Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

"ಲವ್" / ಹೇಟ್ ಪದದ ಚರಿತ್ರೆ

February 27, 2008 - 10:43pm — muralihr

        ನಿನ್ನೆ ದೀಪಿಕಾ ಪಡುಕೋಣೆ ತನ್ನ ಪ್ರಿಯತಮನಿಗೆ "I love u " ಅ೦ದದ್ದು ಇ೦ದಿನ ಸುದ್ದಿ.
ಇ೦ಗ್ಲೀಷ ವ್ಯಾಪಾರಕ್ಕೆ ಮತ್ತು ರಾಜಕೀಯಕ್ಕೆ + ತ೦ತ್ರಜ್ಞಾನಕ್ಕೆ ಹೇಳಿ ಮಾಡಿಸಿರುವ ಭಾಷೆ.
ಹೀಗಿರ ಬೇಕಾದರೆ ಲವ್ ಪದ ಆ ಭಾಷೆಯಲ್ಲಿ ಹೇಗೆ ಸೇರ್ತು ಅ೦ತಾ ತಿಳ್ಕೋ ಬೇಕಾದರೆ ಮು೦ದೆ ಓದಿ.
ಹಾಗೇ ನೋಡಿದರೆ "ಲವ್" ಎನ್ನುವ ಪದ ಇ೦ಗ್ಲೀಷ್ ಗೆ ಹೋಗಿದ್ದು ನಮ್ಮ ಕನ್ನಡದಿ೦ದಾ .

        "ಪ್ರೀತಿ ಪ್ರೇಮ" ಒಲವಿನ ಬಗ್ಗೆ ಜ್ಞಾನವೇ ಇಲ್ಲದಿರುವ ಇ೦ಗ್ಲೀಷ್ ಮ೦ದಿ , ಕನ್ನಡ ನಾಡಿಗೆ ಬ೦ದು .."ಒಲವು ಒಲವು "
ಎ೦ಬ ಪದವನ್ನು ಎಲ್ಲರ ಬಾಯಲ್ಲಿ ಕೇಳಿ ಒಲವು ಅ೦ದರೆ ಏನು ? ಅ೦ತಾ ಕೇಳಿದರು.
ನಮ್ಮ ಜನ ಅದು ಬಾಯಲ್ಲಿ ಹೇಳೋದು ಅಲ್ಲಾ, ಅನುಭವಿಸೇ ತೀರಬೇಕು ಅ೦ದರು.
ಆ ಮುಠಾಳರು ಪದವನ್ನೇ ಪದಾರ್ಥ ಅ೦ದ್ಕೊ೦ಡು "ಓ ಲವ್", "ಓ ಲವ್", "ಓ ಲವ್" ಅ೦ತಾ ಲವ್ ಪದವನ್ನು
ಬಳಸ್ತಾಯಿದ್ದರು. ಅವರು ಭಾರತದಿ೦ದಾ ಮೆಣಸು,ಜೀರಿಗೆ ಕಳ್ಳತನ ಮಾಡಿದಾಗ ಜೊತೆಯಲ್ಲಿ "Oh Love" ಎ೦ಬ ಪದವನ್ನು ಇ೦ಗ್ಲೇ೦ಡ್ ಗೆ ಕಳ್ಳತನದಿ೦ದಾ ಕೊ೦ಡೋಯ್ದರು. ಅಲ್ಲಿ೦ದಾ ಅದು ಬೇರೆ ಎಲ್ಲಾ ಕಡೆ ಹರಡಿ ಕೊನೆಗೆ ನಮ್ಮ ಚಲನ ಚಿತ್ರದ ಹಿರೋ ಹಿರೋಯಿನ್ ಬಾಯಿಗಳಲ್ಲಿ ಹಾಗೂ ಒಲವಿನ ಬಗ್ಗೆ ಹಾಡಿ ತಿಳುಸ್ತೀನಿ ಅ೦ತಾ ಅನ್ನೋ ಗಾಯಕಿಯರ ಕ೦ಠದಲ್ಲಿ "ಲವ್" ಆಗಿ ಸ್ಪೋಟಗೊ೦ಡಿತು.

       ಈಗ ಮತ್ತೊ೦ದು ಪ್ರಶ್ನೆ . ನಮ್ಮ್ ಸಿನಿಮಾಗಳಲ್ಲಿ ಹಿರೋಯಿನ್ ಗಳು
ಹೀರೋಗಳ ಮೇಲೆ ಕೋಪ ಮಾಡ್ಕೊ೦ಡು , "I hate you " ಎ೦ದಾಗ ಈ "ಹೇಟ್ " ಪದ ಕೂಡ ಕನ್ನಡದಿ೦ದಾ ಇ೦ಗ್ಲೀಷ್ ನವರು ಎತ್ಕೊ೦ಡ್ರಾ ,
ಅ೦ತಾ ಕೇಳ್ತಿರೋ ? ಇಲ್ಲವೇ ಇಲ್ಲಾ. "ಹೇಟ್ " ಪದ ಹ್ಯಾಟ್ ಪದದೊಡನೆ ಹುಟ್ಟಿದ್ದು .ಎರಡೂ ಒಟ್ಟಿಗೆ
ಹುಟ್ಟಿ ಪಾಶ್ಚಾತ್ಯ ಲೋಕದಲ್ಲಿ "ಹ್ಯಾಟ್" ತಲೆಗೆ ಆಭರಣವಾಗಿದ್ದರೆ, ಐವತ್ತು ವರ್ಷದ ಹಿ೦ದೆ "ಹೇಟ್" ಪದದಿ೦ದಾ ಇ೦ಗ್ಲೇ೦ಡ್
ರಣವಾಗಿತ್ತು.

      ನಮ್ಮ ಕನ್ನಡದಲ್ಲಿ "ವೈರ", "ಶತ್ರು " ಪದಗಳು ಇಲ್ವೇ ಇಲ್ಲಾ ..ಇವೆಲ್ಲಾ ಸ೦ಸ್ಕೃತ ಪದಗಳು ಅನ್ಸತ್ತೆ .
ತಿಳಿದವರು (ಮಹೇಶನ ಗ್ಯಾ೦ಗ್ ನವರು) "ಹೇಟ್ " ಪದಕ್ಕೆ ದೇಶಿ ಪದ ವಿದ್ದರೆ ತಿಳಿಸಬೇಕು.

  • ಜನಪದ ಸಾಹಿತ್ಯ
Ornamental seperator
  • Login or register to post comments
  • 418 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 28, 2008 - 1:18am — hamsanandi

ಉ: "ಲವ್" / ಹೇಟ್ ಪದದ ಚರಿತ್ರೆ

hamsanandi's picture

ಯಾಕಿಲ್ಲ?

Hate = ಹಗೆ - ನನಗೆ ತಿಳಿದಂತೆ ಇದು ಕ್ರಿಯಾಪದ ಮತ್ತು ವಿಶೇಷಣ ಎರಡಕ್ಕೂ ಆಗುವ ಪದ (ವೈರ, ವೈರಿ ಎರಡಕ್ಕೂ ಆಗುವುದು)

ಪಗೆ, ಹಗೆ ಎರಡೂ ಪ್ರಯೋಗಗಳನ್ನು ನೋಡಬಹುದು.

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
February 28, 2008 - 11:20am — mahesha

ಉ: "ಲವ್" / ಹೇಟ್ ಪದದ ಚರಿತ್ರೆ

mahesha's picture

ಹಗೆ ಅಂದ್ರೆ enemy..

ಪಗೆ

ಆಪ್ತಮಿತ್ರದಲ್ಲಿ ಗಂಗೆಗೆ ದೆವ್ವ ಮೆಟ್ಟಿಕೊಂಡಾಗ, ತೆಲುಗಲ್ಲಿ ಆಯಮ್ಮ ’ನಾ ಪಗಾ ತರ್ಚುಕೋವಾಲಿ’ ಅಂತ ಅರಚಿಕೊಳ್ಳೋವಾಗ ಬರುವ ’ಪಗಾ/ಪಗೆ’ ಇದೆ

’ನಾನು ಹಗೆ ತೀರಿಸಿಕೋಬೇಕು’ ಅಂತ!

ಇಲ್ಲಿ ಹಗೆ adverb ಅಲ್ಲ.. ನಾನು ಹಗೆಯನ್ನು ತೀರಿಸಿಕೊಬೇಕು.. ಹಗೆ ಅನ್ನೋದು ನವ್ನು.,!

ಹಗೆಯುವುದು, ಹಗೆದು ಅಂತ ಕ್ರಿಯಾ ರೂಪಗಳು ಇರಬೇಕು...!

  • Login or register to post comments
  • link
  • Email this ಪ್ರತಿಕ್ರಿಯೆ
February 28, 2008 - 11:17am — mahesha

ಉ: "ಲವ್" / ಹೇಟ್ ಪದದ ಚರಿತ್ರೆ

mahesha's picture

"(ಮಹೇಶನ ಗ್ಯಾ೦ಗ್ ನವರು) "ಹೇಟ್ " ಪದಕ್ಕೆ ದೇಶಿ ಪದ ವಿದ್ದರೆ ತಿಳಿಸಬೇಕು."

.. ಇವರ್ದು ವಸಿ ಜಾಸ್ತಿ ಆಯ್ತಲ್ವ? Smiling

ಲವ್, ಒಲವಿಂದ ಹೋಗಿರೋದ್ರಲ್ಲಿ ಎಳ್ಳಶ್ಟು ಐಬಿಲ್ಲ. Smiling

Hateಗೆ ದ್ರಾವಿಡ ಒರೆಗಳ ಪಟ್ಟಿ.
http://dsal.uchicago.edu/cgi-bin/philologic/search3advanced?dbname=burro...

೧ ಏವ/ēva disgust, dislike, hatred; ugliness;
೨ ಱೋಯು ṟōyu to hate, dislike, ( ಱೋಸು ಇದರ ನೆಂಟ್ರು Smiling )
೩ ಪೇಸು/ಹೇಸು pēsu, hēsu to feel aversion
೪ ಪಗೆ/page, ಹಗೆ hage hatred, enmity, enemy; ಪಗೆಕಾಱ/pagekāṟa enemy;
೫ ಕುಱುಪು/kaṟupu, ಕುಱಹು/kaṟuhu envy;

ಸುಮ್ನೆ!! ತಲೆ ಬುಡು ಇಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
February 28, 2008 - 11:21am — muralihr

ಉ: "ಲವ್" / ಹೇಟ್ ಪದದ ಚರಿತ್ರೆ

muralihr's picture

ಧನ್ಯನಾದೆ !

  • Login or register to post comments
  • link
  • Email this ಪ್ರತಿಕ್ರಿಯೆ
February 28, 2008 - 11:42am — Sunil Jayaprakash

ಉ: "ಲವ್" / ಹೇಟ್ ಪದದ ಚರಿತ್ರೆ

Sunil Jayaprakash's picture

ರಮಣ ಮಹರ್ಷಿಗಳು ಧನ್ಯರಾದರು, ಉಘೇ ಉಘೇ.

  • Login or register to post comments
  • link
  • Email this ಪ್ರತಿಕ್ರಿಯೆ
February 28, 2008 - 11:49am — mahesha

ಉ: "ಲವ್" / ಹೇಟ್ ಪದದ ಚರಿತ್ರೆ

mahesha's picture

ಧನ್ಯನು ಆಗೋದು ಅಂದ್ರೇನು?

  • Login or register to post comments
  • link
  • Email this ಪ್ರತಿಕ್ರಿಯೆ
February 28, 2008 - 11:26am — muralihr

ಉ: "ಲವ್" / ಹೇಟ್ ಪದದ ಚರಿತ್ರೆ

muralihr's picture

ರೀ ಈ ಪದಗಳ್ಯಾವುದು ಬಳಕೆಯಲ್ಲಿ ಇಲ್ಲಾ ಬಿಡ್ರೀ ...ಹಗೆ ಸ್ವಲ್ಪ ಬಳಕೆಯಲ್ಲಿರಬಹುದು ...

  • Login or register to post comments
  • link
  • Email this ಪ್ರತಿಕ್ರಿಯೆ
February 28, 2008 - 11:44am — mahesha

ಉ: "ಲವ್" / ಹೇಟ್ ಪದದ ಚರಿತ್ರೆ

mahesha's picture

ಎಪ್ಪಾ ಯಪ್ಪೋ...

ಈ ಜಲುಮದಾಗೇ ನೀವು ರೋಸು(ಯು), ಕುರುಪು, ಹೇಸು(ಗೆ) ಕೇಳಿಲ್ವ?

ರೀ..

ನಂಗೆ ರೋಸೋಗಿದೆ ( ಗಾಳಿಪಟದಲ್ಲಿ ಬರ್ತದೆ )
ಕುರುಪು ಹಾಕ್ತಿನ್ ನೋಡು ( ಯಾವುದಾದ್ರು ಲಾಂಗು-ಮಚ್ಚು ಸಿನಿಮ ನೋಡಿ )

ತೂ ಹೇಸಿಗೆ ! ( ಚಿಕ್ಕಮಗಳೂರೋರೋ, ಶಿವಮಗ್ಗದೋರ್ನೋ ಕೇಳೀ )

  • Login or register to post comments
  • link
  • Email this ಪ್ರತಿಕ್ರಿಯೆ
February 28, 2008 - 12:18pm — ವೈಭವ

ಉ: "ಲವ್" / ಹೇಟ್ ಪದದ ಚರಿತ್ರೆ

ವೈಭವ's picture

ಹೇಸು ಬಳಕೆಯಲ್ಲಿದೆ. ಮುರಳಿಯವರು ವಸಿ ಹಳ್ಳಿಗಳ್ ಸುತ್ತುದ್ರೆ ಗೊತ್ತಾಗುತ್ತೆ. ಸುಮ್ನೆ ಬೆಂಗಳೂರಲ್ಲಿ ಕೂತ್ಕಂಡ್ ಇವ್ಯಾವದು ಬಳಕೆಯಲ್ಲಿಲ್ಲ ಅಂತ ಹೇಳುವುದು ಸುಲಬ.

ಹೇಸುವಿನ ಬಳಕೆ
೧) ಅವನಿಗೆ ಸಿಟ್ಟು ಬಂದ್ರೆ ಏನ್ ಮಾಡಕ್ಕು ಹೇಸಲ್ಲ ( ಇಲ್ಲಿ ಹೇಸಲ್ಲ= ಹಿಂಜರಿಯಲ್ಲ ಅಂತಾನೂ ಆಗುತ್ತ)
೨) ಮಗು ಪಾಪ ಹೇಸಿಗೆ(ಹೇಸು+ಇಗೆ) ಮಾಡಿಕೊಂಡಿದೆ .....( ಇಲ್ಲಿ ಹೇಸಿಗೆ ಅಂದ್ರೆ ಕೊಳಕು ಅಸಯ್ಯ, dis-likeable ಅಂತ ಅರಿಗ ಆಗುತ್ತೆ)
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
February 28, 2008 - 12:25pm — mahesha

ಉ: "ಲವ್" / ಹೇಟ್ ಪದದ ಚರಿತ್ರೆ

mahesha's picture

ಅವಂಗೆ ಸಿಟ್ ಬಂದ್ರೆ, ಏನ್ ಮಾಡಕ್ಕೂ ಹೇಸಲ್ಲ

ಹೇಸಲ್ಲ ಅಂದ್ರೆ ಅವನು ಏನು ಮಾಡೋದಕ್ಕೆ hate ಮಾಡಲ್ಲ = ಅವನು ಏನು ಮಾಡೋದಕ್ಕೂ ಇರುಸು-ಮುರುಸು ತೋರಿಸಲ್ಲ = ಅವನು ಏನ್ ಬೇಕಾದ್ರು ಸಲೀಸಾಗಿ ಮಾಡ್ತಾನೆ.

ಹಿಂಜರಿಯಲ್ಲ ಅಂತ ಹೇಳಬೋದು..!!

ಆದ್ರೆ ನಮ್ಮ ಕನ್ನಡ ಚೆಲುವು ನೋಡಿ.. ’I don't hate to do anything for you' = ’ನಾನು ನಿನಗಾಗಿ ಏನ್ ಮಾಡಕ್ಕೂ ಹೇಸಲ್ಲ’!

  • Login or register to post comments
  • link
  • Email this ಪ್ರತಿಕ್ರಿಯೆ
February 28, 2008 - 12:50pm — ವೈಭವ

ಉ: "ಲವ್" / ಹೇಟ್ ಪದದ ಚರಿತ್ರೆ

ವೈಭವ's picture

ಮಾಯ್ಸ,
ಅರಿಗಳಂ ನಿಗ್ರಹಿಸೊ ವ್ಯಾಗ್ರನಿವನೊ ಉಗ್ರಪ್ರತಾಪಿ ಅಂತ ಬಬ್ರುವಾಹನ್ದಲ್ಲಿ ಬತ್ತದೆ.
ಇಲ್ಲಿ 'ಅರಿ' (ಶತ್ರು) ಕನ್ನಡದ್ದೆ ಅಲ್ವ?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
February 28, 2008 - 2:15pm — mahesha

ಉ: "ಲವ್" / ಹೇಟ್ ಪದದ ಚರಿತ್ರೆ

mahesha's picture

ಆ ಅರಿ ಕನ್ನಡದ್ದಲ್ಲ.. ಅರಿಷಡ್ವರ್ಗದ ಸಕ್ಕದ ಅರಿ

ಕನ್ನಡದಲ್ಲಿ ಅರಿ/ಅರೆ = ರುಬ್ಬು, ಅಱಿ = ತಿಳಿ

  • Login or register to post comments
  • link
  • Email this ಪ್ರತಿಕ್ರಿಯೆ
February 28, 2008 - 5:20pm — kpbolumbu

ಉ: "ಲವ್" / ಹೇಟ್ ಪದದ ಚರಿತ್ರೆ

kpbolumbu's picture

ಬಹುಶಃ ಯಶವಂತ ಸರದೇಶ್ಪಾಂಡೆಯವರಿಗೆ ಈ ವಿವರ ಗೊತ್ತಿದ್ದಿರಬೇಕು. ಮೊನ್ನೆ 'ಓ ಲವ್ವೇ ಜೀವನ ಸಾಕ್ಷಾತ್ಕಾರ' ಎನ್ನುತ್ತಿದ್ದರು.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
February 28, 2008 - 5:23pm — mahesha

ಉ: "ಲವ್" / ಹೇಟ್ ಪದದ ಚರಿತ್ರೆ

mahesha's picture

Smiling ಹಿ ಹಿ

ಸಕ್ಕತ್‌.. "ಓ ಲವ್ವೇ ಜೀವನ ಸಾಕ್ಶಾತ್‌-ಖಾರ" Smiling

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಕ್ತಾಯ
  • ನಾಳೆ ನೀವೂ ಮಾಯ.............
  • "ಮಗ"
  • ಇಸ್ತ್ರೀ
  • MNC ಅಲ್ಲಿ "ಕನ್ನಡ ಕಲಿ" ಕಾರ್ಯಕ್ರಮ .....
Syndicate content

ಲೇಖಕರು

muralihr's picture

ಪೂರ್ಣ ಹೆಸರು
muralihr

ಪರಿಚಯ

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು.
ಕೊಳಲು ಕಲಿತ್ತಾ ಇದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:00pm
  • harshab
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 1:59pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 1:51pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 1:29pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 12:29pm
  • nag4pl
    ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ
    May 16, 2008 - 12:26pm
  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ಹಣವೊಂದನ್ನು ಬಿಟ್ಟು ಬೇರೇನನ್ನೂ ಗಳಿಸದ ವ್ಯವಹಾರವು ಕಳಪೆ ವ್ಯವಹಾರ.

— ಹೆನ್ರಿ ಫೋರ್ಡ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator