ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಸುಖಾನುಭವ

December 11, 2005 - 4:45pm — tvsrinivas41

ಸುಖಾನುಭವ ಸಿಗುವುದೆಲ್ಲಿ?
ಸುಗ್ರಾಸ ಪಂಚಭಕ್ಷ್ಯ ಪರಮಾನ್ನ ಸೇವನೆಯಲ್ಲಿಯೇ?
ಗೀತ ನೃತ್ಯ ಮೋದ ಆನಂದದಲ್ಲಿಯೇ?
ಮೋಜು ಜೂಜು ವ್ಯರ್ಥ ವ್ಯಯದಲ್ಲಿಯೇ?

ನಾ ಕಾಣುವೆ ಸುಖಾನುಭವ ಹಸಿದ ಹೊಟ್ಟೆಯಲ್ಲಿ
ತೂಕಡಿಸುತಿಹ ಕಣ್ಣಲಿ, ಪಸೆ ಆರಿದ ಬಾಯಿಯಲಿ
ಚರಿತ್ರೆ ಸೇರಿದ ಅಪ್ಪ ಅಮ್ಮನ ನೆನಪಿನಲಿ
ಇನ್ನೂ ಕಾಣದ ಪರಮಾತ್ಮನ ಹುಡುಕುವಿಕೆಯಲಿ

ವಿಕೃತರು ಕಾಣುವರು ಇತರರ ನೋವಿನಲಿ ಸುಖ
ಕೆಲವರಿಗೆ ಇತರ ಸುಖ ನೀಡುವುದು ದು:ಖ
ಗೌತಮ ಹೇಳಿದ ಸುಖದ ಹಿಂದೆ ದು:ಖ
ಏನ ಪರಿಯದು ದು:ಖದ ನಂತರದ ಸುಖ

ಸುಖಾನುಭವ ಸ್ವಾದಾನುಭವದ ಪರಿ
ನೋಡುಗನ ಕಣ್ಣಿನೊಳಗಿಹ ಸಿರಿ
ಒಬ್ಬನ ಕುರೂಪಿ ಇನ್ನೊಬ್ಬಗೆ ಸ್ಫುರದ್ರೂಪಿ
ನಿಮ್ಮ ಮನದ ಪರಿ ಎಲ್ಲಿ ಇದೆ ಹೇಳಿ

ಇತರರ ನೋವಿನಲಿನ ನಲಿವೋ
ನಿಮ್ಮ ನೋವಿನಲಿ ನಲಿವೋ?

  • ಕಾವ್ಯ ಮತ್ತು ಕವನ
~.~
  • Login or register to post comments
  • 607 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 11, 2005 - 5:16pm — Sunil Jayaprakash

ರುಚಿ ರುಚಿ ಏನು ರುಚಿ

Sunil Jayaprakash's picture

ಸೊಗಸಾಗಿದೆ ನಿಮ್ಮ ಕಾವ್ಯ ಲಹರಿ.

ನನ್ನ ಮಟ್ಚಿಗೆ ಹೇಳುವುದಾದರೆ,

ನಾಟಕ ನೋಡುವುದರಲ್ಲಿ
ಕಾದಂಬರಿಯ ಸೆಳೆತದಲ್ಲಿ
ಕವನಗಳ ಕನವರಿಕೆಯಲ್ಲಿ
ಮಧುರಗೀತೆಗಳ ಗುಂಗಿನಲ್ಲಿ

ಹಾಗು,
ನಿಮ್ಮ ಕವನವನ್ನ ಆಸ್ವಾದಿಸುವುದರಲ್ಲಿ,
ಸಂಪದದಲ್ಲಿ ಬ್ಲಾಗಿಸುವುದರಲ್ಲಿ,

ಒಂದು ಮಾತು. ನಿಮ್ಮ ಸುಖಾನುಭವದ ಗುಟ್ಚು ಖಂಡಿತ ನಿಜ,

tvsrinivas41 wrote:
ಸುಖಾನುಭವ ಹಸಿದ ಹೊಟ್ಟೆಯಲ್ಲಿ

ಹಿಂದೆ, ನಾನು ಓದಿದ "ಶಕ್ತಶಾಲೀ ವ್ಯಕ್ತಿತ್ವ ನಿರ್ಮಾಣ"ದ ಒಂದು ಸಾಲು ಙ್ಣಾಪಕಕ್ಕೆ ಬಂತು.
ಅದೇನೆಂದರೆ,
ರುಚಿ ರುಚಿ ಏನು ರುಚಿ?
ರುಚಿ ರುಚಿ ಹಸಿವೇ ರುಚಿ.

 ನಿಮಗೆ ಯಾವಾಗ ಸಿಕ್ಕಿತ್ತು ಇದರ ಆತಿಥ್ಯ. ಅದೇ ಈ ಕವನದ ಸ್ಫೂರ್ತಿಯೇ.?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 11, 2005 - 7:37pm — tvsrinivas41

ಹೌದು

tvsrinivas41's picture

ಹಸಿವೇ ಜೀವನದ ಸರಿದಾರಿಯನ್ನು ತೋರುವುದು. ಇದು ನನ್ನ ಅನುಭವ. ಹೊಟ್ಟೆ ತುಂಬಾ ತಿನ್ನುವ ಕಾಲ ಬಂದಿದ್ದರೂ ನಾನು ಮಾತ್ರ ತಿನ್ನೆನು. ಹಾಗೆ ತಿಂದಾಗ ಇಹಲೋಕ ಮರೆಯುವ ಸಾಧ್ಯತೆ ಜಾಸ್ತಿ ಎಂಬ ಹೆದರಿಕೆ. ಕೈಲಿದ್ದಾಗ ಇರದವರಿಗೆ ಕೊಟ್ಟಾಗ ಸಿಗುವ ತೃಪ್ತಿಯ ಮುಂದೆ ಬೇರಿನ್ನೇನು?

ನಿಮ್ಮ ಅನಿಸಿಕೆ ನನ್ನ ವಂದನೆಗಳು.

ವಂದನೆಗಳೊಂದಿಗೆ
---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 12, 2005 - 12:06am — hpn

;)

hpn's picture

ದೂರದ ಊರೊಂದರಲ್ಲಿ ಕುಳಿತು ಲ್ಯಾಪ್ ಟಾಪ್ ಹಿಡಿದು ನೆಟ್ ಬ್ರೌಸ್ ಮಾಡುವುದರಲ್ಲಿ Eye-wink

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ತೆರೆದ ಮನಸ್ಸು ಅಗತ್ಯ
  • ಜೀವನದ ಮರ್ಮ
  • ಕವನ ಕವಿತೆ ಬರೆಯಲು ಕಲಿಯಿರಿ - ಇನ್ನೊಂದು ಕಂತು
  • ವಿಜ್ಞಾನಿಗಳ ನುಡಿಮುತ್ತುಗಳು - ಬರ್ಟಂಡ್ ರಸೆಲ್ - ೨
  • ಅಶ್ವ-ಮೇಧ
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
  • ಶಾಸಕರ ರಾಜೀನಾಮೆ ರಾಜಕೀಯ
  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 35 ಅತಿಥಿಗಳು ಆನ್ಲೈನ್ ಇರುವರು.


ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator