ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಆಕಾಶದಲ್ಲಿ ಪೋಲೀಸ್ ಪೇದೆ (ಭಾಗ ೨)

February 9, 2008 - 1:21pm — Narayana

(......ಮುಂದುವರಿದಿದೆ)
ಸುಬ್ಬಣ್ಣ ರೇವತಿಗೆ ಮೊದಲಿನಿಂದ ಪರಸ್ಪರ ಪರಿಚಯ ಇರಲಿಲ್ಲ. ಹಾಗಾಗಿಯೇ ಅವಳನ್ನು ನೋಡಿದ್ದೇ ತಡ , ಸುಬ್ಬಣ್ಣ ಅವಳ ಚೆಲುವಿಗೆ ಮರುಳಾಗಿ ಮದುವೆಯಾಗುವ ನಿರ್ಧಾರ ಮಾಡಿದ್ದ. ಗೆಳೆಯಂದಿರ ಹಿತವಚನಗಳನ್ನು , ಇಂಥಾ ಸುಂದರಿ ತನಗೆ ದಕ್ಕಲಿಲ್ಲವಲ್ಲಾ ಎಂಬ ಅಸೂಯೆ ಎಂದೇ ಭಾವಿಸಿ, ಅವಕ್ಕೆ ಲಕ್ಷ್ಯ ಕೊಡದೇ ಮದುವೆ ಆಗಿಯೇ ಬಿಟ್ಟ.

ಮದುವೆಗೆ ಮುಂಚೆ, ನಿಶ್ಚಿತಾರ್ಥ ಆದ ಮೇಲೆ ಸುಬ್ಬಣ್ಣ ರೇವತಿ ಒಟ್ಟೊಟ್ಟಿಗೆ ತಿರುಗಿದ್ದು, ಮಾತಾಡಿದ್ದು ಇತ್ತು. ರೇವತಿಗೆ ಅವನ ವಿಷಯ ಹೆಚ್ಚು ಗೊತ್ತಿಲ್ಲದೆಯೇ ಇದ್ದುದರಿಂದ , ಅವನ ಮಾತಿನಲ್ಲಿ ನಿಜವಾಗಿಯೇ ಆಸಕ್ತಿ ತೋರಿಸಿ ಮಧ್ಯೆ ಮಧ್ಯೆ ಬಾಯಿ ಹಾಕದೆ ಕೇಳುತ್ತಿದ್ದಳು. ಅಷ್ಟೇ ಅಲ್ಲದೆ ಸುಬ್ಬಣ್ಣನ ಇಂಗ್ಲೀಷು ಸೊಗಸಾಗಿತ್ತು. ಹಾಗಾಗಿ ಅವಳೊಂದಿಗೆ ಮಾತಾಡುವಾಗ ಮಧ್ಯೆ ಮಧ್ಯೆ ಇಂಗ್ಲೀಷು ವಾಕ್ಯ ಪ್ರಯೋಗ ಇದ್ದರೂ, ಅದರಲ್ಲಿ ಅವಳಿಗೆ ತಪ್ಪು ಕಂಡು ಹಿಡಿಯುವ ಪ್ರಸಂಗವೇ ಬರುತ್ತಿರಲಿಲ್ಲ. ಹೀಗಾಗಿ ಮದುವೆಗೆ ಮುಂಚೆ ಸುಬ್ಬಣ್ಣನಿಗೆ ರೇವತಿಯ ಸ್ವಭಾವ ವೈಚಿತ್ರ್‍ಯ ಗಮನಕ್ಕೆ ಬರಲೇ ಇಲ್ಲ.

ಅವರ ಮದುವೆಯಾಗಿ ಕೆಲವು ತಿಂಗಳಾದರೂ ನನಗೆ ಅವರ ಭೇಟಿಯಾಗಿರಲಿಲ್ಲ. ಸುಬ್ಬಣ್ಣನಂಥ ಒಳ್ಳೆಯ ಮನುಷ್ಯ ರೇವತಿಯ ಬಾಯಿಗೆ ಸಿಕ್ಕನಲ್ಲ ಎಂದು ಅನುಕಂಪದಿಂದ ನಾನು ಅವನ ಪರಿಸ್ಥಿತಿಯನ್ನು ನೋಡಲಾರದೇ ಅವರನ್ನು ಭೇಟಿಯಾಗುವುದನ್ನು ಆದಷ್ಟು ಮುಂದಕ್ಕೆ ಹಾಕಿದೆ. ಅಂತೂ ಕೊನೆಗೊಮ್ಮೆ ಅವರ ಭೇಟಿಯಾದಾಗ ನಾನಂದುಕೊಂಡಂತೆಯೇ ಆಗಿತ್ತು.ಸುಬ್ಬಣ್ಣ ಕೆಲಸ conference, presentations, seminar, meeting ಇತ್ಯಾದಿಗಳಿಗಾಗಿ ಸಾಕಷ್ಟು ತಿರುಗಾಟ ಮಾಡುತ್ತಿದ್ದ.ಕೆಲವೊಮ್ಮೆ ಪರದೇಶ ಪ್ರವಾಸವೂ ಇರುತ್ತಿತ್ತು.ಹಾಗಾಗಿ ಅವನು ಮಾತನಾಡುವಾಗ ಅವನ ತಿರುಗಾಟದಲ್ಲಿ ಘಟಿಸಿದ ಸ್ವಾರಸ್ಯಕರ ಘಟನೆಗಳ ಪ್ರಸ್ತಾಪ ಆಗಾಗ ಬರುತ್ತಿತ್ತು.ಆದಿನ ಯಾರದ್ದೋ ಮದುವೆಯಲ್ಲಿ ಸಿಕ್ಕು, ಒಟ್ಟಿಗೆ ಊಟ ಮಾಡುತ್ತಿದ್ದಾಗ ಸುಬ್ಬಣ್ಣ ಹೆಂಡತಿಯೊಂದಿಗೆ ಎಲ್ಲಿಯೋ ಹೋಗಿದ್ದ ಪ್ರವಾಸದ ವರ್ಣನೆ ಮಾಡತೊಡಗಿದ.

“ನಾವು ಆಗ್ರಾ ಬಿಟ್ಟಾಗ ಬೆಳಗಿನ ಜಾವ.ಅಲ್ಲಿಂದ ಸುಮಾರು ಇನ್ನೂರು ಕಿಮೀಹೋಗಿದ್ದೆವೋ ಏನೋ, ಅಷ್ಟು ಹೊತ್ತಿಗೆ ಏನಾಯಿತು ಅಂದರೆ....”

ರೇವತಿ ಮಧ್ಯ ಪ್ರವೇಶಿಸಿದಳು "ಭೆಳಗಿನ ಜಾವ ಎಲ್ರೀ ? ಚೆನ್ನಾಗಿ ಎಂಟು ಹೊಡೆದು ಹೋಗಿತ್ತು. ಮತ್ತೆ ಇನ್ನೂರು ಕಿಮೀ ಅಲ್ಲ. ಸರಿಯಾಗಿ ನೂರೈವತ್ತು ಕಿಮೀ ಹೋಗಿದ್ದೆವು ಅಷ್ಟೇ. ಸ್ಪೀಡೋಮೀಟರ್‍ ನೋಡಿದ್ದು ಚೆನ್ನಾಗಿ ನೆನಪಿದೆ.”

“ಇರಲಿ ಬಿಡು , ಹೃಷೀಕೇಶ ತಲುಪುವ ಹೊತ್ತಿಗೆ " ಸುಬ್ಬಣ್ಣ ಮುಂದುವರಿಸಿದ " ಹೃಷೀಕೇಶ ಏನ್ರೀ?” ಹೃಷೀಕೇಶ ಅಲ್ಲ ಅಂತ ಹೇಳುವುದರ ಬದಲು ಪ್ರಶ್ನೆಯ ರೂಪದಲ್ಲಿ ರೇವತಿ ಅವನನ್ನು ತಿದ್ದಲು ಪ್ರಯತ್ನಿಸಿದಳು.

“ಹೌದೌದು, ನನಗೆ ಸರಿಯಾಗಿ ನೆನಪಿದೆ, ಹೃಷೀಕೇಶವೇ " ಸುಬ್ಬಣ್ಣ ಹೇಳುತ್ತಿದ್ದಂತೆ ರೇವತಿ "ಅಲ್ಲಾರೀ ಹೃಷೀಕೇಶ ಅಲ್ಲಾ ಮಥುರಾ" ಅಂತ ಅವನನ್ನು ಸುಮ್ಮನೆ ಕೂರಿಸಿ ಬಾಕೀ ಪ್ರಕರಣ ತಾನೇ ಮುಂದುವರಿಸಿದಳು.

ಮುಂದೆಯೂ ಹೀಗೆ ಎರಡು ಮೂರು ಬಾರಿ ಈ ದಂಪತಿಗಳ ಭೇಟಿ ಆಗಿತ್ತು. ಪ್ರತಿಯೊಂದು ಬಾರಿಯೂ ಸುಬ್ಬಣ್ಣ ಏನಾದರೂ ಸ್ವಾರಸ್ಯಕರ ಪ್ರಕರಣ ಹೇಳತೊಡಗಿದರೆ, ಅವನು climaxಗೆ ಬರುವವರೆಗೆ ಸುಮ್ಮನಿದ್ದು, ಆ ಮೇಲೆ ಹಸಿದ ಮಗುವಿನ ಬಾಯಿಯವೆರಗೂ ತುತ್ತು ಒಯ್ದು , ಅದು ಆಸೆಯಿಂದ ಬಾಯಿ ಕಳೆಯುವವರೆಗೂ ಕಾದು, ಆ ಮೇಲೆ ಅದರ ಬಾಯಿ ತಪ್ಪಿಸಿ ತಾನೇ ತಿಂದು ಬಿಟ್ಟಂತೆ, ಇಲ್ಲದ ತಪ್ಪು ಹುಡುಕಿ ಸುಬ್ಬಣ್ಣನನ್ನು ಸುಮ್ಮನಿರಿಸಿ ತಾನೇ ಮುಂದುವರಿಸಿ ಬಿಡುತ್ತಿದ್ದಳು.ಸುಬ್ಬಣ್ಣನೊಂದಿಗೆ ಸಂಸಾರ ಹೂಡಿ ಆಗಲೇ ಕೆಲವು ತಿಂಗಳು ಕಳೆದಿದ್ದವು.ಹಾಗಾಗಿ ಸುಬ್ಬಣ್ಣ ಹೇಳುವ ಅನೇಕ ಘಟನೆಗಳು ಈಗಾಗಲೇ ಅವಳಿಗೆ ಗೊತ್ತಿದ್ದವೇ ಆಗಿದ್ದವು.ಯಾವಯಾವ ಹಂತದಲ್ಲಿ ಏನೇನಾಯಿತು ಎಂಬ ವಿವರಗಳು ಅವಳಿಗೆ ಬಾಯಿಪಾಠವಾಗಿದ್ದವು.ಹಾಗಾಗಿ ಸುಬ್ಬಣ್ಣ ಒಳ್ಳೆಯ ವಾತಾವರಣ ನಿರ್ಮಾಣ ಮಾಡಿ ಆಸಕ್ತಿ ಕುದುರಿಸುವವರೆಗೂ ಸುಮ್ಮನಿದ್ದು, ಆ ಮೇಲೆ ಬೆಕ್ಕು ಸಮಯ ಕಾದು ಗಬಕ್ಕನೆ ಇಲಿಯ ಮೇಲೆ ಹಾರುವಂತೆ, ಅವನನ್ನು ತಡೆದು ತಾನೇ ಆ ಪ್ರಸಂಗವನ್ನು ಕೊನೆಗಾಣಿಸಿ ಬಿಡುತ್ತಿದ್ದಳು.ಕೆಲವು ಗಂಡಂದಿರು ತಮ್ಮ ಹೆಂಡತಿ ಹೀಗೆ ಮಾಡಿದರೆ , ಆನಂದದಿಂದ ಅವಳಿಗೇ ಕಥೆ ಮುಂದುವರಿಸಲು ಅವಕಾಶ ಕೊಟ್ಟು "ನೋಡಿದಿರಾ , ನನ್ನ ಹೆಂಡತಿ ಎಷ್ಟು ಚೆನ್ನಾಗಿ ಕಥೆ ಹೇಳುತ್ತಾಳೆ!” ಎಂಬ ಹೆಮ್ಮೆಯ ಭಾವದಲ್ಲಿ ತಾವೂ ಸಭಿಕರಲ್ಲಿ ಒಂದಾಗಿ ಸುಮ್ಮನಾಗಿ ಬಿಡಬಹುದು.ಆದರೇನು, ಹೇಳಿ ಕೇಳಿ ಇಂಥಾ ಗಂಡಸರು ಹೆಂಡತಿಗೆ ಶರಣಾದವರು.ಸುಬ್ಬಣ್ಣ ಆ ಪೈಕಿಯವನಾಗಿರಲಿಲ್ಲ. ಅದೂ ಅಲ್ಲದೆ, ಅವನ ಜೀವನದಲ್ಲಿ ಘಟಿಸಿದ ಸಂಗತಿಗಳನ್ನು ಹೇಳುವ ಅವಕಾಶಗಳನ್ನು ಹೆಂಡತಿ ಒಮ್ಮೆ , ಅಥವಾ ಕೆಲವೊಮ್ಮೆ ಸುಮ್ಮನಿದ್ದಾನು. ಆದರೆ, ಸುಮಾರು ಎರಡು ವರ್ಷವಾಗುವ ಹೊತ್ತಿಗೆ ಹೆಂಡತಿಯ ನಡತೆಯಿಂದ ರೋಸಿಹೋದ ಸುಬ್ಬಣ್ಣ ಹೊಸ ಉಪಾಯ ಕಂಡುಕೊಂಡ. (ಮುಂದುವರಿಯುವುದು......)

~.~
  • Login or register to post comments
  • 166 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆಕಾಶದಲ್ಲಿ ಪೋಲೀಸ್ ಪೇದೆ (ಭಾಗ ೩)
  • ಆಕಾಶದಲ್ಲಿ ಪೋಲೀಸ್ ಪೇದೆ
  • ಹೆಂಡತಿಯರನ್ನು ಕುರಿತ ಜೋಕುಗಳು (ಮಹಿಳೆಯರ ಕ್ಷಮೆ ಕೋರುತ್ತಾ!)
  • ಸುದ್ಧಿವಾಹಿನಿಗಳಲ್ಲಿ ಕರ್ನಾಟಕ!
  • ದೇವರು ನಾಚಿಕೆಪಡಬೇಕಾದ ವಿಷಯ ! ( ಓದಿದ ಕತೆ)
Syndicate content

ಲೇಖಕರು

Narayana's picture

ಪೂರ್ಣ ಹೆಸರು
Narayana

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಯಾರ ಮುಡಿಗೆ ಸೌಂದರ್ಯ ಕಿರೀಟ...
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ‘ಇರುವೆ’ (ನೀ ಎಲ್ಲೆಲ್ಲೂ ಇರುವೆ)ಗಳು ಅಂತರ್ಜಲ ಮಟ್ಟ ಹೆಚ್ಚಿಸುವ ‘ಬ್ಯಾಂಕರ್’ಗಳು!
  • ‘ಸಂತೆ’ ಎಂಬ ವ್ಯಾವಹಾರಿಕ ಚೌಕಾಶಿಯ ‘ನಾಟಕ’!

ಇತ್ತೀಚಿನ ಪ್ರತಿಕ್ರಿಯೆಗಳು

  • sathishcv
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 8:40pm
  • ಮನಹ್ಪಠಲ
    ಉ: ಎಂ ಪಿ ಶಂಕರ್ - ಟಾಟಾ
    July 20, 2008 - 5:47pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:45pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:32pm
  • rasheedgm
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 4:49pm
  • anil.ramesh
    ಉ: ಧಾರವಾಡದ ನವಿಲೂರ ಕೆರೆಯಲ್ಲಿ ಆಹಾರ ಹೆಕ್ಕುತ್ತಿರುವ ಶಾಪಗ್ರಸ್ಥ ! ಟಿಟ್ಟಿಭ ಹಕ್ಕಿ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
    July 20, 2008 - 11:49am
  • ASHOKKUMAR
    ಉ: ನನ್ನಜ್ಜನ ಬೆಚ್ಚಗಿನ ನೆನಪುಗಳು
    July 20, 2008 - 11:32am
  • Ananth.R
    ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
    July 20, 2008 - 11:22am
  • ರೇಖಾ
    ಉ: ಒ೦ದು ಬೆಚ್ಚನೆಯ ನೆನಪು..
    July 20, 2008 - 9:45am
  • Jayalaxmi.Patil
    ಉ: ಕತ್ತಲೆಯಿಂದ ಹೊರ ಬಂದ ಖಾದಿ
    July 19, 2008 - 11:01pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 28 ಅತಿಥಿಗಳು ಆನ್ಲೈನ್ ಇರುವರು.


ಅತ್ಮದ ಸತ್ಯವು ಪರಮ ಸತ್ಯದೊಡನೆ ನೆಡೆಸುವ ಸಂಭಾಷಣೆಯೇ ಪ್ರಾರ್ಥನೆ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator