ನಾ ಕಂಡ ಚೆನ್ನೈ
ಕುಡಿಯಲು ಸಿಗಲೊಲ್ಲದು ಹನಿ ಶುದ್ಧ ನೀರು
ಬೀದಿಬೀದಿಯಲೂ ಕಾಣಬರುವುದು ಬೀರು ಬಾರು
ಈಗಿಲ್ಲಿ ನಡೆದಿಹುದು ಅಮ್ಮನವರ ದರಬಾರು
ಕೆಲವೊಮ್ಮೆ ಸಾಗುವುದು ಅಣ್ಣನವರ ಕಾರುಬಾರು
ತಂಬಿ ತಂಗಚ್ಚಿಗಳು ಮತ ಯಾಚನೆಗಾಗಿಹ ಗೊಂಬೆಗಳು
ನನ್ನ ಕಣ್ಣಿಗೆ ಮಾತ್ರ ಅವರು ಉಸಿರಾಡುತಿಹ ಜೀವಿಗಳು
ಕೊಚ್ಚೆಯಲೂ ರಚ್ಚೆ ಹಿಡಿಯದ ಹಸುಗೂಸುಗಳು
ಮತ ಚಲಾಯಿಸದೇ ಸೂತ್ರ ಹಿಡಿವ ಶ್ರೀಮಂತ ಜಿಗಣೆಗಳು
ಸಣ್ಣ ಮಳೆ ಬರಲೂ ಈ ಊರಾಗುವುದೊಂದು
ದೊಡ್ಡ ಕೊಚ್ಚೆ ಗುಂಡಿ
ಸುಭಿಕ್ಷದಲಿ ಭೂಗರ್ಭ ಸೀಳಿ ಭೋರ್ಗರೆವುದು
ದುರ್ನಾತದ ಮಲನೀರೆಂಬ ಪ್ರಚಂಡಿ
ತಾನೇನು ಕಡಿಮೆ ಇಲ್ಲವೆಂದು ಎತ್ತಿ ಬಿಸಾಕುವುದು
ಸತ್ತ ಜಲಚರಗಳ ಆ ಸಮುದ್ರ ದೇವತೆ
ಇವೆಲ್ಲದರ ಗೊಡವೆ ಇಲ್ಲದ್ದೆ ಸುಖಿಸುವರು
ತಂಬಿ ತಂಗಚ್ಚಿಗಳು ನಿರ್ಲಿಪ್ತರಂತೆ
ಕೆರೆ ಕಟ್ಟೆ ಒಡೆಯೆ ಊರೊಳಗೆ ಹರಿ ಬಿಟ್ಟರು
ನೀರೊಂದಿಗೆ ಶತಮಾನದ ಗಲೀಜು
ಊರ ತುಂಬಾ ಎಲ್ಲೆಲ್ಲಿ ನೋಡಲೂ ಕೊಳಚೇ ನೀರು
ಆದರೂ ಕುಡಿಯಲು ಸಿಗಲೊಲ್ಲದು ಹನಿ ಶುದ್ಧ ನೀರು

- Login or register to post comments
- 613 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಚೆನ್ನೈನಲ್ಲೂ ಬಾರುಗಳೇ.
ಅಯ್ಯೋ, ಶ್ರೀನಿವಾಸರವರೇ, ನಾನು ಬರೀ ನಮ್ಮ ಬೆಂದಕಾಳೂರಿನಲ್ಲಿ ಮಾತ್ರ ಎಲ್ಲೆಂದರಲ್ಲಿ ಬಾರುಗಳು ಎಂದು ತಿಳಿದಿದ್ದೆ.
ಎಲ್ಲ ಊರಲ್ಲೂ ಹೊಲಗೇರಿ
ನಮ್ಮೂರೇ ಯಾಕೆ, ಎಲ್ಲ ಊರುಗಳಲ್ಲೂ ಹೊಲಗೇರಿಗಳಿವೆ. ಬೆಂಗಳೂರಿನಲ್ಲಿ ಬಾರಿನ ಬಾಗಿಲು ಮುಚ್ಚಿದ್ದರೆ ಚೆನ್ನೈನಲ್ಲಿ ಬಾಗಿಲೇ ಇಲ್ಲದ ಛಾವಣಿ ಇರದ ಬಾರುಗಳು. ಇನ್ನು ಮುಂಬೈನಲ್ಲಿ ಸಾರ್ವತ್ರಿಕ ಬಾರುಗಳು.
ನಮ್ಮೂರೇ ಚೆನ್ನಾ ನಮ್ಮವರೇ ಚೆನ್ನ - ಅಂತೀರಾ?
ವಂದನೆಗಳೊಂದಿಗೆ
---
ತವಿಶ್ರೀನಿವಾಸ
ಹೌದು. ಇಗೋ ಇಲ್ಲಿದೆ, ಆ ಚರಣ.
ಈ ದೇಶ ಚೆನ್ನ, ಈ ಮಣ್ಣು ಚಿನ್ನ, ಇನ್ನೆಲ್ಲು ನಾ ಕಾಣೆನಲ್ಲಾ,
ಇಂಥ ಅಂದ, ಇಂಥ ಚೆಂದ, ನಮ್ಮ ನಾಡಿಗೆ ಸಾಟೀ ಇಲ್ಲ.
ಈ ದೇಶ ಚೆನ್ನ, ಈ ಮಣ್ಣು ಚಿನ್ನಾ..ಆಆಆಆಆಆಆ