ಶಿವರಾತ್ರಿ
ಇದೇ ತಿಂಗಳ ೫ - ೬ನೇ ದಿನಾಂಕಗಳಂದು ಬರುವ (ಪಾಲ್ಗುಣ ಚತುರ್ದಶಿ) ಶಿವರಾತ್ರಿ ನಮಗೆಲ್ಲಾ ಒಂದು ಪ್ರಮುಖ ಹಬ್ಬ. ಅಂದು ಶಿವನನ್ನು ಆರಾಧಿಸಿ ಪುಣ್ಯ ಸಂಪಾದನೆಯಲ್ಲಿ ಅತಿ ಹೆಚ್ಚಿನ ಗಳಿಕೆ ದೊರಕಿಸಿಕೊಳ್ಳುವ ಕಾತುರ, ಆತುರ ಭಕ್ತರೆಲ್ಲರಿಗೆ. ಶಿವದೇವಾಲಯಗಳಿಗೆ ಭಕ್ತರು ತಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ಹೊತ್ತು ಶಿವನ ಆರಾಧನೆಯನ್ನು ಮಾಡುವ ತವಕ.
ಈ ಸಂದರ್ಭದಲ್ಲಿ ಸಂಪದದ ಓದುಗರಿಗೆ ಕಳೆದ ವರ್ಷವಷ್ಟೇ ಜೀರ್ಣೋದ್ಧಾರಗೊಂಡ ಚಿಕ್ಕಮಗಳೂರು ಜಿಲ್ಲೆ/ತಾಲ್ಲೂಕಿನ ಲೆಖ್ಯಾ ಹೋಬಳಿ ಬೆಳವಾಡಿ ಗ್ರಾಮದಲ್ಲಿರುವ ಉದ್ಭವ ಕಲ್ಲೇಶ್ವರ ಸ್ವಾಮಿಯ ದರ್ಶನವನ್ನು ಮಾಡಿಸುವುದು ನನ್ನ ಆಸೆ. ನಮ್ಮ ಕುಟುಂಬವರ್ಗವೇ ಮುಂದಾಗಿ ನಿಂತು, ವೆಚ್ಚದ ಅತಿ ಹೆಚ್ಚು ಭಾಗವನ್ನು ಹೊತ್ತು, ಶೃಂಗೇರಿ ಶ್ರೀ ಶಂಕರಮಠ, ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರು, ಭಕ್ತರು ಹಾಗು ಆಸ್ತಿಕರೆಲ್ಲರ ಸಹಕಾರಗಳೊಂದಿಗೆ ಕೇವಲ ಒಂಭತ್ತು ತಿಂಗಳಿನಲ್ಲಿ ೧೨ನೇ ಶತಮಾನದ, ನೆಲ ಕಚ್ಚಿದ್ದ ದೇವಾಲಯವನ್ನು ಜೀರ್ಣೋದ್ಧಾರ ಕಾರ್ಯ ನಡೆಸಿ ೨೦-೦೧-೨೦೦೭ರಂದು ಸಾಂಗವಾಗಿ ನಡೆಸಲಾಯಿತು. ಮಹಿಮೆಯುಳ್ಳ ದೇವರೆನಿಸಿಕೊಂಡಿರುವ ಇಲ್ಲಿ ವರ್ಷಕ್ಕೊಂದುಬಾರಿ ಹಳ್ಳಿಗರೆಲ್ಲರೂ ಸೇರಿ "ಬಂಡಿಹಬ್ಬ"ವನ್ನು ಆಚರಿಸುತ್ತಾರೆ. ಶಿವರಾತ್ರಿಯಂದು ರಾತ್ರಿಯಿಡೀ ಜಾಗರಣೆ ಮಾಡಿ, ಶಿವನಿಗೆ ಅರ್ಚನೆಗಳನ್ನು ಸಲ್ಲಿಸಿ, ಜಾತಿ, ಮತ ಭೇದವಿಲ್ಲದೆ ಬೆರೆತು ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ. ಬನ್ನಿ, ನೀವೂ ಸ್ವಾಮಿಯ ದರ್ಶನ ಪಡೆದು ಧನ್ಯರಾಗಿರಿ. ಜೀರ್ಣೋದ್ಧಾರ ಕಾರ್ಯದ ಪ್ರಮುಖ ಘಟ್ಟಗಳಲ್ಲಿ ತೆಗೆದ ಚಿತ್ರಗಳನ್ನು ನೋಡಬೇಕೆನಿಸಿದರೆ, ಇಲ್ಲಿದೆ ಲಿಂಕ್:
http://www.flickr.com/photos/agilenag/
ನೋಡಿ, ಅನಂದಿಸಿ, ಸ್ವಾಮಿಯ ಕೃಪೆಗೆ ಪಾತ್ರರಾಗಿ, ನಿಮ್ಮ ಅನಿಸಿಕೆಗಳನ್ನು ಮರೆಯದೆ ನನ್ನ ಇ-ಮೇಲ್ ವಿಳಾಸಕ್ಕೆ ನೀಡಿರಿ.
ಎ.ವಿ. ನಾಗರಾಜು
ಅಗಿಲೆನಾಗ್[ಎಟ್]ರೀಡಿಫ್ ಮೇಲ್.ಕಾಂ

- Login or register to post comments
- 350 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಶಿವರಾತ್ರಿ
ಒಂದು ಗೊಂದಲ..
ತಿಂಗಳು ತಿಂಗಳೂ ಶಿವರಾತ್ರಿ.. ( ಎರಡನೇ ತ್ರಯೋದಶೀ ) ಬರುವುದು ಅಲ್ವ...
ಮಹಾಶಿವರಾತ್ರಿ ಮಾಘಶಿವರಾತ್ರಿ ಅಲ್ವ..!!
ಶಿವರಾತ್ರಿ ಆದ ೧೫ ದಿನಕ್ಕೆ ಉಗಾದಿಯಾ?
ಅಯ್ಯೋ.. ಗೊಂದಲ.!
ಉ: ಶಿವರಾತ್ರಿ
ಗೊಂದಲ ಹೋಯ್ತು...
ಶಾಲಿವಾಹನ ಶಕೆಯಂತೆ ಮಾಘ-ಶಿವರಾತ್ರಿ(ತ್ರಯೋದಶಿ)
ವಿಕ್ರಮ ಶಕೆಯಂತೆ ಪಾಲ್ಗುಣ..(ಚರ್ತುದಶೀ)
ಆದ್ರೆ ಕರ್ನಾಟಕದಲ್ಲಿ ಹೆಚ್ಚು ಮಂದಿ (ಚಾಂದ್ರಮಾನದವರು) ಶಾಲಿವಾಹನ ಶಕೆಯಂತೆ ಅಲ್ವ ನಡೆಯೋದು...!
ಸರಕಾರ ರಜೆ ಕೊಡೋದು ಮಾಘ-ಎರಡನೇ-ತ್ರಯೋದಶಿ ದಿನ.
ಉ: ಶಿವರಾತ್ರಿ
ಹೌದು ಸ್ವಾಮಿ, ಮಾಘ ಶಿವರಾತ್ರಿಯಂದೇ ಮಹಾಶಿವರಾತ್ರಿ ಹಬ್ಬ(೫/೬-೦೩-೨೦೦೮).
ಮಾಘ-ಪಾಲ್ಗುಣ = ಶಿಶಿರ ಋತು.
ಅನಂತರ ಬರುವುದು ಚೈತ್ರ-ವೈಶಾಖ = ವಸಂತ ಋತು. ಚೈತ್ರ ಮಾಸದ ಮೊದಲ ದಿನವೇ ಚಾಂದ್ರಮಾನ ಯುಗಾದಿ (೭-೪-೨೦೦೮).
ಕನ್ ಪ್ಯೂಸ್ ಮಾಡಿಕೊಳ್ಳಬೇಡಿ, ಕನ್ನಡ ಕ್ಯಾಲೆಂಡರ್ ನೋಡಿ, ಅಲ್ಲಿ ಬರೆದಿರುವಂತೆ ಮಾಡಿದರಾಯಿತಪ್ಪ.
ಮಹಾ ಶಿವರಾತ್ರಿ ಆಚರಿಸಲು ಬೆಳವಾಡಿಗೆ ಹೋಗಲು ಮರೆಯಬೇಡಿ