ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಶ್ರೀರಾಮಕ್ರಿಷ್ಣ ಪರಮಹಂಸರು

March 9, 2008 - 1:00pm — sreepadhr
ಶ್ರೀರಾಮಕ್ರಿಷ್ಣ ಪರಮಹಂಸ

ಶ್ರೀರಾಮಕ್ರಿಷ್ಣ ಪರಮಹಂಸರು
`ಸತ್ಸಂಗಿ`, ಹೊಳೆನರಸೀಪುರ
( ಇಂದು ದಿ: 09-03-2008 - ಹಿಂದೂ ಪಂಚಾಂಗದ ಪ್ರಕಾರ ಇಂದು ಪರಮಹಂಸರ ಜನ್ಮದಿನವಾಗಿದೆ.
ಆದ್ದರಿಂದ ಅವರ ಸ್ಮರಣೆಗಾಗಿ ಈ ಸಂಕ್ಷಿಪ್ತ ಲೇಖನವನ್ನು ಪ್ರಕಟಿಸಿ ಅವರಿಗೆ ವಂದನೆಗಳನ್ನು ಸಲ್ಲಿಸಿರುವೆ)
ಶ್ರೀರಾಮಕ್ರಿಷ್ಣ ಪರಮಹಂಸರು ನವಯುಗದ ಅವತಾರವಾಗಿದ್ದಾರೆ. ಹಿಂದೆಲ್ಲಾ ಭಗವಂತನು ದುಷ್ಟರ ಶಿಕ್ಷಣೆಗಾಗಿ ಹಾಗೂ ಶಿಷ್ಟರ ರಕ್ಷಣೆಗಾಗಿ ಹಲವಾರು ಅವತಾರಗಳನ್ನು ಎತ್ತಿದ್ದನೆಂಬ ವಿಚಾರ ನಮಗೆಲ್ಲಾ ತಿಳಿದೇ ಇದೆ. ಆ ಅವತಾರಗಳಲ್ಲಿ ಆತ ದುಷ್ಟರನ್ನು ಸಂಹಾರ ಮಾಡಿಯೇ ಶಿಷ್ಟರ ರಕ್ಷಣೆಯನ್ನು ಮಾಡಲಾಗಿದೆ. ಆದರೆ ಭಗವಂತನ ಈ ಅವತಾರವಾದರೋ ಅಂತಿರದೆ ಇಲ್ಲಿ ವಿಶೇಷತೆಯಿರುವುದು ಕಂಡುಬಂದಿದೆ. ಇಲ್ಲಿ ಅವನು ಗುರುವಿನ ರೂಪದಲ್ಲಿ ಬಂದಿದ್ದು, ಇಲ್ಲಿ ದುಷ್ಟರನ್ನು ಕೊಲ್ಲಲಿಲ್ಲ. ಬದಲಿಗೆ ಕೇವಲ ದುಷ್ಟತನವನ್ನು ಕೊಂದು ವ್ಯಕ್ತಿಯಲ್ಲಿ ಕೇವಲ ಸಾತ್ವಿಕತನ ಮಾತ್ರ ುಳಿಯುವ0ತೆ ಮಾಡಲಾಗಿದೆ. ಪರಮಹಂಸರು ತಮ್ಮ ಬಳಿಗೆ ಬಂದವರೆಲ್ಲರ ಅಂತಃಕರಣವನ್ನೇ ಪ್ರವೇಶಿಸಿ ಆಮೂಲಾಗ್ರವಾದ ಬದಲಾವಣೆ ಉಂಡಾಗುವಂತೆ ಮಾಡಿದ ಗುರುದೇವರಾಗಿದ್ದಾರೆ.
ಪರಮಹಂಸರು ಭಾರತಮಾತೆಯ ಮಡಿಲಿನಲ್ಲಿರುವ ಪಶ್ಚಿಮಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಾಮಾರಪುಕುರವೆಂಬ ಪುಟ್ಟಗ್ರಾಮವೊಂದರಲ್ಲಿ 1836 ರ ಫಬ್ರವರಿ 18ನೇ ದಿನಾಂಕದಂದು ಜನಿಸಿದರು. ತಂದೆ ಖುದಿರಾಮ ಚಟ್ಟೋಪಾಧ್ಯಾಯರು, ತಾಯಿ ಚಂದ್ರಮಣಿದೇವಿಯವರು. ಆ ಬಡ ಕುಟುಂಬದಲ್ಲಿ ನಾಲ್ಕನೆಯ ಮಗುವಾಗಿ ಜನಿಸಿದ ಅವರಿಗೆ ಇಡಲಾದ ಬಾಲ್ಯನಾಮ `ಗದಾಧರ`. ಬಾಲ್ಯದಲ್ಲಿ ಅವರಿಗೆ ಅಣಕು ಮಾಡುವ ಪ್ರತಿಭೆ ಅಗಾಧವಾಗಿತ್ತು. ಒಮ್ಮೆ ನೋಡಿದ ನಾಟಕದ ಎಲ್ಲ ಪಾತ್ರಗಳನ್ನೂ ಅಂತೆಯೇ ಅಭಿನಯಿಸುತ್ತಿದ್ದರು. ಅವರು ತಮ್ಮ ಮನೆಯವರಿಗೆ ಮಾತ್ರವಲ್ಲದೇ ನೆರೆಹೊರೆಯವರಿಗೂ ಅಚ್ಚುಮೆಚ್ಚಿನ ಬಾಲಕರಾಗಿದ್ದರು. ಆದರೆ ಅವರಿಗೆ ಶಾಲೆಯಲ್ಲಿನ ವಿದ್ಯಾಭ್ಯಾಸ ಮಾತ್ರ ಹಿಡಿಸಲೇ ಇಲ್ಲ. ಅವರು ಹೆಚ್ಚಿನ ಶಿಕ್ಷಣ ಪಡೆದದ್ದು ಪ್ರಕ್ರುತಿಮಾತೆಯಿಂದ ಹಾಗೂ ಕೇಳಿದ ಹರಿಕಠೆಗಳು, ನೋಡಿದ ನಾಟಕಗಳಂದ ಮಾತ್ರ.
ಅವರು ಮುಂದೆ ತಮ್ಮ ಅಣ್ಣನೊಂದಿಗೆ ದಕ್ಷಿಣೇಶ್ವರದಲ್ಲಿ ಗಂಗೆಯ ದಡದಲ್ಲಿ ರಾಣಿ ರಾಸಮಣಿದೇವಿ ಕಟ್ಟಿಸಿದ ಕಾಳೀ ದೇವಾಲಯದಲ್ಲಿ ಪೂಜೆ ಮಾಡಲು ನೆರವಾಗಲು ತೆರಳುತ್ತಾರೆ. ಅಲ್ಲಿ ತನ್ನೊಂದಿಗೆ ಮಂತ್ರಗಳನ್ನು ಕಲಿತುಕೊಂಡು ಊರಲ್ಲಿನ ಮನೆಗಳಲ್ಲಿ ಪೂಜೆಗಳನ್ನು ಮಾಡಿಸಿ ಹಣ ದುಡಿಯುವಂತೆ ಅವರ ಅಣ್ನ ಹೇಳಿದಾಗ, ನನಗೆ ಗೊಟುಕಟ್ಟುವ ವಿದ್ಯ ಬೇಕಾಗಿಲ್ಲವೆಂದು ತಿಳಿಸಿದರು- ತಾವೇ ತಾವಾಗಿ ಉಳಿದರು. ಮುಂದೆ ಅಪ್ರತಿಮ ಸಾಧನೆ ಮಾಡಿದ ಅವರು ಕಾಳೀಮಾತೆಯನ್ನು ಸಾಕ್ಷಾತ್ಕರಿಸಿಕೊಂಡದ್ದೇ ಅಲ್ಲದೆ ಎಲ್ಲ ದೇವರುಗಳೂ ಒಂದೇ ಮೂಲತತ್ವದ ಬೇರೆ ಬೇರೆ ರೂಪಗಳು ಮಾತ್ರ ಎಂಬುದನ್ನು ತೋರಿಸಿಕೊಟ್ಟರು.
ದೇವರನ್ನು ಸಾಕ್ಷಾತ್ರಿಸಿಕೊಳ್ಳಲು ಇರುವ ಎಲ್ಲರೀತಿಯ ಸಾಧನೆಗಳನ್ನೂ ಮಾಡಿದ ಅವರು ಎಲ್ಲಾ ಮತೀಯರು ನಡೆಸುವ ುಪಾಸನಾ ವಿಧಾನಗಳನ್ನೂ ಸಹ ಅನುಸರಿಸಿ ಸಾಧನೆ ಮಾಡಿ ಆಯಾಯಾ ಮತಗಳ ದೇವರುಗಳನ್ನೆಲ್ಲಾ ಸಾಕ್ಷಾತ್ಕರಿಸಿಕೊಂಡು ಆ ಎಲ್ಲಾ ದೇವರುಗಳೂ ಬೇರೆಯಲ್ಲವೆಂಬುದನ್ನು ನಿರೂಪಿಸಿ ತೋರಿಸಿದರು.
ತಂತ್ರವಿದ್ಯೆ, ಅಧ್ಯಾತ್ಮವಿದ್ಯಗಳನ್ನೂ ಅಭ್ಯಸಿಸಿದ ಅವರು ತಮಗೆ ಗುರುಗಳಾಗಿ ಕಲಿಸಬಂದವರಿಗೇ ಗುರುವಾದರು. ಮುಂದೆ ತಾವೇ ಸೂಚಿಸಿದ ಕನ್ಯೆ `ಶಾರದೆ` ಯೊಡನೆ ವಿವಾಹವಾದರೂ ಆ ಮಹಾಸತಿ ಶಾರದಾಮಾತೆಯವರನ್ನು ತನ್ನ ಹೆತ್ತತಾಯಿ ಎಂಬಂತೆ ಕಂಡ ಮಹಾನುಭಾವ ಅವರು. ಅಷ್ಟೇ ಅಲ್ಲದೇ ತನ್ನ ಮಡದಿಯನ್ನೇ ದೇವಿಯನ್ನು ಕುಳ್ಳಿರಿಸುವ ಸ್ಥಳದಲ್ಲಿ ಕುಳ್ಳಿರಿಸಿ ಪೂಜಿಸಿದ ಮಹಾಮಹಿಮರವರು.
ಅವರು ಶಿಷ್ಯರೆಂದು ಯಾರನ್ನೆಲ್ಲಾ ಪರಿಗಣಿಸಿದರೋ ಅವರೆಲ್ಲಾ ಮುಂದೆ ಅಪ್ರತಿಮ ಸಂನ್ಯಾಸಿಗಳಾಗಿಯೂ ಇಲ್ಲವೇ ಅಪ್ರತಿಮ ವಿರಾಗಿಗಳಾಗಿಯೂ ಬಾಳಿ ಅವರ ುಪದೇಶಗಳನ್ನು ದೇಶವಿದೇಶಗಳಲ್ಲಿ ಪ್ರಚುರಪಡಿಸಿದ್ದಾರೆ. ಅಂತಹವರಲ್ಲಿ ಭಾರತಮಾತೆಯ ಹೆಮ್ಮೆಯ ಪುತ್ರ ವೀರಸಂನ್ಯಾಸಿ ವಿವೇಕಾನಂದರೂ ಒಬ್ಬರು.
ದಕ್ಷಿಣೇಶ್ವರದಲ್ಲಿಯೇ ಕೊನೆಯವರೆಗೂ ಕಾಳೀಮಾತೆಯ ಮಡಿಲಲ್ಲೇ ಇದ್ದು ಉಪದೇಶಿಸಿದ ಅವರು ಜಾತಿ-ಮತಗಳ ಬೇಧಭಾವವನ್ನು ಬಹುದೂರವಿಟ್ಟವರಾಗಿದ್ದರು. 1886 ರ ಆಗಸ್ಟ್ 16 ರಂದು ಅವರು ವಿಶ್ವಾತ್ಮರಾದರೂ ಅವರ ಚೇತನ ಇಂದಿಗೂ ಅವರನ್ನು ನೆನೆಸಿಕೊಂಡವರನ್ನೆಲ್ಲಾ ಸಲಹುತ್ತಾ ಸಾಗಿರುವ ಸಂಜೀವಿನಿಯಾಗಿದೆ.
ಅವರ ಜೀವನ, ಸಾಧನೆ ಹಾಗೂ ಉಪದೇಶಗಳ ಬಗೆಗೆ ಅರಿಯಬೇಕಾದಲ್ಲಿ ಕೆಳಗೆ ಸೂಚಿಸಿರುವ ಕೆಲ ಗ್ರಂಥಗಳನ್ನು ಅಗತ್ಯವಾಗಿ ಓದಲು ಸೂಚಿಸಬಹುದಾಗಿದೆ.
1. ಶ್ರೀರಾಮಕ್ರಿಷ್ಣ ವಚನವೇದ- ಮಹೇಂದ್ರನಾಥ ಗುಪ್ತ.
2. ಯುಗಾವತಾರ ಶ್ರೀರಾಮಕ್ರಿಷ್ಣ - ಸ್ವಾಮಿ ಪುರುಷೋತ್ತಮಾನಂದ.

ಕ್ರುತಙ್ಞತೆ: ಪ.ಪೂ. ಶ್ರೀ ಶ್ರೀ ಸ್ವಾಮಿ ವಿರಜಾನಂದಜೀ ಮಹಾರಾಜ್
`ದಿವ್ಯ ತ್ರಯರು` - ಸ್ವಾಮಿ ಸೋಮನಾಥಾನಂದಜೀ.

ಜೈ ಶ್ರೀರಾಮಕ್ರಿಷ್ಣ
ಶ್ರೀರಾಮಕ್ರಿಷ್ಣ ಪರಬ್ರಹ್ಮಣೇ ನಮಃ

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • Login or register to post comments
  • 207 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶ್ರೀರಾಮಕ್ರಿಷ್ಣ ಪರಮಹಂಸ
  • ತಂದೆ ತಾಯಿ ಮತ್ತು ಮಕ್ಕಳು
  • ಮಲ್ಲಾಡಿಹಳ್ಳಿ ಶ್ರೀ ಶ್ರೀ ರಾಘವೇಂದ್ರ ಸ್ವಾಮಿಗಳು, ಮಲ್ಲಾಡಿಹಳ್ಳಿ
  • ಶ್ರೀ ಶ್ರೀ ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರು , 'ರಂಗನಾಥಾಶ್ರಮ', ನೂಲೇನೂರ್ ಮತ್ತು ಕುಮಾರನಹಳ್ಳಿ
  • ಡಾ. ರಾಜಕುಮಾರ್. ಒಳ್ಳೆಯ ನಟ, ಹಾಗೂ ಗಾಯಕರೂ ಕೂಡ !
Syndicate content

ಲೇಖಕರು

sreepadhr's picture

ಪೂರ್ಣ ಹೆಸರು
ಶ್ರೀಪಾದ್

ಪರಿಚಯ

ಡಾ: ಹೊ.ರಾ. ಶ್ರೀಪಾದ್
ಭೌತಶಾಸ್ತ್ರ ುಪನ್ಯಾಸಕ
ಸ.ಪ್ರ.ದ. ಕಾಲೇಜು, ಹೊಳೆನರಸೀಪುರ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕಾಡುಕೋಳಿಯ ಜಾಡು ಹಿಡಿದು...
  • ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
  • ಕೋಸಿ-ಬಿಹಾರದ ಕಣ್ಣೀರು
  • ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!
  • ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ

ಇತ್ತೀಚಿನ ಪ್ರತಿಕ್ರಿಯೆಗಳು

  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:01pm
  • D.S.NAGABHUSHANA
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 8:37pm
ಇನ್ನಷ್ಟು
ಈಗಿನಂತೆ 14 ಸದಸ್ಯರು ಮತ್ತು 62 ಅತಿಥಿಗಳು ಆನ್ಲೈನ್ ಇರುವರು.


ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator