Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಅನನ್ಯ ಅಲ್ಲಮ (೧)

March 18, 2008 - 5:28pm — csomsekraiah

ಅಲ್ಲಮನ ಬಗ್ಗೆ ಹನ್ನೆರಡನೆಯ ಶತಮಾನದ , ಅವನ ಕಾಲದ ನಂತರ ,ಕಳೆದ ಒಂಭೈನೂರು ವರ್ಷಗಳಲ್ಲಿ,ನಡೆದಿರುವ ಸಂವಾದ, ಚರ್ಚೆ, ವಿಮರ್ಶೆ ಇವೆಲ್ಲವನ್ನೂ ಮೀರಿ ಅಲ್ಲಮನ ವ್ಯಕ್ತಿತ್ವ ವಿಸ್ತರಿಸುತ್ತಲೇ ಇದೆ . ಹನ್ನೆರಡರಲ್ಲಿ ಉದಯವಾದ ಆ ಚೇತನ , ನಂತರ ಅಸ್ತವಾಗಲೇ ಇಲ್ಲ;ಆವರಿಸುವ ಗುಣವಿರುವ ಯಾವುದೂ ಅಸ್ತವಾಗಲಾರದು. ಯಾವುದೇ ಆದರೂ ಸಂಕುಚಿತಗೊಳ್ಳುತ್ತಾ ಹೋದರೆ ಮಾತ್ರ , ಅದು ಎಷ್ಟೇ ಧೃಢವೆಂದು ಕಂಡರೂ ಒಂದು ದಿನ ಸಿಡಿದು ನಾಶವಾಗಲೇ ಬೇಕು .

ಅಲ್ಲಮನ ಬಗ್ಗೆ ಚಾಮರಸ ಕಟ್ಟಿ ಕೊಡುವುದು, ಅಪೂರ್ವವನ್ನು ಕಂಡ ದಿಗ್ಭ್ರಾಂತನ ದರ್ಶನವನ್ನು. ದಿಗ್ಭ್ರಾಂತನೆಂದರೆ ಮುಗಿಯಿತು , ಅಲ್ಲಿ ಹುಚ್ಚು, ಬೆಪ್ಪು ಎಲ್ಲ ಇರುತ್ತವೆ.ಆದರೂ ಚಾಮರಸನ ಒಂದು ಮಾತು ಮುಖ್ಯವಾದುದು, ’ ವಿಮಳ ಅಲ್ಲಮ ಸಿಕ್ಕದಾದನು ತಮದ ಮಾಯೆಗೆ’ ಹೌದು ಅಲ್ಲಮ ಅವನ ಚಿಂತನೆಗಳು ಮತ್ತು ನಮ್ಮ ನಡುವೆ ಅಡ್ಡವಾಗಿರುವ ಗೋಡೆಯೇ ಈ ತಮದ ಮಾಯೆ!

ಚಾಮರಸನ ಮಾತನ್ನು ಸರಿಯಾಗಿ ಗ್ರಹಿಸಿದ ಬಿ. ಪುಟ್ಟಸ್ವಾಮಯ್ಯನವರು ,ಅಲ್ಲಮನ ಬಗ್ಗೆ ಕಟ್ಟಿಕೊಡುವ ಕೆಲವು ರೂಪಕಗಳು , ಆಲೋಚನೆಯ ಸ್ತರವನ್ನು ಅಲುಗಾಡಿಸಿ ಮನಸ್ಸನ್ನು ತಲ್ಲಣಗೊಳಿಸಬಲ್ಲವು .ಆದರೆ ಬಿ. ಪುಟ್ಟಸ್ವಾಮಯ್ಯನವರು , ತಾವು ಕಟ್ಟಿಕೊಡುವ ಈ ಚಿತಮಾತ್ರ ಅಲ್ಲಮನದು ಎಂದು ಹೇಳುವುದಿಲ್ಲ ;ಓದುವವನೂ ಅದು ಅಲ್ಲಮನೇ ಎಂದು ಸ್ಪಷ್ಟಪಡಿಸುವಂತೆಯೂ ಇಲ್ಲ; ಅಲ್ಲಮನಲ್ಲವೆಂದು ಹೇಳುವಂತೆಯೂ ಇಲ್ಲ . ಅಲ್ಲಮನ ಜೀವನ , ಅವನ ಸಾಧನೆ ,ಅವನ ಬೆಡಗಿನ ವಚನಗಳು ; ಅಂತೆಯೇ ಬೆಡಗಿನ ವ್ಯಕ್ತಿತ್ವ.ಹೀಗೆ ಕಾಣುವ ಪ್ರಕೃತಿಯಂತೆ , ಕಾಣದ ಪರದಂತೆ ಎಲ್ಲವೂ ತೊಡಕಿನ ನಿಧಿ.

ಕರ್ನಾಟಕದಲ್ಲಿ ನಡೆಯುತ್ತಿದ್ದ ಹನ್ನೆರಡನೆಯ ಶತಮಾನದ ಧಾರ್ಮಿಕ, ಸಾಂಸ್ಕೃತಿಕ, ಆಂದೋಲನಗಳು ; ರಾಜಕೀಯ , ಆರ್ಥಿಕ, ಸಾಮಾಜಿಕ ಜೀವನದ ಅಸ್ಥಿರ ಗತಿಗಳು, ವ್ಯಕ್ತಿತ್ವಗಳ ಅಂತರಂಗದ ತಾಕಲಾಟಗಳು ಇವೆಲ್ಲವನ್ನು ಸಮಗ್ರವಾಗಿ ಕಟ್ಟಿ ಕೊಡುವ ಪ್ರಯತ್ನವೇ ,’ಉದಯರವಿ’ಯಿಂದ ’ ಕ್ರಾಂತಿ ಕಲ್ಯಾಣದವರೆಗಿನ ಸಂಗತಿಗಳು .

ಬಳ್ಳಿಗಾವಿಯ ಕೋಡಿಮಠ , ಪೂರ್ವದಿಂದಲೂ ವಿದ್ವಾಂಸರ ತವರು .ಅಲ್ಲಿ ಅಂದಿನ ಕಾಲಕ್ಕೆ ಪರಿಚಯವಿದ್ದ ಧರ್ಮ , ಸಾಹಿತ್ಯ, ಗಣಿತ , ಖಗೋಳ , ಆಯುರ್ವೇದ ಮುಂತಾದ ಎಲ್ಲ ಜ್ಞಾನ ಶಾಖೆಗಳನ್ನು ಗ್ರಹಿಸಿ , ಪ್ರಚುರಪಡಿಸುತ್ತಿದ್ದ ಪಂಡಿತರ ತಂಡವೇ ಇತ್ತು .ಅವರಲ್ಲಿ ಪ್ರಮುಖವಾದ ಹೆಸರು , ವಾಮಶಕ್ತಿ ಪಂಡಿತ , ಅವರ ಪಾಂಡಿತ್ಯದ ಉದ್ದ ಅಗಲಗಳನ್ನು ಅಳೆಯಲು ಸಾಧ್ಯವೇ ಇಲ್ಲವೆಂದು , ಅಲ್ಲಿನ ವಿದ್ವಾಂಸರೇ ಒಪ್ಪಿಕೊಂಡಿದ್ದರು .ಕಲಿಯಲು ಬಂದ ತರುಣ ಜ್ಞಾನ ಪಿಪಾಸುಗಳಿಗೆ ,ವಾಮಶಕ್ತಿ ಪಂಡಿತರಂತಹ ಜ್ಞಾನನಿಧಿ ದೊರಕಿದುದು ಅವರ ಸುಕೃತವಾಗಿತ್ತು . ಯಾರು ಈ ವಾಮಶಕ್ತಿ ಪಂಡಿತ ? ಇವರ ಪೂರ್ವಾಪರಗಳೇನು ಎಂಬುದೇ ಗೊತ್ತಿಲ್ಲದ ವ್ಯಕ್ತಿ . ಅದನ್ನು ಎದುರಿಗೆ ನಿಂತು ಕೇಳುವ ಧೈರ್ಯವೂ ಯಾರಿಗೂ ಬರದಷ್ಟು ಗಂಭೀರ ವ್ಯಕ್ತಿತ್ವ . ವಿದ್ಯಾರ್ಥಿಗಳಿಗೆ ಬೋಧಿಸುವ ಸಮಯದಲ್ಲಿ , ಗುರು ಶಿಷ್ಯರ ನಡುವೆ ಜ್ಞಾನ ಧಾರೆಯೇ ಹರಿಯುತ್ತಿದೆ ಎಂಬಂತೆ ,ಎರಡು ಹುಬ್ಬುಗಳ ನಡುವೆ ಹೊಳೆಯುವ ಭೃಕುಟಿಯಲ್ಲಿ ಮಿಂಚಂತೆ ಮಿಂಚುವ ಮೂರನೆಯ ಮಿನುಗು , ಎಂಥ ವಿಸ್ಮಯ ?

ದಕ್ಷಿಣಾಪಥೇಶ್ವರರೆಂಬ ಬಿರುದು ಪಡೆದು , ಒಂಭೈನೂರು ವರ್ಷಗಳ ಕಾಲ ,ಶತ್ರು ಸಮೂಹದ ನಡುವೆಯೂ ,ಕೆಚ್ಚಿನ ಕೇಸರಿಗಳಂತೆ ಬಾಳಿದ ಚಾಲುಕ್ಯರು ಜಗದ ನಿಯಮದಂತೆ ಅಸ್ತಮಯ ಸಮಯದತ್ತ ಸರಿಯುತ್ತಿದ್ದರು .ಕೊನೆಯ ಚಕ್ರವರ್ತಿ ತೈಲಪ ತಾನರಿಯದಂತೆಯೆ ತನ್ನ ಸುತ್ತಲೂ ನವಿರಾಗಿ ಆವರಿಸುತ್ತಿದ್ದ ಬಲೆಯಲ್ಲಿ, ಅರಿತೂ ಅರಿಯದಂತೆ ಸಿಲುಕಿಕೊಳ್ಳುತ್ತಲೇ ಇದ್ದ .

ಚಕ್ರವರ್ತಿಯ ರಕ್ಷಣೆಗಾಗಿಯೇ ನಿಯುಕ್ತರಾಗಿದ್ದ ಭಟರು ,ಚಕ್ರವರ್ತಿಯ ಸಮಸ್ತ ಚಲನವಲನಗಳನ್ನೂ ನಿಯಂತ್ರಿಸುತ್ತಿದ್ದರು .ತೈಲಪ ಅವರಿಗೆ ಆಣತಿ ನೀಡುತ್ತಿದ್ದನೋ? ಅವನೇ ಅವರ ಆಣತಿಯಂತೆ ನಡೆದುಕೊಳ್ಳುತ್ತಿದ್ದನೋ? ಅವನಿಗೇ ಅರಿವಿಲ್ಲದಷ್ಟು ಮರವೆ ಅದಾಗಿತ್ತು .ವರ್ತಮಾನವನ್ನು ಸರಿಯಾಗಿ ಗ್ರಹಿಸಿ ಅದನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳಬಲ್ಲ ಚತುರ ಮಾಂಡಳಿಕ ಬಿಜ್ಜಳ , ಚಕ್ರವರ್ತಿಗಳ ಕೂದಲು ಕೊಂಕದಂತೆ ಕಾಪಾಡುವ ಉದ್ದೇಶದಿಂದಲೇ , ಅವರ ಎಲ್ಲ ಚಲನವಲನಗಳನ್ನೂ ನಿರ್ಬಂಧಗೊಳಿಸಿ , ಅರಮನೆಯ ಅಂತಃಪುರದಲ್ಲಿ ಅವರಿಗೆ ಸಕಲ ಸವಲತ್ತುಗಳನ್ನೂ ಒದಗಿಸಿ ,ಮೊಟ್ಟೆಯೊಳಗಿನ ಮರಿಯಂತೆ ಅವರನ್ನು ಕಾಪಾಡುತ್ತಿದ್ದ . ತೈಲಪ ಸ್ವಾತಂತ್ರವೇ ಇಲ್ಲದ ಬೋನಿನ ಮೃಗದಂತೆ, ಚಡಪಡಿಸುತ್ತಾ ಒದ್ದಾಡುತ್ತಿದ್ದ .

ಚಾಲುಕ್ಯ ಸಾಮ್ರಾಜ್ಯದ ಮುಂದಿನ ಭವಿಷ್ಯವೇನು ? ಎಂಬ ಪ್ರಶ್ನೆ ತೈಲಪನ ಮನಸ್ಸಿನಲ್ಲಿ ಬೃಹದಾಕಾರ ತಳೆದು ಕುಳಿತಿತ್ತು .ಯಾರೊಡನೆಯೂ ಮಾತನಾಡಲು ಸಾಧ್ಯವಾಗುತ್ತಿಲ್ಲ ,ಯಾರೂ ಸಮಸ್ಯೆಯನ್ನು ಅರಿತು ಸಮಾಧಾನ ಹೇಳುವವರೂ ಇಲ್ಲ . ತೈಲಪನಿಗೆ ಹಂಪೆಯ ಹೇಮಕೂಟದಲ್ಲಿದ್ದ ಯೋಗಿಯೊಬ್ಬರು ಅಪಾರ ಮಹಿಮರೆಂದು ತಿಳಿದು ಬಂದಿತ್ತು ,ಅವರನ್ನು ತಾನು ಕಾಣಲೇಬೇಕೆಂದು ತೈಲಪ ಹಠ ಹಿಡಿದ "ಹೋ, ಅದೂ ಒಂದು ಆಗಲಿ,, ಎಂದು ಮಾಂಡಲಿಕರ ವ್ಯಂಗ್ಯಭರಿತ ಒಪ್ಪಿಗೆ ದೊರೆಯಿತು . ( ಮೂಂದುವರಿಯುವುದು)

  • ಜ್ಞಾನವಾಹಿನಿ
Ornamental seperator
  • Login or register to post comments
  • 113 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅನನ್ಯ ಅಲ್ಲಮ (೨)
  • ಅನನ್ಯ ಅಲ್ಲಮ (೫)
  • ಅನನ್ಯ ಅಲ್ಲಮ ೭
  • ಅನನ್ಯ ಅಲ್ಲಮ (೬)
  • ವಚನ ಚಿಂತನೆ: ಅಲ್ಲಮ: ನಾಲ್ಕು ದ್ವೀಪಗಳು
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪ್ರತ್ಯಕ್ಷ ನೋಡಿದರೂ...
  • ನಶಿಸುತ್ತಿರುವ ಶಬ್ದ ಬಳಕೆ
  • ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ
  • ಭಾರತದ ಜ್ಞಾನಾವತಾರ
  • ಹೆಣ್ಣು ಜೀವವಿಮುಖಿ, ಜೀವವಿರೋಧಿಯಾಗುವ ಕ್ಷಣ
  • ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
  • ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಸುಭಾಷಿತಗಳು
    May 12, 2008 - 2:57am
  • kannadakanda
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 12, 2008 - 2:47am
  • hpn
    ಉ: ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !
    May 12, 2008 - 1:00am
  • hpn
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:52am
  • hpn
    ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
    May 12, 2008 - 12:48am
  • hamsanandi
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:20am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 12:09am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 11, 2008 - 11:33pm
  • ವೈಭವ
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 11, 2008 - 8:45pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 11, 2008 - 8:29pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 8 ಅತಿಥಿಗಳು ಆನ್ಲೈನ್ ಇರುವರು.

ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.

— ಮಹಾತ್ಮ ಗಾಂಧಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator