ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.

— ಮನುಸ್ಮೃತಿ

ಲೇಖಕರು

cherambane's picture

ಪೂರ್ಣ ಹೆಸರು
ಬಶೀರ್ ಕೊಡಗು

ಪರಿಚಯ

ಪ್ರಕೃತಿ ರಮಣೀಯ ಕೊಡಗಿನ (ದಕ್ಷಿಣ ಭಾರತದ ಕಾಶ್ಮೀರ) ಚೇರಂಬಾಣೆಯ ನಿವಾಸಿ, ಕನ್ನಡ ಎಂದರೆ ತುಂಬಾ ಇಷ್ಟ. ಅದಕ್ಕೆ ಕಾಣುತ್ತೆ ಇಂಗ್ಲಿಷ್ ಕಷ್ಟ!!! ಸಮಯ ಇದ್ದಲ್ಲಿ ಅಂತರಜಾಲದಲ್ಲಿ ಜಾಲಾಡುವುದು ಹವ್ಯಾಸ. ಸುಮ್ಮನೆ ಕೂತರೂ ಬರೆಯಲು ಸೋಮಾರಿತನ... ಸಂಪದದ ಸಹವಾಸದಿಂದ ಕಿರು ಬರಹಗಾರನಾಗಿದ್ದೇನೆ.

ಪ್ರಿಯತಮೆಗೊಂದು ಪತ್ರ

ಪ್ರಿಯೆ,
ಇದುವರೆಗೂ ನೀನು ನನ್ನಲ್ಲಿ ತೋರುತ್ತಿದ್ದ ಪ್ರೀತಿ ಇಂದು
ಬೇಡವಾಗಿದೆ. ನಿನ್ನಿಂದ ದೂರವಾಗಬೇಕೆಂಬ ಆಸೆ ಬಹಳ
ಹೆಚ್ಚಾಗಿದೆ. ನಿನ್ನನ್ನು ಕಾಣಬೇಕೆಂಬ ಆತುರ ಈಗ
ನನ್ನ ಮನದಲ್ಲಿಲ್ಲ. ಏಕೆಂದರೆ ನಿನ್ನ ಅನುಚಿತ ವರ್ತನೆ
ದಿನ ದಿನಕ್ಕೂ ಅಧಿಕವಾಗುತ್ತಿದೆ. ಅಂದು ನೀನು ಹೇಳಿದ ಮಾತಿನಿಂದ
ನಿನಗೆ ನನ್ನ ಮೇಲೆ ಪ್ರೀತಿ ಇಲ್ಲವೆಂದು ಗೊತ್ತಾಯಿತು. ಮೊದಲು
ನಿನ್ನ ಮುಖದರ್ಶನ ಯಾವಾಗ ಮಾಡುವೆನೋ
ಎಂದು ಕಾಯುತ್ತಿದ್ದೆ. ಆದರೆ ಈಗ ನಿನ್ನನ್ನು ನೋಡುವುದು ಬೇಡ
ಅನ್ನಿಸುತ್ತದೆ. ನಾವಿಬ್ಬರೂ ಒಂದಾದರೆ ಯಾವಾಗಲೂ
ದುಃಖವನ್ನನುಭವಿಸಬೇಕಾಗುತ್ತದೆ. ಅದರ ಬದಲು ದೂರವಾದರೆ
ಸುಖದಿಂದಿರಬಹುದು. ನಿನ್ನ ಕಾಗದಗಳನ್ನು ಓದಿದಾಗ
ಹಿಂದೆ, ನಡೆದದ್ದೆಲ್ಲ ನೆನೆದು ದುಃಖವಾದರೂ ಸದ್ಯಕ್ಕೆ ನನ್ನ
ಮನಸ್ಸಿಗೆ ಏನೋ ಒಂದು ತರಹದ ಸಮಾಧಾನವಾಯಿತು.
ಕಡೆಯದಾಗಿ ಒಂದು ಮುಖ್ಯವಾದ ವಿಷಯ ಹೇಳುತ್ತೇನೆ.
ಇನ್ನು ಮುಂದೆ ನೀನು ನನಗೆ ಪತ್ರ ಬರೆಯುವುದು
ಬೇಡ. ನನ್ನನ್ನು ಮರೆತು ಬಾಳು. ನನ್ನಿಂದ ದೂರಾಗು
ವುದಕ್ಕೆ ದಯವಿಟ್ಟು ತಡಮಾಡಬೇಡ. ನಿನಗೆ ಶುಭವಾಗಲಿ.
ಇನ್ನು ಮುಂದೆ ಕನಸಿನಲ್ಲಿಯೂ ಕೂಡ ನಿನ್ನನ್ನು ನೆನೆಸಿಕೊಳ್ಳಲಾರೆ.

ಪ್ರಿಯೆ, ಮತ್ತೊಮ್ಮೆ ಈ ಕಾಗದವನ್ನು ಒಂದು ಸಾಲು ಬಿಟ್ಟು ಒಂದು ಸಾಲಿನಂತೆ ಓದು.

Your rating: None Average: 5 (1 vote)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
agilenag's picture

ಚೆರಂಬನೆಯವರೆ,
ನಿಮ್ಮ ಕಾವ್ಯ ಸುಂದರ, ಅತಿ ಸುಂದರವಾಗಿದೆ. ಮೇಲ್ನೋಟಕ್ಕೆ ಮುನಿಸು, ಸಾಲು ಬಿಟ್ಟು ಸಾಲು ಓದಿದರೆ ಪ್ರೀತಿಯ ಉಣಿಸು.
ವ್ಹಾ . . ವ್ಹಾ. . ಯೂ ಆರ್ ಗ್ರೇಟ್ . .
ಮುಂದುವರೆಯಲಿ ನಿಮ್ಮ ಕವಿತಾ ಪ್ರಯೋಗಗಳು

ಶುಭ ಹಾರೈಕೆಗಳೊಂದಿಗೆ,
ಎ.ವಿ. ನಾಗರಾಜು

vini.mysore's picture

ಇದು ತುಂಬಾ ಹಳೇದು. ತುಂಬಾ ಅಂದ್ರೆ ತುಂಬಾನೇ.. ಆರು ವರ್ಷದ ಹಿಂದೆ ನಂ ಕಾಲೇಜ್ ಮ್ಯಾಗಜಿನ್ನಲ್ಲಿ ಬಂದಿತ್ತು. ಅದರಲ್ಲಿ ಬರೆದವ ಕೂಡ ಕದ್ದಿದ್ದೇ. ಅವನೂ ಕ್ರೆಡಿಟ್ ಹಾಕಿರಲಿಲ್ಲ. ಮೂಲ ಅವನಿಗೂ ಗೊತ್ತಿರಲಿಲ್ಲ ಅನ್ಸತ್ತೆ..
ಬಶೀರ್ ಕ್ರೆಡಿಟ್ ಹಾಕಲು ಮರೆತಿರಬೇಕು.

ಗಣೇಶ's picture

ಕವಿತೆ ಚೆನ್ನಾಗಿಲ್ಲ. ಇದು ಕವಿತೆನಾ?
ಈ ತರಹ ಕವಿತೆ ಬರೀಬೇಡಿ
ಬರೆದರೆ ಪ್ರೇಮಿಗೆ ಕೊಡಬೇಡಿ
ನಾಲ್ಕು ಲೈನ್ ಓದಿದ ಪ್ರೇಮಿ
ಪೂರ್ತಿ ಓದದೇ ಹರಿದು ಹಾಕುವಳು
ಕವಿತೆ ಸೂಪರ್,ನಿಮಗೆ ಶುಭವಾಗಲಿ.

ಬಶೀರ್ ಸರ್, ಕೊನೇ ಲೈನ್ ಮಾತ್ರ ಓದಿ.

jagadishahp's picture

ಬೊಂಬಾಟ್