"ನಾನು-ನೀನು
ನಾನು ಹಾಳೆ ನೀನು ಕವಿತೆ
ನಾನು ಪಲಕ ನೀನು ಜಾಹಿರಾತು
ನಾನೋಬ್ಬ ಹುಚ್ಚ, ನೀನು ಪ್ರೀತಿ.
ನಾನು, ನೀನಿನಲ್ಲದ ನಾನು
ನೀನು, ನಾನಿಲ್ಲದ ನೀನು
ನಾನು ಹೊಟ್ಟೆ,ನೀನು ಹಸಿವು
ನಾನು ದಾರಿ,ನೀನು ತಿರುವು
ನಾನು ಹಾಡು, ನೀನು ಅರ್ಪಣೆ
ನನಗೆ ನೀನು
ನಿನಗೆ ನಾನು
ನಾನು ಹೆಜ್ಜೆ, ನೀನು ಸಪ್ತಪದಿ
ನಾನು ಭಕ್ತಿ, ನೀನು ಪೂಜೆ
ನಾನು ವಿತರಕ, ನೀನು ಸಂದೇಶ
ನನ್ನ ಪ್ರೀತಿ ನೀನು
ನಿನ್ನ ಪ್ರೀತಿ ನಾನು

- Login or register to post comments
- 316 hits
- Email this page




RSS:
ಪ್ರತಿಕ್ರಿಯೆಗಳು
ಉ: "ನಾನು-ನೀನು
ಅಲ್ಲಾ, ರಾಜು ಬಡಗಿ ಅವರೇ, ಎಲ್ಲಾ ಸರಿ, ನೀವ್ಯಾಕೆ ಹುಚ್ಚ ಆಗೋಕ್ಕೆ ಹೋದ್ರೀ ? ಹಾಗೆ, ನೀವು ಹುಚ್ಚ ಆಗಿದ್ದೀರಾ ಅಂತ ನಿಮಗೆ ಹೇಗೆ ಗೊತ್ತಾಯಿತು ?