ಮಹಾಶಿವರಾತ್ರಿ.....
ತ್ರಿಮೂರ್ತಿ, ತ್ರಿನೇತ್ರ, ತ್ರಿಕಾಲಮೂರ್ತಿ
ಮಹಾಶಿವರಾತ್ರಿ.....
ಶಿವರಾತ್ರಿಯ ಉತ್ಸಹವನ್ನು ಪ್ರತಿ ವರ್ಷ ದೇಶದಾದ್ಯಂತ ಆಚರಿಸಲಾಗುತ್ತದೆ. ಶಿವನ ದರ್ಶನವನ್ನು ಪಡೆದು ಬಿಲ್ವ ಪತ್ರವನ್ನು ಆರ್ಪಿಸಿ,ಉಪವಾಸವನ್ನು ಆಚರಿಸಿ ಇಡೀ ರಾತ್ರಿ ಜಾಗರಣೆಯನ್ನು ಮಾಡಿ ಶಿವರಾತ್ರಿಯನ್ನು ಆಚರಿಸಲಾಗುವುದು
ತ್ರಿಮೂರ್ತಿ, ತ್ರಿನೇತ್ರ,ತ್ರಿಕಾಲದರ್ಶಿ ಮತ್ತು ತ್ರಿಲೋಕನಾಥ ಎಂದು ಕರೆಯಲ್ಪಟ್ಟು ಲಿಂಗ ರೂಪದಲ್ಲಿರುವ ಪರಮ ಶಿವನನ್ನು ನಿರ್ವಿಕಾರ ರೂಪನೆಂಬಂತೆ ಪೂಜಿಸಲಾಗುತ್ತಿದೆ.
ಪ್ರಮುಖ ದೇವರ ಜನ್ಮವನ್ನು ದಿವಸದಲ್ಲಿ ಆಚರಿಸುತ್ತೇವಾದರೂ ಶಿವನ ಜನ್ಮ ದಿನವನ್ನು ಶಿವರಾತ್ರಿಯೆಂದು ರಾತ್ರಿಯಲ್ಲಿ ಆಚರಿಸುತ್ತಿರುವುದು ವಿಲಕ್ಷಣವಾದ ಸಂಗತಿ. ಹಿಂದೂ ಕ್ಯಾಲಂಡರ್ ನ ಅಂತಿವ ಮಾಸವಾದ ಫಾಲ್ಗುಣದ ೧೪ ನೇ ದಿನದಂದು ಅತ್ಯಂತ ಅಂಧಕಾರಮಯ ದಿನವಾಗಿರುವ ಅಮಾವಾಸ್ಯೆಯ ಮುಂದಿನ ದಿ ಶಿವರಾತ್ರಿಯು ಆಚರಿಸಲ್ಪಡುತ್ತದೆ.
ಪರಶಿವನು ಸರ್ವರಿಗೂ ಒಳ್ಳೆಯದನ್ನೇ ಮಾಡಲಿ.

- Login or register to post comments
- 168 hits
- Email this page





RSS:
ಪ್ರತಿಕ್ರಿಯೆಗಳು
ಉ: ಮಹಾಶಿವರಾತ್ರಿ.....
ಶಿವ ರಾತ್ರಿ ಶಿವನ ಜನ್ಮದಿನವೇ....? ಇದು ನಾನು ಮೊದಲ ಬಾರಿಗೆ ಕೇಳುತ್ತಿರುವುದು. ಹಾಗಿದ್ದರೆ, happy birth day to him...
................................................................
ಹಾಸ್ಯಕ್ಕೆ ಮೀಸಲಾದ ನನ್ನ ಬ್ಲಾಗು: http://nagenagaaridotcom.wordpress.com
ಭೇಟಿ ಕೊಡಿ, ಓದಿ, ಸಲಹೆ ನೀಡಿ, ನೀವೂ ಬರೆಯಿರಿ
ಉ: ಮಹಾಶಿವರಾತ್ರಿ.....
ಮುಂದಾದರೂ.....
ಶಿವನ ಬರ್ತ್ ಡೇ ಯನ್ನು ನೆನಪಿನಲ್ಲಿ ಆಚರಿಸಿರಿ........"ಮುಂದಿನ ವರ್ಷ ಮರೆಯದಿರಿ....."
"ಧನ್ಯವಾದ"
ಪ್ರಸಾದ್ ಬಿ ಶೆಟ್ಟಿ
ಉ: ಮಹಾಶಿವರಾತ್ರಿ.....
೮ನೇ ಮಾರ್ಚ್ ೨೦೦೮ರಂದು ರಾತ್ರಿ ದೂರದರ್ಶನದ “ಚಂದನ” ಚಾನೆಲ್‍ನಲ್ಲಿ ಶಿವರಾತ್ರಿಯ ಆಚರಣೆಯ ಬಗ್ಗೆ ಶ್ರೀ ಪಾವಗಢ ಪ್ರಕಾಶರಾವ್‍ರವರ ಉಪನ್ಯಾಸ ಬಿತ್ತರಿಸಲಾಯಿತು.
ಅವರ ಪ್ರಕಾರ ಒಮ್ಮೆ ಸೃಷ್ಟಿಕರ್ತನಾದ ಬ್ರಹ್ಮ ಅಹಂಕಾರ ಮತ್ತು ಉಧ್ಧಟತನದಿಂದ ತನ್ನ ತಂದೆಯಾದ ವಿಷ್ಣುವನ್ನು ಒಂದು ಪಂಥಕ್ಕೆ ಅಹ್ವಾನಿಸಿ ಅದರಲ್ಲಿ ಸೋತವರು ಗೆದ್ದವರಿಗೆ ಪೂಜೆ ಮಾಡಬೇಕು ಎಂದು ಶರತ್ತು ಹಾಕಿದನಂತೆ. ಸುಳ್ಳು ಸಾಕ್ಷ್ಯದ ಆಧಾರದ ಮೇಲೆ ಪಂಥವನ್ನು ಗೆದ್ದನಂತೆ. ಬಡಪಾಯಿ ವಿಷ್ಣು ಪಂಥದ ಶರತ್ತನ್ನು ನಿಭಾಯಿಸಲೋಸುಗ ತನ್ನ ಮಗನ ಪೂಜೆ ಮಾಡಲಾರಂಭಿಸಿದನಂತೆ. ಇನ್ನೇನು ಬ್ರಹ್ಮನ ಪೂಜೆ ಮುಗಿಸುವ ಕ್ಷಣದಲ್ಲಿ ಮಹಾಮಂಗಳಾರತಿ ಎತ್ತಬೇಕು ಎನ್ನುವಷ್ಟರಲ್ಲಿ ಕೋಪಾವಿಷ್ಟನಾದ ಪರಮಶಿವ ಮಧ್ಯೆ ಉದ್ಭವಿಸಿ ಬ್ರಹ್ಮನನ್ನು ತಂದೆಯಿಂದಲೇ ಪೂಜೆಮಾಡಿಸಿಕೊಳ್ಳುತ್ತಿರುವ ಅಧಿಕಪ್ರಸಂಗಿತನಕ್ಕಾಗಿ ನಿಂದಿಸಿದನಂತೆ. ಹಿಂದೊಮ್ಮೆ ಬ್ರಹ್ಮನ ತಪಸ್ಸಿನ ಕೋರಿಕೆಯ ಮೇರೆಗೆ ಶಿವನ ಒಂದು ಅಂಶ ಬ್ರಹ್ಮನ ಸೃಷ್ಟಿಯ ಅಂಗವಾಗಿ ಅವತರಿಸಿತ್ತು. ಅಹಂಕಾರದಿಂದ ಅಂಧನಾಗಿದ್ದ ಬ್ರಹ್ಮ ಶಿವನನ್ನು ಕುರಿತು ನೀನೂ ಕೂಡಾ ನನ್ನ ಸೃಷ್ಟಿಯಿಂದಲೇ ಅಸ್ತಿತ್ವಕ್ಕೆ ಬಂದದ್ದರಿಂದ ನೀನೂ ನನ್ನ ಮಗನ ಹಾಗೆಯೇ ಅಂದನಂತೆ. ಕೋಪ ತಡೆಯಲಾಗದ ಶಿವ ತನ್ನ ಮೂರನೆ ಕಣ್ಣಿನಿಂದ ಒಂದು ಮಾಂಸದ ತುಂಡನ್ನು ತೆಗೆದು ಕಾಲ ಭೈರವನನ್ನು ಸೃಷ್ಟಿಸಿದನಂತೆ. ಕಾಲಭೈರವ ತನ್ನ ಉಗುರಿನಿಂದ ಬ್ರಹ್ಮನ ನಾಲ್ಕು ಮುಖಗಳಲ್ಲಿ ಒಂದನ್ನು ಕಿತ್ತಿ ಬಿಟ್ಟನಂತೆ. ಹಾಗೆಯೇ ಬ್ರಹ್ಮನಿಗೆ ನಿನಗೆ ಈಗ ಆದದ್ದೇ ಕೊನೆಯ ಪೂಜೆ. ಮತ್ತೆಂದಿಗೂ ನಿನಗೆ ಯಾರೂ ಪೂಜೆ ಮಾಡಕೂಡದು ಎಂದು ಶಾಪವಿತ್ತನಂತೆ. ಅದಕ್ಕೇ ಬ್ರಹ್ಮನಿಗೆ ದೇವಾಲಯಗಳಿಲ್ಲ ಅಂತ ಪ್ರತೀತಿ.
ಶಿವನ ಅಂಶವಾದ ಕಾಲಭೈರವ ಹುಟ್ಟಿದ ಈ ರಾತ್ರಿ ಶಿವರಾತ್ರಿ ಅಂತ ಅವರ ವ್ಯಾಖ್ಯಾನ. ಶಿವನ Birthday ಅಂತೂ ಅಲ್ಲ!
ಬೇರೆ ಯಾರಾದರೂ ಈ ಕಥೆಯನ್ನು ಕೇಳಿದ್ದೀರಾ?
- ನವರತ್ನ ಸುಧೀರ್
ಉ: ಮಹಾಶಿವರಾತ್ರಿ.....
ಅರೆ! ಬ್ರಹ್ಮ ಮತ್ತು ವಿಷ್ಣುವಿನ ನಡುವಣ ಪಂಥದ ವಿವರ tvshrinivasರವರ ಈ ಲೇಖನದಲ್ಲೇ ಇದೆ.
ಕೊಂಡಿ ಹೀಗಿದೆ. - http://sampada.net/article/1246
- ನವರತ್ನ ಸುಧೀರ್
ಉ: ಮಹಾಶಿವರಾತ್ರಿ.....
ಒದುತ್ತೇನೆ....
~~~~~"ಧನ್ಯವಾದಗಳೊಂದಿಗೆ...."
ಪ್ರಸಾದ್ ಬಿ ಶೆಟ್ಟಿ
ಉ: ಮಹಾಶಿವರಾತ್ರಿ.....
ಸತ್ಯವೇ ಆಗಿರಬಹುದು...."
ಇನ್ನೋಂದು ಕಥೆಯೂ ಪ್ರಚಲಿತದಲ್ಲಿ ಇದೆ.....
ಊರಿನಲ್ಲಿರುವಾಗ ಒಂದು ಯಕ್ಷಗಾನ ನೋಡಿದ್ದೆ.......
ಸರಿಯಾಗಿ ನೆನೆಪಿಲ್ಲ....ಶಿವನ ಕೈಗೆ...ಬ್ರಹ್ಮನ ಒಂದು ತಲೆ..ಬುರುಡೆ...ಕcಚಿ ಹಿಡಿದಿರುವುದು....ಶಿವನ ನಂತರ...ಶಾಪ ವಿಮೋಚನೆಯಾಗುವುದು....
ಅದು ಯಾವ...ರೀತಿಯಲ್ಲಿ....?
ನಿಮಗೆ ಖಂಡಿತ ತಿಳಿದಿರಬಹುದು....ಆ ಕಥೆ...
ಪ್ಲೀಸ್....ಸ್ವಲ್ಪ..ಆದರ ಬಗ್ಗೆ...ತಿಳಿಸುವೀರಾ......?
ಪ್ರಸಾದ್ ಬಿ ಶೆಟ್ಟಿ
ಉ: ಮಹಾಶಿವರಾತ್ರಿ.....
ಕೃಷ್ಣನ ಪೂಜೆಯನ್ನು ರಾತ್ರಿ ಮಾಡ್ತಾರೆ.
ಉ: ಮಹಾಶಿವರಾತ್ರಿ.....
ನಿಮ್ಮ ಅಭಿಪ್ರಾಯವೂ ಸರಿ"...
ಕ್ರಷ್ಣ..ಅಷ್ಟಮಿ"ಯ ಪೂಜೆಯೂ ರಾತ್ರಿಯಲ್ಲಿಯೇ...ಇರುತ್ತದೆ......"
ಧನ್ಯವಾದಗಳು...."
GR8...."ans