ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಪುಸ್ತಕ ಯಾಕೆ ಇಟ್ಟುಕೊಳ್ಳಬೇಕು: ಭಾಗ ಎರಡು

December 9, 2005 - 1:07pm — olnswamy

ಈ ಬರಹಕ್ಕೆ ಇಷ್ಟು ಪ್ರತಿಕ್ರಿಯೆ ಬಂದದ್ದು ಅಚ್ಚರಿಯೇನೂ ಆಗಿಲ್ಲ. ಇನ್ನೂ ಕೆಲವು ಸಂಗತಿಗಳನ್ನು ನೋಡಿ:
೧. ನಮಗೆ ಉಪಯುಕ್ತವೆನಿಸಿದ ಪುಸ್ತಕಗಳನ್ನು ಇಟ್ಟುಕೊಳ್ಳಲು ಬಯಸುತ್ತೇವೆ. ನಮ್ಮ ಚಟುವಟಿಕೆಗಳು ಬೇರೆ ಆದಂತೆ ಸಂಗ್ರಹಗೊಂಡ ಪುಸ್ತಕಗಳು ಭಾರವೆನಿಸತೊಡಗುತ್ತವೆ. ಆದರೂ ಇಟ್ಟುಕೊಂಡೇ ಇರುತ್ತೇವೆ!
೨. ಪುಸ್ತಕಗಳನ್ನು ಇಟ್ಟುಕೊಳ್ಳುವುದಕ್ಕೆ ಪುಸ್ತಕಗಳ ಮೌಲ್ಯ ಮತ್ತು ಉಪಯುಕ್ತತೆಗಳಿಗಿಂತ ನಮ್ಮ ಭಾವುಕತೆಯೇ ಬಹಳಷ್ಟು ಸಾರಿ ಕಾರಣವಾಗಿರುತ್ತದೆ. ಇದು ನನ್ನ ಎಸ್ ಎಸ್ ಎಲ್ ಸಿ ಪಠ್ಯ; ಈ ಪುಸ್ತಕ ನಾನು ದೆಹಲಿಗೆ ಮೊದಲು ಹೋದಾಗ ತೆಗೆದುಕೊಂಡದ್ದು; ಇದು ನನ್ನ ಗೆಳತಿ ಕೊಟ್ಟದ್ದು ಇತ್ಯಾದಿ. ಸೆಂಟಿಮೆಂಟಾಲಿಟಿಗೆ ಸಾವಿಲ್ಲವಾದ್ದರಿಂದ ಬೇಡದ ಪುಸ್ತಕಗಳು ಬೇಡದ ಅತಿಥಿಗಳಂತೆ ಉಳಿದೇ ಬಿಡುತ್ತವೆ.
೩. ಪುಸ್ತಕವನ್ನು ಸಂಪತ್ತು ಅಂದುಕೊಂಡವರಿದ್ದಾರೆ. ಆದರೆ ಈಗಿನ ನಮ್ಮ ಮನೆಯ ಮಕ್ಕಳು ಕನ್ನಡದ ಪುಸ್ತಕ ಓದುವುದಿರಲಿ, ಮುಟ್ಟುವುದು ಕೂಡ ಅಪರೂಪ. ಮಕ್ಕಳು ಹಾಗೆ ಬೆಳೆದಿರುವುದಕ್ಕೆ ಅಪ್ಪ ಅಮ್ಮಂದಿರಾದ ನಾವೇ ಕಾರಣ, ಅಲ್ಲವೆ. ಓದದ ಮಕ್ಕಳಿದ್ದರೆ ಪುಸ್ತಕಗಳು ಸಂಪತ್ತಲ್ಲ, ಕಸದ ರಾಶಿಯಾಗಿ ಕಾಣುವುದು ತಪ್ಪಿದ್ದಲ್ಲ. ಹಾಗಂತ ಮಕ್ಕಳು ಓದುವುದಿಲ್ಲ ಅಂತಲ್ಲ, ಅವರ ಓದಿನ ಪ್ರಯಾರಿಟಿಗಳು ಬೇರೆ, ನಾವು, ಹಿರಿಯ ತಲೆಮಾರಿನವು ಪುಸ್ತಕ ಸಂಗ್ರಹಿಸುವಾಗ ಇದ್ದ ಪ್ರಯಾರಿಟಿಗಳು ಬೇರೆ.
೩. ಕ್ಲಾಸಿಕ್ ಗಳನ್ನು ಎಷ್ಟು ಬಾರಿ ಬೇಕಾದರೂ ಓದಬಹುದು ಅನ್ನುವ ವಾದ ಇದೆಯಲ್ಲ, ನಮ್ಮ ಮನೆಯಲ್ಲಿ ಕಳೆದ ಐವತ್ತು ವರ್ಷಗಳಿಂದ ಇರುವ ಕ್ಲಾಸಿಕ್‌ಗಳಲ್ಲಿ ಶೇ ೧ ಭಾಗವನ್ನೂ ಎರಡನೆಯ ಮೂರನೆಯ ಬಾರಿ ಓದಿಲ್ಲ.
೪. ನಾವು ಯಾವುದೇ ಪುಸ್ತಕ ಗಮನವಿಟ್ಟು ಓದಿದ ನಂತರವೂ ಅದರ ಸ್ಥೂಲ ಅರ್ಥ, ಮನಸ್ಸಿನಲ್ಲಿ ಉಂಟಾದ ಆನಂದದ ಸ್ಥೂಲ ನೆನಪು ಉಳಿದಿರುತ್ತದೆ. ಅಷ್ಟೇ ದಕ್ಕುವುದು. ನಮ್ಮದಾಗುವುದು. ಅದಕ್ಕೆ ಕಾರಣವಾದ ಪುಸ್ತಕ ನಮ್ಮ ಬಳಿ ಇದ್ದರೂ ಅಷ್ಟೆ, ಇರದಿದ್ದರೂ ಅಷ್ಟೆ.
೫. ನಾಡಿಗ್ ಅವರು ಹೇಳುವಂತೆ ತಾಂತ್ರಿಕ ವಿಷಯಗಳ ಪುಸ್ತಕ ಕೌಶಲದ ಕಲಿಕೆಗೆ ಅಗತ್ಯ. ಅದು ಕಸುಬುದಾರನೊಬ್ಬನಿಗೆ ಹತ್ಯಾರಗಳು ಅಗತ್ಯವಾಗಿರುವಂತೆ. ಕಸುಬನ್ನೇ ಬದಲಾಯಿಸಿದಾಗ ಆ ಕಸುಬಿನ ಹತ್ಯಾರಗಳೂ ಬೇಡವಾಗುತ್ತವಷ್ಟೆ. ಅಡುಗೆ ಭಟ್ಟರಿಗೇಕೆ ಹಾರೆ ಪಿಕಾಸಿ ನೇಗಿಲು? ಹಾಗೆ ನಾವು ಕಸುಬು ಬದಲಿಸಿದಾಗಲೂ ಹಳೆಯ ಕಸುಬಿನ ಕೌಶಲದ ಪುಸ್ತಕಗಳು ಯಾಕೆ ಸುಮ್ಮನೆ ರಾಶಿಯಾಗಿ ಇರಬೇಕು?
೬. ಯಾವುದೇ ವ್ಯಾಮೋಹ ಬಿಡುವುದು ಕಷ್ಟವಾದಂತೆ ಪುಸ್ತಕ ಸಂಗ್ರಹದ ವ್ಯಾಮೋಹ ಬಿಡುವುದು ಕೂಡ ಕಷ್ಟವೇ.
೭. ಸಾಹಿತ್ಯ, ಕತೆ, ಕಾದಂಬರಿ, ಕವಿತೆ ಇತ್ಯಾದಿಗಳು ಕಾಲಾತೀತವೆಂದರೂ ಅವುಗಳ ಮೂಲಕ ಭಾವವನ್ನು ಪರಿಷ್ಕರಿಸಿಕೊಳ್ಳುವುದು ಸಾಧ್ಯವಿದ್ದರೂ, ಅವುಗಳ ಭಾವ ಒಮ್ಮೆ ನಮ್ಮ ಮನಸ್ಸಿಗೆ ಇಳಿದಮೇಲೆ ಅಚ್ಚಾದ ಹಾಳೆಗಳನ್ನು ಇಟ್ಟುಕೊಳ್ಳುವ ಅಗತ್ಯವೇನು?
೮. ಹಾಗೆ ಓದಿ, ವಿಚಾರವನ್ನು ಕೇಳಿ ಬದಲಾಗುವುದಕ್ಕಿಂತ ನಮಗೆ ಬದುಕಿನಿಂದ ದೊರೆಯುವ ಅನುಭವಗಳಿಂದ ಬದಲಾಗುತ್ತೆವೆ ಅಷ್ಟೆ ಅಲ್ಲವೆ. ಆದ್ದರಿಂದಲೇ ಸಮಾಜವನ್ನು ಬದಲಾಯಿಸಲು ಬರೆಯುತ್ತೇನೆ, ಓದಿನಿಂದ ಜನ ಸಂಪನ್ನರಾಗುತ್ತಾರೆ ಅನ್ನುವುದೆಲ್ಲ ಸುಳ್ಳು ಭ್ರಮೆಗಳು. ಜಗತ್ತಿನ ಕೆಡುಕಿಗೆ ಓದಿ ಬುದ್ಧಿವಂತರಾದವರೇ ಹೆಚ್ಚು ಕಾರಣ ಅಲ್ಲವೆ? ಭ್ರಷ್ಟತನ, ಮೊಸ ಇವೆಲ್ಲ ಕೇವಲ ಓದಿನಿಂದ, ಮಾತಿನಿಂದ ಬದಲಾಗುವಂತಿದ್ದರೆ ಜಗತ್ತು ಹೀಗೆ ಯಾಕೆ ಇರುತ್ತಿತ್ತು? ಓದಿನಿಂದ ಬದಲಾಗದ ನಾವು ಪುಸ್ತಕ ಕೂಡಿಟ್ಟುಕೊಂಡು ಬದಲಾಗುತ್ತೇವಾ?

  • ಚಿಂತನೆ
~.~
  • Login or register to post comments
  • 1121 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 10, 2005 - 11:48am — muralihr

ಸಾರ್,

muralihr's picture

ಸಾರ್,
ಏನ್ ಇದು ?? ನೀವು ಊರ್ ಬಿಟ್ಟ್ ಮೇಲೆ ಬಹಳ ಬದಲಾಗಿರುವ ಹಾಗಿದೆ.
ಅಷ್ಟೆಲ್ಲಾ ಪುಸ್ತಕ ಬರೆದು. ಈಗ್ ಪುಸ್ತಕ ಬರೆಯೊದು ಭ್ರಮೆ ಅ೦ದು ಬಿಟ್ಟರಲ್ಲಾ ??
ಇರಲಿ ಬಿಡಿ . ನಿಮ್ಮ ಪುಸ್ತಕ ಯಾರಾದರೂ ಪ್ರಕಟ ಮಾಡಿಲ್ಲಾ ಅ೦ತಾನೋ ಅಥವ
ಇತ್ತೀಚಿನ ಸ್ಥಿತಿಯಲ್ಲಿ ಓದುವರು ಕಡಿಮೆ ಆಗುತ್ತಿದ್ದಾರೆ ಅ೦ತಾನೋ - ಒಟ್ಟಿನಲ್ಲಿ ನಿಮ್ಮಗೆ ಕೋಪ ಬ೦ದಿರಬೇಕು.
ಬೇಜಾರ್ ಮಾಡ್ಕೋ ಬೇಡಿ. ಸೋಲು ಗೆಲವು ಜೀವನದಲ್ಲಿ ಅನಿವಾರ್ಯ.
ಮೈಸೂರಿಗೆ ಬ೦ದಾಗ, ನಿಮ್ಮ ಮನಸ್ಸಿಗೆ ಮತ್ತಷ್ಟು ಸಮಾದಾನ ಮಾಡ್ತೀನಿ.

ಅಲ್ಲಿವರೆಗೂ "You Can Win" by Khera, Shiv;ಪುಸ್ತಕ ಓದಿ.
ಸಾರ್,
ಏನ್ ಇದು ?? ನೀವು ಊರ್ ಬಿಟ್ಟ್ ಮೇಲೆ ಬಹಳ ಬದಲಾಗಿರುವ ಹಾಗಿದೆ.
ಅಷ್ಟೆಲ್ಲಾ ಪುಸ್ತಕ ಬರೆದು. ಈಗ್ ಪುಸ್ತಕ ಬರೆಯೊದು ಭ್ರಮೆ ಅ೦ದು ಬಿಟ್ಟರಲ್ಲಾ ??
ಇರಲಿ ಬಿಡಿ . ನಿಮ್ಮ ಪುಸ್ತಕ ಯಾರಾದರೂ ಪ್ರಕಟ ಮಾಡಿಲ್ಲಾ ಅ೦ತಾನೋ ಅಥವ
ಇತೀಚಿನ ಸ್ಥಿತಿಯಲ್ಲಿ ಓದುವರು ಕಡಿಮೆ ಆಗುತ್ತಿದ್ದಾರೆ ಅ೦ತಾನೋ - ಒಟ್ಟಿನಲ್ಲಿ ನಿಮ್ಮಗೆ ಕೋಪ ಬ೦ದಿರಬೇಕು.
ಬೇಜಾರ್ ಮಾಡ್ಕೋ ಬೇಡಿ. ಸೋಲು ಗೆಲವು ಜೀವನದಲ್ಲಿ ಅನಿವಾರ್ಯ.
ಮೈಸೂರಿಗೆ ಬ೦ದಾಗ, ನಿಮ್ಮ ಮನಸ್ಸಿಗೆ ಮತ್ತಷ್ಟು ಸಮಾದಾನ ಮಾಡ್ತೀನಿ.
ಅಲ್ಲಿವರೆಗೂ "You Can Win" by Khera, Shiv;ಪುಸ್ತಕ ಓದಿ.

ಡಿ.ವಿ.ಜಿ. ಮ೦ಕು ತಿಮ್ಮನ ಪುಸ್ತಕ ದಲ್ಲಿ ಇದನ್ನೇ ಹೇಳುವುದು ::

ಸತ್ತೆನೆಂದೆನಬೇಡ; ಸೋತೆನೆಂದೆನಬೇಡ ।
ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ।।
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು ।
ಮತ್ತೆ ತೋರ್ಪುದು ನಾಳೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮುರಳಿ.
ಮುರಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 13, 2005 - 8:05am — olnswamy

ಕೋಪ ಅಲ್ಲ, ನಿರಾಸೆಯೂ ಅಲ್ಲ

olnswamy's picture

ಬರೆದದ್ದನ್ನು ಪ್ರಕಟಿಸುವುದಕ್ಕೆ ಈ ಮೂವತ್ತು ವರ್ಷಗಳಲ್ಲಿ ಎಂದೂ ತೊಂದರೆಯಾಗಿಲ್ಲ. ಕೋಪವೂ ಇಲ್ಲ, ನಿರಾಸೆಯೂ ಇಲ್ಲ. ಯಾಕೆಂದರೆ ನನಗೆ ಗೆಲ್ಲಬೇಕೆಂಬ ಹಟ ಇಲ್ಲ, ಆದ್ದರಿಂದ ಸೋಲುವ ಭಯವೂ ಇಲ್ಲ. ನೀವು ಅಂದುಕೊಂಡಿರುವುದು ಸರಿಯಲ್ಲ. ಈ ಬಗ್ಗೆ ಇನ್ನೊಂದು ಸಾಕಷ್ಟು ದೀರ್ಘ ಬರಹ ಮಾಡಲಿದ್ದೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 14, 2005 - 1:13pm — muralihr

ತಪ್ಪು ಮಾಡಿದ್ದರೆ ಕ್ಷಮಿಸಿ

muralihr's picture

>>> ಈ ಬಗ್ಗೆ ಇನ್ನೊಂದು ಸಾಕಷ್ಟು ದೀರ್ಘ ಬರಹ ಮಾಡಲಿದ್ದೇನೆ.
ತಪ್ಪು ಮಾಡಿದ್ದರೆ ಕ್ಷಮಿಸಿ . ನಿಮ್ಮನ್ನು ಸ್ವಲ್ಪ ಒಳ್ಳೆ ದಾರಿಗೆ ತರೋಣವೆ೦ದು ಈ ರೀತಿ
ಹೇಳಿದೆ. ಏಕೆ ಅ೦ದರೆ ನೀವು ಬರಹದಿ೦ದ ಪ್ರಯೋಜನ ಇಲ್ಲಾ ಅ೦ದು ಸ೦ಪದದಲ್ಲಿ
ಬರೆಯೋದು ನಿಲ್ಲಿಸ್ ಬಿಟ್ರೇ ?? ಏನ್ ಗತಿ ??
>>> ಈ ಬಗ್ಗೆ ಇನ್ನೊಂದು ಸಾಕಷ್ಟು ದೀರ್ಘ ಬರಹ ಮಾಡಲಿದ್ದೇನೆ.
ಒಳ್ಳೆದು ನೀವು ಈ ರೀತಿ ಬರಿಯುತ್ತೀರಾ ಅ೦ತಾಲೇ ನಾನು ಬರೆದಿದ್ದು Smiling:)
ಅದರಿ೦ದ ನಿಮ್ಮ ಅಭಿಪ್ರಾಯ ಬದಲಾಗಿದೆ ಎ೦ದು ತಿಳಿದು ಸ೦ತೋಷವಾಯ್ತು.
ನಾನು ಗೆದ್ದೆ. ನೀವು ಗೆದ್ದರಿ. ಸ೦ಪದ ಬಳಗ ನಿಮ್ಮ ಬರಹದಿ೦ದ
ಬೆಳೆದು ಗೆಲ್ಲಲಿ.
-- ಮುರಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 10, 2005 - 6:56pm — tvsrinivas41

ಯೋಗ್ಯ ವಿಚಾರ

tvsrinivas41's picture

ಸಾರ್ ಮೊದಲಿಗೆ ಕ್ಷಮೆ ಇರಲಿ. ಬಹಳ ದಿನಗಳ ನಂತರ ನಿಮ್ಮ ಮನದ ಮಾತುಗಳನ್ನು ಓದುತ್ತಿರುವೆ.

ನಿಮ್ಮ ಹಾಗೆಯೇ ನನಗೂ ಅನುಭವ ಆಗಿದೆ. ಒಂದು ಕಾಲದಲ್ಲಿ ೫೦೦ ಕ್ಕೂ ಹೆಚ್ಚಿನ ಪುಸ್ತಕಗಳನ್ನು ಕೂಡಿಸಿಟ್ಟಿದ್ದೆ. ಅದಕ್ಕಾಗಿಯೇ ಒಂದು ಪ್ರತ್ಯೇಕ ಗೂಡನ್ನು ಮಾಡಿಸಿದ್ದೆ. ಮುಂಬಯಿಗೆ ವರ್ಗವಾಗಿ ಬಂದ ಮೇಲೆ ಎಲ್ಲವೂ ಎಲ್ಲೆಲ್ಲಿ ಹೋದವೋ?

ಮನದಲ್ಲಿ ಏನಿದೆಯೋ ಅದೇ ನಾನಿರುವವರೆವಿಗೆ ಶಾಶ್ವತ.

ಇನ್ನು ಬರವಣಿಗೆಯ ಬಗ್ಗೆ. ಯಾರು ಓದಲಿ ಎಂದು ನಾನು ಬರೆಯುವುದಿಲ್ಲ - ಬರೆವುದೆನ್ನ ಕರ್ಮ. ಬರೆಯದಿದ್ದರೆ ತಲೆ ಭಾರ - ನಿದ್ರೆ ಬಾರದು.

ಎಲ್ಲರ ಮನದ ಹೊರಗೆಡಲಾಗದ ವಿಚಾರಗಳನ್ನು ಬಹಳ ಸುಂದರವಾಗಿ ಬರೆದಿರುವಿರಿ. ಎಷ್ಟೇ ಆಗಲಿ ನೀವು ಉನ್ನತ ಬರಹಗಾರರಲ್ಲವೇ? ನಿಮ್ಮ ಸಖ್ಯವೇ ನಮ್ಮ ಭಾಗ್ಯ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 11, 2005 - 11:46pm — hpn

Re: ಪುಸ್ತಕ ಯಾಕೆ ಇಟ್ಟುಕೊಳ್ಳಬೇಕು: ಭಾಗ ಎರಡು

hpn's picture

olnswamy wrote:

೧. ನಮಗೆ ಉಪಯುಕ್ತವೆನಿಸಿದ ಪುಸ್ತಕಗಳನ್ನು ಇಟ್ಟುಕೊಳ್ಳಲು ಬಯಸುತ್ತೇವೆ. ನಮ್ಮ ಚಟುವಟಿಕೆಗಳು ಬೇರೆ ಆದಂತೆ ಸಂಗ್ರಹಗೊಂಡ ಪುಸ್ತಕಗಳು ಭಾರವೆನಿಸತೊಡಗುತ್ತವೆ. ಆದರೂ ಇಟ್ಟುಕೊಂಡೇ ಇರುತ್ತೇವೆ!

ಹಾಗೆ ಇಟ್ಟುಕೊಂಡ ಪುಸ್ತಕ ಒಂದು ದಿನ ಯಾರಿಗೋ ಉಪಯೋಗಕ್ಕೆ ಬರುತ್ತದೆ. ಕೆಲವೇ ದಿನಗಳ ಹಿಂದೆ HTML ಕಲಿಯಬೇಕೆಂದು ನೆಂಟರೊಬ್ಬರು ನನ್ನ ಬಳಿ ಇದ್ದ HTML ಕುರಿತ ಪುಸ್ತಕಗಳನ್ನು ಕೇಳಿ ತೆಗೆದುಕೊಂಡು ಹೋದರು.

ಕಂಪ್ಯೂಟರ್ ಕುರಿತ ಪುಸ್ತಕಗಳೆಲ್ಲ ನೀವು ಇಲ್ಲಿ ತಿಳಿಸಿದಂತೆಯೇ. ಆದರೆ, ಬೇರೆ ದಾರಿಯೇ ಇಲ್ಲ, ಪುಸ್ತಕ ಬೇಕೆಂದಾಗ ಕೊಳ್ಳಲೇ ಬೇಕು. ಬೇಡದಿದ್ದಾಗ ಗುಜರಿಗೆ ಹಾಕೋದಕ್ಕೆ ಮನಸ್ಸಾಗೋದಿಲ್ಲ - ಅದನ್ನಿಟ್ಟುಕೊಳ್ಳಲು ದುಡ್ಡೇನೂ ಖರ್ಚಾಗೋದಿಲ್ವಲ್ಲ!

ಮನೆ ಬದಲಾಯಿಸುವಾಗ ಮಾತ್ರ nuisance ಆಗತ್ತೆ. ಬೇಡದಿದ್ದನ್ನೆಲ್ಲ ಹೊತ್ತಿಕೊಂಡು ಹೋಗೋದಲ್ಲದೆ, ಹೊಸ ಮನೆ ತಲುಪಿದ ಮೇಲೆ ಅದನ್ನು sort out ಮಾಡಿಕೊಳ್ಳೋದು ತಲೆ ನೋವು ಕೆಲಸವೇ!

ಶಿವಮೊಗ್ಗೆಯಿಂದ ಮನೆ ಬದಲಾಯಿಸುವಾಗ ಅಕ್ಕ ಪಕ್ಕದ ಮನೆಯ, ಗುರುತ್ತಿದ್ದ, ಪುಸ್ತಕ ಪ್ರೇಮಿಗಳಿಗೆ ಬಾಲಮಂಗಳ, ಟಿಂಕಲ್, ಚಂಪಕ್, ಅಮರ ಚಿತ್ರಕತೆ, 'ಇದು ನಮ್ಮ ಭಾರತ' ಮುಂತಾದ ಪುಸ್ತಕಗಳನ್ನೆಲ್ಲ ಕೊಟ್ಟು ಖಾಲಿ ಮಾಡಿದ್ದೆ. ಈಗ ಆ ಪುಸ್ತಕಗಳು ನನ್ನ ಬಳಿಯೇ ಇದ್ದರೆ ಚೆನ್ನಾಗಿರುತ್ತಿತ್ತಲ್ಲ ಎಂದನಿಸುತ್ತದೆ!

olnswamy wrote:

೨. ಪುಸ್ತಕಗಳನ್ನು ಇಟ್ಟುಕೊಳ್ಳುವುದಕ್ಕೆ ಪುಸ್ತಕಗಳ ಮೌಲ್ಯ ಮತ್ತು ಉಪಯುಕ್ತತೆಗಳಿಗಿಂತ ನಮ್ಮ ಭಾವುಕತೆಯೇ ಬಹಳಷ್ಟು ಸಾರಿ ಕಾರಣವಾಗಿರುತ್ತದೆ. ಇದು ನನ್ನ ಎಸ್ ಎಸ್ ಎಲ್ ಸಿ ಪಠ್ಯ; ಈ ಪುಸ್ತಕ ನಾನು ದೆಹಲಿಗೆ ಮೊದಲು ಹೋದಾಗ ತೆಗೆದುಕೊಂಡದ್ದು; ಇದು ನನ್ನ ಗೆಳತಿ ಕೊಟ್ಟದ್ದು ಇತ್ಯಾದಿ. ಸೆಂಟಿಮೆಂಟಾಲಿಟಿಗೆ ಸಾವಿಲ್ಲವಾದ್ದರಿಂದ ಬೇಡದ ಪುಸ್ತಕಗಳು ಬೇಡದ ಅತಿಥಿಗಳಂತೆ ಉಳಿದೇ ಬಿಡುತ್ತವೆ.

ನಿಜವೇ. ಆದರೆ, ಇದು ಪುಸ್ತಕಗಳಿಗೆ ಮಾತ್ರ ಸೀಮಿತವಲ್ಲ. Eye-wink

olnswamy wrote:

೩. ಪುಸ್ತಕವನ್ನು ಸಂಪತ್ತು ಅಂದುಕೊಂಡವರಿದ್ದಾರೆ. ಆದರೆ ಈಗಿನ ನಮ್ಮ ಮನೆಯ ಮಕ್ಕಳು ಕನ್ನಡದ ಪುಸ್ತಕ ಓದುವುದಿರಲಿ, ಮುಟ್ಟುವುದು ಕೂಡ ಅಪರೂಪ. ಮಕ್ಕಳು ಹಾಗೆ ಬೆಳೆದಿರುವುದಕ್ಕೆ ಅಪ್ಪ ಅಮ್ಮಂದಿರಾದ ನಾವೇ ಕಾರಣ, ಅಲ್ಲವೆ. ಓದದ ಮಕ್ಕಳಿದ್ದರೆ ಪುಸ್ತಕಗಳು ಸಂಪತ್ತಲ್ಲ, ಕಸದ ರಾಶಿಯಾಗಿ ಕಾಣುವುದು ತಪ್ಪಿದ್ದಲ್ಲ. ಹಾಗಂತ ಮಕ್ಕಳು ಓದುವುದಿಲ್ಲ ಅಂತಲ್ಲ, ಅವರ ಓದಿನ ಪ್ರಯಾರಿಟಿಗಳು ಬೇರೆ, ನಾವು, ಹಿರಿಯ ತಲೆಮಾರಿನವು ಪುಸ್ತಕ ಸಂಗ್ರಹಿಸುವಾಗ ಇದ್ದ ಪ್ರಯಾರಿಟಿಗಳು ಬೇರೆ.

well, ಈ phenomenon ಬದಲಾಗುತ್ತಲೇ ಇರುತ್ತದೆ. ಎಲ್ಲರಿಗೂ ತಮ್ಮದೇ ಆದ ಟೇಸ್ಟ್ ಇರುತ್ತದಾದ್ದರಿಂದ 'ಪ್ರಯಾರಿಟಿ' ಇದ್ದೇ ಇರುತ್ತದೆ - ಅದು ಜೆನರೇಶನ್ ಗ್ಯಾಪಿನಿಂದ ಆಗಲೇಬೇಕೆಂದೇನಿಲ್ಲ.

olnswamy wrote:

೩. ಕ್ಲಾಸಿಕ್ ಗಳನ್ನು ಎಷ್ಟು ಬಾರಿ ಬೇಕಾದರೂ ಓದಬಹುದು ಅನ್ನುವ ವಾದ ಇದೆಯಲ್ಲ, ನಮ್ಮ ಮನೆಯಲ್ಲಿ ಕಳೆದ ಐವತ್ತು ವರ್ಷಗಳಿಂದ ಇರುವ ಕ್ಲಾಸಿಕ್‌ಗಳಲ್ಲಿ ಶೇ ೧ ಭಾಗವನ್ನೂ ಎರಡನೆಯ ಮೂರನೆಯ ಬಾರಿ ಓದಿಲ್ಲ.

hmm... ಯಾವ ಕ್ಲಾಸಿಕ್ ಅನ್ನೋದರ ಮೇಲೆ depend ಆಗುತ್ತೆ. ಬಿ ಜಿ ಎಲ್ ಸ್ವಾಮಿಯವರ ಕೆಲವು ಕೃತಿಗಳನ್ನ ನಾನು ಹಲವಾರು ಬಾರಿ ಓದಿರುವೆ (ಮತ್ತೆ ಮತ್ತೆ ಓದುವಾಗ ಬೇಜಾರೂ ಆಗಿಲ್ಲ). Asterix, Tintin ಮುಂತಾದ ಕಾಮಿಕ್ಸ್ ಗಳನ್ನು ಲೆಕ್ಕವಿಲ್ಲದಷ್ಟು ಬಾರಿ ಮತ್ತೆ ಮತ್ತೆ ಓದಿರುವೆ Eye-wink

olnswamy wrote:

೪. ನಾವು ಯಾವುದೇ ಪುಸ್ತಕ ಗಮನವಿಟ್ಟು ಓದಿದ ನಂತರವೂ ಅದರ ಸ್ಥೂಲ ಅರ್ಥ, ಮನಸ್ಸಿನಲ್ಲಿ ಉಂಟಾದ ಆನಂದದ ಸ್ಥೂಲ ನೆನಪು ಉಳಿದಿರುತ್ತದೆ. ಅಷ್ಟೇ ದಕ್ಕುವುದು. ನಮ್ಮದಾಗುವುದು. ಅದಕ್ಕೆ ಕಾರಣವಾದ ಪುಸ್ತಕ ನಮ್ಮ ಬಳಿ ಇದ್ದರೂ ಅಷ್ಟೆ, ಇರದಿದ್ದರೂ ಅಷ್ಟೆ.

ನಿಜ. ಮೊದಲ ಬಾರಿ ಓದಿದ ಅನುಭವ ಚಿರಕಾಲ ಉಳಿಯುವಂತದ್ದು.

olnswamy wrote:

೫. ನಾಡಿಗ್ ಅವರು ಹೇಳುವಂತೆ ತಾಂತ್ರಿಕ ವಿಷಯಗಳ ಪುಸ್ತಕ ಕೌಶಲದ ಕಲಿಕೆಗೆ ಅಗತ್ಯ. ಅದು ಕಸುಬುದಾರನೊಬ್ಬನಿಗೆ ಹತ್ಯಾರಗಳು ಅಗತ್ಯವಾಗಿರುವಂತೆ. ಕಸುಬನ್ನೇ ಬದಲಾಯಿಸಿದಾಗ ಆ ಕಸುಬಿನ ಹತ್ಯಾರಗಳೂ ಬೇಡವಾಗುತ್ತವಷ್ಟೆ. ಅಡುಗೆ ಭಟ್ಟರಿಗೇಕೆ ಹಾರೆ ಪಿಕಾಸಿ ನೇಗಿಲು? ಹಾಗೆ ನಾವು ಕಸುಬು ಬದಲಿಸಿದಾಗಲೂ ಹಳೆಯ ಕಸುಬಿನ ಕೌಶಲದ ಪುಸ್ತಕಗಳು ಯಾಕೆ ಸುಮ್ಮನೆ ರಾಶಿಯಾಗಿ ಇರಬೇಕು?

ಇದಕ್ಕೆ ಮಾತ್ರ ನನ್ನ ಬಳಿ ಉತ್ತರವಿಲ್ಲ. ಕೆಲವರು ತಮ್ಮ 'ಯಾದೇಂ' ಖಾಯಂ ಆಗಿ ಇಟ್ಟುಕೊಳ್ಳೋದಕ್ಕೆ ಹಳೆಯ ಕಸುಬಿನ ಪುಸ್ತಕಗಳನ್ನು ಇಟ್ಟುಕೊಂಡಿರುತ್ತಾರೆ. (ಸಣ್ಣವನಿದ್ದಾಗ ಸಂಸ್ಕೃತ ಕಲೆಯುವಾಗ ಬಳಸಿದ ಪುಸ್ತಕಗಳು ಇನ್ನೂ ನನ್ನ ಬಳಿ ಇವೆ. ಶಾಲೆಯಲ್ಲಿ, ಸಂಸ್ಕೃತ ಓದಲು ಪ್ರಾರಂಭಿಸಿದಾಗ ಅವನ್ನೊಮ್ಮೆ "revisit" ಮಾಡಿದ್ದೆ. ಈಗ, ಅದರ ಉಪಯೋಗವೇನು ಎಂಬುದು ತಿಳಿದಿಲ್ಲ. ಮುಂದೊಮ್ಮೆ ಮತ್ತಷ್ಟು ಸಂಸ್ಕೃತ ಓದಲು ಸಾಧ್ಯವಾಗುತ್ತದೆಯೋ ಅದೂ ಗೊತ್ತಿಲ್ಲ)

olnswamy wrote:

೬. ಯಾವುದೇ ವ್ಯಾಮೋಹ ಬಿಡುವುದು ಕಷ್ಟವಾದಂತೆ ಪುಸ್ತಕ ಸಂಗ್ರಹದ ವ್ಯಾಮೋಹ ಬಿಡುವುದು ಕೂಡ ಕಷ್ಟವೇ.

ನಿಜ. ಕೆಲವರು ಈ ವ್ಯಾಮೋಹಕ್ಕೇ ಬಲಿಯಾಗಿ ತಮ್ಮ ಬಳಿ ಇರುವ 'ಓದಿದ', ಮತ್ತೊಮ್ಮೆ ಓದಲು ಬೇಕಿಲ್ಲದ ಪುಸ್ತಕಗಳನ್ನೂ ಬೇರೆಯವರಿಗೆ ಕೊಡುವುದಿರಲಿ, ಅವರೊಂದಿಗೆ share ಕೂಡ ಮಾಡಿಕೊಳ್ಳೋದಿಲ್ಲ. ಪ್ರತಿಯೊಬ್ಬರೂ ಎಲ್ಲವನ್ನೂ ಕೊಳ್ಳುವುದು ಪ್ರಕಾಶಕರಿಗೆ ಒಳ್ಳೆಯದೆ, ಆದರೆ ನೀವು ಈ ಲೇಖನಗಳಲ್ಲಿ ಹೇಳುತ್ತಿರುವಂತೆ ಅದು ಮನೆಯಲ್ಲೊಂದು 'ಪುಸ್ತಕರಾಶಿ'ಗೆ ಎಡೆ ಮಾಡಿಕೊಡುತ್ತದೆ. ನನ್ನ ಮಟ್ಟಿಗೆ, ಪುಸ್ತಕವನ್ನು ಕೊಳ್ಳುವುದು ಮತ್ತು ಬೇರೆಯವರಿಂದ 'ಓದಿದ' ಪುಸ್ತಕಗಳನ್ನು ಪಡೆಯುವುದು - ಇವೆರಡನ್ನೂ ಜೊತೆಜೊತೆಯಾಗಿ ರೂಢಿಸಿಕೊಂಡು ಒಂದು ಬ್ಯಾಲೆನ್ಸ್ ಸ್ಟ್ರೈಕ್ ಮಾಡಬೇಕು.

olnswamy wrote:

೭. ಸಾಹಿತ್ಯ, ಕತೆ, ಕಾದಂಬರಿ, ಕವಿತೆ ಇತ್ಯಾದಿಗಳು ಕಾಲಾತೀತವೆಂದರೂ ಅವುಗಳ ಮೂಲಕ ಭಾವವನ್ನು ಪರಿಷ್ಕರಿಸಿಕೊಳ್ಳುವುದು ಸಾಧ್ಯವಿದ್ದರೂ, ಅವುಗಳ ಭಾವ ಒಮ್ಮೆ ನಮ್ಮ ಮನಸ್ಸಿಗೆ ಇಳಿದಮೇಲೆ ಅಚ್ಚಾದ ಹಾಳೆಗಳನ್ನು ಇಟ್ಟುಕೊಳ್ಳುವ ಅಗತ್ಯವೇನು?

ನನಗನ್ನಿಸಿದಂತೆ ಭಾವ ಅಚ್ಚಾದರೂ, ಚಿತ್ರಣ ಬಹುಶಃ ಮೂಲರೂಪದಲ್ಲಿ, ಶಬ್ಧರೂಪದಲ್ಲಿ ಅಚ್ಚಾಗದು. ಕೆಲವು ಕವನಗಳಿಗೆ, ಕೃತಿಯ ಕೆಲವು ಭಾಗಗಳಿಗೆ ಅದು ಆದೀತು, ಆದರೆ context enjoy ಮಾಡಬೇಕೆನಿಸಿದಾಗ ಮತ್ತೊಮ್ಮೆ ಆ ಹಾಳೆಗೇ, ಆ ಪುಸ್ತಕಕ್ಕೇ ಮೊರೆ ಹೋಗಬೇಕಾಗಬರಬಹುದು.

olnswamy wrote:

೮. ಹಾಗೆ ಓದಿ, ವಿಚಾರವನ್ನು ಕೇಳಿ ಬದಲಾಗುವುದಕ್ಕಿಂತ ನಮಗೆ ಬದುಕಿನಿಂದ ದೊರೆಯುವ ಅನುಭವಗಳಿಂದ ಬದಲಾಗುತ್ತೆವೆ ಅಷ್ಟೆ ಅಲ್ಲವೆ.

ಓದುವುದರಿಂದ ವಿಚಾರಗಳನ್ನು ಕಲೆಯುವುದಕ್ಕಿಂತ "ಹೀಗೂ ಉಂಟು" ಎನ್ನುವುದನ್ನು ಅರಿಯುತ್ತೇವಲ್ಲವೆ? ಅನುಭವಗಳಿಂದ ಹೆಚ್ಚು ಕಲಿಕೆ ಎಂಬುದು ನಿಜವೆ, ಆದರೆ ಪುಸ್ತಕಗಳಿಲ್ಲದ ಕಲಿಕೆ ಬಾವಿಯಲ್ಲಿ ಕೂಡಿ ಹಾಕಿದ ಕಪ್ಪೆಯ ಅನುಭವದಂತೆ!
ಚಿಂತನೆಯನ್ನು ಪರಿಶೀಲಿಸಿ ಮರುಚಿಂತನೆ ಮಾಡುವ ಗುಣ ಬರುವುದು ಓದಿನಿಂದಲೇ ಅಲ್ವೆ? ಹಾಗೆ ಮಾಡುವಾಗ ಈ ಹಿಂದೆ ಆಲೋಚಿಸಗೋಜಿಗೂ ಹೋಗದ ಹಲವು ವಿಚಾರಗಳು ಮನದ ಮುಂದೆ ಸುಳಿದು ಚಿಂತನೆಯನ್ನು broaden ಮಾಡುತ್ತದಲ್ಲವೆ?

olnswamy wrote:

ಆದ್ದರಿಂದಲೇ ಸಮಾಜವನ್ನು ಬದಲಾಯಿಸಲು ಬರೆಯುತ್ತೇನೆ, ಓದಿನಿಂದ ಜನ ಸಂಪನ್ನರಾಗುತ್ತಾರೆ ಅನ್ನುವುದೆಲ್ಲ ಸುಳ್ಳು ಭ್ರಮೆಗಳು.
ಜಗತ್ತಿನ ಕೆಡುಕಿಗೆ ಓದಿ ಬುದ್ಧಿವಂತರಾದವರೇ ಹೆಚ್ಚು ಕಾರಣ ಅಲ್ಲವೆ?

ಕಲಿಕೆಯಿಂದ, ವಿಜ್ಞಾನದಿಂದ, ಕೊನೆಗೆ ಚಿಂತನೆಯಿಂದ ಒಳಿತು - ಕೆಡುಕು ಜೊತೆಜೊತೆಯಾಗಿ ಬರುವಂತದ್ದಲ್ವೆ?

olnswamy wrote:

ಭ್ರಷ್ಟತನ, ಮೋಸ ಇವೆಲ್ಲ ಕೇವಲ ಓದಿನಿಂದ, ಮಾತಿನಿಂದ ಬದಲಾಗುವಂತಿದ್ದರೆ ಜಗತ್ತು ಹೀಗೆ ಯಾಕೆ ಇರುತ್ತಿತ್ತು? ಓದಿನಿಂದ ಬದಲಾಗದ ನಾವು ಪುಸ್ತಕ ಕೂಡಿಟ್ಟುಕೊಂಡು ಬದಲಾಗುತ್ತೇವಾ?

ಓದಿನಿಂದ ಜಗತ್ತು ಬದಲಾಗುತ್ತದೆ ಎನ್ನುವ notion ತಪ್ಪು ಎಂದು ನನ್ನ ಅನಿಸಿಕೆ. ಯಾರನ್ನೂ ಯಾರೂ ಬಹುಶಃ ಬದಲಾಯಿಸಲು ಸಾಧ್ಯವಿಲ್ಲ. ಹೀಗಿರುವಾಗ ಬರಿಯ ಓದು ಯಾರನ್ನಾದರೂ ಬದಲಾಯಿಸಬಹುದು ಎಂಬುದು ನಂಬಲು ಕಷ್ಟಕರವಾದ ವಿಷಯ. ಯಾರಲ್ಲಾದರೂ ಬದಲಾವಣೆ ಆಗಬೇಕಿದ್ದರೆ ಅದು ಅವರಿಂದಲೇ ಆಗಬೇಕು. ಪುಸ್ತಕಗಳು, ಮಾತುಗಳು ಮತ್ತಿನ್ನೆಲ್ಲವೂ ಬರಿಯ influence ಮಾತ್ರಕ್ಕಷ್ಟೆ. ಯಾವ ರೀತಿಯ influence ಆಗುತ್ತದೆಂಬುದೂ ಪ್ರತಿಯೊಬ್ಬರ ಟೆಂಪರ್ಮೆಂಟ್ ಹಾಗೂ ಪರ್ಸನಾಲಿಟಿಯ ಮೇಲೆ ಅವಲಂಭಿಸಿರುತ್ತೆ.

- h.p.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪುಸ್ತಕಗಳನ್ನು ಓದುವ/ ಇಟ್ಟುಕೊಳ್ಳುವ ಕುರಿತು
  • ಪುಸ್ತಕಗಳನ್ನು ಯಾಕೆ ಇಟ್ಟುಕೊಳ್ಳಬೇಕು?
  • ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ
  • ಪುಸ್ತಕ ಸಂತೆ
  • ಕೆಲವು ಅಮೂಲ್ಯ ಪುಸ್ತಕಗಳು
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಯಾರ ಮುಡಿಗೆ ಸೌಂದರ್ಯ ಕಿರೀಟ...
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ‘ಇರುವೆ’ (ನೀ ಎಲ್ಲೆಲ್ಲೂ ಇರುವೆ)ಗಳು ಅಂತರ್ಜಲ ಮಟ್ಟ ಹೆಚ್ಚಿಸುವ ‘ಬ್ಯಾಂಕರ್’ಗಳು!
  • ‘ಸಂತೆ’ ಎಂಬ ವ್ಯಾವಹಾರಿಕ ಚೌಕಾಶಿಯ ‘ನಾಟಕ’!

ಇತ್ತೀಚಿನ ಪ್ರತಿಕ್ರಿಯೆಗಳು

  • sathishcv
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 8:40pm
  • ಮನಹ್ಪಠಲ
    ಉ: ಎಂ ಪಿ ಶಂಕರ್ - ಟಾಟಾ
    July 20, 2008 - 5:47pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:45pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:32pm
  • rasheedgm
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 4:49pm
  • anil.ramesh
    ಉ: ಧಾರವಾಡದ ನವಿಲೂರ ಕೆರೆಯಲ್ಲಿ ಆಹಾರ ಹೆಕ್ಕುತ್ತಿರುವ ಶಾಪಗ್ರಸ್ಥ ! ಟಿಟ್ಟಿಭ ಹಕ್ಕಿ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
    July 20, 2008 - 11:49am
  • ASHOKKUMAR
    ಉ: ನನ್ನಜ್ಜನ ಬೆಚ್ಚಗಿನ ನೆನಪುಗಳು
    July 20, 2008 - 11:32am
  • Ananth.R
    ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
    July 20, 2008 - 11:22am
  • ರೇಖಾ
    ಉ: ಒ೦ದು ಬೆಚ್ಚನೆಯ ನೆನಪು..
    July 20, 2008 - 9:45am
  • Jayalaxmi.Patil
    ಉ: ಕತ್ತಲೆಯಿಂದ ಹೊರ ಬಂದ ಖಾದಿ
    July 19, 2008 - 11:01pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 30 ಅತಿಥಿಗಳು ಆನ್ಲೈನ್ ಇರುವರು.

ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator