ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು
ಹೌದು ಕಾರುಗಳೂ ಸಹ ಲಿನಕ್ಸ್ ಬಳಸ್ತವೆ. ಅದ್ರಲ್ಲೂ ಚಾಲಕನೇ ಬೇಕಿಲ್ಲದ ಸ್ವಯಂಚಾಲಿತ ಕಾರುಗಳು. ಅಮೇರಿಕಾದ ಸಿ.ಈ.ಎಸ್ (CES) ಆಟೋಮೊಬೈಲ್ ಮೇಳದಲ್ಲಿ ಕಂಡು ಬಂದ ಕಾರ್ನಿಗಿ ಮೆಲ್ಲೊನ್ ಅನ್ನೋ ಈ ಸ್ವಯಂಚಾಲಿತ ಕಾರನಲ್ಲಿ ಉಬುಂಟು ಬಳಸಿಕೊಳ್ಳಲಾಗಿದೆ ಅನ್ನೋದೇ ಒಂದು ಕುತೂಹಲಕಾರಿ ಸಂಗತಿ. ಗೂಗಲ್, ನೆಟ್ಆಪ್ ಮತ್ತು ಇಂಟೆಲ್ ಪ್ರಾಯೋಜಿತ ಕಾರ್ನಿಗಿ ಈ ವರ್ಷದ ಡಾರ್ಪ(DARPA) ಚಾಲೆಂಜ್ ಅನ್ನ ಗೆದ್ದಿದೆ ಕೂಡ. ಈ ಸ್ವಯಂಚಾಲಿತ ಕಾರು ಡಜನ್ ಗಟ್ಟಲೆ "ಇಂಟೆಲ್ ಕೋರ್ ೨" ಪ್ರಾಸೆಸರ್ ಗಳನ್ನ ಬಳಸಿಕೊಳ್ಳುವುದರೊಂದಿಗೆ, ಉಬುಂಟು ೬.೦೬ "ಡ್ರಾಪರ್ ಡ್ರೇಕ್" ಲಿನಕ್ಸ ಅನ್ನ ತನ್ನ ಮೂಲ ತಂತ್ರಾಂಶವನ್ನಾಗಿ ಹೊಂದಿದೆ. ಉಬುಂಟು ೬.೦೬ ಯಾಕೆ ಬಳಸಿದ್ರು ಅದು ಹಳೇದಲ್ವಾ ಅಂತ ನಿಮಗನ್ನಿಸಿದರೆ, ಅದಕ್ಕೆ ಕಾರಣ ಕೂಡ ಇದೆ. ಉಬುಂಟು ೬.೦೬ ಎಲ್.ಟಿ.ಏಸ್ (Long Term Support) ಅತಿ ಹೆಚ್ಚುಕಾಲ ತಂತ್ರಾಂಶಕ್ಕೆ ಬೇಕಾದ ಟೆಕ್ನಿಕಲ್ ಸಪೋರ್ಟ್ ಕೊಡ್ತಿರೋದ್ರಿಂದ. ಈ ಕಾರು ಮುಂದಿನ ವರ್ಷಉಬುಂಟು ೮.೦೪ ಉಪಯೋಗಿಸ್ತದೆ ಅನ್ನೋದು ಕೂಡ ಬಿಸಿ ಬಿಸಿ ಸುದ್ದಿ.
ಕಾರೇನೂ ಅಷ್ಟು ಚೆನ್ನಾಗಿಲ್ಲ ಅಂತ ಗೇಲಿ ಮಾಡ್ತಿದ್ರೇನೋ, ಮುಖ ನೋಡಿ ಮಣೆ ಹಾಕ್ಬೇಡ್ರಿ.
ಸುದ್ದಿ ಮೂಲ ಫೋರೊನಿಕ್ಸ್

- Login or register to post comments
- 445 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು
ಸದ್ಯ ವಿಂಡೋಸ್ ಬಳಸಿ ಕಾರ್ ಓಡಿಸುವಾಗ ದಾರಿ ನಡುವೆ ಇದ್ದಕ್ಕಿದ್ದಂತೆ hang ಆಗಿ ರಿಸ್ಟಾರ್ಟ್ ಮಾಡಿ ಅಂದಿದ್ದರೆ ಗತಿ?
ಉ: ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು
ವಿಂಡೋಸ್ ಕಾರು ಕೆಟ್ಟು ತಲೆ ಕೆಡಿಸಿ ಕೊಳ್ಳೋದಕ್ಕಿಂತ ಸುಲಬವಾಗಿ ಈ ಕಾರು ಓಡ್ತದೆ ಸರ್, ವಿಂಡೋಸ್ ರೀ ಇನ್ಸ್ಟಾಲ್ ಮಾಡ್ಬೇಕಾಗಿ ಬರೋ ಸಂಧರ್ಬಗಳು ಜ್ಯಾಸ್ತಿ. ಆ ತಲೆ ನೋವೇ ಇಲ್ಲದೆ ೭ - ೮ ವರ್ಷ ಕಳೆದಿರುವುದರಿಂದ ನಿರಾತಂಕವಾಗಿ ನಿಮಗೆ ಇದರ ಬಗ್ಗೆ ಮಾಹಿತಿ ನೀಡೋ ಕೆಲಸ ಮಾಡ್ತಿದ್ದೇನೆ. ನಿಮ್ಮ ಟೆಕ್ನಿಕಲ್ ತೊಂದರೆಗಳಿಗಿನ ಪ್ರಶ್ನೆಗಳಿಗೂ ಉತ್ತರ ನನ್ನ ಮುಂಬರುವ ಲೇಖನ ಗಳಲ್ಲಿ ನಿಮಗೆ ಸಿಗ್ತದೆ. ನಿಮ್ಮ ಪ್ರಶ್ನೆಗೆ ಉತ್ತರವನ್ನ ನೀವೇ ಮುಂದೆ ಕಾಣಬಹುದು ಅಥವಾ ನಮ್ಮೊಂದಿಗೆ ಹಂಚಿಕೊಳ್ಳಬಹುದು.
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
ಉ: ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು
ಮೂರ್ತಿಗಳೇ,
ಲಿನಕ್ಸ್ ನ ಬಗೆಗಿನ ನನ್ನ ಗಾಡ ನಂಬಿಕೆ ಯಿಂದ ಮೇಲಿನ ಕಾಮೆಂಟ್ ಹಾಕಿದ್ದೇನೆ. ನಾನೇಳಿದ್ದು ಲಿನಕ್ಸ್ ತೊಂದರೆಗಳ ಬಗ್ಗೆ. ಕಾರಿನಲ್ಲೂ ಅದು ತೊಂದರೆ ಕೊಟ್ಟರೆ ಅದನ್ನ ಸರಿ ಪಡಿಸೋದು ಸುಲಭ ಅನ್ನೋದು ನನ್ನ ಭಾವನೆ. ಹ್ಯಾಂಗ್ ಆದರೂ ಅದರ ಕನ್ಸೋಲ್ (console) ಉಪಯೋಗಿಸಿ ಕೊಂಡು ಕಾರನ್ನು ಮರು ಚಾಲನೆಯನ್ನ ವಿಂಡೋಸ್ ಗಿಂತಲೂ ಬೇಗ ಚಾಲನೆ ಮಾಡಬಹುದು.
ನೀವು ಲಿನಕ್ಸ್ ಒಮ್ಮೆ ಉಪಯೋಗಿಸಿ ನೋಡಿ.
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
ಉ: ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು
ಹ್ಯಾಂಗ್ ಆದರೂ ಅದರ ಕನ್ಸೋಲ್ (console) ಉಪಯೋಗಿಸಿ ಕೊಂಡು ಕಾರನ್ನು ಮರು ಚಾಲನೆಯನ್ನ ವಿಂಡೋಸ್ ಗಿಂತಲೂ ಬೇಗ ಚಾಲನೆ ಮಾಡಬಹುದು.
ಲೋ....ಏನಪ್ಪಾ ಇದು.
ಉ: ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು
ವಿಂಡೋಸ್ ಗೆ ಒಂದೇ ಮುಖ, ಲಿನಕ್ಸನಲ್ಲಿ ಅದರ ಗ್ರಾಫಿಕಲ್ ಪರಿಸರದ (desktop environment) ಜೊತೆ ಮತ್ತಾರು ಕನ್ಸೋಲ್ (command prompt) ಗಳನ್ನೂ ಸಹ ಕೊಡ್ತಾರೆ ಸಾರ್. ಲಿನಕ್ಸಾಯಣ ಇದರಬಗ್ಗೆ ಇನ್ನು ಸ್ವಲ್ಪ ದಿನಗಳಲ್ಲೇ ಬೆಳಕು ಚೆಲ್ಲಲಿದೆ ನೋಡ್ತಿರಿ.
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
ಉ: ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು
ರಿಸ್ಟಾರ್ಟ್ ಮಾಡಿ ಅಂದು ನಿಂತರೆ ತೊಂದರೆಯಿಲ್ಲ. ಆದರೆ ಬ್ಲೂ ಸ್ಕ್ರೀನ್ ಆಫ್ ಡೆಥ್ ಬಂದರೇನು ಗತಿ? ಕಣ್ಣೆಲ್ಲ ಬ್ಲೂ ಬ್ಲೂ ಮಾಡಿಕೊಂಡು ನಮಗೆ ಡೆಥ್ ಬರದಿರಲೆಂದು ಜಪ ಮಾಡುತ್ತ ಕೂತಿರಬೇಕಷ್ಟೆ!
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು
ನಾನೂ ಲಿನಕ್ಸನ್ನು ಖುಷಿಯಿಂದ ಉಪಯೋಗಿಸುತ್ತಿದ್ದೇನೆ. ವಿಂಡೋಸ್ ಬಳಕೆ ಅನಿವಾರ್ಯವಾಗಿ ಮಾತ್ರ. ನಾನು ವಿಂಡೋಸ್ ಬಗ್ಗೆ ಬರೆದದ್ದು ಸ್ಪಷ್ಟವಾಗಲಿಲ್ಲ ಅಂತ ಕಾಣುತ್ತೆ. "ವಿಂಡೋಸ್ ಬಳಸುವ ಕಾರ್ hang ಆದರೆ ಏನು ಗತಿ" ಅಂತ ಬರೆದಿದ್ದೆ - ಲಿನಕ್ಸ್ hang ಆದರೆ ಅಂತ ಅಲ್ಲ. hpn ಬರೆದಂತೆ 'blue screen of death' ಎಲ್ಲರ ಅನುಭವಕ್ಕೂ ಬಂದಿರುತ್ತಲ್ಲ? ಕಾರ್‌ನಲ್ಲಾದರೆ screen ಅಲ್ಲ ನಿಜವಾದ death!