ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ದೀನ ಎಂಬುದಕ್ಕೆ ವಿರುದ್ಧ ಪದ ಯಾವುದು!

December 14, 2005 - 7:54am — olnswamy

ನಿನ್ನೆ ರಾತ್ರಿ ನನ್ನ ತಂಗಿ ಫೋನು ಮಾಡಿದ್ದಳು. ಅವಳ ಮಗಳಿಗೆ, ಆರನೆಯ ಕ್ಲಾಸು ಓದುತ್ತಿರುವವಳು, ಮರುದಿನ
ಕನ್ನಡ ಟೆಸ್ಟು ಇತ್ತಂತೆ. ಅದರಲ್ಲಿ ಒಂದು ಪ್ರಶ್ನೆಗೆ ಉತ್ತರ ಹೊಳೆಯದೆ ಫೋನು ಮಾಡಿದ್ದಳು. ಪ್ರಶ್ನೆ ಇದು: "ದೀನ'
ಎಂಬುದಕ್ಕೆ ವಿರುದ್ಧಾರ್ಥ ಪದ ಬರೆಯಿರಿ. ದೀನ ಎಂಬ ಪದಕ್ಕೆ ವಿರುದ್ಧಾರ್ಥ ಪದ ಇಲ್ಲಮ್ಮ ಎಂದು ಹೇಳಿದರೆ
ಪುಸ್ತಕದಲ್ಲಿ ಕೇಳಿದ್ದಾರಲ್ಲ ಅನ್ನುವ ಪ್ರಶ್ನೆ ಅವಳಿಂದ ಬಂದಿತು.
ಪುಸ್ತಕದಲ್ಲಿ, ಅದರಲ್ಲೂ ಪಠ್ಯ ಪುಸ್ತಕದಲ್ಲಿ ಇರುವುದೆಲ್ಲ ಸತ್ಯ ಎಂಬ ಭ್ರಮೆ ನಮಗೆ ಹೋಗಿಲ್ಲ. ಭಾಷೆಯ ಸೂಕ್ಷ್ಮಗಳ
ಬಗ್ಗೆ ಎಚ್ಚರ ಮೂಡಿಲ್ಲ ಅನ್ನುವುದಕ್ಕೆ ವಿರುದ್ಧಾರ್ಥ ಪದಗಳದ್ದು ಒಂದು ಜ್ವಲಂತ ಉದಾಹರಣೆ.
ಸ್ವಲ್ಪ ಆಲೋಚಿಸಿ, ಈ ಸಂಗತಿ ಮಕ್ಕಳಿಗೆ ಎಷ್ಟು ಕಕ್ಕಾಬಿಕ್ಕಿ ಮಾಡಬಹುದು. ಅಪ್ಪ-ಅಮ್ಮ, ಗಂಡ-ಹೆಂಡತಿ,
ಒಳ್ಳೆಯದು-ಕೆಟ್ಟದ್ದು, ರೂಪ-ಕುರೂಪ, ಸಜ್ಜನ-ದುರ್ಜನ ಇವೆಲ್ಲ ಒಂದೇ ರೀತಿಯ ವಿರುದ್ಧಾರ್ಥ ಪದಗಳೇ?
ಖಂಡಿತ ಅಲ್ಲ. ಕೆಲವು ನಿರ್ದಿಷ್ಟ ಅಕ್ಷರಗಳನ್ನು ಸೇರಿಸುವ ಮೂಲಕ ವಿರುದ್ಧ ಅರ್ಥ ಮೂಡಿಸುವ ರೂಪನಿಷ್ಠ
ವಿರುದ್ಧಾರ್ಥಗಳಿವೆ: ಸು ಎಂದರೆ ಒಳ್ಳೆಯ, ದುರ್ ಎಂದರೆ ಅದಕ್ಕೆ ವಿರುದ್ಧವಾದ ಎಂಬ ರೂಪ ನಿಷ್ಠ ನಿಯಮ ಮಾಡಿ
ಆ ಮೂಲಕ ಸುಜನ-ದುರ್ಜನ, ಸುಷಮ-ದುಷ್ಷಮ ಇತ್ಯಾದಿ ಪದಗಳನ್ನು ವಿವರಿಸಬಹುದು. ಆದರೆ ಇಂಥ
ಗುಂಪಿನ ಪದಗಳ ಸಂಖ್ಯೆ ಕಡಮೆ.
ಇನ್ನೊಂದು ಬಗೆಯ ವಿರುದ್ಧಾರ್ಥಕಗಳು ಕೇವಲ ಅರ್ಥ ನಿಷ್ಠವಾದವು. ಅಂದರೆ ನಮ್ಮ ಮನಸ್ಸಿನಲ್ಲಿ ಇವು
ವಿರುದ್ಧ ಎಂಬ ಕಲ್ಪನೆ ಮೂಡಿಸಿಕೊಂಡದ್ದರಿಂದ ಬಂದವು. ಸುಖ ಎಂಬುದಕ್ಕೆ ಅಸುಖ ವಿರುದ್ಧಪದವೋ, ದುಃಖವೋ?
ರೂಪದ ಮಟ್ಟಿಗೆ ಹೇಳುವುದಾದರೆ ಅಸುಖ, ಅರ್ಥದ ಮಟ್ಟಿಗೆ ಹೇಳುವುದಾದರೆ ದುಃಖ. ಹಗಲು ಎಂಬುದಕ್ಕೆ ಇರುಳು ವಿರುದ್ಧ ಪದವೋ
ರಾತ್ರಿ ಎಂಬುದೋ? ಉದ್ದ ಎಂಬುದಕ್ಕೆ ಗಿಡ್ಡ ವಿರುದ್ಧವೋ, ಅಗಲ ವಿರುದ್ಧವೋ?
ಇದರೊಟ್ಟಿಗೆ ಕನ್ನಡ ಮತ್ತು ಸಂಸಕೃತದ ವ್ಯಾಕರಣ ನಿಯಮಗಳ ಗೊಂದಲ ಬೇರೆ.
ವ್ಯಾಕರಣವೆನ್ನುವುದು ಕೇವಲ ಭಾಷೆಯ ರೂಪ ಲಕ್ಷಣಗಳನ್ನು ವಿವರಿಸುವ ವಿಜ್ಞಾನವಾದರೆ ಆಗ ಅ, ನಿರ್, ದುರ್, ಇತ್ಯಾದಿ
ಪ್ರತ್ಯಯಗಳಿಂದ ರೂಪಗೊಳ್ಳುವ ವಿರುದ್ಧಾರ್ಥಕಗಳನ್ನು ನಿಯಮ ಸಹಿತವಾಗಿ ಹೇಳಿಕೊಡಬೇಕು. ಅರ್ಥ ಆಧಾರಿತ ವಿರುದ್ಧಪದಗಳ
ತಂಟೆಗೆ ಹೋದರೆ ಮೇಷ್ಟರಿಗೂ ವಿದ್ಯಾರ್ಥಿಗಳಿಗೂ ಪೋಷಕರಿಗೂ ಕಷ್ಟ ತಪ್ಪಿದ್ದಲ್ಲ.
ಇಷ್ಟಾಗಿ ದೀನ ಎಂಬುದಕ್ಕೆ ವಿರುದ್ಧ ಪದ ಯಾವುದು? ಅದೀನವೋ? ದಾನಿಯೋ? ಏನು? ಎಲ್ಲ ಪದಗಳಿಗೂ ವಿರುದ್ಧ ಪದಗಳನ್ನು
ಹುಡುಕಬೇಕು ಎಂಬ ಹಟ ನಮ್ಮ ಕನ್ನಡ ಬೋಧನೆಯಲ್ಲಿ

  • ಚಿಂತನೆ
~.~
  • Login or register to post comments
  • 1250 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 14, 2005 - 10:44am — Sunil Jayaprakash

Re: ದೀನ ಎಂಬುದಕ್ಕೆ ವಿರುದ್ಧ ಪದ ಯಾವುದು!

Sunil Jayaprakash's picture

ಮಹಾಸ್ವಾಮಿಗಳು ತಪ್ಪಿದ್ದಲ್ಲಿ ಕ್ಷಮಿಸಬೇಕು. ಅರ್ಥದ ದೃಷ್ಟಿಯಲ್ಲಿ. ದೀನನಿಗೆ ವಿರುದ್ಧವಾಗಿ, ಧನ್ಯನು ನಿಲ್ಲತ್ತಾನಲ್ಲವೇ

ವಿಶೇಷ ಸೂಚನೆ
ನನ್ನ ಯಂತ್ರದಲ್ಲಿ ದೊಡ್ಡ ಟ ಕುಟ್ಟಲಾಗುತ್ತಿಲ್ಲ. ಆದ್ದರಿಂದ ದೃಷ್ಟಯಲ್ಲಿ ಅಂತ ಹಾಕಿದ್ದೇನೆ.
 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 14, 2005 - 8:08pm — tvsrinivas41

ಟ್ ಜೊತೆಗೆ ಹ್

tvsrinivas41's picture

ಸುನೀಲ್ ಅವರೇ ನಿಮಗೆ ದೃಷ್ಠಿ ಎಂದು ಕುಟ್ಟಬೇಕಿತ್ತೇ? ಟ್ ಜೊತೆಗೆ ಹ್ ಕುಟ್ಟಿದರೆ ಮಹಾಪ್ರಾಣ ಲಭ್ಯವಾಗುತ್ತದೆ. ಆದರೆ ನನಗೇನೋ ದೃಷ್ಟಿ ಸರಿ ಅನ್ನಿಸುತ್ತದೆ.

ಇನ್ನು ದೀನ ಎಂದರೆ ತಗ್ಗಿ ಬಗ್ಗಿ ನಡೆಯುವವನು ಎಂಬರ್ಥ ಅಲ್ಲವೇ? ಅದಕ್ಕೆ ಒರಟ ಎಂಬ ಪದ ವಿರುದ್ಧ ಆಗತ್ತಾ?
ಅಥವಾ ಕಟುಕ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 15, 2005 - 12:28pm — Sunil Jayaprakash

ತಿದ್ದಿಕೊಂಡಿದ್ದೇನೆ

Sunil Jayaprakash's picture

ದೃಷ್ಟಿಯೇ ಸರಿಯಾದ ಪದ.
ಮತ್ತೆ ಇನ್ನೊಂದು ವಿಷಯ, ನಾನು, Kannada Script Layout (ಕೀಲಿಮಣೆಯ ಪದ ವಿನ್ಯಾಸ ಎನ್ನಬಹುದೇ)ಉಪಯೋಗಿಸುತ್ತಿದ್ದೇನೆ. ಆದ್ದರಿಂದ ಬರಹದ ಪದ ವಿನ್ಯಾಸ ನೆರವಿಗೆ ಬರುವುದಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 15, 2005 - 1:14am — srivathsajoshi

ದೀನ ಪದಕ್ಕೆ ವಿರುದ್ಧಪದ

srivathsajoshi's picture

ದೀನ ನಾನು ಸಮಸ್ತ ಲೋಕಕೆ
ದಾನಿ ನೀನು ವಿಚಾರಿಸಲು ಮತಿ
ಹೀನ ನಾನು ಮಹಾಮಹಿಮಕೈವಲ್ಯ ಪತಿ ನೀನು
ಏನ ಬಲ್ಲೆನು ನಾನು ನಡೆಸು
ಜ್ಞಾನ ಮೂರುತಿ ನೀನು ನಿನ್ನ ಸ
ಮಾನರುಂಟೇ ದೇವ ರಕ್ಷಿಸು ನಮ್ಮನನವರ ||

ಕನಕದಾಸರು ಬರೆದಿರುವ 'ಗಿಳಿಯ ಮರಿಯನು ತಂದು ಪಂಜರದೊಳಗೆ ಪೋಷಿಸಿ...' ಪದ್ಯದಲ್ಲಿನ ಈ ಸಾಲುಗಳನ್ನು ಕೋಟಿಸುವುದಾದರೆ ದೀನ ಪದಕ್ಕೆ ವಿರುದ್ಧಪದ 'ದಾನಿ' ಆಗಬಹುದೇನೊ ಅಂತನಿಸುತ್ತದೆ.

ಇತಿ,

ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 15, 2005 - 9:34am — pavanaja

ಹರಿಭಕ್ತಿಸಾರ

pavanaja's picture

ಜೋಶಿಯವರೇ,

'ದೀನ ನಾನು' ಎಂದು ನೀವು ಉದ್ಧರಿಸಿದ (ನಿಮ್ಮದೇ ಭಾಷೆಯಲ್ಲಿ ಹೇಳುವುದಾದರೆ ಕೋಟಿಸಿದ) ಪದ್ಯ ಕನಕದಾಸರದ್ದು ಹೌದು. ಆದರೆ ಅದು ಅವರ ಕೀರ್ತನೆಯಲ್ಲ. ಅವರ ಹರಿಭಕ್ತಿಸಾರದಿಂದ ಆಯ್ದ ಪದ್ಯ ಇದು. ಈ ಮಾಹಿತಿ ನೀಡಿದವರು ಪ್ರೊ. ಜಿ.ವಿ. ಅವರು. ನನ್ನಲ್ಲಿ ಹಂಪಿ ವಿಶ್ವ ವಿದ್ಯಾಲಯದವರು ಪ್ರಕಟಿಸಿದ ಸಾವಿರ ಕೀರ್ತನೆಗಳು ಪುಸ್ತಕವಿದೆ. ಅದರಲ್ಲಿ ಈ ಪದ್ಯ ಸಿಗಲಿಲ್ಲ. ಹಾಗಾಗಿ ಜಿ.ವಿ. ಅವರಿಗೆ ಫೋನಾಯಿಸಿ ಮಾಹಿತಿ ಪಡೆದುಕೊಂಡೆ.

ಅಂದ ಹಾಗೆ ನಿಮ್ಮ ಲೇಟೆಸ್ಟ್ ವಿಚಿತ್ರಾನ್ನದ ಫೈ ತುಂಬ ಚೆನ್ನಾಗಿತ್ತು.

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 15, 2005 - 8:19pm — srivathsajoshi

ಕನಕದಾಸ - ಕೀರ್ತನೆ

srivathsajoshi's picture

ಡಾ|ಪವನಜ,

ನಾನು ಅದು 'ಕನಕದಾಸರ ಕೀರ್ತನೆ' ಎಂದಿಲ್ಲವಲ್ಲ? ಪದ್ಯ ಎಂದಷ್ಟೇ ಹೇಳಿದ್ದೆ, 'ಹರಿಭಕ್ತಿಸಾರ'ದಿಂದಾಯ್ದ ಪದ್ಯ ಎನ್ನುವ ಪೂರಕ ಮಾಹಿತಿಯನ್ನು ನೀವು ಕೊಟ್ಟದ್ದಕ್ಕೆ ಥ್ಯಾಂಕ್ಸ್!

===

ಉಲ್ಲೇಖಿಸಿದ್ದ ಪದ್ಯದ ಕೊನೆಯ ಸಾಲಿನ ಕೊನೆಯ ಪದ 'ನಮ್ಮನನವರತ' ಆಗಬೇಕಿತ್ತು; ತಪ್ಪಿದ್ದಕ್ಕೆ ಕ್ಷಮಿಸಿ.
===

'ಫೈ' ಲೇಖನ ಮೆಚ್ಚುಗೆಗಾಗಿ ಧನ್ಯವಾದಗಳು.

===

ಇತಿ,

-ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 14, 2005 - 10:28pm — pavanaja

ದಿಗಂತ ದ ವಿರೋಧ

pavanaja's picture

ನನಗೂ ಒಮ್ಮೆ ಇಂತಹ ಸಮಸ್ಯೆ ಬಂದಿತ್ತು. ಸಾಮಾನ್ಯವಾಗಿ ನಮಗೆ ಸಮಸ್ಯೆ ಬಂದರೆ ನಾವು ಶಾಲೆಯ ಅಧ್ಯಾಪಕರನ್ನು ಕೇಳುತ್ತಿದ್ದೆವು. ಆದರೆ ಇಲ್ಲಿ ಉಲ್ಟ. ನನ್ನ ಮಗಳು ಕಲಿಯುತ್ತಿರುವ ಶಾಲೆಯ ಕನ್ನಡ ಅಧ್ಯಾಪಕರೊಮ್ಮೆ ಫೋನು ಮಾಡಿ ಕೇಳಿದರು "ದಿಗಂತ ಪದದ ವಿರೋಧ ಪದ ಯಾವುದು?". ನಾನೂ ಸ್ವಲ್ಪ ತಲೆ ಕೆಡಿಸಿಕೊಂಡೆ. ಆಗ ಕುವೆಂಪು ಅವರ "ಓ ನನ್ನ ಚೇತನ ಆಗು ನೀ ಅನಿಕೇತನ" ಹಾಡು ನೆನಪಾಯಿತು. ಅದರಲ್ಲಿ "ನಿರ್ದಿಗಂತವಾಗಿ ಏರಿ" ಎಂಬುದಾಗಿ ಬಳಸಿದ್ದಾರೆ. ನಾನು ಅದನ್ನೇ ಅಧ್ಯಾಪಕರಿಗೆ ತಿಳಿಸಿದೆ. ಅವರೂ ಹಾಗೆಯೇ ಅಂದುಕೊಂಡಿದ್ದರಂತೆ. ಆದರೆ ಒಮ್ಮೆ ನನ್ನಲ್ಲಿ ಕೇಳೋಣ ಎಂದು ಕೇಳಿದ್ದರು. ನಾನು ಯಾವ ಸೀಮೆ ಕನ್ನಡ ಪಂಡಿತ? ನಾನು ಕಲಿತದ್ದು ರಸಾಯನಶಾಸ್ತ್ರ. ಇರಲಿ. ಈ ದಿಗಂತ ಪದವನ್ನೇ ಗಮನಿಸೋಣ. "ದಿಕ್ + ಅಂತ = ದಿಗಂತ" ಆಗಿದೆ. ಅಂದರೆ ದಿಕ್ಕಿನ ಕೊನೆ ಎಂದು ಅರ್ಥ. ಇದನ್ನೇ ಹೀಗೂ ಅರ್ಥೈಸಬಹುದು. ದಿಗಂತ ಎನ್ನುವುದು ದಿಕ್ಕು ಎನ್ನುವುದರ ವಿರೋಧ ಪದ. ಹಾಗಿದ್ದ ಮೇಲೆ ದಿಗಂತದ ವಿರೋಧ ಪದ ದಿಕ್ಕು ಆಗಬೇಕಲ್ಲವೆ? ಇದು ತಲೆಹರಟೆ ಎನ್ನಿಸುತ್ತದೆಯೇ ಎನ್ನುವುದನ್ನು ಪಂಡಿತರು ವಿವರಿಸಬೇಕು.

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 15, 2005 - 1:20am — srivathsajoshi

'ದಿಗಂತ'ಕ್ಕೆ ವಿರುದ್ಧ ಪದ...

srivathsajoshi's picture

'ದಿಗಂತ'ವೆಂದರೆ ದಿಕ್+ಅಂತ ಹಾಗಾದರೆ ದಿಕ್+ಆದಿ = ದಿಗಾದಿ ಅನ್ನುವ ಪದವೇ 'ದಿಗಂತ'ದ ವಿರುದ್ಧಪದವೆಂದುಕೊಳ್ಳೋಣವೇ?

ಅಂದಹಾಗೆ "ಹೊಸ ದಿಗಂತ"ದವರನ್ನು ಕೇಳಿನೋಡಿ, ಅವರು 'ಉದಯವಾಣಿ' ವಿರುದ್ಧಪದ ಎನ್ನಬಹುದು!

- ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 15, 2005 - 9:23am — pavanaja

ಲಾಜಿಕ್ ಚೆನ್ನಾಗಿದೆ

pavanaja's picture

ಹೊಸ ದಿಗಂತದ ವಿರುದ್ಧ ಉದಯವಾಣಿ ಇರಬಹುದು. ಆದರೆ ದಿಗಂತದ ವಿರುದ್ಧ ? ತಲೆಹರಟೆಯನ್ನೇ ಮುಂದುವರಿಸೋಣ.

ಹೊಸ != ಉದಯ
ದಿಗಂತ !=ವಾಣಿ Eye-wink

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 15, 2005 - 10:04am — tvsrinivas41

ವಿರುದ್ಧಪದ

tvsrinivas41's picture

ತಲೆಹರಟೆಯಂತೆ, ಹೊಸದಿಗಂತಕ್ಕೆ ವಿರುದ್ಧ ಪದವಾಗಿ ಹೊಸದಿವಂಗತ ಅಂತ ಕರೆದರೆ ಹೇಗಿರತ್ತೆ ಸಾರ್!

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 15, 2005 - 10:50am — Sunil Jayaprakash

ಹೊಸದಿವಂಗತ ಅಲ್ಲ ಹಳೆಯದಿವಂಗತ

Sunil Jayaprakash's picture

ವಿಡಂಬನಾತ್ಮಕವಾಗಿ, ಹೊಸದಿಗಂತಕ್ಕೆ ವಿಡಂಬ ವಿರುದ್ಧವಾಗಿ ಹಳೆಯದಿವಂಗತ ಅಂತ ಕರೆಯಬಹುದು. 

ಮುಂದೆ ಹೋಗು ಇಲ್ಲವೆ ಪಕ್ಕಕ್ಕಾದ್ರು ಬಾ. ಹಿಂದಕ್ಕಂತು ಬೇಡವೋ ಮಗು.
ಮಗು ಮಗು, ನಗು ನಗು, ನಗುವೇ  ಜೀವನ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 15, 2005 - 4:58pm — olnswamy

ದಿವಂಗತ ವಿರುದ್ಧ ಪದ ಭೂಗತ ಅಥವಾ ತಮೋಗತ!!

olnswamy's picture

ತಲೆಹರಟೆ ಮುಂದುವರೆಸುವ ಆಸೆ, ಅದಕ್ಕೇ ಈ ಕಾಮೆಂಟು: ದಿವ ಎಂಬುದಕ್ಕೆ ಬೆಳಕು ಮತ್ತು ಆಕಾಶ ಎಂಬ ಎರಡೂ ಅರ್ಥ ಸಾಧ್ಯ. ಆದ್ದರಿಂದ ದಿವಂಗತ ಅನ್ನುವುದಕ್ಕೆ ಭೂ-ಗತ ವಿರುದ್ಧ ಪದವಾದೀತು. ಅಥವಾ ತಮಸ್ಸು ಎಂದರೆ ಕತ್ತಲು ಎಂಬ ಅರ್ಥ ಇರುವುದರಿಂದ ಕತ್ತಲಿಗೆ ಹೋದವರು ಎಂಬಂತೆ ತಮೋಗತರು ಅನ್ನೋಣವೋ!
ನಾನು ಹೇಳಲು ಬಯಸಿದ್ದು ಇದೇ-ವಿರುದ್ಧಾರ್ಥ ಪದದ ರೂಪಣೆ ಅನ್ನುವುದು ಮನಸ್ಸಿನ ಆಟ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 15, 2005 - 9:34pm — gvmt

ಹ್ಯಾಂಗಾದಾತು ಮೇಷ್ಟ್ರೆ?

gvmt's picture

ದಿವಂಗತರಾದವರು ಹೆಚ್ಚಾಗಿ ಭೂಗತರೂ ಆಗುತ್ತಾರೆ, ಅಲ್ಲಿ ಕತ್ತಲಾಗಿಯೂ ಇರುತ್ತೆ, ಆದ್ದರಿಂದ ಇವು ಸಮಾನಾರ್ಥಕ ಪದಗಳಾಗಬೇಕು ಅಲ್ಲವೆ? Laughing out loud

ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 16, 2005 - 8:54am — olnswamy

ಹೋಗಲಿ ಭೂ ಬದ್ಧ, ಭೂ ಮಿತ ಅಂದುಕೊಳ್ಳೋಣ ಬಿಡಿ!

olnswamy's picture

ಸಾರ್, ಹೋಗಲಿ ಬಿಡಿ. ದಿವ=ದಿಕ್ಕುಗಳಿಗೆ ಗತ=ಹೋದವನು ಅನ್ನುವುದಕ್ಕೆ ವಿರುದ್ಧವಾಗಿ ಭೂ-ಮಿತ, ಭೂಮಿಗೇ ಮಿತನಾದವನು ಅಥವ ಭೂ-ಬದ್ಧ ಭೂಮಿಗೇ ಗಂಟುಬಿದ್ದವನು ಅನ್ನೋಣ. ವಿರುದ್ಧ ಪದ ನಮ್ಮ ಭಾವದ ಇಚ್ಛೆ!ನಿಮ್ಮ ವಾದ ನನ್ನ ವಾದವನ್ನೇ ಬೆಂಬಲಿಸುತ್ತೆ, ಥ್ಯಾಂಕ್ಸ್. ಇದೇ ಸಂಪದದಲ್ಲಿ ಇನ್ನೊಂದು ಬರಹ ಇದೆ ನೋಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 16, 2005 - 9:53am — tvsrinivas41

ಕತ್ತಲೆ?

tvsrinivas41's picture

(ಸುಮ್ನೆ ತಮಾಷೆಗೆ)

ದಿವಂಗತರಾದವರು ಭೂಗತರಾಗ್ತಾರಾ? ಅಲ್ಲಿ ಕತ್ತಲೆ ಇದ್ಯಾ? ಯಾರು ಹೇಳಿದ್ರು. ನಾನೆಲ್ಲೋ ಓದಿದ ನೆನಪು - ಈ ಜೀವನ ಒಂದು ಕನಸು ಇದ್ದ ಹಾಗೆ. ಕನಸಿನಿಂದ ಆಚೆಗೆ ಬರುವವರೆವಿಗೆ ಕನಸೆಂದು ತಿಳಿಯದು, ಅಂತ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 16, 2005 - 9:58am — Sunil Jayaprakash

ಚೇಷ್ಚೆ ಮುಂದುವರಿಸುತ್ತಾ

Sunil Jayaprakash's picture

ಚೇಷ್ಚೆ ಮುಂದುವರಿಸುತ್ತಾ, ದಿವಂಗತರಾದಮೇಲೆ ಮುಕ್ತಿಪಡೆದು ಬೆಳಕಿನೆಡೆಗೆ ಸಾಗುತ್ತಾರಲ್ಲವೇ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 16, 2005 - 12:09pm — olnswamy

ಕತ್ತಲೆ, ಬೆಳಕು, ಮುಕ್ತಿ!

olnswamy's picture

ಅಯ್ಯೋ, ಒಂದು ಪದದ ಬಗ್ಗೆ ಬಂದ ಅನುಮಾನ ಎಷ್ಟು ತರಲೆಗೆ ಚರ್ಚೆಗೆ ಗ್ರಾಸವಾಗಿದೆಯಲ್ಲ! ಸರಿ.
ಈ ಚೇಷ್ಟೆ ಹೇಗೆ: ಮುಕ್ತಿ ಅಂದರೆ ಪರ-ವಿರೋಧಗಳು ಇರದ ಸ್ಥಿತಿ ಅಲ್ಲವೇ! ಮುಕ್ತಿ ಬೆಳಕು ಆದರೆ ಕತ್ತಲೆ ಕೂಡ ಅಲ್ಲೇ ಎಲ್ಲೋ ಕಾದಿರಲೇಬೇಕು! ದಿವಂಗತರಾದಮೇಲೆ ಕತ್ತಲೆ ಬೆಳಕು ಎರಡೂ ಇರದ ಸ್ಥಿತಿಗೆ ಹೋಗುತ್ತೇವೋ ಏನೋ! ಇಲ್ಲದಿದ್ದರೆ, ದಿವಂಗತರಾದಮೇಲೂ ಕತ್ತಲೆ ಬೆಳಕಿನ ಆಟದ ಕಾಯಿಗಳಾಗುವುದಾದರೆ ಅಂಥ ಮುಕ್ತಿ ಯಾಕೋ! ಬೆಳಕು ಮಾತ್ರವೇ ಇರುವ ಮುಕ್ತಿ ಎಂದಿದ್ದರೆ ಅಷ್ಟು ಕಣ್ಣು ಚುಚ್ಚುವ, ಬೇಸರ ಬರಿಸುವ, ನಾವು ಮತ್ತೆ ಬೆಳಕಿಗೆ ತಕ್ಕ ಪಾತ್ರವಹಿಸುವ ಜಂಜಾಟಗಳೆಲ್ಲ ಧಾರಾವಾಹಿಯಂತೆ ಮುಂದುವರೆಯುವುದಾದರೆ ಏನು ಗತಿ ಜಯ-ಪ್ರಕಾಶರೇ?
ದಯವಿಟ್ಟು ತಪ್ಪು ತಿಳೀಬೇಡಿ. ಜಯ ಪ್ರಕಾಶ-ಬೆಳಕನ್ನು ಗೆದ್ದವರು ಏನನ್ನು ಪಡೆಯುತ್ತಾರೆ? ಅಥವಾ ಅದು ಬೆಳಕಿನ ಜಯ ಎಂಬರ್ಥವೋ! ಕತ್ತಲೆಯೇ ಇರದಿದ್ದಾಗ ಬೆಳಕು ತಾನೇ ಯಾಕೆ ಬೇಕು, ಅದಕ್ಕೆ ಅರ್ಥವೇ ಇರದು!ಪದಾರ್ಥದ ಬೇಟೆ ಎಂಥ ಉತ್ಸಾಹ ಹುಟ್ಟಿಸುತ್ತದಲ್ಲವೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 16, 2005 - 4:55pm — Sunil Jayaprakash

ಹೆಸರಿನ ವ್ಯಾಮೋಹ

Sunil Jayaprakash's picture

ನಾನು ಹಿಂದೆ ಬೆಳಕಿನೆಡೆಗೆ ಎಂದು ಬರೆದಿದ್ದೆ, ಅದಕ್ಕೆ ಸ್ಪಷ್ಟತೆ ಸಿಗಲಿಲ್ಲ. ಈಗ ಬರೆಯುತ್ತಿದ್ದೇನೆ, ಮುಕ್ತಿಯೆಂದರೆ ಬೆಳಕಿನೆಡೆಗೆ ಸಾಗುವುದಲ್ಲ. ಬೆಳಕಿನಲ್ಲಿ ಲೀನವಾಗುವುದು(ದಿವ್ಯ ತೇಜಸ್ಸು). ನಾವೇ ಬೆಳಕಾದ ಮೇಲೆ ಕತ್ತಲೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಕತ್ತಲೆ ನಮ್ಮನ್ನಾವರಿಸುತ್ತದೆ ಎಂಬ ಭಯ ಬೇಡ.
ಇನ್ನು ಜಯಪ್ರಕಾಶ ಎಂಬುದನ್ನ ಈ ರೀತಿ ಬಿಡಿಸಬಹುದೇ

ಯಃ ಜಯಂ ಪ್ರಕಾಶಯತಿ ಸಃ ಜಯಪ್ರಕಾಶಃ
ಯಾವನು ಜಯವನ್ನು ಪ್ರಕಾಶಿಸುತ್ತಾನೋ (ತೋರುತ್ತಾನೋ) ಅವನು.
ಜಯಪ್ರಕಾಶ  = ಜಯವನ್ನು ತೋರುವವನು = ಜಯದ ಪ್ರತೀಕ

ನಾನೇ ಬ್ರಹ್ಮನಾದ ಮೇಲೆ ನಾನೇ ಬೆಳಕು ಕೂಡ

ಆಹಾ, ಹೆಸರಿನ ಬಗ್ಗೆ ಇಷ್ಟು ವ್ಯಾಮೋಹ ನನಗೆಂದೂ ಆಗಿರಲಿಲ್ಲ.
ಅಂದ ಹಾಗೆ, ನನ್ನ ಹೆಸರಿನಲ್ಲಿ ನೀಲಿಯೂ ಸೇರಿದೆ. ಇದು ದಿಗಂತವನ್ನ ಸೂಚಿಸುತ್ತಿದೆಯೇನೋ ಎಂದನಿಸುತ್ತಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 16, 2005 - 7:50pm — tvsrinivas41

ಅಹಂ ಬ್ರಹ್ಮಾಸ್ಮಿ

tvsrinivas41's picture

ಸುನೀಲರೇ ನಿಮ್ಮ ಮಾತುಗಳು ಅಕ್ಷರಶ: ಸರಿ. ಎಲ್ಲ ಜೀವ ಜಂತುಗಳೂ ಬ್ರಹ್ಮಾಂಡದ ಅಂಶಗಳು. ಸದ್ಯಕ್ಕೆ ಕಣ್ಣಿಗೆ ಗೋಚರಿಸುತ್ತಿರುವುದು ಒಂದು ಅಣುವಷ್ಟೇ. (ಇದನ್ನು ನಾನೆಲ್ಲೋ ಓದಿದ್ದು). ನಮ್ಮಲ್ಲಿರುವ ಆತ್ಮವನ್ನು (ಚೇತನ ಎಂದು ಹೇಳಬಹುದೇ?) ಆ ಬ್ರಹ್ಮಾಂಡವೆಂಬ ಪರಮಾತ್ಮನ ಅಂಶವೆಂದು ತಿಳಿಯುವುದೇ ಅಧ್ಯಾತ್ಮ ಚಿಂತನೆ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 15, 2005 - 10:46am — karthik

ಹೊಸ ದಿಗಂತ

karthik's picture

ಹೊಸ ದಿಗಂತ ಪತ್ರಿಕೆ ಇನ್ನು ಪ್ರಕಟವಾಗುತ್ತಾ ಇದೆಯಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 15, 2005 - 10:47pm — pavanaja

ಹೊಸದಿಗಂತ ಇದೆ

pavanaja's picture

ಖಂಡಿತವಾಗಿಯೂ ಹೊಸ ದಿಗಂತ ಪತ್ರಿಕೆ ಈಗಲೂ ಇದೆ. ಇದನ್ನು ಮತ್ತು ಇದನ್ನು ಓದಿ. ನಾನೂ ಆ ಪತ್ರಿಕೆಗೆ ೫೦ ವಾರಗಳ ಕಾಲ "ಜಾಲಜಗತ್ತು" ಹೆಸರಿನಲ್ಲಿ ಅಂಕಣ ಬರೆದಿದ್ದೇನೆ.

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 15, 2005 - 9:20am — pavanaja

ದೀನದ ವಿರುದ್ಧ ದರ್ಪ

pavanaja's picture

ಈಗಷ್ಟೆ ಪ್ರೊ. ಜಿ. ವೆಂಕಟಸುಬ್ಬಯ್ಯನವರೊಡನೆ ಮಾತನಾಡಿ ಅವರು ಹೇಳಿದ್ದನ್ನೇ ಇಲ್ಲಿ ಬರೆಯುತ್ತಿದ್ದೇನೆ. ದೀನ ಪದದ ವಿರುದ್ಧ ಪದ ದರ್ಪ. ಈ ನೆವದಲ್ಲಿ ಅವರೊಡನೆ ಮತ್ತೊಮ್ಮೆ ಮಾತನಾಡುವಂತೆ ಮಾಡಿದ್ದಕ್ಕೆ ಧನ್ಯವಾದಗಳು.

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 15, 2005 - 9:40am — Sunil Jayaprakash

ದೀನ ನಾಮಪದವೋ ಅಥವಾ ಕ್ರಿಯಾಪದವೋ

Sunil Jayaprakash's picture

ಗುರುಗಳೇ ಹೇಳಿದ ಮೇಲೆ, ಎರಡು ಮಾತಿಲ್ಲ.
ನನಲ್ಲಿ ಇನ್ನೊಂದು ಸಂದೇಹವಿದೆ, ದೀನ ನಾಮಪದವೋ ಅಥವಾ ಕ್ರಿಯಾಪದವೋ
ನನಗನ್ನಿಸುವ ಪ್ರಕಾರ,
ದೀನ ನಾಮಪದವೋ, ದೀನನಲ್ಲಿರುವ ಗುಣ ದೈನ್ಯತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 15, 2005 - 10:09am — Rohit

ಹೌದಲ್ವೇ

Rohit's picture

ನೀವು ಹಾಕಿರೋ ಪಾಯಿಂಟ್ ಸರಿಯಿದೆ ಅನ್ಸುತ್ತೆ. ದೀನನ ಗುಣ ಧೈನ್ಯತೆ... ಜಿವಿಯವರ ವಿವರಣೆಯನ್ನು ಇಲ್ಲಿ ಹಾಕಿದ್ರೆ ಚೆನ್ನಾಗಿರೋದು. ಅನಾವಶ್ಯಕ ಗೊಂದಲ ನಿವಾರಣೆಯಾಗಿರೋದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 15, 2005 - 4:51pm — olnswamy

ದೀನ-ದರ್ಪ?

olnswamy's picture

ಪ್ರಿಯ ಪವನಜ,
ಜಿವಿಯವರು ಹೇಳಿದ್ದು ಒಂದರ್ಥದಲ್ಲಿ ಸರಿ. ಆದರೆ ದಾನಿ ಕೂಡ ದೀನದ ವಿರುದ್ಧ ಆದೀತಲ್ಲವೆ? ಅದೀನ ಕೂಡ, ನಿರ್ ದೀನ ಇತ್ಯಾದಿ ಬೆಳೆಸುತ್ತ ಹೋಗಬಹುದು. ನನ್ನ ವಾದ ಇಷ್ಟೆ. ವಿರುದ್ಧಾರ್ಥ ಅನ್ನುವುದು ಭಾಷೆಯ formal ಅಂದರೆ ರೂಪನಿಷ್ಠ ಲಕ್ಷಣವಲ್ಲ, semantic ಅರ್ಥ ಆಧಾರಿತ ಪರಿಕಲ್ಪನೆ. ಅಂದರೆ ವ್ಯಕ್ತಿಯ ಭಾವ ಮತ್ತು ತಿಳಿವಳಿಕೆಯ ಮಟ್ಟಕ್ಕೆ ಅನುಗುಣವಾಗಿ ಒಂದು ಪದಕ್ಕೆ ಹಲವು ಪದಗಳು ವಿರುದ್ಧಾರ್ಥಕವಾಗಿ ಕಾಣುವುದು ಸಾಧ್ಯ. ಹಾಗಿರುವಾಗ ಮಕ್ಕಳಿಗೆ ಒಂದು ಪದಕ್ಕೆ ಇನ್ನೊಂದು ಮಾತ್ರ ವಿರುದ್ಧಾರ್ಥ ಅಂತ ಕಲಿಸುವುದು ಎಷ್ಟು ಸರಿ? ಈ ಬಗ್ಗೆ ನನ್ನ ಅನುಮಾನಗಳನ್ನು ಪ್ರತ್ಯೇಕವಾಗಿ ಬರೆದು ಪೋಸ್ಟ್ ಮಾಡಿದ್ದೇನೆ, ದಯವಿಟ್ಟು ಪ್ರತಿಕ್ರಿಯೆ ತೋರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭಿನ್ನ ಅರ್ಥ, ವಿರುದ್ಧ ಅರ್ಥ ಮತ್ತು ಸಮಾನ ಅರ್ಥ
  • ಕಣ್ಣು: ಪದ ಹಳತು, ಬಳಕೆ ಹೊಸತು
  • ರಾಜ್ಯದ ವಿರುದ್ಧ ಷಡ್ಯಂತ್ರ ರೂಪಿಸಿದವರಿಗೆ ಸುಪ್ರೀಮ್ ಕೋರ್ಟ್ ಜಾಮೀನು.
  • ಕನ್ನಡ ನುಡಿಗೆ ಮುಂದಿನ ದಿಕ್ಕು
  • ಕನ್ನಡ ಕಲಿಯುವದು ಕಷ್ಟವೇ?
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ
  • ಬಾರೋ ಸಾಧನಕೇರಿಗೆ...
  • ಹಿಂದಿಚಲನಚಿತ್ರ, ’ಮಧುಮತಿ’ ಯನ್ನು ಗೆಳೆಯರಜೊತೆ ನೋಡುವ ಸಂದರ್ಭ ಬಂತು. ವಾ...ಎಂತಹ ಮಧುರ ಚಿತ್ರೀಕರಣ ! ಈಗ ನೋಡಿದಂತಿದೆ !

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 24, 2008 - 11:18am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 63 ಅತಿಥಿಗಳು ಆನ್ಲೈನ್ ಇರುವರು.


ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator