Firefox ಬಳಸುವ ಕನ್ನಡಿಗರಿಗೆ ಸಿಹಿ ಸುದ್ದಿ
ನಾನು ವೆಬ್ ಬ್ರೌಸ್ ಮಾಡಲು Firefox ಬಳಸುತ್ತೇನೆ. ಆದರೆ ಕನ್ನಡ ವೆಬ್ ಪೇಜ್ ಗಳಿಗೆ ಹೋದಾಗ ಅದು ಅಕ್ಷರಗಳನ್ನು ಸರಿಯಾಗಿ ತೋರಿಸುವುದಿಲ್ಲ. ಈಗ ಕೆಲವು ದಿನಗಳ ಹಿಂದೆ Firfox 3 beta 4 ವರ್ಶನ್ ಬಿಡುಗಡೆ ಮಾಡಿದ್ದಾರೆ. ನಾನು ಒಮ್ಮೆ ಪರೀಕ್ಷಿಸೋಣ ಎಂದು download ಮಾಡಿದೆ. ಅದರಲ್ಲಿ ಕನ್ನಡ ಸರಿಯಾಗಿ ಮೂಡುತ್ತಿದೆ
. Internet Explorer ನಲ್ಲಿ ಯಾವ ರೀತಿ ಕನ್ನಡ ಬರುತ್ತದೆಯೋ ಅದೇ ರೀತಿ Firfox 3 ನಲ್ಲೂ ಅಕ್ಷರಗಳು ಮೂಡುತ್ತದೆ. ಹೊಸ ಬಿಡುಗಡೆಯನ್ನು ನಿಮ್ಮ ಕಂಪ್ಯೂಟರ್ ಗೆ ಇಳಿಸಿಕೊಳಲು
http://www.mozilla.com/en-US/firefox/all-beta.html ಗೆ ಹೋಗಿರಿ.

- Login or register to post comments
- 686 hits
- Email this page





RSS:
ಪ್ರತಿಕ್ರಿಯೆಗಳು
ಉ: Firefox ಬಳಸುವ ಕನ್ನಡಿಗರಿಗೆ ಸಿಹಿ ಸುದ್ದಿ
ಹೌದು ನಾನೂ ಬೀಟ ಬಳಸುತ್ತಿದ್ದೇನೆ. ಕನ್ನಡ ತುಂಬಾ ಮುದ್ದಾಗಿ ಕಾಣಿಸುತ್ತಿದೆ. ಆದರೆ ಹಳೆಯ ವರ್ಶನ್‌ನಲ್ಲಿನ add-ons ಇಲ್ಲಿ ಕೆಲಸ ಮಾಡುತ್ತಿಲ್ಲ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: Firefox ಬಳಸುವ ಕನ್ನಡಿಗರಿಗೆ ಸಿಹಿ ಸುದ್ದಿ
ಹೌದು! firefoxನಲ್ಲಿ ಕನ್ನಡಕ್ಕೆ ಸಂಬಂಧಪಟ್ಟ ಕೆಲವು ಬಗ್ಸ್ (ಈ ಮುಂಚೆ justification ಕೆಟ್ಟು ಹೋಗುತ್ತಿತ್ತು. ಡಿಸೈನಿನಲ್ಲಿ letter-space, word-space ಕೊಟ್ಟರೆ ಸರಿಯಾಗಿ ಬರುತ್ತಿರಲಿಲ್ಲ) ಈ ಹೊಸ ಆವೃತ್ತಿಯೊಂದಿಗೆ ಸರಿಪಡಿಸಲಾಗಿದೆ.
ಜೊತೆಗೆ ಈ ಆವೃತ್ತಿ ನಿಮ್ಮ ಕಂಪ್ಯೂಟರಿನಲ್ಲಿ ಬಹಳ ಕಡಿಮೆ ಮೆಮೋರಿ ತಿನ್ನುತ್ತದೆ.
ಈ ಬಗ್ಗೆ ಹೆಚ್ಚಿನ ವಿವರ ತಿಳಿದ ನಾವುಗಳು ಯಾರಾದರೂ ಇದರ ಬಗ್ಗೆ ಒಮ್ಮೆ ಬ್ಲಾಗಿಸೋಣವಂತೆ
-
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: Firefox ಬಳಸುವ ಕನ್ನಡಿಗರಿಗೆ ಸಿಹಿ ಸುದ್ದಿ
ಹೌದು, ಇದು mac safari ಗಿಂತ ೧೦ ಪಟ್ಟು ಫಾಸ್ಟಾಗಿದೆ ಅಂತ Firefox ಹೇಳತ್ತೆ. ನಾವು ಅದನ್ನ ಅನುಭವಿಸಿ ತಿಳೀ ಬಹುದು.
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
ಉ: Firefox ಬಳಸುವ ಕನ್ನಡಿಗರಿಗೆ ಸಿಹಿ ಸುದ್ದಿ
ಪ್ರಜಾವಾಣಿಯಂತಹ ತಾಣಗಳು ಈಗಲೂ ಸರಿಯಾಗಿ ಕಾಣುವುದಿಲ್ಲ.
ಸಂಪದವೂ IEನಲ್ಲಿ ಕಾಣಿಸಿಕೊಂಡದ್ದಕ್ಕಿಂತ ಭಿನ್ನವಾಗಿ ಕಾಣುತ್ತಿದೆ. ಉದಾ:hpn ಬರಹಕ್ಕೆ ಪ್ರತಿಕ್ರಿಯೆ ನೀಡಲು ಲಿಂಕ್ ಕಾಣಿಸದು.
*ಅಶೋಕ್
ಉ: Firefox ಬಳಸುವ ಕನ್ನಡಿಗರಿಗೆ ಸಿಹಿ ಸುದ್ದಿ
ಪ್ರಜಾವಾಣಿ ಸರಿಯಾಗಿ ಕಾಣದೇ ಇರುವುದಕ್ಕೆ ಸದ್ಯ ಏನು ಮಾಡಲಿಕ್ಕಾಗುವುದಿಲ್ಲ ಅಂತಲೇ ಹೇಳಬೇಕು.
ಪ್ರಜಾವಾಣಿ ತಾನು ಬಳಸುವ ಫಾಂಟ್ ಡೌನ್ಲೋಡಿಗೆ ಕೊಡದೆ ಡೈನಮಿಕ್ ಆಗಿ (ಅಂದರೆ ಪೇಜ್ ರಿಕ್ವೆಸ್ಟ್ ಜೊತೆಗೆ ಅದರ ಬೈನರಿ ಕೊಡುವ ಮೂಲಕ) ಅದರ ಮಾಹಿತಿ ಕಳುಹಿಸುತ್ತದೆ.
ಪ್ರಜಾವಾಣಿ ಬಳಸುವ ಈ "ಡೈನಮಿಕ್ ಫಾಂಟ್ಸ್" ವಿಧಾನ ಸೆಕ್ಯೂರಿಟಿ ತೊಂದರೆಯಾಗಬಹುದಾದ ಕಾರಣದಿಂದ ಅದನ್ನು ಫೈರ್ ಫಾಕ್ಸಿನಲ್ಲಿ ಅಳವಡಿಸಿಲ್ಲ ಎಂದು ಓದಿದ ನೆನಪು.
ಆದರೆ ಅದನ್ನು firefoxಗೆ ಅಳವಡಿಸುವ ಬೇರೆ ವಿಧಾನವೂ ಉಂಟು. ಆ ವಿಧಾನ ಸ್ವತಃ ಪ್ರಜಾವಾಣಿಯವರೇ ತಮ್ಮ ಸೈಟಿನಲ್ಲಿ ಮಾಡಿಕೊಳ್ಳಬೇಕು
ಒಮ್ಮೆ ಈ ಬಗ್ಗೆಯೂ ಸಾಧ್ಯವಾದರೆ ವಿವರವಾಗಿ ಬರೆಯುವೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: Firefox ಬಳಸುವ ಕನ್ನಡಿಗರಿಗೆ ಸಿಹಿ ಸುದ್ದಿ
ಪ್ರಶಾಂತ್ ಅವರೆ,
ನಿಮ್ಮ ಬರಹ ನೋಡಿ ಅಲ್ಲಿನ ಲಿಂಕ್ ಬಳಸಿ ನಾನೂ ಫೈರ್‌ಫಾಕ್ಸ್ ಬೀಟಾ ಆವೃತ್ತಿಯನ್ನು ಇಳಿಸಿಕೊಂಡು ನನ್ನ ಕಂಪ್ಯೂಟರ್‍ನಲ್ಲಿ ಅಳವಡಿಸಿಕೊಂಡೆ. ನಾನು ಸಾಧಾರಣವಾಗಿ ಬ್ರೌಸಿಂಗ್‌ಗೆ ಬಳಸುವುದು Internet Explorerನ 7ನೇ ಆವೃತ್ತಿಯನ್ನು. ನನಗೆ ಫೈರ್‌ಫಾಕ್ಸ್ ಅದಕ್ಕಿಂತ ಉತ್ಕೃಷ್ಟವೆಂದೇನೂ ಅನ್ನಿಸಲಿಲ್ಲ. ಇನ್ನೂ ಇಂಟರ್‍ನೆಟ್ ಎಕ್ಸ್‌ಪ್ಲೋರರ್ ಬಳಸಿದಾಗ ಅಕ್ಷರಗಳು ಮುದ್ದಾಗಿ ಕಾಣುತ್ತವೆ ಅನ್ನಿಸಿತು. ಇವೆರಡು ಬ್ರೌಸರ್‌ಗಳ ತಾಂತ್ರಿಕ ವಿವರ ತಿಳಿದವರು ದಯವಿಟ್ಟು ತಿಳಿಸಿ. Internet Explorer 7ನಲ್ಲಿರುವ security features ಫೈರ್‌ಫಾಕ್ಸ್‌ನಲ್ಲಿ ಇವೆಯೇ? ಅಥವಾ ಫೈರ್‌ಫಾಕ್ಸ್ ಪುಕ್ಕಟೆ ಸಿಗುತ್ತದೆ ಎನ್ನುವುದೇ ಅದರ ಅಗ್ಗಳಿಕೆಯೆ?
ಉ: Firefox ಬಳಸುವ ಕನ್ನಡಿಗರಿಗೆ ಸಿಹಿ ಸುದ್ದಿ
^^^ ದನಿಗೂಡಿಸಿದೆನು!
ಉ: Firefox ಬಳಸುವ ಕನ್ನಡಿಗರಿಗೆ ಸಿಹಿ ಸುದ್ದಿ
Firefox ಯಾಕೆ IE ಗಿಂತ ಸುರಕ್ಷಿತ ಎಂದು ಹೇಳಲು ಬಹಳಷ್ಟು ತಾಂತ್ರಿಕ ವಿವರಣೆಗಳಿವೆ. ಅದರ ಬಗ್ಗೆ ಒಂದು ಸಂಪೂರ್ಣ ಲೇಖನ ಬರೆಯಬೇಕು. ಸದ್ಯಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ಬ್ಯಾಂಕಿಂಗ್ ವೆಬ್ ಸೈಟ್ ಗಳ ಫಿಶಿಂಗ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ನಿಮ್ಮ ಬ್ಯಾಂಕಿಂಗ್ ವೆಬ್ ಸೈಟ್ ಅನ್ನೇ ಹೋಲುವ ಕೃತಕ ವೆಬ್ ಸೈಟ್ ಗಳನ್ನು ಮಾಡಿ, ನಿಮ್ಮ ಪಾಸ್ ವರ್ಡ್ ಕದೆಯುತ್ತಾರೆ. Firfox ಇಂತಹ ವೆಬ್ ಸೈಟ್ ಗಳನ್ನು ತಕ್ಷಣ ಕಂಡುಹಿಡಿದು "ನೀವು ಹೋಗುತ್ತಿರುವ ವೆಬ್ ಸೈಟ್ ಅನುಮಾನಸ್ಪದವಾಗಿದೆ" ಎಂದು ತೋರಿಸುತ್ತದೆ. ಆದರೆ IE ನಲ್ಲಿ ಈ ತರಹದ ಯಾವುದೇ ಸೌಲಭ್ಯವಿಲ್ಲ. ಇದನ್ನು ಹೊರತು ಪಡಿಸಿ ಇನ್ನೂ ಸಾಕಷ್ಟು ಕಾರಣಗಳಿವೆ. ಅದರ ಬಗ್ಗೆ ಒಂದು ಲೇಖನ ಬರೆಯಲು ಪ್ರಯತ್ನಿಸುತ್ತೇನೆ
ಉ: Firefox ಬಳಸುವ ಕನ್ನಡಿಗರಿಗೆ ಸಿಹಿ ಸುದ್ದಿ
IE 7ನಲ್ಲಿ phishing website checking ಸೌಲಭ್ಯವಿದೆ.
ಇದರರ್ಥ ನಾನು IE ಯನ್ನು ಬೆಂಬಲಿಸುತ್ತೇನೆ ಅಂತ ಅಲ್ಲ
ಉ:
ಪ್ರಶಾಂತ್, ಈ ಬಗ್ಗೆ ಲೇಖನ ಬರೆಯಲೇಬೇಕು.
ಸಾಕಷ್ಟು ಜನರಿಗೆ ಗೊತ್ತೇ ಇಲ್ಲ ಅನ್ಸತ್ತೆ. ನಿಮ್ಮ ಬರಹಕ್ಕೆ ನಮ್ಮೆಲ್ಲರ ಪ್ರೋತ್ಸಾಹ ಉಂಟು!
ಶ್ರೀನಿವಾಸ್, ನೀವು ಬಹುಶಃ ಈ ಕುರಿತ ಸುದ್ದಿಗಳನ್ನು ಓದಿರಲಿಕ್ಕಿಲ್ಲ. ಪ್ರತಿ ವಾರ Internet Explorerನಲ್ಲಿ ಒಂದಲ್ಲ ಒಂದು ಸೆಕ್ಯೂರಿಟಿ ತೊಂದರೆ ಕಂಡುಬರುತ್ತಿರುತ್ತದೆ. ಹಾಗೆಂದು Firefoxನಲ್ಲಿ ಸೆಕ್ಯೂರಿಟಿ ತೊಂದರೆಗಳು ಕಂಡು ಬರುತ್ತಿಲ್ಲ ಎಂದಲ್ಲ. ಅದರಲ್ಲೂ ಒಮ್ಮೊಮ್ಮೆ ಸೆಕ್ಯೂರಿಟಿ ತೊಂದರೆಗಳು ಕಾಣಿಸಿಕೊಳ್ಳುತ್ತೆ, ಆದರೆ IEಗೆ ಹೋಲಿಸಿದರೆ ಬಹಳ ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿವೆ.
ಇಲ್ಲಿ ನೋಡಿ, Internet Explorerನಲ್ಲಿರೋ ತೊಂದರೆಗಳ ಇತ್ತೀಚಿನ ಸುದ್ದಿಗಳು:
ಮಾರ್ಚ್ 12 (!) ಎರಡು ವರ್ಷಗಳ ಮೈಕ್ರೊಸಾಫ್ಟ್ ಸರಿ ಮಾಡಿದ್ದೇವೆ ಎಂದಿದ್ದ ಬಗ್ ಇದು! (ವಾಷಿಂಗ್ಟನ್ ಪೋಸ್ಟ್)
ಮಾರ್ಚ್ 12 - IEನಲ್ಲಿರುವ ActiveX ಬಳಸುವ Realplayerನಲ್ಲೊಂದು ತೊಂದರೆ (ರೆಜಿಸ್ಟರ್ ಡಾಟ್ ಕೋ ಡಾಟ್ ಯೂಕೆ)
ಇನ್ನೂ ಸಾಕಷ್ಟು ಬರುತ್ತಲೇ ಇರುತ್ತವೆ. ActiveX ಅನ್ನೋದೆ ಒಂದು ದೊಡ್ಡ ರಂಪ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: Firefox ಬಳಸುವ ಕನ್ನಡಿಗರಿಗೆ ಸಿಹಿ ಸುದ್ದಿ
ವಿಸ್ಟಾದಲ್ಲಿ ಕನ್ನಡ ಎಲ್ಲಕ್ಕಿಂತ ಮುದ್ದಾಗಿ mooಡುತ್ತೆ... ಅಲ್ಲದೇ.. moo ಸರಿಯಾಗಿ mooಡುತ್ತೆ...
ಉ: Firefox ಬಳಸುವ ಕನ್ನಡಿಗರಿಗೆ ಸಿಹಿ ಸುದ್ದಿ
ರಮೇಶ್, ನೀವು ಬಹುಶಃ firefoxನಲ್ಲಿ add-ons ಬಳಸಿ ನೋಡಿರಲಿಕ್ಕಿಲ್ಲ. ಅದರಲ್ಲಿರುವ ಸ್ವಾತಂತ್ರ್ಯ, ಹೆಚ್ಚಿನ ಪವರ್ ನಿಮಗೆ IEಲಿ ಈ ಯುಗ ಕಳೆದರೂ ಸಿಗಲಿಕ್ಕಿಲ್ಲ
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: Firefox ಬಳಸುವ ಕನ್ನಡಿಗರಿಗೆ ಸಿಹಿ ಸುದ್ದಿ
firefox ಅದರ ಎಲ್ಲಾ add on ಗಳೊಂದಿಗೆ ಬಳಸಿದ ನಂತರ IE ಬಳಸುವುದು ನಿಜಕ್ಕೂ ಹಿಂಸೆ! ಆದರೆ ಕೆಲವು ಅಂತರ್ಜಾಲ ತಾಣಗಳು IE ಯಲ್ಲಿ ಮಾತ್ರ ಸರಿಯಾಗಿ ಕೆಲಸಮಾಡುವುದರಿಂದ ಅನಿವಾರ್ಯವಾಗಿ IEಯನ್ನೂ ಬಳಸಬೇಕಾಗಿದೆ. ಹೆಚ್ಚಿನ ಜನರು ಹೆಚ್ಚಿನದೇನನ್ನೂ ಬಯಸದೆ ಅಥವಾ experiment ಮಾಡಿ ನೋಡದೆ IEನೇ ಸರಿ ಅಂತಾರಲ್ಲಾ? firefoxನ್ನು ಬಳಸಿ ನೋಡಿ - ಅದರ add onಗಳನ್ನು - ನಿಮಗೆ ಬೇಕಾದ್ದು - ಹಾಕಿಕೊಂಡು ಖುಷಿಪಡಿ!
ಉ: Firefox ಬಳಸುವ ಕನ್ನಡಿಗರಿಗೆ ಸಿಹಿ ಸುದ್ದಿ
ಅನೇಕರ ಪ್ರತಿಕ್ರಿಯೆಗೆ ಒಮ್ಮೆಗೇ ಉತ್ತರಿಸುತ್ತಿದ್ದೇನೆ. ನನ್ನ ಪ್ರೊಫೈಲ್‌ನಲ್ಲಿ ನಾನು ಹೇಳಿಕೊಂಡಂತೆ ನಾನಿನ್ನೂ ಈ ಕ್ಷೇತ್ರಕ್ಕೆ ಹೊಸಬ. ನನ್ನ ಪ್ರತಿಕ್ರಿಯೆ, ನಿಮ್ಮಲ್ಲಿ ಹೆಚ್ಚಿನವರು ಗಮನಿಸಿರಬಹುದಾದಂತೆ, ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಅನ್ನು ಉತ್ಕೃಷ್ಟವೆಂದು ಪ್ರತಿಪಾದನೆ ಮಾಡುವುದಕ್ಕಲ್ಲ. ನಿಮ್ಮಲ್ಲಿ ಅನೇಕರು ಸಾಫ್ಟ್‌ವೇರ್ ಎಂಜಿನಿಯರ್‌ಗಳಂತೆ ನಾನು ಈ ಕ್ಷೇತ್ರದಲ್ಲಿ ತಜ್ಞನೂ ಅಲ್ಲ. ಆದರೆ ನಾನು ಬಳಸುವ Internet Explorer ನನಗೆ ಇಲ್ಲಿಯವರೆಗೆ ಯಾವ ತೊಂದರೆಯನ್ನೂ ಕೊಟ್ಟಿಲ್ಲ. ನಿಮ್ಮಲ್ಲೊಬ್ಬರು ಹೇಳಿರುವಂತೆ Internet Explorerನಲ್ಲೂ Phishing filter ಇದೆ. ಅದರ ಕಾರ್ಯದಕ್ಷತೆಯ ಬಗ್ಗೆ ನನಗೇನೂ ತಿಳಿಯದು. ಶ್ರೀ hpn ಅವರಲ್ಲಿ ವಿನಂತಿ, ದಯವಿಟ್ಟು ಯಾವ add-onಗಳನ್ನು ಬಳಸಿಕೊಂಡರೆ firefox ಉತ್ತಮವಾಗಿ ಕೆಲಸ ಮಾಡುತ್ತದೆ ತಿಳಿಸಿ. ಮತ್ತೆ ಶ್ರೀ ಸಂಗನಗೌಡರು ತಿಳಿಸಿರುವ ವಿಷಯ ಸರಿ ಇರಬಹುದು. ಆದರೆ ಇದು ಮತ್ತೊಂದು(ಅಂದರೆ improved (?) Operating Systemಗೆ ಸೇರಿರುವುದರಿಂದ ಇದು ಸುಲಭವಾಗಿ ಬಗೆಹರಿಯುವ ಸಮಸ್ಯೆಯಲ್ಲ. hpn ಅವರು ಹೇಳಿದಂತೆ ಯಾರಾದರೂ ಚೆನ್ನಾಗಿ ತಿಳಿದಿರುವವರು ನನ್ನಂಥ ಮೊದಲಿಗನಿಗೂ ಅರ್ಥವಾಗುವಂತೆ ಬರೆದರೆ ಖಂಡಿತ ಸ್ವಾಗತವಿದ್ದೇ ಇದೆ. hpnರವರೇ ಮೈಕ್ರೋಸಾಫ್ಟ್‌ನವರು ಆಗಾಗ್ಗೆ ಕಳಿಸುವ internet explorerಗೆ ಸಂಬಂಧಿಸಿದ automatic updates ಅದರೆ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲವೆ?
ಉ: Firefox ಬಳಸುವ ಕನ್ನಡಿಗರಿಗೆ ಸಿಹಿ ಸುದ್ದಿ
IE 7 ಕೆಟ್ಟದ್ದು ಎಂದೇನೂ ಹೇಳುವುದಲ್ಲ. ಕೊನೆಗೆ ಯಾರಿಗೆ ಏನು ಇಷ್ಟವೋ ಅದು ಉಪಯೋಗಿಸಬಹುದು.
ಇಂಟರ್ನೆಟ್ಟಿನಲ್ಲಿ ನೂರು ಮಾತು ಬರೆಯುವ ಬದಲು ಒಂದು ಕೊಂಡಿ (link) ಕೊಟ್ಟರೆ ಸಾಕು ಎಂಬ ಮಾತಿದೆ.
ಹೀಗಾಗಿ ನಾನು ಹೆಚ್ಚಿಗೆ ಏನೂ ಹೇಳಲು ಹೋಗುವುದಿಲ್ಲ. ಕೆಳಗಿನ ಕೊಂಡಿ firefox 2 ಮತ್ತು IE 7 ನಡುವಿನ ಹೋಲಿಕೆ.
http://reviews.cnet.com/4520-10442_7-6656808-1.html?tag=lnav
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: Firefox ಬಳಸುವ ಕನ್ನಡಿಗರಿಗೆ ಸಿಹಿ ಸುದ್ದಿ
comparison ತುಂಬಾ ಚೆನ್ನಾಗಿದೆ. ಮೈಕ್ರೋಸಾಫ್ಟ್ / IE ಬಳಸುವ ಎಲ್ಲರೂ ನೋಡಲೇ ಬೇಕಾದ ತಾಣ! ಫೈರ್‌ಫಾಕ್ಸ್ ೩ (ಈಗಿನ್ನೂ beta version) ಇನ್ನೂ ಚೆನ್ನಾಗಿದೆ. ಆದರೆ ಸದ್ಯಕ್ಕೆ ಫೈರ್‌ಫಾಕ್ಸ್ ೨ ಹಾಕಿಕೊಂಡು ನೋಡಿ - ಇನ್ನೂ ಬಳಸಲು ಸುರುಮಾಡಿರದಿದ್ದರೆ. Add ons ನೀವು ಬಳಸುತ್ತಾ ಬಳಸುತ್ತಾ ಯಾವುದು ಇದ್ದರೆ ಚೆನ್ನ ಅಂತ ನಿಮಗೇ ಗೊತ್ತಾಗುತ್ತೆ.
ಉ: Firefox ಬಳಸುವ ಕನ್ನಡಿಗರಿಗೆ ಸಿಹಿ ಸುದ್ದಿ
ನಾನೂ ಯಾವಾಗ್ಲೂ ಬೀಟಾ ಉಪಯೋಗಿಸ್ತೀನಿ, ತುಂಬಾ ಚೆನ್ನಾಗಿದೆ, ಆದ್ರೆ ಎಲ್ಲಾ add-ons ಹಾಕಿದ್ಮೇಲೂ ಇದೇ ವೇಗ ಉಳಿಯುತ್ತೋ ಗೊತ್ತಿಲ್ಲ.