Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ವಚನ ಚಿಂತನ: ೫: ಮನಸ್ಸು ಘನ

August 1, 2005 - 6:04am — olnswamy

ಸಮುದ್ರ ಘನವೆಂಬೆನೆ ಧರೆಯ ಮೇಲಡಗಿತ್ತು ಧರೆ ಘನವೆಂಬೆನೆ ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು ನಾಗೇಂದ್ರನ ಘನವೆಂಬೆನೆ ಪಾರ್ವತಿಯ ಕಿರುಗುಣಿಕೆಯ ಮುದ್ರಿಕೆಯಾಯಿತ್ತು ಅಂತಹ ಪಾರ್ವತಿಯ ಘನವೆಂಬನೆ ಪರಮೇಶ್ವರನ ಅರ್ಧಾಂಗಿಯಾದಳು ಅಂತಹ ಪರಮೇಶ್ವರನ ಘನವೆಂಬೆನೆ ನಮ್ಮ ಕೂಡಲಸಂಗನ ಶರಣರ ಮನದ ಕೊನೆಯ ಮೊನೆಯ ಮೇಲಡಗಿದನು.

ಮನುಷ್ಯನ ಮನಸ್ಸನ್ನು ಕುರಿತು ವಚನಕಾರರು ಬಹಳಷ್ಟು ಹೇಳಿದ್ದಾರೆ. ಸಮುದ್ರ ದೊಡ್ಡದು. ಆದರೆ ಅದು ಭೂಮಿಯಲ್ಲಿ ಅಡಗಿದೆ. ಭೂಮಿ ದೊಡ್ಡದು. ಆದರೆ ಅದು, ಪುರಾಣಗಳು ಹೇಳುವಂತೆ, ಆದಿಶೇಷನ ತಲೆಯ ಮೇಲೆ ಅಡಗಿದೆ. ಭೂಮಿಯನ್ನು ಹೊತ್ತ ಆದಿಶೇಷ ದೊಡ್ಡವನು. ಆದರೆ ಅವನು ಪಾರ್ವತಿಯ ಕಿರು ಬೆರಳ ಉಂಗುರದಲ್ಲಿರುವ ಡಿಸೈನು ಅಷ್ಟೆ. ಪಾರ್ವತಿ ದೊಡ್ಡವಳು. ಆದರೆ ಅವಳು ಪರಮೇಶ್ವರನ ಅರ್ಧಾಂಗಿ, ಅರ್ಧ ಶರೀರ ಅಷ್ಟೆ. ಪರಮೇಶ್ವರ ಎಲ್ಲರಿಗಿಂತ, ಎಲ್ಲಕ್ಕಿಂತ ದೊಡ್ಡವನು. ಆದರೆ ಅವನು ಶರಣರ ಮನಸ್ಸಿನ ಮೊನೆಯ ತುದಿಯಲ್ಲಿ ಅಡಗಿದ್ದಾನೆ.
ಎಲ್ಲವನ್ನೂ ಕಾಣಬಲ್ಲ, ಗ್ರಹಿಸಬಲ್ಲ, ಅರ್ಥವನ್ನು ಕಲ್ಪಿಸಬಲ್ಲ ಮನುಷ್ಯನ ಮನಸ್ಸೇ ನಿಜವಾಗಿ ಎಲ್ಲಕ್ಕಿಂತ ಘನವಾದದ್ದು, ದೊಡ್ಡದಾದ್ದು. ದೊಡ್ಡದು, ಚಿಕ್ಕದು ಎಂಬ ಭೇದ ಕೂಡ ಮನಸ್ಸೇ ಕಲ್ಪಿಸಿಕೊಂಡದ್ದು, ಮನಸ್ಸಿನಲ್ಲಿ ಅಡಗಿರುವುದು ಅಲ್ಲವೇ! ಆದಿಶೇಷ, ಪಾರ್ವತಿ, ಅರ್ಧನಾರೀಶ್ವರ ಇಂಥ ಪುರಾಣದ ಕಲ್ಪನೆಗಳು ಕೂಡ ಮನಸ್ಸಿನದೇ ಸೃಷ್ಟಿ. ಪರಮಾತ್ಮ ಕೂಡ ಇದ್ದರೆ ಇರುವುದು ನಮ್ಮ ಮನಸ್ಸಿನ ಮೊನೆಯ ಕೊನೆಯಲ್ಲೇ!

ಮನುಷ್ಯ ಜ್ಞಾನವನ್ನು ತನ್ನಿಂದ ಆಚೆಗೆ, ಹೊರಗೆ ಇರುವ ಜಗತ್ತಿನಲ್ಲಿ ಹುಡುಕತೊಡಗಿದ. ಭೂಮಿ, ಆಕಾಶ, ಮರಗಿಡಪ್ರಾಣಿಪಕ್ಷಿ, ಇತ್ಯಾದಿಗಳ ಬಗ್ಗೆ ತಿಳಿವಳಿಕೆ ಪಡೆದುಕೊಂಡ. ಅದೇ ಜ್ಞಾನ. ಅಲ್ಲ, ಇನ್ನೂ ಏನೋ ಇದೆ ಎಂದು ನಂತರದಲ್ಲಿ ತನ್ನ ದೇಹದ ಒಳಗಿನ ವಿವರಗಳು, ಸಂಭವಗಳ ಬಗ್ಗೆ ತಿಳಿದುಕೊಳ್ಳತೊಡಗಿದ. ಆಗ ಅದೇ ಜ್ಞಾನ. ಇಲ್ಲ, ದೇಹ ಕೂಡ ಮನಸ್ಸಿನ ನಿಯಂತ್ರಣಕ್ಕೆ ಒಳಪಟ್ಟದ್ದು ಎಂಬ ತಿಳಿವು ಮೂಡಿದಾಗ ಮನಸ್ಸನ್ನು ಅರಿಯುವುದೇ ಮುಖ್ಯ ಅನಿಸತೊಡಗಿತು. ಎಲ್ಲ ಜ್ಞಾನದ ಮೂಲ ಮನಸ್ಸೇ ಎಂದು ಮನಸ್ಸನ್ನು ತಿಳಿಯುವ ಕೆಲಸ ಶುರುವಾಯಿತು.
ಮನಸ್ಸನ್ನು ತಿಳಿಯಲು ಬಯಸುವುದು ಕೂಡ ಮನಸ್ಸೇ! ಮನಸ್ಸನ್ನು ತಿಳಿಯುವ ಉಪಕರಣ ಕೂಡ ಮನಸ್ಸೇ! ಎಂಥ ವಿಚಿತ್ರ, ಮನಸ್ಸು ಎಷ್ಟು ಘನ. “ಮನ ಏವ ಕಾರಣಂ” ಎಂಬ ಭಗವದ್ಗೀತೆಯ ಮಾತು ನೆನಪಿಗೆ ಬರುತ್ತದೆ ಅಲ್ಲವೆ?

  • ಚಿಂತನೆ
Ornamental seperator
  • Login or register to post comments
  • 876 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಚನ ಚಿಂತನ: ೬: ಮನಸ್ಸು ಕೋತಿ
  • ಪತಂಜಲಿಯ ಯೋಗ ಭಾಗ ೮
  • ಪತಂಜಲಿಯ ಯೋಗ ಅಂತಿಮ ಭಾಗ
  • ಮನಸ್ಸಿನ ಮನಸ್ಸೆ...
  • ವಚನ ಚಿಂತನ: ೭: ಮನಸ್ಸು – ಆಸೆ - ಮಾಯೆ
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪ್ರತ್ಯಕ್ಷ ನೋಡಿದರೂ...
  • ನಶಿಸುತ್ತಿರುವ ಶಬ್ದ ಬಳಕೆ
  • ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ
  • ಭಾರತದ ಜ್ಞಾನಾವತಾರ
  • ಹೆಣ್ಣು ಜೀವವಿಮುಖಿ, ಜೀವವಿರೋಧಿಯಾಗುವ ಕ್ಷಣ
  • ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
  • ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಸುಭಾಷಿತಗಳು
    May 12, 2008 - 2:57am
  • kannadakanda
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 12, 2008 - 2:47am
  • hpn
    ಉ: ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !
    May 12, 2008 - 1:00am
  • hpn
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:52am
  • hpn
    ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
    May 12, 2008 - 12:48am
  • hamsanandi
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:20am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 12:09am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 11, 2008 - 11:33pm
  • ವೈಭವ
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 11, 2008 - 8:45pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 11, 2008 - 8:29pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 3 ಅತಿಥಿಗಳು ಆನ್ಲೈನ್ ಇರುವರು.

ಮನುಷ್ಯನ ಉತ್ತಮ ಅಭ್ಯಾಸವೆಂದರೆ ತಮ್ಮ ಅತ್ಮಸಾಕ್ಷಿಯೊಡನೆ ಪ್ರಾಮಾಣಿಕತೆ.

— ಸಿಗ್ಮಂಡ್ ಫ್ರಾಯ್ಡ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator