ್ಲಿರುವುದು ಸರಿಯಾದರೆ, ಯಮಕದಲ್ಲಿ, ಒಂದೇ ಪದವು ಬೇರೆ ಬೇರೆ ಅರ್ಥದಲ್ಲಿ ಇರುತ್ತೆ ಎನ್ನಿಸುತ್ತೆ - ಆದರೆ ಹಾಗೇ ಇರಲೇಬೇಕೇ ಎಂಬುದನ್ನು ವ್ಯಾಕರಣ ಚೆನ್ನಾಗಿ ಬಲ್ಲವರು ತಿಳಿಸಿ. ವೆಂಕಟಸುಬ್ಬಯ್ಯನವರ ನಿಘಂಟು ಯಮಕ ಕ್ಕೆ ಈ ಅರ್ಥ ಕೊಡುತ್ತದೆ:

೧. ಯಮಕ (ಸಂ) (ನಾ) ೧ ತಡೆ, ಸಂಯಮ ೨ ಜೊತೆ, ಜೋಡಿ ೩ ಒಂದು ಶಬ್ದಾಲಂಕಾರ
೨. ಶಬ್ದಾಲಂಕಾರ (ನಾ)= ಅನುಪ್ರಾಸ, ಯಮಕ ಮೊ. ಶಬ್ದ ಪ್ರಧಾನವಾದ ಅಲಂಕಾರ
೩. ಅನುಪ್ರಾಸ (ಸಂ) (ನಾ) ಏಕರೂಪದ ವರ್ಣಗಳು ಮತ್ತೆ ಮತ್ತೆ ಬರುವಂತೆ ಶಬ್ದಗಳನ್ನು ಜೋಡಿಸಿ ರಚಿಸಿದ ಒಂದು ಶಬ್ದಾಲಂಕಾರ

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 11, 2008 - 10:58am — Sunil Jayaprakash

ಉ: ಭರತೇಶ ವೈಭವ ಕಲ್ಪು ೧೪ - ಪ್ರಾಸದೊಡನೆ ಆಟ

Sunil Jayaprakash's picture

ಒಳ್ಳೆಯ ಅಂಶ ಮುಂದಿಟ್ಟಿರಿ. ಕನ್ನಡದ ಶಬ್ದಾಲಂಕಾರಗಳನ್ನು ಓದಿಕೊಂಡವರು ಈ ಪ್ರಾಸದ ಬಗ್ಗೆ ಹೆಚ್ಚು ಬೆಳಕು ಚೆಲ್ಲಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 12, 2008 - 8:34pm — benaka

ಉ: ಭರತೇಶ ವೈಭವ ಕಲ್ಪು ೧೪ - ಪ್ರಾಸದೊಡನೆ ಆಟ

benaka's picture

ಹೌದು ಹಂಸಾನಂದಿಯವರೇ,

ಯಮಕವೆಂದರೆ, ನಾನಾರ್ಥಗಳನ್ನು ಹೊಂದಿದ ಒಂದೇ ಸದ್ದಿನ ಪದಗಳ ಚಮತ್ಕಾರಿಕ ಜೋಡಣೆಯ ಶಬ್ದಾಲಂಕಾರ.
ಆಂಗ್ಲಭಾಷೆಯಲ್ಲಿ ಇದಕ್ಕೆ ಪ್ಯಾರೋನೊಮೇಷಿಯಾ(ಪದಲಾಲಿತ್ಯ) ಎನ್ನುತ್ತಾರೆ. ಯಮಕವೆಂದರೆ "ಎರಡು", "ಪರಸ್ಪರ ಸಂಬಂಧವಿರುವ ಎರಡು" ಎನ್ನುವ ಅರ್ಥವಿದೆ. ಪ್ರಾಸಯಮಕ ಸ್ವಲ್ಪ ಬೇರೆಯಾಗಿ "ವಿನೋದಕ್ಕಾಗಿ/ ರಸಾಸ್ವಾದನೆಗಾಗಿ" ಉಪಯೋಗಿಸಲ್ಪಡುವ ಸಂದರ್ಭ ಹೆಚ್ಚಂತೆ. ಉದಾ:

ಅರ್ಥಯಮಕ:
ಶಾರದಾ ಶಾರದಾಂಭೋಜವದನಾ ವದನಾಂಬುಜೇ|
ಸರ್ವದಾ ಸರ್ವದಾಸ್ಮಾಕಂ ಸನ್ನಿಧಿಃ ಸನ್ನಿಧಿಃ ಕ್ರಿಯಾತ್||

(ಬಿಳಿಯ ತಾವರೆಯಂಥ ಮೊಗದವಳಾದ, ಸದ್ಗುಣಗಳ ನಿಧಿಯಾದ, ಎಲ್ಲವನ್ನು
ಕೊಡುವವಳಾದ ಶಾರದೆಯು ನಮ್ಮ ಬಾಯೆಂಬ ತಾವರೆಯಲಿ ಸದಾಕಾಲ ನೆಲೆಸಿರಲಿ)

ಇಲ್ಲಿ, ಅರ್ಥಬೇರೆಯಾಗುವಂತೆ ಪುನರುಕ್ತಿಗಳಿವೆ.

ಪ್ರಾಸಯಮಕ:
ಸ್ಮರಚ್ಛಿದಂ ಪುರಚ್ಛಿದಂ ಭವಚ್ಛಿದಂ ಮಖಚ್ಛಿದಂ
ಗಜಚ್ಛಿದಾಂಧಕಚ್ಛಿದಂ ತಮಂತಕಚ್ಛಿದಂ ಭಜೇ

(ಕಾಮನನ್ನೂ, ತ್ರಿಪುರ-ಭವ-ಮಖ-ಗಜಾಸುರರನ್ನೂ, ಅಂಧಕನನ್ನೂ
ತರಿದಿಟ್ಟ, ಮೃತ್ಯುವಿಗೇ ಮೃತ್ಯುವಾದ ಮೃತ್ಯುಂಜಯನನ್ನು ಭಜಿಸುತ್ತೇನೆ)

ಇಲ್ಲಿ ಅರ್ಥವೊಂದೇ ಆದರೂ ಪ್ರಾಸಕ್ಕಾಗಿ, ರುದ್ರರಸೋತ್ಪತ್ತಿಗಾಗಿ ಬಳಸಲಾಗಿದೆ.

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 12, 2008 - 10:35pm — Sunil Jayaprakash

ಉ: ಭರತೇಶ ವೈಭವ ಕಲ್ಪು ೧೪ - ಪ್ರಾಸದೊಡನೆ ಆಟ

Sunil Jayaprakash's picture

ಬೆನಕ ಅವರೇ, ಡಿ.ಎಲ್.ಐನಲ್ಲಿ ೧೯೯೩ರಲ್ಲಿ ಪ್ರಕಟಗೊಂಡ, ಕನ್ನಡ ಛಂದಸ್ಸು ಹಾಗು ಅಲಂಕಾರ ಎಂಬ ಪುಸ್ತಕವಿದೆ. ಅದರಲ್ಲಿ,
ಸಿಂಹ, ಗಜ, ವೃಷಭ, ಅಜ, ಶರಭ, ಹಯ ಎಂಬ ಆರು ಪ್ರಾಸಗಳನ್ನು ಹಿಂದಿನವರು ಗುರುತಿಸಿದ್ದರು ಎಂಬುದಾಗಿ ಹೇಳಿದೆ. ಆದರೆ ಅವುಗಳ ಬಗ್ಗೆ ಯಾವ ವಿವರವೂ ಇಲ್ಲ. ನಿಮಗೆ, ಇದರ ಬಗ್ಗೆ ಹೆಚ್ಚು ತಿಳಿದಿದ್ದರೆ ಅದರ ಬಗ್ಗೆಯೂ ತಿಳಿಸಿಕೊಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 13, 2008 - 8:00pm — benaka

ಉ: ಭರತೇಶ ವೈಭವ ಕಲ್ಪು ೧೪ - ಪ್ರಾಸದೊಡನೆ ಆಟ

benaka's picture

ಸುನಿಲರೇ,

ನೀವು ಕೇಳಿದ ಪ್ರಶ್ನೆಗೆ ವಿವರವಾದ ಉತ್ತರವನ್ನೇ ನೀಡಬೇಕೆಂಬ ಆಸೆಯಿದೆ; ಆದರೆ ಸದ್ಯಕ್ಕೆ ಇಷ್ಟನ್ನು ಚುಟುಕಾಗಿ ತಿಳಿಸಿ, ಅನಂತರ ಹೊಸ ಲೇಖನವನ್ನೇ ಬರೆಯೋಣವೆನಿಸುತ್ತಿದೆ:

ಕರ್ನಾಟ ಶಾಸ್ತ್ರೀಯ ಸಂಗೀತದ ಬೆಳವಣಿಗೆಗೂ ನಿಮ್ಮ ಪ್ರಶ್ನೆಗೂ ನಂಟಿದೆ. ಸಂಗೀತದ ’ಪ್ರಬಂಧ’ ಬಗೆಗಳಲ್ಲಿ ನೀವು ಕೇಳಿದ ಅಲಂಕಾರಗಳು ಬಳಸಲ್ಪಟ್ಟಿವೆ. ಅವು ಮುಂದೆ ಗೀತ-ನೃತ್ಯ ಪದ್ಧತಿಯಲ್ಲಿ ಸೇರಿದ್ದರಿಂದ ಅವುಗಳನ್ನು "ಲೀಲೆ" ಎನ್ನುವುದೂ ಉಂಟು. ಪ್ರಬಂಧವೆಂದರೆ ಯಮಕ-ಪ್ರಾಸಗಳಿಂದ ಕೂಡಿದ ಕಾವ್ಯಭೇದ ಎಂದೇ ಬಹುಜನರ ಮತ. ಪ್ರಬಂಧವು ಕರ್ನಾಟ ಭಾಷೆಯಲ್ಲಿ, ಸಂಭಾಷಣಾರೂಪದಲ್ಲಿದ್ದರೆ, ಅದಕ್ಕೆ "ಶುಕಶಾರಿಕಾ" ಎಂದೂ, ಸಕ್ಕದ-ಕನ್ನಡ ಪಾದಗಳು ಒಂದಾದ ಮೇಲೊಂದು ಇದ್ದರೆ "ಹಂಸಪಾದ" ಎಂದೂ ಕರೆದಿದ್ದಾರೆ!

ಕ್ರಮವಾಗಿ ಹಯಲೀಲಾ, ಗಜಲೀಲಾ, ಸಿಂಹಲೀಲಾ ಹಾಗೂ ಶರಭಲೀಲಾ ಎಂಬ ಅಲಂಕಾರಗಳು ೧೮, ೧೯, ೨೦ ಹಾಗೂ ೨೧ ನೆಯ ಪ್ರಬಂಧಗಳೆಂದು ಮತಂಗನ ಬೃಹದ್ದೇಶೀ ವಿವರಿಸುತ್ತದೆ. ಇನ್ನೆರಡು - ಅಜ ಹಾಗೂ ವೃಷಭ ನೆನಪಿಗೆ ಬರುತ್ತಿಲ್ಲವಾದರೂ, ಕೆಲವುಗಳ ಗಣವಿಭಜನೆ ಹೀಗಿದೆ:

ಹಯ: ನಜಭಾಜಭಾಜ ಜಲಗ - ಗಣವೃತ್ತಗಳಿಂದ ಕೂಡಿದ ಪ್ರಬಂಧ

ಗಜ: ಹಯಲೀಲಾ + ತಾಳ (ಸಂಗೀತ ರತ್ನಾಕರದ ಅಷ್ಟತಾಳಗಳು)

ಸಿಂಹ: ರಾಜಗಗ - ಗಣವೃತ್ತಗಳಿಂದ ಕೂಡಿದ ಪ್ರಬಂಧ + ಸ್ವರ

ಶರಭ: ಎಂಟು ಪಾದಗಳ ಸಿಂಹ ಲೀಲಾ ಎಂದು ನೆನಪು

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 13, 2008 - 9:41pm — Sunil Jayaprakash

ಉ: ಭರತೇಶ ವೈಭವ ಕಲ್ಪು ೧೪ - ಪ್ರಾಸದೊಡನೆ ಆಟ

Sunil Jayaprakash's picture

ಬೆನಕ ಅವರೇ, ನನ್ನ ಕುತೂಹಲವನ್ನ ತುಂಬಾ ಹೆಚ್ಚಿಸುತ್ತಿದ್ದೀರಾ. ಆ ನಿಮ್ಮ ಲೇಖನಕ್ಕಾಗಿ ಎದುರುನೋಡ್ತಾ ಇದ್ದೀನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2008 - 12:15pm — kannadakanda

ಉ: ಭರತೇಶ ವೈಭವ ಕಲ್ಪು ೧೪ - ಪ್ರಾಸದೊಡನೆ ಆಟ

kannadakanda's picture

ಬೆನಕ ನೀ ತುಂಬಾ ನಿಷ್ಕರುಣಿ ಈ ಹಾಡುಗಬ್ಬ ’ಸಾಂಗತ್ಯ’ ಹಾಗೂ ’ಹಿರಿಯಕ್ಕರ’ ಗಳ ಲಕ್ಷಣ ತಿಳಿಸುತ್ತೇನೆಂದು ತಿಳಿಸಲೇ ಇಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2008 - 12:47pm — Sunil Jayaprakash

ಉ: ಭರತೇಶ ವೈಭವ ಕಲ್ಪು ೧೪ - ಪ್ರಾಸದೊಡನೆ ಆಟ

Sunil Jayaprakash's picture

ಕನ್ನಡಕಂದರೆ, ಬೆನಕ ಇವುಗಳ ಬಗ್ಗೆ ಬೇರೆಯಾಗಿ ಬರಹ ನೀಡಿದ್ದುಂಟು. ನೋಡಿ ಇವುಗಳನ್ನು.

ಚೆಂಗನ್ನಡ ಛಂದಸ್ - ೧
ಚೆಂಗನ್ನಡ ಛಂದಸ್ - ೨ (ಛಂದೋವತರಣ!)

ಅವೆರಡೂ ನನ್ನ ಅಚ್ಚುಮೆಚ್ಚಿನ ಬರಹಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 13, 2008 - 8:50pm — benaka

ಉ: ಭರತೇಶ ವೈಭವ ಕಲ್ಪು ೧೪ - ಪ್ರಾಸದೊಡನೆ ಆಟ

benaka's picture

ಆಹಾ! ಸಿಕ್ಕಿತು! ಇಲ್ಲಿದೆ ನೋಡಿ ಆರು ಬಗೆಯ ಕನ್ನಡ ಪ್ರಾಸಗಳು:

ನಾಗವರ್ಮನ ಕನ್ನಡ ಛಂದಸ್ಸೆಂಬ ಹಳೆಯ ಗ್ರಂಥದಲ್ಲಿತ್ತು ಇದು:

ಹರಿ ಕರಿ ವೃಷಭ ತುರಂಗಂ
ಶರಭಮಜಂಗಳುಮೆನಿಪ್ಪ ಷಟ್-ಪ್ರಾಸಕ್ಕುಂ|
ತರುಣಿ, ನಿಜ-ದೀರ್ಘ-ಬಿಂದುವಿ
ನಿರದೊತ್ತುಂ-ವ್ಯಂಜನಂ-ವಿಸರ್ಗದಿ ಬರ್ಕುಂ ||

ನಿಜದಿಂ ಬಂದೊಡೆ ಸಿಂಗಂ;
ಗಜ ದೀರ್ಘಂ; ಬಿಂದು ವೃಷಭ; ವೆಂಜನ ಶರಭಂ|
ಅಜನು ವಿಸರ್ಗಂ; ಹಯಮಂ-
ಬುಜಮುಖಿ, ದಡ್ಡಕ್ಕರಂಗಳಿವು ಷಟ್-ಪ್ರಾಸಂ||

ವಿವರವಾಗಿ ಮತ್ತೊಮ್ಮೆ ಬರೆಯುತ್ತೇನೆ.

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 13, 2008 - 10:46pm — Sunil Jayaprakash

ಉ: ಭರತೇಶ ವೈಭವ ಕಲ್ಪು ೧೪ - ಪ್ರಾಸದೊಡನೆ ಆಟ

Sunil Jayaprakash's picture

ವಾಹ್, ಎಂಥ ಪದ್ಯ ಹೆಕ್ಕಿ ತೆಗಿದ್ದಿದ್ದೀರಿ, ಬೆನಕ. ಅಗತ್ಯವಾಗಿ ಬರೆಯಿರಿ. ಸಿಕ್ಕಾಪಟ್ಟೆ ಅರ್ತಿಯುಕ್ಕಿ ಹರಿದಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2008 - 12:09pm — kannadakanda

ಉ: ಭರತೇಶ ವೈಭವ ಕಲ್ಪು ೧೪ - ಪ್ರಾಸದೊಡನೆ ಆಟ

kannadakanda's picture

ಈ ತರುಣಿಯರೆಂದರೆ ಎಲ್ಲರಿಗೂ ಆಕರ್ಷಣೆಯೇನೋ? ತರುಣ ಅಂತ ಹೇೞೋಲ್ಲ ನೋಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2008 - 12:22pm — kannadakanda

ಉ: ಭರತೇಶ ವೈಭವ ಕಲ್ಪು ೧೪ - ಪ್ರಾಸದೊಡನೆ ಆಟ

kannadakanda's picture

’ಸರಲ’ ಪ್ರಾಸ ಎಂದೇ ಕರೆಯಿರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭರತೇಶ ವೈಭವ ಮತ್ತು ಕನ್ನಡ ನುಡಿಗಟ್ಟುಗಳು - ಕಲ್ಪು ೧೦
  • ಭರತೇಶ ವೈಭವದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ - ಕಲ್ಪು ೧೧
  • ಭರತೇಶ ವೈಭವದಲ್ಲಿ ಗಾದೆಗಳು ಹಾಗು ಕನ್ನಡದ ಅಪ್ಲೈಡ್ ಟರ್ಮಿನಾಲಜಿಗಳು - ಕಲ್ಪು ೧೩
  • ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು
  • ಭರತೇಶ ವೈಭವ ಕಲ್ಪು ೯ - ಕಾವ್ಯ ಹೇಗಿರಬೇಕು
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕಾಡುಕೋಳಿಯ ಜಾಡು ಹಿಡಿದು...
  • ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
  • ಕೋಸಿ-ಬಿಹಾರದ ಕಣ್ಣೀರು
  • ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!
  • ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 22 ಅತಿಥಿಗಳು ಆನ್ಲೈನ್ ಇರುವರು.


ದುರ್ಬಲರಿಗೆ ಕ್ಷಮಿಸುವ ಹಕ್ಕಿಲ್ಲ, ಕ್ಷಮಿಸುವ ಶಕ್ತಿ ಮತ್ತು ಹಕ್ಕಿರುವುದು ಬಲಿಷ್ಠರಿಗೆ ಮಾತ್ರ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator