Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

March 17, 2008 - 8:21pm — ASHOKKUMAR

 (ಇ-ಲೋಕ-66)(17/3/2008)
    ಜಗತ್ತಿನಲ್ಲಿ ಈಗಿರುವ ಅಣೆಕಟ್ಟುಗಳ ಸಂಖ್ಯೆ ಎಷ್ಟು ಎನ್ನುವುದನ್ನು ಊಹಿಸಬಲ್ಲಿರಾ?ಸಾವಿರದ ಒಂಭೈನೂರನೆಯ ಇಸವಿಯ ನಂತರ ಕಟ್ಟಿರುವ ಅಣೆಕಟ್ಟುಗಳ ಸಂಖ್ಯೆ ಇಪ್ಪತ್ತೊಂಭತ್ತು ಸಾವಿರದ ನಾಲ್ಕುನೂರ ಎಂಭತ್ತ ನಾಲ್ಕು. ಇವುಗಳಲ್ಲಿ ಹಿಡಿದಿರ ಬಹುದಾದ ನೀರಿನ ಪ್ರಮಾಣ,ಎರಡು ಸಾವಿರದ ಆರುನೂರು ಮೈಲು ಘನ ಮೈಲುಗಳಷ್ಟು!ಇಷ್ಟು ನೀರು ಅಣೆಕಟ್ಟು ಇಲ್ಲವಾಗಿದ್ದಲ್ಲಿ ಸಮುದ್ರ ಸೇರುತ್ತಿತ್ತು. ಆಗ ಸಮುದ್ರದ ನೀರಿನ ಮಟ್ಟ 1.2 ಅಂಗುಲ ಹೆಚುತ್ತಿತ್ತು. ಇದನ್ನು ಲೆಕ್ಕ ಹಾಕಿದವರು ತೈವಾನಿನ ನ್ಯಾಶನಲ್ ಸೆಂಟ್ರಲ್ ವಿವಿಯ ಸಂಶೋಧಕರು.ಅಂದ ಹಾಗೆ ಕಳೆದ ಅರ್ಧ ಶತಮಾನದಲ್ಲಿ ಸಮುದ್ರಮಟ್ಟದಲ್ಲಿ ಆದ ಏರಿಕೆ ಹತ್ತು ಸೆಂಟಿಮೀಟರುಗಳು. ಅಣೆಕಟ್ಟುಗಳಿಲ್ಲವಾದರೆ,ಮಟ್ಟ ಇನ್ನೂ ಮೂರು ಸೆಂಟಿಮೀಟರ್ ಹೆಚ್ಚುತ್ತಿತ್ತು.ಅಂದ ಹಾಗೆ ಸಮುದ್ರದ ನೀರಿನ ಮಟ್ಟ ಏರಲು ಭೂಮಿಯ ವಾತಾವರಣದ ಉಷ್ಣತೆಯಲ್ಲಿ ಆಗಿರುವ ಏರಿಕೆಯೇ ಕಾರಣ. ತಾಪ ಹೆಚ್ಚಿದಂತೆ ನೀರು ಹಿಗ್ಗುತ್ತದೆ.ಅದರೊಂದಿಗೆ ಕರಗುವ ಹಿಮಗಡ್ಡೆಗಳ ಕಾಟ ಬೇರೆ.ಅಂಟಾರ್ಕ್ಟಿಕಾ ಮತ್ತು ಗ್ರೀನ್‍ಲ್ಯಾಂಡಿನಂತಹ ಧ್ರುವ ಪ್ರದೇಶಗಳ ಹಿಮಗಡ್ಡೆ ಕರಗುವ ಪರಿಣಾಮ ನೀರಿನ ಮಟ್ಟ ಹೆಚ್ಚಲು ಕಾರಣವಾಗುತ್ತದೆ.
ಕ್ಯಾಮರಾ ಖರೀದಿಸಿದಾಗ ಉಚಿತ ಕೊಡುಗೆ!
    ಡಿಜಿಟಲ್ ಕ್ಯಾಮರಾ,ಐಪಾಡ್ ಇಂತಹ ಆಧುನಿಕ ಸಾಧನ ಖರೀದಿಸಿದಾಗ ಸಿಗುವ ಉಚಿತ ಕೊಡುಗೆಗಳು ಆಕರ್ಷಕವಾಗಿರುತ್ತವೆ.ಆದರೆ ಕೇಳದೆ ಅವುಗಳ ಸಿಗುವ ಇನ್ನೊಂದು ಕೊಡುಗೆ ಅಂದರೆ ವೈರಸ್‍ಗಳು!ಡಿಜಿಟಲ್ ಸಾಧನಗಳನ್ನು ಕಂಪ್ಯೂಟರಿಗೆ ಸಂಪರ್ಕಿಸಿ,ಕ್ಯಾಮರಾದಂತಹ ಸಾಧನವಾದರೆ ಚಿತ್ರಗಳನ್ನು,ಐಪಾಡ್ ಅಂತಹ ಸಾಧನವಾದರೆ ಹಾಡುಗಳನ್ನು ವರ್ಗಾಯಿಸಿಕೊಳ್ಳುವ ಕ್ರಿಯೆ ನಡೆಸುವುದು ಸ್ವಾಭಾವಿಕ. ಕಂಪೆನಿಯಿಂದ ಹೊಸದಾಗಿ ಬಂದಿರುವ ಸಾಧನವನ್ನು ಕಂಪ್ಯೂಟರಿಗೆ ಸಂಪರ್ಕಿಸಿದಾಗ,ವೈರಸ್ ಬಂದರೆ ಹೇಗಾಗಬೇಡ? ಹೀಗಾಗಲು ಕಾರಣವೇನು? ಸಾಧನವನ್ನು ಮಾರುಕಟ್ಟೆಗೆ ಕಳುಹಿಸುವ ಮೊದಲು ಪರೀಕ್ಷಾ ಕಾರ್ಯ ನಡೆಯುತ್ತದೆ. ಅ ವೇಳೆಗೆ ಬಳಕೆಯಾಗುವ ಕಂಪ್ಯೂಟರುಗಳು ಕಂಪೆನಿಯ ಉದ್ಯೋಗಿಗಳ ಅಜಾಗರೂಕತೆಯ ಕಾರಣ ವೈರಸ್‍ಪೀಡಿತವಾದರೆ ನಂತರ ಸಾಧನವನ್ನು ಅದಕ್ಕೆ ಸಂಪರ್ಕಿಸಿ ಪರೀಕ್ಷಿಸಿದಾಗ ಸಾಧನವೂ ವೈರಸ್ ಬಾಧಿತವಾಗುತ್ತದೆ.ಕಂಪೆನಿಗಳ ಕಂಪ್ಯೂಟರುಗಳನ್ನು ಉದ್ಯೋಗಿಗಳು ಅನಧಿಕೃತವಾಗಿ ಬಳಸುವುದಕ್ಕೆ ತೆರೆಯೆಳೆದರೆ, ಈ ಸಮಸ್ಯೆಯನ್ನು ನಿವಾರಿಸಬಹುದು. ಸಾಧನದಿಂದಾಗಿ ನಿಮ್ಮ ಕಂಪ್ಯೂಟರ್ ಬಾಧಿತವಾದರೆ, ಅದನ್ನು ನಿವಾರಿಸಿಕೊಳ್ಳಲು ಕಷ್ಟವೇನಿಲ್ಲ. ಉತ್ತಮ ಗುಣಮಟ್ಟದ ವೈರಸ್ ಲಸಿಕೆ ತಂತ್ರಾಂಶ ಕಂಪ್ಯೂಟರಿನಲ್ಲಿ ಹಾಕಿಕೊಂಡಿದ್ದರೆ,ಅದು ವೈರಸ್ ತಂತ್ರಾಂಶವನ್ನು ಗುರುತಿಸಿ,ಅದನ್ನು ಕಿತ್ತೆಸೆಯುತ್ತದೆ.ಕೆಲವೊಮ್ಮೆ ಸಾಧನಗಳಲ್ಲಿ ಬರುವ ವೈರಸ್‍ಗಳು ಪಾಸ್‍ವರ್ಡ್ ಕದಿಯುವ ತಂತ್ರಾಂಶಗಳು ಎನ್ನುವುದು ಗಾಬರಿ ಪಡಿಸುವ ವಿಷಯ. ಅಂತೂ ಹೊಸ ಸಾಧನ ಕೊಂಡು,ಅದನ್ನು ಮೊದಲ ಬಾರಿಗೆ ಕಂಪ್ಯೂಟರಿಗೆ ಸಂಪರ್ಕಿಸುವಾಗ ಇರಲಿ ಎಚ್ಚರ. ಹೊಸ ಹಾರ್ಡ್‍ಡಿಸ್ಕ್ ಹಾಕಿಕೊಂಡಾಗ,ಅದು ಖಾಲಿಯಿರುವುದು ಬಿಟ್ಟು ವೈರಸ್ ತುಂಬಿಕೊಂಡಿದ್ದರೆ ತಾಪತ್ರಯ ಕಟ್ಟಿಟ್ಟ ಬುತ್ತಿ.
ಮೈಕ್ರೊಸಾಫ್ಟ್‍ನಿಂದ ಕಿದಾರೊ ಖರೀದಿ
    ಒಂದು ಕಂಪ್ಯೂಟರ್‌ನಲ್ಲೇ ಹಲವು ಕಂಪ್ಯೂಟರುಗಳ ಅನುಭವ ನೀಡುವ ಮಿಥ್ಯಾಯಂತ್ರಗಳ ತಂತ್ರಾಂಶ ಅಭಿವೃದ್ಧಿಯಲ್ಲಿ ಪರಿಣತ ಕಂಪೆನಿಯಾದ ಕಿದಾರೋವನ್ನು ಮೈಕ್ರೋಸಾಫ್ಟ್ ಖರೀದಿಸಿದೆ.ಸದ್ಯ ನಿಮ್ಮ ಕಂಪ್ಯೂಟರಿನಲ್ಲಿ ಒಂದೇ ಕಾರ್ಯನಿರ್ವಹಣ ತಂತ್ರಾಂಶ ವ್ಯವಸ್ಥೆಯಿರುತ್ತದೆ.ಎರಡನೆಯದ್ದನ್ನು ಹಾಕಿಕೊಳ್ಳಲು ಪ್ರತ್ಯೇಕ ಭಾಗ ಅಗತ್ಯ. ಒಂದು ಹೊತ್ತು ಒಂದು ಕಾರ್ಯನಿರ್ವಹಣ ತಂತ್ರಾಂಶದ ವಶವಿರುವ ಕಂಪ್ಯೂಟರು ಮಾಮೂಲಿ. ಆದರೆ ವರ್ಚುವಲೈಸೇಶನ್ ತಂತ್ರಾಂಶ ಬಳಸಿದಾಗ,ಇನ್ನೊಂದು ಕಂಪ್ಯೂಟರಿನ ಅನುಭವವನ್ನು ವರ್ಚುವಲೈಸೇಷನ್ ತಂತ್ರಾಶದ ಮೂಲಕ ಪಡೆದು,ಆ ಯಂತ್ರದಲ್ಲಿ ಇನ್ಯಾವ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ಅಳವಡಿಸಿ,ಉತ್ಕೃಷ್ಟ ಅನುಭವ ಪಡೆಯಬಹುದು.ತಂತ್ರಾಂಶದ ವೆಚ್ಚದಿಂದ ಯಂತ್ರಾಂಶದ ಪ್ರಯೋಜನ ಉಚಿತ!ಇಂತ್ರಹ ತಂತ್ರಜ್ಞಾನ ಅಳವಡಿಸಿ ದುಡ್ಡು ಮಾಡಿರುವ ವಿ ಎಂ ವೇರ್‍ ಕಂಪೆನಿಯ ಹಾದಿ ಹಿಡಿಯಲು ಮೈಕ್ರೋಸಾಫ್ಟ್ ಕೂಡಾ ತಯಾರಾಗಿದೆ.ಆ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಸಾಧನೆಗೋಸ್ಕರ ಕಿದಾರೋವನ್ನು ಬಗಲಿಗೆ ಹಾಕಿಕೊಂಡಿದೆ ಎನ್ನುವುದು ಸ್ಪಷ್ಟ.
ತಂತ್ರಾಂಶ ಕೈಕೊಟ್ಟು ಪ್ರಯೋಗ ಭಗ್ನ!
    ನಾಸಾ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯ ಕ್ಯಾಸಿನಿ ಬಾಹ್ಯಾಕಾಶ ವಾಹನವು ಶನಿಗ್ರಹದ ಉಪಗ್ರಹವಾದ ಎನ್ಸಿಲ್ಯಾಡಸ್‍ನ ಮೇಲಿನ ಉಗಿಬುಗ್ಗೆಯನ್ನು ಅಧ್ಯಯನ ಮಾಡುವ ಹೊತ್ತಿಗೆ ಅದರ ವಿಶ್ಲೇಷಣ ಸಾಧನದ ತಂತ್ರಾಂಶ ಕೈಕೊಟ್ಟು ಬಿಡಬೇಕೇ? ಹೀಗಾಗಿ ಈ ಉಗಿಬುಗ್ಗೆಯ ಬಗ್ಗೆ ಹೆಚ್ಚು ಮಾಹಿತಿ ಸಂಗ್ರಹಿಸಿ,ಈ ಶನಿಯ ವಿಶಿಷ್ಟ ಉಪಗ್ರಹದ ಮೇಲೆ ನೀರು ಲಭ್ಯವೇ ಎಂದು ತಿಳಿದುಕೊಳ್ಳುವ ವಿಜ್ಞಾನಿಗಳ ಉತ್ಸಾಹಕ್ಕೆ ಭಂಗವುಂಟಾಯಿತು.ಈ ತಂತ್ರಾಂಶದಲ್ಲಿ ಉಂಟಾದ ಅಡಚಣೆ ಯಾವುದು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯದ ಮಟ್ಟಿಗೆ ಗೊತ್ತಿಲ್ಲ.
ಬಟ್ಟೆಯೊಳಗಿಣುಕುವ ಕ್ಯಾಮರಾ
    ವಿಮಾನ ನಿಲ್ದಾಣಗಳಂತಹ ಜಾಗಗಳಲ್ಲಿ ಜನರನ್ನು ಪರೀಕ್ಷಿಸಿ,ಅವರು ಬಾಂಬಿನಂತಹ ವಸ್ತುವನ್ನು ಬಚ್ಚಿಟ್ಟುಕೊಂಡಿದ್ದಾರೋ,ಎಂದು ಕಂಡುಹಿಡಿಯುವ ಕ್ಯಾಮರಾವನ್ನು ತ್ರೂವಿಷನ್ ಎಂಬ ಕಂಪೆನಿ ಅಭಿವೃದ್ಧಿ ಪಡಿಸಿದೆ.ಈ ಕ್ಯಾಮರಾವನ್ನು ಟೆರಾಹರ್ಟ್ಸ್ ಎನ್ನುವ ತರಂಗವನ್ನು ಬಳಸಿ ತಯಾರಿಸಲಾಗಿದೆ.ಈ ತರಂಗವು ಲೋಹ,ನೀರಿನ ಮೂಲಕ ಸಾಗದು,ಆದರೆ ಕಾಗದ,ಪಿಂಗಾಣಿ,ಮರದ ಮೂಲಕ ಸಾಗುತ್ತದೆ.ಇದರ ಮೂಲಕ ತೆಗೆದ ಚಿತ್ರ ದೇಹದ ವಿವರಗಳನ್ನು ಕಾಣಿಸದು ಎನ್ನುವುದು ಅನುಕೂಲ.ಈ ತರಂಗ ಎಕ್ಸ್ ಕಿರಣಗಳಂತೆ ದೇಹಕ್ಕೆ ಹಾನಿ ಮಾಡದು.

UDAYAVANI

ASHOKWORLD

*ಅಶೋಕ್‍ಕುಮಾರ್ ಎ

  • ಪ್ರಚಲಿತ
Ornamental seperator
  • Login or register to post comments
  • 563 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 18, 2008 - 12:59am — hpn

ಉ: ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

hpn's picture

ಮಿಥ್ಯಾಯಂತ್ರಗಳು? ವರ್ಚುಅಲೈಸೇಶನ್ ಅಂತ ಬರೆದಿದ್ದರೇ ಆಗುತ್ತಿತ್ತು Smiling

--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
March 18, 2008 - 9:05am — ASHOKKUMAR

ಉ: ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

ASHOKKUMAR's picture

ಆದರೆ ವರ್ಚುವಲೈಸೇಶನ್ ತಂತ್ರಾಂಶ ಬಳಸಿದಾಗ,ಇನ್ನೊಂದು ಕಂಪ್ಯೂಟರಿನ ಅನುಭವವನ್ನು ವರ್ಚುವಲೈಸೇಷನ್ ತಂತ್ರಾಶದ ಮೂಲಕ ಪಡೆದು,ಆ ಯಂತ್ರದಲ್ಲಿ ಇನ್ಯಾವ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ಅಳವಡಿಸಿ,ಉತ್ಕೃಷ್ಟ ಅನುಭವ ಪಡೆಯಬಹುದು.

ಆ ರೀತಿಯ ಬಳಕೆಯೂ ಇದೆಯಲ್ಲಾ? Smiling

*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ
March 18, 2008 - 1:17pm — hpn

ಉ: ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

hpn's picture

ಶಬ್ಧ 'virtualization' ಎಂದಿದ್ದರಾಯಿತು Smiling

'virtualization' ಅನ್ನೋದು ಬಹಳ broader term.

ಇದನ್ನು ಓದಿ:

virtualization is a framework or methodology of dividing the resources of a computer into multiple execution environments, by applying one or more concepts or technologies such as hardware and software partitioning, time-sharing, partial or complete machine simulation, emulation, quality of service, and many others

(kernel thread

ಇದನ್ನು ಕೂಡ ಅವರು ಒಂದು "ಲೂಸ್ ಡೆಫನಿಶನ್" ಎಂದು ಹೇಳಿಕೊಳ್ಳುತ್ತಾರೆ. ಹೀಗಾಗಿ 'ಮಿಥ್ಯ ಯಂತ್ರಗಳು' ಅನ್ನೋದು ಸರಿಯಾಗಲಿಕ್ಕಿಲ್ಲ. ಕನ್ನಡದಲ್ಲಿ ಅದಕ್ಕೆ ಸಂಪೂರ್ಣ ಅರ್ಥ ಒದಗಿಸುವ ಯಾವುದೇ ಪದವನ್ನು ಕಾಯಿನ್ ಮಾಡೋದೂ ಕಷ್ಟವಾಗತ್ತೆ. ಇಂಗ್ಲೀಷಿನ ಪದವೇ ಹೆಚ್ಚು ಸೂಕ್ತ ಅನ್ಸತ್ತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
March 18, 2008 - 2:10pm — mahesha

ಉ: ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

mahesha's picture

ಎಚ್ಪೀಯೆನ್..

ಎದರ ಬಗ್ಗೆ ಮಾತಾಡ್ತಿದ್ದೀರ?

ಅಣೆಕಟ್ಟುಗಳಿಗೂ ಇದಕ್ಕೂ ಏನ್ ನಂಟು...

ನನ್ ಪ್ರಿಯಮಿತರ ಹರಿ.. ಸೊಲ್ಪ ಸುಲವವಾದ ಕನ್ನಡದಲ್ಲಿ ಹೇಳಪ್ಪ!

ಮಿಥ್ಯಾಯಂತ್ರ ಅಂದ್ರೆ ಸುಳ್ಳುಹೇಳುವ ಮೆಶಿನ್ Smiling ಎಂದು ನಾನು ಮೊದಲು ಎಣಿಸಿದೆ.. ಈ ಪದವನ್ನು ಹುಟ್ಟಿಸಿದವರು ಯಾರು?

  • Login or register to post comments
  • link
  • Email this ಪ್ರತಿಕ್ರಿಯೆ
March 18, 2008 - 2:20pm — madhava_hs

ಉ: ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

madhava_hs's picture

ವರ್ಚುಯಲೈಜೇಶನ್ ಗೆ ’ಮಿಥ್ಯಾ ಯಂತ್ರ’ ಸರಿಯಾದ ಸಮಾನಾರ್ಥಕ ಕನ್ನಡ ಪದವಲ್ಲವೇ? ’ಮಿಥ್ಯಾ ಯಂತ್ರ’ ಎಷ್ಟು ಸುಲಭ ಅಲ್ಲವೇ?

  • Login or register to post comments
  • link
  • Email this ಪ್ರತಿಕ್ರಿಯೆ
March 18, 2008 - 2:22pm — mahesha

ಉ: ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

mahesha's picture

ಅಲ್ಲ!

  • Login or register to post comments
  • link
  • Email this ಪ್ರತಿಕ್ರಿಯೆ
March 18, 2008 - 3:28pm — savithru

ಉ: ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

savithru's picture

illusion ಅನ್ನೋ ಪದವನ್ನು ನಾವು ಬ್ರಮೆ ಅಂತ ಬಳಸ್ತೀವಾದರೂ
virtual ಪದಕ್ಕೂ ಬಳಸಬಹುದು ಅನ್ನಿಸುತ್ತೆ .

ಸವಿತೃ

  • Login or register to post comments
  • link
  • Email this ಪ್ರತಿಕ್ರಿಯೆ
March 18, 2008 - 7:31pm — ASHOKKUMAR

ಉ: ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

ASHOKKUMAR's picture

vitualisation ಅನ್ನುವ ಪದಕ್ಕೆ ವಿಸ್ತಾರವಾದ ಅರ್ಥ ಬರುವುದು ಜನ ಒಪ್ಪಿಕೊಂಡದ್ದರಿಂದ ತಾನೇ? ಮಿಥ್ಯಾ ಶಬ್ದಕ್ಕೂ ಅಂತಹ ವಿಸ್ತಾರವಾದ ವ್ಯಾಖ್ಯೆಯನ್ನು ನಾವು ಕಲ್ಪಿಸಿಕೊಳ್ಳಬೇಕು ಅಷ್ಟೆ.
*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ
March 18, 2008 - 2:22pm — mahesha

ಉ: ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

mahesha's picture

ಇದರ ಬರಹಗಾರರಿಗೆ...
=====================================
೧) ತಂತ್ರಾಂಶ ಕೈಕೊಟ್ಟು ಪ್ರಯೋಗ ಭಗ್ನ!

ಭಗ್ನ ಅನ್ನೋದು ಸಾಮಾನ್ಯ ಯಾವುದಾದರೂ ಸರಕನ್ನು ಮುರಿದು ಹಾಳುಮಾಡುವುದು.
++ ಪ್ರಿಸಮಂ ಉವಾಚ+++
೩. ಭಗ್ನ (ಸಂ) (ನಾ) ೧ ಮುರಿದಿರುವುದು ೨ ಒಡೆದುದು, ಹೋಳಾದುದು

೪. ಭಗ್ನ (ಸಂ) (ಗು) ೧ ಸೋತ, ಪರಾಜಿತ ೨ ನಿರಾಶೆಗೊಂಡ, ಎದೆಗುಂದಿದ
+++++++++++++++++++++++
ಅಡಚಣೆ = ವಿಘ್ನ, ಎಡರು, ತೊಂದರೆ..

೧೯. ಭಂಗ (ಸಂ) (ನಾ) ೧ ಮುರಿಯುವಿಕೆ, ಚೂರು ಮಾಡುವಿಕೆ ೨ ತುಂಡು, ಚೂರು ೩ ನಾಶ, ಹಾಳು ೪ ಸೋಲು, ಪರಾಜಯ ೫ ಅಪಮಾನ, ತೇಜೋಹಾನಿ ೬ ಕಷ್ಟ, ತೊಂದರೆ ೭ ಅಲೆ, ತೆರೆ ೮ ಕುಂದು, ದೋಷ ೯ ಕೊಂಕು, ವಕ್ರತೆ ೧೦ ಕಪಟ, ಮೋಸ ೧೧ ಒಂದು ಬಗೆಯ ಗಣಿತ, ವಿಕಲ್ಪಗಣಿತ ೧೨ ನಾಟ್ಯದಲ್ಲಿ ದೇಹವನ್ನು ನಿಲ್ಲಿಸುವ ರೀತಿ, ಭಂಗಿ

ಇಲ್ಲಿ ಭಂಗ ಎಂಬುದು ಸರಿಹೊಂದುತ್ತಿತ್ತು.. ಭಗ್ನ.. ಶಾಂತಿಭಂಗ ಶಾಂತಿಭಗ್ನ ಅಲ್ಲ.. !

ಪ್ರಯೋಗ ಭಗ್ನ ಅಂದರೇನು? ತಂತ್ರಾಂಶ ಕೈಕೊಟ್ಟು ’ಪ್ರಯೋಗ’ ಎಂಬ ಸರಕು ಮುರಿದು ಹೋಳಾಯಿತೇ?
=====================================

೨)ಬಟ್ಟೆಯೊಳಗಿಣುಕುವ ಕ್ಯಾಮರಾ

ಇಲ್ಲಿ peep ಮತ್ತು peek ನಡುವೆ ಗೊಂದಲ ಅನ್ನಿಸ್ತಿದೆ..

  • Login or register to post comments
  • link
  • Email this ಪ್ರತಿಕ್ರಿಯೆ
March 18, 2008 - 7:37pm — ASHOKKUMAR

ಉ: ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

ASHOKKUMAR's picture

ನಿಮ್ಮ ಟೀಕೆ ಟಿಪ್ಪಣಿ ಸಮಂಜಸ.
ಬರಹಗಾರನ ಧನ್ಯವಾದಗಳು. Smiling
*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ
March 19, 2008 - 10:01am — mahesha

ಉ: ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

mahesha's picture

ನನ್ನಿ..

ನೀವೇ ಬರಹಗಾರ ಅಂತ ತಿಳಿದಿರಲಿಲ್ಲ...!

ಬರೆಯಿರಿ ಸಾರ್‍.. ಕನ್ನಡದಲ್ಲಿ ವಿಜ್ನಾನದ ಬರಹಗಳು ಕಡಮೆ.

ಸೊಲ್ಪ ಸುಲಬವಾದ ಬಾಶೆ ಬಳಸಿ... ಆಡುಬಾಶೆಗೆ ಹತ್ತಿರ ಅಂತ ಕೋರಿಕೆ

  • Login or register to post comments
  • link
  • Email this ಪ್ರತಿಕ್ರಿಯೆ
March 19, 2008 - 10:07pm — Ennares

ಉ: ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

Ennares's picture

ಮಿಥ್ಯಾಯಂತ್ರದ ಬದಲಾಗಿ ಭ್ರಮಣಯಂತ್ರ ಅಂದರೆ ಸರಿಹೋಗಬಹುದೇನೋ? ವರ್ಚುವಲ್ ಅಂದರೆ ನಿಜವೆನಿಸುವ ಭ್ರಮಣೆಯುಂಟುಮಾಡುವ ಕೃತಕ ಪರಿಸರ ಅಲ್ಲವೇ?

ಮಹೇಶಪ್ಪಾ ಹೇಳೀಪ್ಪ.

(ಅಂದ ಹಾಗೆ ಮೊನ್ನೆ ಸುನಿಲ, ಹರಿಪ್ರಸಾದ್ ನಾಡಿಗ್ ಮತ್ತಿ ಓಂ ಶಿವಪ್ರಕಾಶ್‍ರನ್ನು ಭೇಟಿಯಾಗಿದ್ದೆ ಬ್ಲಾಗಿಗಳ ಕೂಟದಲ್ಲಿ. ನಿಮ್ಮನ್ನು ಮತ್ತು ಭರತ್ ವೈಭವರನ್ನು ನೋಡದೆ ನಿರಾಶೆಯಾಯಿತು.)

- ನವರತ್ನ ಸುಧೀರ್

  • Login or register to post comments
  • link
  • Email this ಪ್ರತಿಕ್ರಿಯೆ
March 20, 2008 - 10:13am — mahesha

ಉ: ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

mahesha's picture

ಸುಧೀರಯ್ಯ....

೧) ಭ್ರಮಣ = ಸುತ್ತುವ...
ವರ್ಚಯಲ್ = ಗೀಲಿಟಿನ, ನಕಲಿ, ಕಣ್ಕಟ್ಟು

ಕಣ್ಕಟ್ಟು ಅನ್ನೋ ಕನ್ನಡದ ಒರೆ ವರ್ಚಯಲ್ಗೆ ತಕ್ಕವಾದದುದು..

ನನ್ ಅನಿಸಿಕೇಲಿ ವರ್ಚುಯಲ್ ಅನ್ನು ಹಾಗೇ ಕನ್ನಡಕ್ಕೆ ಸಕ್ಕದದಕ್ಕೆ ತರದೇ ಮಡಗೋದೇ ವಾಸಿ!
.
.
.
ಸಾಮಾನ್ಯ ನಾನ್ ಕೂಟಗಳಿಗೆ ಬರೊಲ್ಲ. ಬಿಡುವ್ ಸಿಕ್ಕಿದ್ರೇ ಓದ್ತೀನಿ, ಗೇಮ್ ಆಡ್ತೀನಿ, ಇಲ್ಲ ಸಿನಿಮ ನೋಡ್ತೀನಿ.. ಮಂದಿಯ ಗಿಜಿಗಿಜಿ, ಉದ್ದುದ್ದು ಬಾಸಣ ನಂಗೆ ಅಲರ್ಜಿ.!

ನನಗೂ ನಿಮ್ಮೊಡ ಒಂದ್ ದಪ ಕಾಪೀ ಹೀರೋ ಅಬಿಲಾಸೆ ಅಯ್ತೆ.. ಸಿಕ್ಕಿ.. ನಂಗೊಂದು ಮಿನ್ನೊಲೆ ಎಸೆಯಿರಿ..

ಹೆಂಗೂ ಸುಕ್ರವಾರ ರಜ ಅಯ್ತೆ! ನಿಮ್ ಮನೆಗೆ ಕರೆದ್ರೇ ಊಟಕ್ಕೇ ಬತ್ತೀನಿ.. Smiling
Smiling

  • Login or register to post comments
  • link
  • Email this ಪ್ರತಿಕ್ರಿಯೆ
March 20, 2008 - 6:31pm — hpn

ಉ: ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

hpn's picture

ನಿನ್ನ ಹೊಸ ಕಾರು ತಗೊಂಡು ಇಲ್ಲಿಗೆ ಬಾ... ನಾನೂ ಬರ್ತೀನಿ ಎನ್ನಾರೆಸ್ ರವರ ಮನೆಗೆ. Smiling

ಅವತ್ತಿನ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಹೆಚ್ಚು ಮಾತನಾಡಲಾಗಲಿಲ್ಲ. ನಿನ್ನ ಹೊಸ ಕಾರನ್ನೂ ನಾನು ನೋಡಿಲ್ಲ. ಎಲ್ಲೆಲ್ಲಿ ಗುದ್ದಿಸಿಕೊಂಡಿದೆ ಆಗಲೇ ಅಂತಾನು ನೋಡೋಣಂತೆ. Eye-wink

  • Login or register to post comments
  • link
  • Email this ಪ್ರತಿಕ್ರಿಯೆ
March 20, 2008 - 6:45pm — mahesha

ಉ: ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

mahesha's picture

ಎಲ್ಲಿಗೆ ಬರಲಿ?

ಗುದ್ದಿಸಿಕೊಂಡೇನಿಲ್ಲ.. ಆದ್ರೆ ನಾನ್ ಗುದ್ದಿದ್ದೀನಿ Smiling

ಪೋನ್ ಮಾಡಪ್ಪ! Smiling

  • Login or register to post comments
  • link
  • Email this ಪ್ರತಿಕ್ರಿಯೆ
March 20, 2008 - 9:46pm — hpn

ಉ: ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

hpn's picture

Smiling

ಫೋನ್ ಮಾಡ್ತೀನಿ...
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
March 21, 2008 - 10:49am — Ennares

ಉ: ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

Ennares's picture

ಪ್ರಿಯ ಮಹೇಶ್,

ಮೊದಲು ಸ್ವಾಮಿಕಾರ್ಯ ಆಮೇಲೆ ಸ್ವಕಾರ್ಯ!

ಒಂದು ಪದಕ್ಕೆ ಒಂದಕ್ಕಿಂತಲೂ ಹೆಚ್ಚು ಅರ್ಥವಿರಬಾರದೂ ಅಂತ ಏನೂ ಇಲ್ಲವಲ್ಲ? ಕನ್ನಡ ಕಸ್ತೂರಿ.ಕಾಂ ನಿಘಂಟಿನ ಪ್ರಕಾರ ಸೂಚಿಸಿರುವ " ವಾಸ್ತವಿಕ; ತಾತ್ವಿಕ, ಕಾರ್ಯಾರ್ಥ" ಅನ್ನೋ ಅರ್ಥಗಳು ಇದೆ. ಎಲ್ಲಿಯೂ ಮಿಥ್ಯಾ, ಕಣ್ಕಟ್ಟು ಅಂತ ಇಲ್ಲ.

ಭ್ರಮಣೆ ಅಂದರೆ ಸುತ್ತುವ ಅಥವಾ ತಿರುಗುವ ಅನ್ನೋ ಅರ್ಥ ಒಂದೇ ಅಲ್ಲದೆ, ವಿಕೃತ ಅನಿಸಿಕೆ ಅಥವಾ hallucination ಕೂಡಾ ಆಗಬಹುದಲ್ಲವೇ? ಬುಧ್ಧಿ ಭ್ರಮಣೆ ಅನ್ನೋ ಉಪಯೋಗ ನಿಮಗೆ ತಿಳಿದೇ ಇದೆ. ( ಬುಧ್ಧಿ ಭ್ರಮಿಸಿದವರೆಲ್ಲ ತಲೆ ತಿರುಕರಲ್ಲ ಅನ್ನೋದೂ ಗೊತ್ತು.)

ಭ್ರಮಣೆ ಒಂದು ರೀತಿಯ ಮನೋವಿಕಾರದ ಲಕ್ಷಣ ಅಂದರೆ ಮನಃಕಲ್ಪಿತ ಅವಾಸ್ತವ ಅಂತ ಅನ್ನಬಹುದೇನೋ. ನಿಮಗೆ ಭ್ರಮಣೆ ಅನ್ನೋದು ಅವಾಸ್ತವಿಕ ಆದ್ದರಿಂದ ವರ್ಚುವಲ್ ಅಲ್ಲ ಅನಿಸಿದರೆ, ಮೊದಲೇ ಸವಿತೃ ಹೇಳಿದ "ಭ್ರಮೆ" ಹೆಚ್ಚು ಸೂಕ್ತ ಅನ್ನಿಸುತ್ತೆ. ಏಕೆಂದರೆ ವರ್ಚುವಲ್ ಅಂದರೆ ವಾಸ್ತವವೇನೋ ಎನ್ನುವ ಭ್ರಮೆ ಉಂಟು ಮಾಡೋದು ತಾನೇ?

ಆದ್ದರಿಂದ ನನ್ನ ಅಭಿಪ್ರಾಯದ ಪ್ರಕಾರ "ಭ್ರಮಾ ಯಂತ್ರ" ಸರಿಯಾದ ಉಪಯೋಗ. ನೀವೇನಂತೀರಿ?

(ಇನ್ನು ಸ್ವಕಾರ್ಯ:-)

ಮಹೇಶ್; ವೈಭವ ಮತ್ತು ಹರಿ,

ಈ ಶುಕ್ರವಾರ ಶನಿವಾರ ಬೇಡ. ಸ್ವಲ್ಪ ತೊಂದರೆಯಿದೆ. ಮುಂದಿನ ವಾರ ಖಂಡಿತ ಮನೆಗೆ ಬನ್ನಿ. ಸುನಿಲನನ್ನೂ ಸೇರಿಸೋಣ. ಒಂದು ಮಿನಿ ಕೂಟ ನಡೆಯಲಿ. ತಮಾಷೆಯಲ್ಲ. ತುಂಬಾ ಸೀರಿಯಸ್ ವಿಚಾರ. ಹರಿ ನಾಡಿಗ್ ಅನುಕೂಲಿಸಬೇಕು.

-ನವರತ್ನ ಸುಧೀರ್

  • Login or register to post comments
  • link
  • Email this ಪ್ರತಿಕ್ರಿಯೆ
March 20, 2008 - 9:10pm — ವೈಭವ

ಉ: ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

ವೈಭವ's picture

ನವರತ್ನ ಸುದೀರರೆ,

ಹವ್ದು, ನಾನು ಮಯ್ಸೂರಿಗೆ ಹೋಗಿದ್ದೆ. ಅಲ್ಲಿಗೆ ಬರಲಾಗಲಿಲ್ಲ. ಮನ್ನಿಸಿ

ನಿಮ್ಮಂತ ಹಿರಿಯರ(ನಿಮ್ಮ ಪಾಪೆ/ಪೋಟೊ ನೋಡಿದೆ) ಜೊತೆ ಮಾತನಾಡಲು ನನಗೂ ಹುರಿಪಿದೆ.
ನಾನು, ಮಹೇಶ ನಿಮ್ಮನ್ನು ಬೆಟ್ಟಿ ಮಾಡಲು ಬರುವೆವು.

ಈ ಶುಕ್ರವಾರ, ಶನಿವಾರ ಹೇಗೆ?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
March 21, 2008 - 10:34am — ASHOKKUMAR

ಉ: ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

ASHOKKUMAR's picture

ಸಂಪದದ ’ಎಳೆ" ಶಿಸ್ತು ಮರೆತಿರಾ? Smiling
ಮಹೇಶ್ ಕಾರು ತೆಗೆದು ಕೊಂಡು ಗುದ್ದಿಯೂ ಆಯಿತಾ?
*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ
March 21, 2008 - 12:56pm — ವೈಭವ

ಉ: ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

ವೈಭವ's picture

Smiling ಮನ್ನಿಸಿ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
March 27, 2008 - 6:37pm — girish.rajanal

ಉ: ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

girish.rajanal's picture

ಆಣೆಕಟ್ಟುಗಳು ಇಲ್ಲದಿರುವಾಗ ಎಷ್ಟು ಇರಬೇಕಾಗಿತ್ತೋ ಈಗಲೂ ಅಷ್ಟೇ ಇರುತ್ತಿತ್ತು.
ನಾವು ಅಂದರೆ ಮನುಷ್ಯರು ತಮ್ಮ ನಾಗರೀಕತೆ ಬೆಳೆಸಿ ಬೆಳೆಸಿ ಸಮುದ್ರದ ತಟದವರೆಗೂ ವ್ಯಾಪಿಸಿಬಿಟ್ಟಿದ್ದೇವೆ.
ನಿಮ್ಮವ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೆಂಗಳೂರಿನಲ್ಲಿ ಲಿನಕ್ಸ್ ಹಬ್ಬ
  • ಗೂಗಲ್‍ಗೆ ಪೆಂಟಾಗನ್ ನಿಷೇಧ
  • ಇ-ಲೋಕ-12 (2/3/2007)
  • ವೈಜ್ಞಾನಿಕ ಕತೆಗಾರ ಅರ್ಥರ್ ಸಿ ಕ್ಲರ್ಕ್ ಇನ್ನಿಲ್ಲ
  • ಶೇರುಪೇಟೆ ಆಖಾಡಕ್ಕಿಳಿಯುವ ಮೊದಲು ತಾಲೀಮು ನಡೆಸಿ
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ
  • ಅಮ್ಮಜಿಖಷೆಸ್ಸ ಖನಮ ಒಜಿ
  • ಅಂತಿಮ ಸಂಸ್ಕಾರ:ಹೊಸ ವಿಧಾನ
  • ದಾವೂದ್ ಇಬ್ರಾಹಿಂ ಬಂಧನ......ನಂತರ
  • ಪ್ರತ್ಯಕ್ಷ ನೋಡಿದರೂ...

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
    May 14, 2008 - 6:31pm
  • ASHMYA
    ಉ: ಆದದ, ವೋದದ?
    May 14, 2008 - 6:27pm
  • ASHMYA
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 14, 2008 - 6:11pm
  • Shivakumar.Revadi
    ಉ: ಅಮ್ಮಜಿಖಷೆಸ್ಸ ಖನಮ ಒಜಿ
    May 14, 2008 - 5:59pm
  • Shivakumar.Revadi
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 14, 2008 - 5:53pm
  • Shivakumar.Revadi
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 14, 2008 - 5:40pm
  • ಸಂಗನಗೌಡ
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 14, 2008 - 5:26pm
  • madhava_hs
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 14, 2008 - 2:45pm
  • sushil
    ಉ: ಸೃಷ್ಟಿ(ಸುಶೀಲನ ಪದ್ಯಗಳು)
    May 14, 2008 - 2:38pm
  • sushil
    ಉ: ಮುಂಗಾರು ಮಳೆಯ ಗುಂಗಿನಲ್ಲೊಂದು ಪಯಣ
    May 14, 2008 - 2:35pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator