ಪ್ರಶ್ನಾವಳಿ
೧. ’ಬಸವಯ್ಯ, ನೀನು ಕಲಿತವನು, ಲೋಕವೆಂಬುದು ಮಾಯೆ ಎಂದರಿತ ಸುಜ್ಞಾನಿ, ಪ್ರೇಮದೀ ಚಂಚಲತೆಯನ್ನು ಕಾವ್ಯಗಳನ್ನೋದಿ ತಿಳಿದವನು’ ಕುವೆಂಪು ವಿರಚಿತ ಯಾವ ನಾಟಕದ ಸಾಲುಗಳಿವು?
೨. ಅಗ್ನಿವರ್ಷ ಎಂಬ ಹಿಂದಿ ಚಲನಚಿತ್ರ ಯಾವ ಕನ್ನಡ ನಾಟಕವನ್ನು ಆಧರಿಸಿದೆ ಮತ್ತು ಅದರ ಕರ್ತೃ ಯಾರು?
೩. ಕನ್ನಡ ಕಾದಂಬರೀ ಪ್ರಪಂಚದಲ್ಲಿ ವಾಣಿಜ್ಯ ಜಗತ್ತನ್ನು ಮೊದಲು ಪರಿಚಯಿಸಿದ ಕಾದಂಬರಿಯ ಹೆಸರೇನು?
೪. ಕನ್ನಡಕ್ಕೊಂದು ಶಾಸ್ತ್ರೀಯ ನಿಘಂಟು ನೀಡಿದ ಹೆಗ್ಗಳಿಕೆ ಕಿಟೆಲರದು. ಅದಿರಲಿ, ಕನ್ನಡದ ಯಾವುದೇ ನಿಘಂಟಿನಲ್ಲಿ ಮೊದಲು ಕಾಣಸಿಗುವ ಪ್ರಾಣಿ ಯಾವುದು?
೫. ಯೇಸುಕ್ರಿಸ್ತನ ಕೊನೆಯ ಕ್ಷಣಗಳನ್ನು ದಾಖಲಿಸಿರುವ ಗೋವಿಂದ ಪೈಯವರ ಕಥನಕವನದ ಶೀರ್ಷಿಕೆ ಏನು?

- Login or register to post comments
- 426 hits
- Email this page





RSS:
ಪ್ರತಿಕ್ರಿಯೆಗಳು
ಉ: ಪ್ರಶ್ನಾವಳಿ
೨. ಅಗ್ನಿ ಮತ್ತು ಮಳೆ - ಗಿರೀಶ್ ಕಾರ್ನಾಡರ ಈ ನಾಟಕದ ಮೇಲೆ ಆಧಾರಿತ ಸಿನೆಮಾ ಅಗ್ನಿವರ್ಷ. ಈ ಕಥೆ ವೇದದಲ್ಲಿಂದ (ಯಜುರ್ವೇದ?) ತೆಗೆದುಕೊಂಡ ಕಥೆ
೩. ಚಿತ್ತಾಲರ ಶಿಕಾರಿ?
೫. ಗೊಲ್ಗೊಥಾ
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಉ: ಪ್ರಶ್ನಾವಳಿ
ನಿಮ್ಮ ಮೂರೂ ಉತ್ತರಗಳು ಸರಿಯಾಗಿವೆ. ಪ್ರಶ್ನೆ ೪ ಅನ್ನು ಉತ್ತರಿಸಲು ನೀವು ಪ್ರಯತ್ನಿಸಬಹುದಿತ್ತೇನೋ? ಪ್ರಶ್ನೆಯ ವಾಕ್ಯರಚನೆ ಸರಿಯಿಲ್ಲವೇ ಸರ್?
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಪ್ರಶ್ನಾವಳಿ
"ಕಾಣಸಿಗುವ" ಎಂದಾಕ್ಷಣ ನನಗನಿಸಿದ್ದು ಚಿತ್ರರೂಪ ಎಂದು. ನಿಘಂಟುಗಳಲ್ಲಿ ಚಿತ್ರಗಳನ್ನೂ ಸೇರಿಸಿರುತ್ತಾರಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಪ್ರಶ್ನಾವಳಿ
೧. ರಕ್ತಾಕ್ಷಿ
ಉ: ಪ್ರಶ್ನಾವಳಿ
ಪ್ರಶ್ನೆ ೧ ಕ್ಕೆ ನಿಮ್ಮ ಉತ್ತರ ಸರಿಯಿದೆ. ಅಭಿನಂದನೆಗಳು.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಪ್ರಶ್ನಾವಳಿ
೪. ಆನೆ?
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಪ್ರಶ್ನಾವಳಿ
ನಾಡಿಗರೇ, ನಿಮ್ಮ ಉತ್ತರ ತಪ್ಪು.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಪ್ರಶ್ನಾವಳಿ
ಅಜ?
(ಆಡು)
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಪ್ರಶ್ನಾವಳಿ
ಅಗದಿ ಬರೋಬ್ಬರ್....!!!!
ಉ: ಪ್ರಶ್ನಾವಳಿ
೪. ಅಳಿಲು ??
ಉ: ಪ್ರಶ್ನಾವಳಿ
ಸುನಿಲರೇ, ಸ್ವಲ್ಪ ಹತ್ತಿರ ಬಂದಿದ್ದೀರಿ. ಇನ್ನೂ ಪ್ರಯತ್ನಿಸಿ ನೋಡಿ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಪ್ರಶ್ನಾವಳಿ
ಅಮ್ಮ
ಉ: ಪ್ರಶ್ನಾವಳಿ
ರೀಈಈಈಈ. ಏನ್ರೀ ಇದು. ಉತ್ತರ.
ಉ: ಪ್ರಶ್ನಾವಳಿ
ಕಪಾಟಿನ ಕೊನೆಯಲ್ಲಿದ್ದ ನಿಘಂಟನ್ನು ತೆಗೆದು ಧೂಳು ಹೊಡೆದಾಗ ಮೊದಲು ಸಿಕ್ಕಿದ್ದು silver fish.
ನಂತರ ಮೊದಲ ಪುಟದಲ್ಲಿ ಅಕ್ಷರದಲ್ಲಿ ಸಿಕ್ಕಿದ ಪ್ರಾಣಿ-ಅಂಚೆ.
ಗಣೇಶ.
ಉ: ಪ್ರಶ್ನಾವಳಿ
ಉತ್ತರಗಳು
೧. ’ಬಸವಯ್ಯ, ನೀನು ಕಲಿತವನು, ಲೋಕವೆಂಬುದು ಮಾಯೆ ಎಂದರಿತ ಸುಜ್ಞಾನಿ, ಪ್ರೇಮದೀ ಚಂಚಲತೆಯನ್ನು ಕಾವ್ಯಗಳನ್ನೋದಿ ತಿಳಿದವನು’ ಕುವೆಂಪು ವಿರಚಿತ ಯಾವ ನಾಟಕದ ಸಾಲುಗಳಿವು? ರಕ್ತಾಕ್ಷಿ
೨. ಅಗ್ನಿವರ್ಷ ಎಂಬ ಹಿಂದಿ ಚಲನಚಿತ್ರ ಯಾವ ಕನ್ನಡ ನಾಟಕವನ್ನು ಆಧರಿಸಿದೆ ಮತ್ತು ಅದರ ಕರ್ತೃ ಯಾರು? ಅಗ್ನಿ ಮತ್ತು ಮಳೆ / ಗಿರೀಶ ಕಾರ್ನಾಡ
೩. ಕನ್ನಡ ಕಾದಂಬರೀ ಪ್ರಪಂಚದಲ್ಲಿ ವಾಣಿಜ್ಯ ಜಗತ್ತನ್ನು ಮೊದಲು ಪರಿಚಯಿಸಿದ ಕಾದಂಬರಿಯ ಹೆಸರೇನು? ಚಿತ್ತಾಲರ ಶಿಕಾರಿ
೪. ಕನ್ನಡಕ್ಕೊಂದು ಶಾಸ್ತ್ರೀಯ ನಿಘಂಟು ನೀಡಿದ ಹೆಗ್ಗಳಿಕೆ ಕಿಟೆಲರದು. ಅದಿರಲಿ, ಕನ್ನಡದ ಯಾವುದೇ ನಿಘಂಟಿನಲ್ಲಿ ಮೊದಲು ಕಾಣಸಿಗುವ ಪ್ರಾಣಿ ಯಾವುದು? ಅಜ
೫. ಯೇಸುಕ್ರಿಸ್ತನ ಕೊನೆಯ ಕ್ಷಣಗಳನ್ನು ದಾಖಲಿಸಿರುವ ಗೋವಿಂದ ಪೈಯವರ ಕಥನಕವನದ ಶೀರ್ಷಿಕೆ ಏನು? ಗೊಲ್ಗೊಥಾ
ಈ ಪ್ರಶ್ನಾವಳಿಯನ್ನು ಬಿಡಿಸಲು ಪ್ರಯತ್ನಿಸಿದ ಎಲ್ಲರಿಗೂ ಧನ್ಯವಾದಗಳು.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಪ್ರಶ್ನಾವಳಿ
ಜೋಸೆಪ್ ರವರೆ,
'ಅಜ' ಎಂಬ ಪದ ಕೊಳಂಬೆ ಪುಟ್ಟಣ್ಣಗವ್ಡರ ನುಡಿಗಂಟಿನಲ್ಲಿ ಇಲ್ಲವೇ ಇಲ್ಲ.
ನೀವು ಕೇಳಿರುವ ಕೇಳ್ಮೆ "ಕನ್ನಡದ ಯಾವುದೇ ನಿಗಂಟಿನಲ್ಲಿ ಮೊದಲು ಕಾಣಸಿಗುವ ಪ್ರಾಣಿ ಯಾವುದು" ?
ಇದಕ್ಕೆ ಸುನೀಲ ಹೇಳಿದ 'ಅಳಿಲು' ಸರಿಯುತ್ತರವಾಗಬಹುದು ಅನ್ಸುತ್ತೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪ್ರಶ್ನಾವಳಿ
ಭರತರೇ,
ಕೊಳಂಬೆ ಪುಟ್ಟಣ್ಣಗೌಡರ ನಿಘಂಟಿನಲ್ಲಿ ಅಜ ಇಲ್ಲವೇ? ಆಶ್ಚರ್ಯ! ಅವರೆಲ್ಲೋ ಬ್ರಹ್ಮದ್ವೇಷಿ ಇರಬೇಕು. (ಅಜ = ಮೇಕೆ, ಅಜ = ಬ್ರಹ್ಮ)
ಗಣೇಶರು ಸೂಚಿಸಿದ ಅಂಚೆ (ಹಂಸ) ಎಂಬ ಉತ್ತರ ನೋಡಿ ನನಗೂ ಗಾಬರಿಯಾಯಿತು. ಕೂಡಲೇ ಬುಚರ್ ನಿಘಂಟು ತೆರೆದು ನೋಡಿದೆ. ಅಜ ಆದ ಮೇಲೆಯೇ ಅಂಚೆ ಬರುತ್ತೆ. ಆಮೇಲೆ ಅಳಿಲು ಬರುತ್ತೆ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಪ್ರಶ್ನಾವಳಿ
ಇದರಲ್ಲೇನು ಅಚ್ಚರಿ.
ಕೊಳಂಬೆಯವರ ನುಡಿಗಂಟಿನಲ್ಲಿ ಯಾವುದೇ ಸಕ್ಕದ ಪದಗಳಿಲ್ಲ. ಅದಕ್ಕೆ ಅದನ್ನು ಅಚ್ಚಗನ್ನಡ ನುಡಿಗಂಟು ಅಂತ ಹೆಸರಿಡಲಾಗಿದೆ.
'ಅಜ' ಇದು ಸಕ್ಕದದ ಒರೆ.
ಇನ್ನೊಂದು ವಿಶಯ,
ಕೊಳಂಬೆಯವರ ನುಡಿಗಂಟಿಗೆ ಮುನ್ನುಡಿ ಬರೆದವರು ಇನ್ಯಾರು ಅಲ್ಲ. ನಮ್ಮ ಹೆಗ್ಗಬ್ಬಿಗರಾದ ಸಿರಿ 'ಕುವೆಂಪು'.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪ್ರಶ್ನಾವಳಿ
ಅಜ = ಮೇಕೆ/ಆಡು
ಅಜ = ಹುಟ್ಟದಿರುವವನು, ಎಶ್ಟೋ ಮಂದಿ ಬ್ರಹ್ಮರು( ದಕ್ಷನೂ ಒಬ್ಬ)
ಎರಡಂಚೆಗಳು
ಅಂಚೆ = ಹಂಸೆ( ತದ್ಭವ)
ಅಂಚೆ = ಟಪಾಲು ( ಕನ್ನಡದ್ದೇ ಪದ; ತಮಿಳಲ್ಲೂ ಇದೆ )
ಕೊಳಂಬೆಯವರು ’ಅಚ್ಚಕನ್ನಡ ನುಡಿಕೋಶ’ ಎರವಲು/ಹೊರನುಡಿಯ ಒರೆಗಳಲ್ಲಿ ದೊರೆಯವು.!!