ಕನ್ನಡ ಭಾಷೆಯ ಅಳಿವು ಉಳಿವು
ಈಗ ಕನ್ನಡದಂತಹ ಪ್ರಾದೇಶಿಕ ಭಾಷೆಗಳ , ಉಳಿವು ಅಳಿವುಗಳ ಬಗ್ಗೆ ಹುಯಿಲೆದ್ದಿದೆ. ಆಧುನಿಕ ಜಗತ್ತಿನ ತಂತ್ರಜ್ಞಾನದ ಹುಚ್ಚು ಹೊಳೆಯಲ್ಲಿ ಅನೇಕ ಭಾಷೆಗಳು ಕೊಚ್ಚಿ ಹೋಗುತ್ತವೆನ್ನುವ ಆತಂಕ, ಆಯಾಯ ಭಾಷಿಕರ ಮನದಲ್ಲಿ ಸಂಶಯದ ಸುಳಿಗಳನ್ನು ಶೃಷ್ಟಿಸಿದೆ.
ಕನ್ನಡದಂತಹ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿರುವ , ಸಮೃದ್ದ ಶಬ್ಧ ಸಂಪತ್ತಿನಿಂದ ;ಅಪಾರ ನುಡಿಗಟ್ಟುಗಳಿಂದ ಜೀವಂತವಾಗಿರುವ ಭಾಷೆ ಅಳಿಯುವುದೆಂದರೆ,ಅದರ ಜೊತೆಯಲ್ಲಿಯೇ ಆ ಇಡೀ ಜನಾಂಗದ ಸಂಸ್ಕೃತಿ, ಜಾನಪದ ವೈಶಿಷ್ಟ್ಯಗಳು,ನಂಬಿಕೆ, ಆಚರಣೆ, ಭಾಷೆಗಿರುವ ತನ್ನದೇ ಆದ ಲಯ ,ಅಂದರೆ ಕೋಟ್ಯಾಂತರ ಜನ ಮಾನಸದ ಅನೇಕ ಮಜಲುಗಳು ವಿನಾಶವಾಗಿ ಹೋದಂತೆಯೇ ಸರಿ .
ಆದರೆ ಭಾಷಾ ನಾಶದ ಈ ಎಲ್ಲ ಗೊಂದಲಗಳು, ಕೇವಲ ಕಾಲ್ಪನಿಕ ಮತ್ತು ನಿರಾಧಾರ ಆಲೋಚನೆಗಳು ಎನ್ನುವುದೇ ಅತ್ಯಂತ ಸಮಾಧಾನದ ಸಂಗತಿ . ಯಾವ ವಿದ್ಯುನ್ಮಾನ ಮಾಧ್ಯಮಗಳು ಪ್ರಾದೇಶಿಕ ಭಾಷೆಗಳನ್ನು ಕೊಂದು ಹಾಕುತ್ತವೆಂದು ಆತಂಕಪಡಲಾಗಿತ್ತೋ ? ಅವೇ ಮಾಧ್ಯಮಗಳು ಇಂದು ಪ್ರಾದೇಶಿಕ ಭಾಷೆಗಳ ಬೆಳವಣಿಗೆಗೆ ಬಹು ವಿಧದ ಆಯಾಮಗಳನ್ನು ಒದಗಿಸಿ ಎಲ್ಲ ಕಾಲ್ಪನಿಕ ಆತಂಕಗಳನ್ನು ನಿವಾರಿಸಿವೆ. ಕಳೆದ ಶತಮಾನದಲ್ಲಿ ವಿದೇಶಗಳಿಗೆ ಹೋದವರಿಗೆ , ಸ್ವಭಾಷೆಯ ಗಂಧ ಸಹ ಸುಳಿಯುತ್ತಿರಲಿಲ್ಲ ಹತ್ತಾರು ವರ್ಷ ಅನಿವಾರ್ಯವಾಗಿ ತಾಯಿನಾಡಿನಿಂದ ದೂರವಾದವರಿಗೆ ತಮ್ಮ ಭಾಷೆಯೇ ಮರೆತು ಹೋಗುವ ಅಪಾಯವಿತ್ತು . ಇನ್ನು ಅವರ ಮಕ್ಕಳು ಮರಿಗಳ ಪಾಡನ್ನಂತೂ ಹೇಳುವುದೇ ಬೇಡ. ಅಕ್ಷರಶಃ ಅವರು ವಿದೇಶೀಯರೇ ಆಗಿಬಿಡುತ್ತಿದ್ದರು.
ಇಂದು ಕನ್ನಡಿಗರು ಯಾವ ದೇಶದಲ್ಲೇ ಇರಲಿ , ಕನ್ನಡದ ಟಿವಿ ಚಾನಲ್ ಗಳನ್ನು ನೋಡುವ ಅವಕಾಶ ಇದ್ದೇ ಇದೆ. ಅಂತರ್ಜಾಲದಲ್ಲಂತೂ ಕನ್ನಡ ತುಂಬಿಕೊಳ್ಳುತ್ತಿದೆ .ಕನ್ನಡಿಗರು ಬೆಂಗಳೂರಿನಲ್ಲಿದ್ದರೂ ಒಂದೇ ನ್ಯೂಯಾರ್ಕ್ ನಲ್ಲಿದ್ದರೂ ಒಂದೇ, ಭಾಷೆ , ಸಂಸ್ಕೃತಿ ಎಲ್ಲವೂ ಬೆರಳ ತುದಿಯಲ್ಲಿ ಲಭ್ಯ.
ಇಂತಹ ವಿದ್ಯಮಾನಕ್ಕೆ ಎಲೆಯ ಮರೆಯ ಕಾಯಿಯಂತೆ ಸದ್ದಿಲ್ಲದೆ ಕೆಲಸ ಮಾಡುತ್ತಿರುವ ಅನೇಕ ಸುಸಂಸ್ಕೃತ ಮನಸ್ಸುಗಳು ಕಾರಣವಾಗಿರುವುದು ಹೆಮ್ಮೆಯ ವಿಷಯ . ಬಹು ಹಿಂದೆಯೇ ಕನ್ನಡಕ್ಕೆ ’ಶ್ರೀಲಿಪಿ’ ಯಂತಹ ಬರಹ ಮಾಧ್ಯಮವನ್ನು ರೂಪಿಸಿದಂತಹ ಕೆ.ಪಿ. ರಾವ್, ಹಾಗೆಯೇ ’ಬರಹ’ದಂತಹ ಸರಳ ಲಿಪಿಯನ್ನು ಶೋಧಿಸಿದ ವಾಸು,(ಕನ್ನಡದಲ್ಲಿ ನಡೆದ ಈ ಬೆಳವಣಿಗೆಯೇ ಭಾರತೀಯ ಭಾಷೆಗಳ ಲಿಪಿಗಳಿಗೆ ಪ್ರೇರಣೆಯಾದುದು ಇನ್ನೂ ಹೆಮ್ಮೆಯ ವಿಷಯ)
ಅಂತರ್ಜಾಲ ಲೋಕದಲ್ಲಿ ಕನ್ನಡವನ್ನು ಕಟ್ಟಲು ಶ್ರಮಿಸಿದ ಯು.ಬಿ. ಪವನಜ, ಸಂಪದದಂತಹ ಸಂವಹನ ಮಾಧ್ಯಮವನ್ನು ಅಂತರ್ಜಾಲದಲ್ಲಿ ರೂಪಿಸಿ, ಬಹು ಜನರನ್ನು ಸೆಳೆದ ,ಹರಿಪ್ರಸಾದ್ ನಾಡಿಗರು ಮತ್ತು ಅವರ ಮಿತ್ರ ವೃಂದ ಇವರೆಲ್ಲರ ಕನ್ನಡ ಪ್ರೀತಿಯ ಪರಿಣಾಮವಾಗಿ ಇಂದು ಅಂತರ್ಜಾಲದಲ್ಲಿ ಕನ್ನಡ ತಲೆ ಎತ್ತಿ ನಿಂತಿದೆ .
ಅತಿ ದೊಡ್ಡ ವ್ಯಾಪಾರಿ ಕಂಪನಿಗಳಾದ ಗೂಗಲ್,ಯಾಹೂ,ರೆಡಿಫ್ ಮುಂತಾದವರೆಲ್ಲ ಪ್ರಾದೇಶಿಕ ಭಾಷೆಗಳ ಕಡೆಗೆ ಗಮನ ಹರಿಸಿರುವುದು,ಇದರಿಂದಾಗಿ ಕನ್ನಡ ಎಲ್ಲ ಕಡೆ ವಿಸ್ತರಿಸುತ್ತಾ ,ಹೊಸ ಜಗತ್ತಿನ ಸವಾಲಿಗೆ ಹೊಂದಿಕೊಳ್ಳುತ್ತಿರುವುದು ಎಲ್ಲವೂ ಆಶಾದಾಯಕ ವಾತಾವರಣವನ್ನು ಮೂಡಿಸಿವೆ .ಪತ್ರಿಕೆಗಳು,ಪುಸ್ತಕಗಳು,ಲೇಖನಗಳು,ವಿಕೆಪಿಡಿಯ,ಅಸಂಖ್ಯ ಬ್ಲಾಗುಗಳು ಹೀಗೆ ಅಂತರ್ಜಾಲದಲ್ಲಿ ಶ್ರೀಮಂತಗೊಳ್ಳುತ್ತಿರುವ ಸನ್ನಿವೇಶವನ್ನು ಕಂಡಮೇಲೂ ಕನ್ನಡ ಅಪಾಯದ ಅಂಚಿನಲ್ಲಿದೆ ಎಂದು ಯಾರಾದರೂ ಹೇಳಿದರೆ , ಅವರು ಗ್ರಹಿಕೆ ತಪ್ಪು ಎನ್ನದೆ ವಿಧಿ ಇಲ್ಲ.

- Login or register to post comments
- 400 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಕನ್ನಡ ಭಾಷೆಯ ಅಳಿವು ಉಳಿವು
ಸರಿಮಾತು! ನಂನಿ
ಉ: ಕನ್ನಡ ಭಾಷೆಯ ಅಳಿವು ಉಳಿವು
ಈ ದಿನ ಪ್ರಜಾವಾಣಿಯಲ್ಲಿ, ಐಟಿಯಿಂದ ಕನ್ನಡ ನಾಶ ಎಂಬುದಾಗಿ ಡಾ.ಯು.ಆರ್.ಅನಂತಮೂರ್ತಿಯವರು ಹೇಳಿರುವುದು ವರದಿಯಾಗಿದೆ.
ಉ: ಕನ್ನಡ ಭಾಷೆಯ ಅಳಿವು ಉಳಿವು
ಇಲ್ಲಿ ಅನಂತ ಮೂರುತಿಯವರನ್ನು ಒಪ್ಪಲಾಗದು. ಇಡೀ ಪರಪಂಚವೇ 'ಐಟಿ' ಅನ್ನುವುತ್ತಿರುವಾಗ( ಅದನ್ನು ಬಳಸುತ್ತಿರಬಹುದು ಅತವ ಬೆಳೆಸುತ್ತಿರಬೋದು) ನಾವು ಕನ್ನಡಿಗರು ಮಾತ್ರ ಬ್ಯಾಡ ಅನ್ನಕ್ಕಾಗುತ್ತ. ಅಂಗಾದರೆ ನಾವು ಬೆಳೆಯಕ್ಕಾಗುತ್ತ. ಉಳಿಯಕ್ಕಾಗುತ್ತ?
ಈ ಏನ್ಗುರು ಬರಹ ನೋಡಿ. ಸಕ್ಕತ್ತಾಗಿದೆ. http://enguru.blogspot.com/2008/02/google.html
ಇವತ್ತು ಗೂಗಲ್ ಅಂತ ದೊಡ್ಡ ಕಂಪನಿ ಕನ್ನಡಕ್ಕೆ ಕೀ-ಮಣೆ(ರೋಮನ್ನಲ್ಲಿ ಟಯ್ಪಿ, ಕನ್ನಡ ಲಿಪಿ ಬರುವುದು) ಮಾಡಿರುವುದು ಹುರುಪಿನ ವಿಶಯ ಅಲ್ಲವೆ.?
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕನ್ನಡ ಭಾಷೆಯ ಅಳಿವು ಉಳಿವು
ಬಹುಶ: ಅವರು ಸಾ೦ಸ್ಖ್ರುತಿಕವಾಗಿ ಕನ್ನಡ ಸ೦ಸ್ಕೃತಿಯ ಮೇಲೆ ಐ.ಟಿ ಛಾಯೆ ಬಿದ್ದು , ನಮ್ಮ ಭಾಷೆ ಮತ್ತು ಜೀವನ ಪದ್ದತಿ
ನಶಿಸಿ ಹೋಗಿವೆ ಎನ್ನುವ ದನಿ ಮೂರ್ತಿಯವರ ಮಾತಲ್ಲಿ ಮೂಡಿರಬಹುದು. ಪೇಪರ್ ನವರು ಬರೇಯೋದು ಫಿಲ್ಟರ್ ಮಾಡಿ .
ಈಗಿನ ಸವಾಲು ನಮ್ಮ ಕರ್ನಾಟಕದ ಭಾಷೆಯ ಸಿರಿ ಕಿರಿಯದಾಗದೆ , ಲೌಕಿಕ ಸಿರಿಯೊ೦ದಿಗೆ ಬೆಳೆಸುವ ವಿಧಾನಗಳು ಯಾವುವು ?
ಅದಕ್ಕೆ ನಾವು ಯಾವ ಕಾರ್ಯ ಯೋಜನೆ ಮಾಡಬೇಕು ? ಅನ್ನೋದೆ ಪ್ರಶ್ನೆ.
ಉ: ಕನ್ನಡ ಭಾಷೆಯ ಅಳಿವು ಉಳಿವು
ಈ ಐ.ಟಿ., ಜಗತಿಸುವಿಕೆಯಿಂದ ನಾವು(ಕನ್ನಡಿಗರು,ಕನ್ನಡ) ಇನ್ನು ಹೆಚ್ಚು ಗಟ್ಟಿಯಾಗುತ್ತಿದೆ ಅನ್ಸುತ್ತೆ. ಹಿಂದೆಂದಿಗಿಂತಲೂ ನಾವು ಹೆಚ್ಚು ಒಗ್ಗಟ್ಟಾಗಿದ್ದೀವಿ.
ಬಾಶೆಯಲ್ಲಿ ಬದಲಾವಣೆಗಳಾಗುವುದು ಸಹಜ, ಹೊಸ ವಸ್ತುಗಳು, ಹೊಸ ವಿಶ್ಯಗಳು, ಹೊಸ ಸಂಗತಿಗಳು ಬಂದಾಗ ಹೀಗೆಲ್ಲ ಆಗುತ್ತವೆ. ಮೊದಲು ಟಿಪ್ಪುವಿನ ಕಾಲದಲ್ಲಿ ಕನ್ನಡಕ್ಕೆ ಅರೇಬಿಯನ್ ಪದಗಳು ಬಂದು ಸೇರಿಕೊಳ್ಳಲಿಲ್ಲವೆ.
ಹೊಸತನವನ್ನು ಬರಮಾಡಿಕೊಂದು ತನ್ನತನವನ್ನ ಉಳಿಸಿಕೊಳ್ಳುವುದ ಜಾಣತನ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕನ್ನಡ ಭಾಷೆಯ ಅಳಿವು ಉಳಿವು
"ಕನ್ನಡ ಸ೦ಸ್ಕೃತಿಯ ಮೇಲೆ ಐ.ಟಿ ಛಾಯೆ" ಅಲ್ಲ "ಕನ್ನಡ ಸಂಸ್ಕೃತಿಯ ಮೇಲೇ ಐಟಿಯ ಕರಿನೆರಳು" ಅಂತ ಅದರ ಬಗ್ಗೆ ಬರೇರಿ..
ಹಿಂಗೆ ಹೇಳ್ತಾ ಹೋದ್ರೆ...
ಕನ್ನಡ ಸ೦ಸ್ಕೃತಿಯ ಮೇಲೆ ಪಾಶ್ಚಿಮಾತ್ಯರ ಛಾಯ
ಕನ್ನಡ ಸ೦ಸ್ಕೃತಿಯ ಮೇಲೆ ಟಿವಿ ಛಾಯ
ಕನ್ನಡ ಸ೦ಸ್ಕೃತಿಯ ಮೇಲೆ ಬಿ.ಟಿ ಛಾಯ
ಏನ್ ಮಾಡೋದು.. ಈ ಛಾಯೆಗಳು ತಂಪಾಗೂ ಇರಬೋದಲ್ಲ!!
ಉ: ಕನ್ನಡ ಭಾಷೆಯ ಅಳಿವು ಉಳಿವು
ಹವುದು..
ಅವ್ರ ಮಾತು ಸರಿ...
ಐಟಿ ಅಂದ್ರೆ ಅಲ್ಲಿ Income Tax.. ಎಂದಾದ್ರೆ ಐಟಿ ರಿಟರ್ನನ್ನು ಕನ್ನಡದಲ್ಲಿ ಮಾಡಿದ್ದೀರ?
ಉ: ಕನ್ನಡ ಭಾಷೆಯ ಅಳಿವು ಉಳಿವು
ನನ್ನ ಕಂಪ್ಯುಟರ್ ಕೈ ಕೊಟ್ಟು , ಓಪನ್ ಮಾಡಲು ಸಾಧ್ಯವಾಗಿರಲಿಲ್ಲ, ಎಷ್ಟೊಂದು ಪ್ರತಿಕ್ರಿಯೆಗಳು ಬಂದಿವೆ! ಎಲ್ಲರಿಗೂ ಧನ್ಯವಾದಗಳು. ಕನ್ನಡದ ಬಗ್ಗೆ ಇರುವ ಕಾಳಜಿ ಇಲ್ಲಿ ಹೊರ ಹೊಮ್ಮಿದೆ. ಕನ್ನಡ ಬಳಸಲು ಆಸಕ್ತಿ ಇರಬೇಕು ಎನ್ನುವ ಮಾತು ನಿಜವಾದದ್ದೇ, ಆಸಕ್ತಿ ಇರುವವರಿಗೆ ಅವಕಾಶಗಳು ಹೆಚ್ಚಾಗುತ್ತಿವೆ, ಅದೇ ನನ್ನ ಸಂತೋಷಕ್ಕೆ ಕಾರಣ.ಇನ್ನೂ ಬಹಳ ಕೆಲಸ ಆಗಬೇಕು ಎನ್ನುವ ಮಾತೂ ಸಹ ಅಷ್ಟೇ ಸರಿ . ಎಲ್ಲರೂ ಮನಸ್ಸು ಮಾಡಿದರೆ ಯಾವ ಕೆಲಸ ಆಗುವುದಿಲ್ಲ ; ಇಲ್ಲಿ ಕೆಲಸ ಮಾಡುವವರನ್ನು ಹುರಿದುಂಬಿಸಿ, ಇನ್ನಷ್ಟು ಕೆಲಸ ಆಗುವಂತೆ ಮಾಡಬೇಕು, ಅದೇ ನನ್ನ ಆಸೆ
ಉ: ಕನ್ನಡ ಭಾಷೆಯ ಅಳಿವು ಉಳಿವು
ನನ್ನ ಕಂಪ್ಯುಟರ್ ಕೈ ಕೊಟ್ಟು , ಓಪನ್ ಮಾಡಲು ಸಾಧ್ಯವಾಗಿರಲಿಲ್ಲ, ಎಷ್ಟೊಂದು ಪ್ರತಿಕ್ರಿಯೆಗಳು ಬಂದಿವೆ! ಎಲ್ಲರಿಗೂ ಧನ್ಯವಾದಗಳು. ಕನ್ನಡದ ಬಗ್ಗೆ ಇರುವ ಕಾಳಜಿ ಇಲ್ಲಿ ಹೊರ ಹೊಮ್ಮಿದೆ. ಕನ್ನಡ ಬಳಸಲು ಆಸಕ್ತಿ ಇರಬೇಕು ಎನ್ನುವ ಮಾತು ನಿಜವಾದದ್ದೇ, ಆಸಕ್ತಿ ಇರುವವರಿಗೆ ಅವಕಾಶಗಳು ಹೆಚ್ಚಾಗುತ್ತಿವೆ, ಅದೇ ನನ್ನ ಸಂತೋಷಕ್ಕೆ ಕಾರಣ.ಇನ್ನೂ ಬಹಳ ಕೆಲಸ ಆಗಬೇಕು ಎನ್ನುವ ಮಾತೂ ಸಹ ಅಷ್ಟೇ ಸರಿ . ಎಲ್ಲರೂ ಮನಸ್ಸು ಮಾಡಿದರೆ ಯಾವ ಕೆಲಸ ಆಗುವುದಿಲ್ಲ ; ಇಲ್ಲಿ ಕೆಲಸ ಮಾಡುವವರನ್ನು ಹುರಿದುಂಬಿಸಿ, ಇನ್ನಷ್ಟು ಕೆಲಸ ಆಗುವಂತೆ ಮಾಡಬೇಕು, ಅದೇ ನನ್ನ ಆಸೆ
ಉ: ಕನ್ನಡ ಭಾಷೆಯ ಅಳಿವು ಉಳಿವು
ನನ್ನ ಕಂಪ್ಯುಟರ್ ಕೈ ಕೊಟ್ಟು , ಓಪನ್ ಮಾಡಲು ಸಾಧ್ಯವಾಗಿರಲಿಲ್ಲ, ಎಷ್ಟೊಂದು ಪ್ರತಿಕ್ರಿಯೆಗಳು ಬಂದಿವೆ! ಎಲ್ಲರಿಗೂ ಧನ್ಯವಾದಗಳು. ಕನ್ನಡದ ಬಗ್ಗೆ ಇರುವ ಕಾಳಜಿ ಇಲ್ಲಿ ಹೊರ ಹೊಮ್ಮಿದೆ. ಕನ್ನಡ ಬಳಸಲು ಆಸಕ್ತಿ ಇರಬೇಕು ಎನ್ನುವ ಮಾತು ನಿಜವಾದದ್ದೇ, ಆಸಕ್ತಿ ಇರುವವರಿಗೆ ಅವಕಾಶಗಳು ಹೆಚ್ಚಾಗುತ್ತಿವೆ, ಅದೇ ನನ್ನ ಸಂತೋಷಕ್ಕೆ ಕಾರಣ.ಇನ್ನೂ ಬಹಳ ಕೆಲಸ ಆಗಬೇಕು ಎನ್ನುವ ಮಾತೂ ಸಹ ಅಷ್ಟೇ ಸರಿ . ಎಲ್ಲರೂ ಮನಸ್ಸು ಮಾಡಿದರೆ ಯಾವ ಕೆಲಸ ಆಗುವುದಿಲ್ಲ ; ಇಲ್ಲಿ ಕೆಲಸ ಮಾಡುವವರನ್ನು ಹುರಿದುಂಬಿಸಿ, ಇನ್ನಷ್ಟು ಕೆಲಸ ಆಗುವಂತೆ ಮಾಡಬೇಕು, ಅದೇ ನನ್ನ ಆಸೆ
ಉ: ಕನ್ನಡ ಭಾಷೆಯ ಅಳಿವು ಉಳಿವು
ನಿಮ್ಮ ಆಶಾದಾಯಕ ಲೇಖನಕ್ಕೆ ಧನ್ಯವಾದಗಳು. ಒಂದೆರೆಡು ಮಾತು:
೧. ವಿದೇಶದಲ್ಲಿ ನೆಲಸಿರುವ ಕನ್ನಡಿಗರಲ್ಲಿ ಕನ್ನಡವನ್ನು ಬಳಸುವ ಆಸೆಯಿದ್ದಿದ್ದರೆ ಅವರು ಹಿಂದೆಯೂ ಕನ್ನಡ ಮರೆಯುತ್ತಿರಲಿಲ್ಲ. ಈಗಲೂ ಮರೆತಿಲ್ಲ. ಹಾಗೆಯೇ ಕನ್ನಡವನ್ನು ಬಳಸಲೇಬೇಕು ಎಂಬ ಕಾಳಜಿಯಿಲ್ಲದ ವಿದೇಶಿ ಕನ್ನಡಿಗರು ಹಿಂದೆಯೂ ಕನ್ನಡವನ್ನು ಮರೆತಿದ್ದಾರೆ, ಇಂದೂ ಮರೆಯುತ್ತಿದ್ದಾರೆ.
೨. "ಆಧುನಿಕ ಜಗತ್ತಿನ ತಂತ್ರಜ್ಞಾನದ ಹುಚ್ಚು ಹೊಳೆಯಲ್ಲಿ ಅನೇಕ ಭಾಷೆಗಳು ಕೊಚ್ಚಿ ಹೋಗುತ್ತವೆನ್ನುವ ಆತಂಕ": ಇದು ನಿಜವೋ ಸುಳ್ಳೋ ಗೊತ್ತಿಲ್ಲ.
ಆದರೆ, (with all due respect) ಸಂಪದ, ಬರಹ ಮುಂತಾದುವುಗಳ ಅಳಿಲು ಸೇವೆ ಕನ್ನಡವನ್ನು ಅಂತರ್ಜಾಲದಲ್ಲಿ ಎತ್ತಿಹಿಡಿದಿದೆ ಎಂದು ಹೇಳುವುದು ಉತ್ಪ್ರೇಕ್ಷೆಯಾದೀತು. ಇವತ್ತಿಗೂ ಲಕ್ಷಾಂತರ ಕನ್ನಡಿಗರಿಗೆ ಅಂತರ್ಜಾಲದಲ್ಲಿ ಕನ್ನಡ ಇದೆ ಎಂಬುದೇ ಗೊತ್ತಿಲ್ಲ, ಬೇಕಾಗಿಯೂ ಇಲ್ಲ. ಹಾಗೆ ನೋಡುತ್ತಾ ಹೋದರೆ, ಇಂದಿನ ದಿವಸದಲ್ಲಿ, ಅಂತರ್ಜಾಲದಲ್ಲಿ ಕನ್ನಡ ಉಳಿಯುವುದು ನಮಗೆಲ್ಲ (ಸಂಪದ, ಬರಹ ಮುಂತಾದವುಗಳ ಬಳಕೆದಾರರಿಗೆ) ವೈಯುಕ್ತಿಕ ಮಟ್ಟದಲ್ಲಿ ಬಹುಮುಖ್ಯವಾದರೂ ಕನ್ನಡದ ಇಂದಿನ ಸ್ಥಿತಿಗತಿ ಮತ್ತು ತೊಂದರೆಗಳಿಗೂ ಅಂತರ್ಜಾಲದಲ್ಲಿ ಕನ್ನಡದ ಉಳಿವು-ಅಳಿವುಗಳಿಗೂ ಅಂತಹ ದೊಡ್ಡ ಸಂಬಂಧವಿಲ್ಲ.
ಅಂದ ಮಾತ್ರಕ್ಕೆ ಸಂಪದ ಬರಹಗಳ ಕೊಡುಗೆ ಕ್ಷುಲ್ಲಕ ಖಂಡಿತಾ ಅಲ್ಲ. ಇವುಗಳ ಕೊಡುಗೆ ಅಪಾರ. ಆದರೆ ಕನ್ನಡದ ಅಳಿವು,ಉಳಿವುಗಳನ್ನು ನಿರ್ಧರಿಸುವ ಮಟ್ಟಿಗೆ ಬೆಳೆಯಲು ಇಂತಹ ತಂತ್ರಾಂಶಗಳು ಇನ್ನೂ ಬಹಳ (ಹಲವು ಪಟ್ಟು ಹೆಚ್ಚು) ಬೇಕು.
ಇಂತಿ,
ಶ್ಯಾಮ ಕಶ್ಯಪ.
--
ನೀ ಲೋಕದ ಕಾಳಜಿ ಮಾಡುತೆನಂತ್, ಯಾರ ಬ್ಯಾಡಂದಾರ ಮಾಡಪ್ಪ ಚಿಂತಿ - ಸಂತ ಶಿಶುನಾಳ ಶರೀಫ