Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು?

March 19, 2008 - 2:14pm — hpn

Vista Service Pack
ಮೈಕ್ರೊಸಾಫ್ಟ್ ಕಂಪೆನಿಯು ತನ್ನ ವಿಂಡೋಸ್ ವಿಸ್ತ ಆಪರೇಟಿಂಗ್ ಸಿಸ್ಟಮ್ ಗೆ ಮೊದಲ ಸರ್ವೀಸ್ ಪ್ಯಾಕ್ (ಅಂದರೆ ಮೊದಲ ದೊಡ್ಡ ಅಪ್ಡೇಟ್) ನಿನ್ನೆ ರಿಲೀಸ್ ಮಾಡಿದೆ.

ವಿಸ್ತ ಬಳಸಿ ಬೇಸತ್ತು ಹೋದವರಿಗೆ ಇದು ಬಹುಶಃ ಸಿಹಿ ಸುದ್ದಿಯಾಗಬಹುದು. ಬಳಸಿ ನೋಡಿ ಸಿಹಿ ಕಹಿಯ ಅನುಭವ ಹಂಚಿಕೊಳ್ಳುವವರು ಸದ್ಯದಲ್ಲೇ ಬ್ಲಾಗ್ ಮಂಡಲದಲ್ಲಿ ಕಾಣಿಸಿಕೊಳ್ಳುವರು. ಆದರೆ ಹಲವರು "ಬೇರೆಯವರು ಬಳಸಿ ಇದರ ಬಗ್ಗೆ ಬರೆಯಲಿ, ಆಮೇಲೆ ಬಳಸಿ ನೋಡುತ್ತೇವೆ... ನಮಗೆ ನಮ್ಮ ಕಂಪ್ಯೂಟರ್ ಬಹುಪ್ರಿಯವಾದುದು" ಎಂದು ಅಲ್ಲಲ್ಲಿ ಅಂತರ್ಜಾಲದಲ್ಲಿ ಬರೆದದ್ದನ್ನು ಓಡಿ ನನಗೆ ಆಶ್ಚರ್ಯವಾಯ್ತು. ಒಂದಾಗುತ್ತ ಒಂದು ಸಾಫ್ಟ್ವೇರ್ ಮಾರ್ಕೆಟ್ಟಿನಲ್ಲಿ ಹೊರಬರುವ, ಸಿಕ್ಕಾಪಟ್ಟೆ ಖರೀದಿಯಾಗುವ ವಿಂಡೋಸ್ ಆಪರೇಟಿಂಗ್ ಸಿಸ್ಟಮುಗಳಿಗೆ ಬಹುಶಃ ಇಂತಹ ಸ್ಥಿತಿ ವಿಂಡೋಸ್ ME (ಮಿಲೇನಿಯಮ್ ಎಡಿಶನ್) ನಂತರ ಇದೇ ಮೊದಲು. ಹದಗೆಟ್ಟ ಯೋಜೆನೆಯೊಂದು ಹೊರಬಂದಾಗ ಹೀಗಾಗುವುದು ಸಹಜ ಎಂಬುದು ಈ ಬಗ್ಗೆ ವರದಿ ಹೊತ್ತ ಆನ್ಲೈನ್ ಪತ್ರಿಕೆಗಳ ಅಂಬೋಣ. ಯೋಜನೆ ಹದಗೆಟ್ಟಿದೆಯೆಂದು ಮೈಕ್ರೊಸಾಫ್ಟಿನವರು ತಮ್ಮ ತಮ್ಮಲ್ಲೇ ಮಾತನಾಡಿದ್ದನ್ನು ಕೋರ್ಟ್ ಕೇಸೊಂದನ್ನ ಫಾಲೋ ಮಾಡುತ್ತಿದ್ದ ನ್ಯೂ ಯಾರ್ಕ್ ಟೈಮ್ಸ್ ವರದಿ ಮಾಡಿತ್ತು - "They Criticized Vista. And They Should Know" ಎಂಬ ಶೀರ್ಷಿಕೆಯಡಿ.
ಈ ಮಧ್ಯೆ ವಿಸ್ತ ಬೆಲೆ ಇಳಿಸಲ್ಪಟ್ಟಿರುವುದು ಸಾಕಷ್ಟು ಸಂಶಯಗಳನ್ನು ಹುಟ್ಟುಹಾಕಿದೆ ಎಂಬುವುದು ಸುಳ್ಳಲ್ಲ.

ಅದಿರಲಿ, ಈ ವಿಸ್ತ ಸರ್ವೀಸ್ ಪ್ಯಾಕಿನಲ್ಲಿ ಏನು ಹೊಸತು? ಮೈಕ್ರೊಸಾಫ್ಟ್ ೫೫ ಪುಟಗಳ ಡಾಕ್ಯುಮೆಂಟ್ ರೆಡಿ ಮಾಡಿದೆಯಂತೆ, ಏನೇನು ಬದಲಾವಣೆಗಳು ಎಂಬುದಾಗಿ. ವೆಬ್ ತಾಣ inventorspotನ ಬೆನ್ ಅರ್ನಾಲ್ಡ್ ಅದನ್ನೋದಿ ಮುಖ್ಯವಾದವುಗಳನ್ನು ಪಟ್ಟಿ ಮಾಡಿದ್ದಾರೆ. ಅವುಗಳನ್ನು ಕನ್ನಡದಲ್ಲಿ ನಾನು ಕೆಳಗಿನಂತೆ ಪಟ್ಟಿ ಮಾಡಿರುವೆ:

* ಎಚ್ ಡಿ - ಡಿವಿಡಿ ಮತ್ತು ಬ್ಲೂ ರೇ ಡಿಸ್ಕುಗಳಿಗೆ ಹೆಚ್ಚಿನ ಬೆಂಬಲ (ಜೊತೆಗೆ ವಿಂಡೋಸ್ ಮೀಡಿಯ ಸೆಂಟರಿನ ಎಕ್ಸ್ಟೆಂಡರುಗಳು - ಡಿಜಿಟಲ್ ಟಿ ವಿ, ನೆಟ್ವರ್ಕಿನ ಮೂಲಕ ಓದಬಹುದಾದ ಡಿ ವಿ ಡಿ ಮುಂತಾದವುಗಳಿಗೆ ಕೂಡ) ಹೆಚ್ಚಿಸಿದ್ದಾರಂತೆ.
* ವಿಸ್ತ ಬಳಕೆದಾರರನ್ನು ಬೇತಾಳದಂತೆ ಕಾಡಿದ್ದ ಎರರ್ ರಿಪೋರ್ಟಿಂಗ್ ಸವಲತ್ತು (!) ಸ್ವಲ್ಪ ಕಡಿಮೆ ರೇಜಿಗೆಯಾಗುವಂತೆ ಮಾಡಿದ್ದಾರಂತೆ.
* ಈ ಹಿಂದೆ ಕೆಲವೊಮ್ಮೆ (ಕೆಲವು ಲ್ಯಾಪ್ ಟಾಪುಗಳಲ್ಲಿ) ಹಾರ್ಡ್ ಡಿಸ್ಕ್ ಸರಿಯಾಗಿ ತಿರುಗದೆ ತೊಂದರೆಯಾಗುತ್ತಿತ್ತಂತೆ, ಕೆಲವೊಮ್ಮೆ ವೀಡಿಯೋ ಚಿಪ್ಸೆಟ್ಟು ಸಿಸ್ಟಮಿಗೆ 'ಮಲ್ಕೋ ಹೋಗು' ಅಂತ ತಪ್ಪಾಗಿ ಹೇಳುತ್ತಿತ್ತಂತೆ. ಇದನ್ನು ಸರಿಪಡಿಸಿದ್ದಾರಂತೆ. ಈಗ ಪ್ರಾಸೆಸ್ಸರ್ ಮಲಗಿದ್ದರೆ display ಬದಲಾಗದ ಹೊರತು ಸಿಸ್ಟಮ್ ಎಚ್ಚರವಾಗುವುದಿಲ್ಲವಂತೆ.
* ಡೈರೆಕ್ಟರಿಯೊಂದರಲ್ಲಿ ಸುಮಾರು ಫೈಲ್ಸ್ ಇದ್ದಾಗ ಅದನ್ನು ಸ್ಥಳಾಂತರಿಸುವುದು ವಿಸ್ತ ಭ್ರಮನಿರಸನ ಉಂಟು ಮಾಡಿದ್ದುಂಟು ಅಂತ ಹಲವು ವರದಿಗಳು ಬಂದಿದ್ದವು. ಈಗ ಇದನ್ನು ಸರಿಪಡಿಸುವ ಪ್ರಯತ್ನ ಸರ್ವೀಸ್ ಪ್ಯಾಕ್ ೧ ರಲ್ಲಿ ಮಾಡಿದ್ದಾರಂತೆ.
* ಮೇಲಿನಂತೆ ಫೈಲ್ಸ್ ಸ್ಥಳಾಂತರ ಯೂ ಎಸ್ ಬಿ ಹಾಗೂ ನೆಟ್ವರ್ಕ್ ಮೂಲಕ ಮಾಡುವಾಗಲೂ ಹಿಡಿಯುವ ಸಮಯವನ್ನು ಕಡಿಮೆ ಮಾಡಲಾಗಿದೆಯಂತೆ.
* ರಿಮೋಟ್ ಡೆಸ್ಕ್ ಟಾಪ್ ಸಂಪರ್ಕಗಳನ್ನು ಉತ್ತಮ ಪಡಿಸುವ ಹೊಸ ಕಂಪ್ರೆಶನ್ ಅಲ್ಗಾರಿದಮ್ (ಮಾಹಿತಿಯನ್ನು ಮಡಚಿ, ಒತ್ತಿ ಸಣ್ಣದಾಗಿಸುವ ಅಲ್ಗಾರಿದಮ್) ಬಳಕೆಯಾಗಿದೆಯಂತೆ.
* ಇತ್ತೀಚೆಗೆ ಹೊರಬಂದ ವೈರ್ಲೆಸ್ ನೆಟ್ವರ್ಕಿಂಗ್ ಕುರಿತ IEEE ಡ್ರಾಫ್ಟಿಗೆ ತಕ್ಕಂತೆ ಸಂಪೂರ್ಣ ಬೆಂಬಲ ಹೊಂದಿಸಿದ್ದಾರಂತೆ.
* ವಿಂಡೋಸ್ ನಲ್ಲಿ ಇರುವ ಬಹಳ ದೊಡ್ಡ ತೊಂದರೆಯೆಂದರೆ ಪ್ರತಿಯೊಂದನ್ನೂ install ಮಾಡಿದ ಕೂಡಲೆ "ರೀಬೂಟ್ ಮಾಡಿ" ಎಂದು ಅದು ಗೋಳು ಹೊಯ್ದು ಕೊಳ್ಳುವುದು. ರೀಬೂಟ್ ಮಾಡದೆ ಹಾಗೆ ಸ್ಥಾಪಿಸಿದ ಹೊಸ ತಂತ್ರಾಂಶ ಕೆಲಸ ಮಾಡುವುದು ಕಡಿಮೆ. ಸಿಸ್ಟಮಿಗೆ ಹಾಕಿದ ಪ್ಯಾಚುಗಳಂತೂ ರೀಬೂಟ್ ಮಾಡದೇ ಕೆಲಸವೇ ಮಾಡೋಲ್ಲ. ಈಗ ಹಾಟ್ ಪ್ಯಾಚ್ ಎಂಬ ಸವಲತ್ತು ಹೊಂದಿರುವ ಕಂಪ್ಯೂಟರುಗಳಿಗೆ ರಿಬೂಟ್ ಮಾಡದೆ ಹೊಸ ಪ್ಯಾಚುಗಳನ್ನು ಅದು ಹಾಕಿಕೊಳ್ಳುವಂತೆ ಬರೆದಿದ್ದಾರಂತೆ.
* ಪವರ್ ಹೋದ್ರೆ ಕಂಪ್ಯೂಟರು ಹದಗೆಡದಂತೆ ಹೆಚ್ಚಿನ ಕ್ರಮಗಳನ್ನು ತಗೊಂಡಿದಾರಂತೆ.
* ಈ ಹಿಂದೆ ವಿಸ್ತದಲ್ಲಿ ಗೂಗಲ್ ಸರ್ಚ್ ಬಳಸುವವರಿಗೆ ಬಹಳ ತೊಂದರೆಯಾಗುತ್ತಿತ್ತಂತೆ. ಡೀಫಾಲ್ಟ್ ಅದನ್ನು ಹಾಕಿಕೊಳ್ಳಲು ಹೋದರೆ ಬಿಡುತ್ತಿರಲಿಲ್ಲವಂತೆ. ಈಗ ಅದನ್ನು ಸರಿಪಡಿಸಿದ್ದಾರಂತೆ.
* ಲಿನಕ್ಸಿನಿಂದ ಕಾಪಿ ಹೊಡದ ಒಂದು ಸವಲತ್ತು - ನಿರ್ವಹಣೆ ಕೆಲಸಗಳನ್ನು ಮಾಡುವಾಗ ಪಾಸ್ವರ್ಡ್ ಕೇಳುವುದು. ಇದು ವಿಸ್ತದಲ್ಲಿ ಬಹುಶಃ ಹಲವರ ತಾಳ್ಮೆ ಕೆಡಿಸಿತ್ತು. ಈಗ ಅದು ಕಡಿಮೆ ಬಾರಿ ನಿಮಗೆ ತೊಂದರೆ ಕೊಡುತ್ತಂತೆ.

ಇಷ್ಟು ನಾನು ಓದಿ ಅರ್ಥೈಸಿಕೊಂಡಂತೆ ಕನ್ನಡದಲ್ಲಿ ಬರೆದಿರುವ ಪಾಯಿಂಟುಗಳು. ಕೆಲವು ತಪ್ಪುಗಳಾಗಿರಬಹುದು. ಹಾಗೆ ಆಗಿದ್ದರೆ ದಯವಿಟ್ಟು ಕಾಮೆಂಟ್ ಮೂಲಕ ತಿಳಿಸಿ.

ಡಿಸ್ಕ್ಲೇಮರ್ (disclaimer): ೧) ಇದನ್ನು ನೆಚ್ಚಿಕೊಂಡು ವಿಸ್ತ ಬಳಸಲು ಅಥವ ಬಳಸದೇ ಇರಲು ನಿರ್ಧಾರ ಕೈಗೊಂಡರೆ ಅದು ನಿಮ್ಮ ಹೊಣೆ, ಅಥವ ಹೊಣೆ ನಿಮ್ಮದೆ. ನನ್ನ ತಲೆಗೆ ಏನೂ ಕಟ್ಟಬಾರದು ಮತ್ತೆ. ಇಲ್ಲಿರುವ ಪಾಯಿಂಟುಗಳ ಸತ್ಯಾಸತ್ಯತೆ ನನಗೂ ಗೊತ್ತಿಲ್ಲ. Sticking out tongue
೨) ವಿಸ್ತ, ಮೈಕ್ರೊಸಾಫ್ಟ್ ಇವೆಲ್ಲ ಮೈಕ್ರೊಸಾಫ್ಟಿನ ಟ್ರೇಡ್ ಮಾರ್ಕುಗಳು.

ಚಿತ್ರ ಕೃಪೆ: inventorspot.com

  • ಪ್ರಚಲಿತ
Ornamental seperator
  • Login or register to post comments
  • 556 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 19, 2008 - 5:09pm — ಶ್ಯಾಮ ಕಶ್ಯಪ

ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು?

ಶ್ಯಾಮ ಕಶ್ಯಪ's picture

ನಾನು ವಿಸ್ತ ಬಳಸುತ್ತಿದ್ದೇನೆ. ನನ್ನ ಬಳಕೆಯ ಅಗತ್ಯಗಳನ್ನು ಮನದಲ್ಲಿಟ್ಟುಕೊಂಡು ಮೈಕ್ರೋಸಾಪ್ಟಿನ ಓಎಸ್ ಗಳನ್ನು ಅಳೆದರೆ, ವಿಸ್ತ ಖಂಡಿತ ಮೊದಲನೆಯ ಸ್ಥಾನದಲ್ಲಿದೆ. ರೇಜಿಗೆ ಕೊಡುವಂತಹ ಕೆಲವು ಅಂಶಗಳಿದರಲ್ಲಿದ್ದರೂ ಮಿಕ್ಕವಿಕ್ಕಿಂತ ವಾಸಿ ಇದು.
--
ನೀ ಲೋಕದ ಕಾಳಜಿ ಮಾಡುವೆನಂತಿ, ಯಾರ ಬ್ಯಾಡಂದಾರ ಮಾಡಪ್ಪ ಚಿಂತಿ - ಸಂತ ಶಿಶುನಾಳ ಶರೀಫ

  • Login or register to post comments
  • link
  • Email this ಪ್ರತಿಕ್ರಿಯೆ
March 20, 2008 - 4:51pm — hpn

ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು?

hpn's picture

ನನ್ನ ಬಳಕೆಯ ಮಟ್ಟಿಗೆ ಅದು ರೇಜಿಗೆಯಾಗಿದ್ದು ನಿಜ. ಎರಡು ತಾಸುಗಳಲ್ಲಿ ಲಿನಕ್ಸಿನಲ್ಲಿ ನಾ ಮುಗಿಸುವ ಕೆಲಸ ದಿನವಿಡಿ ಕೂತರೂ ವಿಸ್ತದಲ್ಲಿ ಮುಗಿಯಲಿಲ್ಲ. ಇ-ಮೇಯ್ಲ್ ಮಾಡೋದಕ್ಕೆ, ಅಂತರ್ಜಾಲದಲ್ಲಿ ಪುಟಗಳನ್ನು ಓದೋದಕ್ಕೆ ಮಾತ್ರ ವಿಸ್ತ ಚೆನ್ನಾಗಿದೆ. ವಿಸ್ತಾ ಬಳಕೆಯ ಅನುಭವಗಳ ಕುರಿತು ಒಂದು ಲೇಖನವನ್ನು ಬರೆದಿರುವೆ - ಅದನ್ನೊಮ್ಮೆ ಪ್ರಕಟಿಸುವೆ.

ಆದರೆ ನನಗೆ ಮಾತ್ರ ಅಲ್ಲ, ಹಲವರು ಹೊಸ ವಿಂಡೋಸ್ ಬಗ್ಗೆ ಬೇಸರಪಟ್ಟುಕೊಳ್ಳುವುದು ಕೇಳಿರುವೆ, ಓದಿರುವೆ.

ನನಗಾದರೆ ನಿತ್ಯ ಬಳಸುವ ಲಿನಕ್ಸ್ ಇದೆ. ಉಳಿದವರಿಗೆ, ಲಿನಕ್ಸಿಗೆ ಬಳಸಲಾಗದವರಿಗೆ ಪಾಪ ಯಾವುದೋ ಕಂಪೆನಿಯ ಮೊನಾಪಲಿಯ ತಾರಸಿಯಡಿ ತಾವು ಇಕ್ಕಟ್ಟಿಗೆ ಸಿಲುಕಿಕೊಂಡ ಪರಿಸ್ಥಿತಿ. ಕೆಲವರು ದುಡ್ಡಿರುವವರು ಮ್ಯಾಕ್ ಗೆ ಹಾರಿಕೊಂಡು ಮೋಕ್ಷ ಕಂಡುಕೊಂಡವರಿದ್ದಾರೆ. ಇದು ಉತ್ಪ್ರೇಕ್ಷೆಯಲ್ಲ, ನಿಜ ಸ್ಥಿತಿ. Smiling

ಮೊನ್ನೆ ತಾನೆ ಗಣ್ಯರೊಬ್ಬರ ಮನೆಗೆ ಹೋದಾಗ ಅವರು ಅಳುಕಿನಿಂದಲೇ "ನನ್ನ laptopನಲ್ಲಿ... ಹ್ಮ್... ವಿಸ್ತ ಇರೋದು. ಬರೇ ತೊಂದರೆ ಕೊಡ್ತಿರತ್ತೆ" ಎಂದರು. ನಂತರ ಬ್ಲಾಗ್ ಸ್ಪಾಟ್ ನಲ್ಲಿ ಇದ್ದ ಲೇಖನವೊಂದನ್ನು ಎಡಿಟ್ ಮಾಡಹೋಗಿ ಸರಿಯಾಗಿ ಓಪನ್ ಆಗದೆ ಪರದಾಡುವಾಗ, ಮತ್ತೊಮ್ಮೆ ಇಂಟರ್ನೆಟ್ ಎಕ್ಸ್ ಪ್ಲೋರರ್ರು ಕ್ರಾಶ್ ಆಗಿ ಏನೂ ಕೆಲಸ ಆಗದೆ ಈ ಸಂಗತಿ ಎಷ್ಟು ನಿಜ ಎಂಬುದು ತಿಳಿಯಿತು.

--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
March 19, 2008 - 5:21pm — savithru

ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು?

savithru's picture

hpn,

ಕನ್ನಡದಲ್ಲಿನ ಈ ಬರಹ ತುಂಬ ಚೆನ್ನಾಗಿದೆ. ಮತ್ತೆ ಮತ್ತೆ ಬರೆಯುತ್ತಾ ಇರಿ.

ನಾನು ಸಹಾ ವಿಸ್ತಾ ಬಳಕೆದಾರ. ನಾನು ಕಂಡ ಕೆಲ ದೋಷಗಳು.

>>internet ಎಕ್ಸ್ಪ್ಲೋರರ್ ನಲ್ಲಿ ದೋಷವಿದೆ. ಇದ್ದಕ್ಕಿಂತೆ ಕ್ಲೋಸ್ ಆಗುತ್ತೆ.
>> ಸಿಕ್ಕ ಬಟ್ಟೆ ನಿಧಾನ.
>> ನನ್ನ ಹಾರ್ಡ್ ಡಿಸ್ಕ್ ತುಂಬಾ ಶಬ್ದ ಮಾಡುತ್ತೆ. ಕಾರಣ ಇದೆ ಇರ್ಬಹುದ? .. ನಾನು ಹಾರ್ಡ್ ಡಿಸ್ಕ್ ಹೊಸದು ಹಾಕ್ಸೋಣ ಅಂತ ಅನ್ಕೊಂಡಿದ್ದೆ.
>>ಸಧ್ಯಕ್ಕೆ ಮನೇಲಿ ನೆಟ್ ಇಲ್ಲ. ಸಧ್ಯದಲ್ಲೇ update ಮಾಡಿ ನೋಡುತ್ತೇನೆ.

ಸವಿತೃ

  • Login or register to post comments
  • link
  • Email this ಪ್ರತಿಕ್ರಿಯೆ
March 20, 2008 - 5:12pm — hpn

ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು?

hpn's picture

>> ಸಿಕ್ಕ ಬಟ್ಟೆ ನಿಧಾನ.

ನನಗೆ ಎದುರಾದ ಬಹುದೊಡ್ಡ ತೊಂದರೆ ಇದೇನೆ(ಸಿಕ್ಕಾಪಟ್ಟೆ ನಿಧಾನ). ನಾಲ್ಕಾರು ಪ್ರೋಗ್ರಾಮುಗಳನ್ನು ಓಪನ್ ಮಾಡುತ್ತಲೇ ನಾನು ಕಾಲೇಜಿನಲ್ಲಿ ಬಳಸುತಿದ್ದ (ಈಗಿನಂತೆ antique) ಕಂಪ್ಯೂಟರಿನ ನೆನಪನ್ನು ಮರುಕಳಿಸಿತು ವಿಸ್ತ! ಅಷ್ಟು ನಿಧಾನ! ಏನಪ್ಪಾ ಇದು ಎಂದು ಆಲೋಚಿಸುತ್ತಲೆ, ಇನ್ನು ನಾನು ನಿತ್ಯ ಲಿನಕ್ಸಿನಲ್ಲಿಟ್ಟು ತೆರೆದಿಟ್ಟುಕೊಳ್ಳುವಂತೆ ಇಪ್ಪತ್ತು ಮೂವತ್ತು ವಿಂಡೋಗಳು, ಬ್ರೌಸರಿನಲ್ಲಿ ತಿಂಗಳಾರುಗಟ್ಟಲೆ ಕ್ಲೋಸ್ ಮಾಡದೇ ಇಟ್ಟುಕೊಂಡ ಅಂತರ್ಜಾಲ ಪುಟಗಳು - ಇವೆಲ್ಲ ವಿಸ್ತದಲ್ಲಿ ಮಾಡೋಕೆ ಹೊರಟರೆ ದೇವರೇ ಗತಿ ಅನ್ನಿಸಿತು Smiling

(ಈ ಕಾಮೆಂಟ್ ಬರೆಯುವಾಗಲೂ ನನ್ನ ಕಂಪ್ಯೂಟರಿನಲ್ಲಿ ನಾಲ್ಕಾರು ಪಿ ಡಿ ಎಫ್ ಗಳು, ಎರಡು ಮೂರು ಡಾಕ್ಯುಮೆಂಟುಗಳು, ಹತ್ತಿಪ್ಪತ್ತು ಓಪನ್ ಮಾಡಿಟ್ಟುಕೊಂಡ ಇ-ಮೇಯ್ಲುಗಳು (ಕಂಪ್ಯೂಟರಿಗೆ ಡೌನ್ಲೋಡ್ ಮಾಡಿಟ್ಟುಕೊಂಡದ್ದು), ಒಂದು ಟರ್ಮಿನಲ್, ನಾಲ್ಕಾರು ನೋಟ್ಸ್, ಓಪನ್ ಮಾಡಿಟ್ಟುಕೊಂಡ ಹತ್ತಾರು ಟೆಕ್ಸ್ಟ್ ಫೈಲುಗಳು, ಸುಮಾರು ಫೋಲ್ಡರುಗಳು, ಒಂದು ಇಮೇಜ್ ಪ್ರಾಸೆಸಿಂಗ್ ಪ್ರೋಗ್ರಾಮು, ವಾರದ ಹಿಂದೆ ಅರ್ಧ ನೋಡಿ ಅಲ್ಲಿಗೆ pause ಮಾಡಿ ಉಳಿದದ್ದು ನೋಡಲು ಮತ್ತೆ ಸಮಯವಾಗದೆ ಹಾಗೇ ಇಟ್ಟುಕೊಂಡಿರುವ ಒಂದು ಆಸ್ಟ್ರೇಲಿಯನ್ ಫಿಲಮ್ಮು, ಎಲ್ಲ ಪ್ರೋಟೋಕಾಲ್ ಗಳಿಗೂ ಸೇರಿಸಿ ಬಳಸುವ ಒಂದು ಚ್ಯಾಟ್ ಪ್ರೋಗ್ರಾಮು, ಒಂದು ಇಂಟರ್ನೆಟ್ ರಿಲೇ ಚ್ಯಾಟ್ ಪ್ರೋಗ್ರಾಮು, ಒಂದು ಫೈರ್ ವಾಲ್, ನಾನು ಕೋಡ್ ಮಾಡಲು ಬಳಸುವ ಎಡಿಟರ್, ಜೊತೆಗೆ ಎಲ್ಲದಕ್ಕಿಂತ ಹೆಚ್ಚು ಮೆಮೋರಿ ತಿನ್ನುವ ಪ್ರೋಗ್ರಾಮು.. ಅದುವೇ ಬ್ರೌಸರ್ರು - ಸುಮಾರು ಒಂದು ತಿಂಗಳಿಂದ ಓಪನ್ ಮಾಡಿಟ್ಟುಕೊಂಡ ನೂರಾರು ಅಂತರ್ಜಾಲ ಪುಟಗಳು (ಅವುಗಳಲ್ಲಿ ನಿರಂತರ ಅಪ್ಡೇಟ್ ಆಗುವ ನ್ಯೂಸ್ ಪುಟಗಳೂ ಸೇರಿ) - ಇವೆಲ್ಲದರ ಜೊತೆಗೆ ಒಂದು ವೆಬ್ ಸರ್ವರ್, ಒಂದು SSH ಸರ್ವರ್, ಒಂದು MySQL ಸರ್ವರ್ ಹಾಗೂ ಇನ್ನೂ ಹಲವು ಸರ್ವರುಗಳೊಂದಿಗೆ ಓಡುತ್ತಲೇ ಇವೆ! ಇದನ್ನೆಲ್ಲ ವಿಸ್ತದಲ್ಲಿ ಊಹಿಸಿಕೊಂಡರೆ ಭಯವಾಗತ್ತೆ)

--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
March 20, 2008 - 5:31pm — savithru

ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು?

savithru's picture

ಮರ್ತೆ ಬಿಟ್ಟಿದ್ದೆ......

ನನ್ನ ( ವಿಸ್ತಾ) ಆಕ್ರೋ ಬ್ಯಾಟ್ ರೀಡರ್ ನಲ್ಲೂ ಸ್ವಲ್ಪ ತೊಂದರೆ ಇದೆ. ನೆಟ್ ನಲ್ಲಿ ಸಲೂಶನ್ ಸಿಕ್ಕಲಿಲ್ಲ.

ಸವಿತೃ

  • Login or register to post comments
  • link
  • Email this ಪ್ರತಿಕ್ರಿಯೆ
March 20, 2008 - 5:40pm — savithru

ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು?

savithru's picture

ಲ್ಯಾಪ್ ಟಾಪ್ ಗಳನ್ನೂ ಕಡಿಮೆ ಪವರ್ ಬಳಸಿ ( low power design) ಕೆಲ್ಸ ಮಾಡೋ ರೀತಿ ವಿನ್ಯಾಸ ಮಾಡಿರ್ತಾರಾದ ಕಾರಣ , ಲ್ಯಾಪ್ ಟಾಪ್ ಅಂದ್ರೆನೆ ಅವು ನಿಧಾನ ( ಡೆಸ್ಕ್ ಟಾಪ್ ಗೆ ಹೋಲಿಸಿದರೆ) . ಅದರಲ್ಲಿ ಮತ್ತೆ ಈ ವಿಸ್ತಾ ಹಾಕಿದರೆ ... .. ಮುಂದಕ್ಕೆ ನೀವೇ ಯೋಚಿಸಿ.

ಸವಿತೃ

  • Login or register to post comments
  • link
  • Email this ಪ್ರತಿಕ್ರಿಯೆ
March 20, 2008 - 5:46pm — hpn

ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು?

hpn's picture

ನಿಜ. Smiling

ಆದರೆ ಸುಮಾರು ಎರಡು ವರ್ಷ ಹಳೆಯದಾದ ಲ್ಯಾಪ್ ಟಾಪ್ ನನ್ನ ಬಳಿ ಇರೋದು. ಅದರಲ್ಲಿ ಇತ್ತೀಚಿನ ಲಿನಕ್ಸ್ ವಿತರಣೆಯೊಂದನ್ನ ಹಾಕಿರುವೆ (ಸಂಪದ ಸರ್ವರ್ ನಲ್ಲಿ ಕೂಡ ಇದೇ ವಿತರಣೆಯನ್ನು ಹಾಕಿರೋದು). ಸುಮಾರು ವಿಂಡೋಗಳು ಲ್ಯಾಪ್ ಟಾಪ್ ನಲ್ಲೂ ನಿರಂತರ ತೆಗೆದೇ ಇಟ್ಟಿರುತ್ತೇನೆ. ಅದೂ composting ಎನೇಬಲ್ ಮಾಡಿ! (compositing ಅಂದರೆ ವಿಸ್ತದಲ್ಲಿ ಇರುವ Aero ಇದ್ದ ಹಾಗೆ - 3d ಎಫೆಕ್ಟುಗಳನ್ನು ಕೊಡತ್ತೆ, ನೋಡಲಿಕ್ಕೆ ಚೆಂದವಾಗಿರತ್ತೆ).
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
March 21, 2008 - 11:17am — ASHOKKUMAR

ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು?

ASHOKKUMAR's picture

Quote:
ಇನ್ನು ನಾನು ನಿತ್ಯ ಲಿನಕ್ಸಿನಲ್ಲಿಟ್ಟು ತೆರೆದಿಟ್ಟುಕೊಳ್ಳುವಂತೆ ಇಪ್ಪತ್ತು ಮೂವತ್ತು ವಿಂಡೋಗಳು, ಬ್ರೌಸರಿನಲ್ಲಿ ತಿಂಗಳಾರುಗಟ್ಟಲೆ ಕ್ಲೋಸ್ ಮಾಡದೇ ಇಟ್ಟುಕೊಂಡ ಅಂತರ್ಜಾಲ ಪುಟಗಳು - ಇವೆಲ್ಲ ವಿಸ್ತದಲ್ಲಿ ಮಾಡೋಕೆ ಹೊರಟರೆ ದೇವರೇ ಗತಿ ಅನ್ನಿಸಿತು

ನೀತಿ: ವಿಸ್ಟ ಬಳಸಿದರೆ,ಶಿಸ್ತು ಹೆಚ್ಚುತ್ತದೆ!
*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ
March 21, 2008 - 11:26am — hpn

ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು?

hpn's picture

ಇದು ಕಾಲೆಳೆಯುವ ಪ್ರಯತ್ನ ಆಯಿತು. ತಮಾಷೆಯಾಗಿ ಹೇಳಿದ್ದರೆ ಓಕೆ. ಸೀರಿಯಸ್ಸಾಗಿ ನೀವು ಹೀಗೆ ಬರೆದಿದ್ದೀರಾದರೆ ಅದು ಹೆಡ್ಡತನ ಆಗುತ್ತೆ.

--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
March 21, 2008 - 11:35am — ASHOKKUMAR

ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು?

ASHOKKUMAR's picture

ತಮಾಷೆಗೇ ಸ್ವಾಮೀ... ಸ್ಮೈಲೀ ಇಡದೆ ತಮಾಷೆ ಮಾಡೋಹಾಗಿಲ್ವೇ Smiling Smiling
*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ
March 21, 2008 - 11:47am — hpn

ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು?

hpn's picture

ಇಂಟರ್ನೆಟ್ಟಿನಲ್ಲಿ ನೀವು smiley ಹಾಕಿದರೆ ಓದುಗರ ಮಟ್ಟಿಗ ನೀವು ನಗುತ್ತಿದ್ದೀರಿ ಎಂದಾಗುತ್ತದೆ. ಅಲ್ಲಿಗೆ ಓಕೆ. ಬೇರೇನೂ ಅನ್ನಿಸದು. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
March 20, 2008 - 6:09am — varunbhatbm

ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು?

varunbhatbm's picture

hpn ಅವರೇ,
"ವಿಸ್ತ ಬಳಸಿ ಬೇಸತ್ತು ಹೋದವರಿಗೆ......." ಇದು ಹೇಳಿಕೆ ಸರಿ ಅಲ್ಲ ಅನ್ನಿಸುತ್ತೆ..
ನಾನು ಎರಡು ತಿಂಗಳಿಂದ ವಿಸ್ಟ ಬಳಸುತ್ತಾ ಇದ್ದೇನೆ... ನನಗೆ ಇಲ್ಲಿ ವರೆಗೆ ಯಾವುದೇ ತೊಂದರೆ ಆಗಿಲ್ಲ.. ನಿಜಕ್ಕೂ ಚೆನ್ನಾಗಿದೆ ವಿಸ್ಟ.. ನಾನು ವಿಸ್ಟ ಇನ್ಸ್ಟಾಲ್ ಮಾಡಿಕೊಳ್ಳುವ ಮೊದಲು ಯೋಚನೆ ಮಾಡ್ತಾ ಇದ್ದೆ, ನನಗೆ XP ಹ್ಯಾಂಗೋವರಿಂದ ಹೊರಗೆ ಬರೋದು ಕಷ್ಟ ಅಂತ.. ಆದರೆ ಈಗ ಅನ್ನಿಸ್ತಾ ಇದೆ.. ಹೊಸ OSಗಳು ಇರೋದು ನಮ್ಮ ಕೆಲ್ಸ ಕಡಿಮೆ ಮಾಡೋಕೆ ಅಂತ..

ಆದರೆ ನೀವು ಬರೆದ ಈ ಎರಡು ಪಾಯಿಂಟುಗಳನ್ನು ನೋಡಿ ಖುಷಿ ಆಯ್ತು..
* ಡೈರೆಕ್ಟರಿಯೊಂದರಲ್ಲಿ ಸುಮಾರು ಫೈಲ್ಸ್ ಇದ್ದಾಗ ಅದನ್ನು ಸ್ಥಳಾಂತರಿಸುವುದು ವಿಸ್ತ ಭ್ರಮನಿರಸನ ಉಂಟು ಮಾಡಿದ್ದುಂಟು ಅಂತ ಹಲವು ವರದಿಗಳು ಬಂದಿದ್ದವು. ಈಗ ಇದನ್ನು ಸರಿಪಡಿಸುವ ಪ್ರಯತ್ನ ಸರ್ವೀಸ್ ಪ್ಯಾಕ್ ೧ ರಲ್ಲಿ ಮಾಡಿದ್ದಾರಂತೆ.
* ಮೇಲಿನಂತೆ ಫೈಲ್ಸ್ ಸ್ಥಳಾಂತರ ಯೂ ಎಸ್ ಬಿ ಹಾಗೂ ನೆಟ್ವರ್ಕ್ ಮೂಲಕ ಮಾಡುವಾಗಲೂ ಹಿಡಿಯುವ ಸಮಯವನ್ನು ಕಡಿಮೆ ಮಾಡಲಾಗಿದೆಯಂತೆ.

-ವರುಣ ಭಟ್

  • Login or register to post comments
  • link
  • Email this ಪ್ರತಿಕ್ರಿಯೆ
March 20, 2008 - 5:31pm — hpn

ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು?

hpn's picture

> "ವಿಸ್ತ ಬಳಸಿ ಬೇಸತ್ತು ಹೋದವರಿಗೆ......." ಇದು ಹೇಳಿಕೆ ಸರಿ ಅಲ್ಲ ಅನ್ನಿಸುತ್ತೆ..

ಇದು ಹೇಳಿಕೆ ಖಂಡಿತ ಅಲ್ಲ. ವಿಸ್ತ ಬಳಸಿ ತಮ್ಮ ಗೋಳು ಹೇಳಿಕೊಂಡಿರುವ ಸಾವಿರಾರು ಪೋಸ್ಟುಗಳು ಅಂತರ್ಜಾಲದಲ್ಲಿ ಬಂದಿವೆ, ಬರುತ್ತಿವೆ. ಚೆನ್ನಾಗಿದೆ ಅಂದವರಿಗಿಂತ ಬೇಸತ್ತು ಹೋಗಿದ್ದೇವೆ ಎಂದು ಬರೆದವರೇ ಹೆಚ್ಚು (ತಂತ್ರಜ್ಞಾನ ಕುರಿತ ಲೇಖನಗಳನ್ನು ರೆಗ್ಯುಲರ್ ಆಗಿ ವಿವಿಧ ತಾಣಗಳಿಂದ ಟ್ರಾಕ್ ಮಾಡುತ್ತಿರುವವರಿಗೆ ಇದು ಗೊತ್ತಿರುತ್ತದೆ) ಇತ್ತೀಚೆಗೆ ಪ್ರಮುಖ ಸುದ್ದಿ ತಾಣಗಳಲ್ಲೇ ಇಂಥವು ಬರೆಯಲ್ಪಡುತ್ತಿದೆ. ಇಂತಹ ಗೋಳುಗಳು ಸಾಕಷ್ಟು ಓದಿದ್ದರಿಂದ ಹಾಗೆ ಬರೆದೆ.

ನಿಮಗೆ ವಿಸ್ತ ತೊಂದರೆಯಾಗಲಿಲ್ಲ ಎಂಬುದನ್ನು ಓದಿ ನನಗೆ ನಿಜಕ್ಕು ಖುಷಿಯಾಯ್ತು. ವಿಸ್ತ ಸರಿಯಿಲ್ಲ ಎಂದು ಬರೆದುಕೊಂಡವರ, ಹೇಳಿಕೊಂಡವರ ಪರಿಸ್ಥಿತಿಯ ಬಗ್ಗೆ ಓದಿ, ಕೇಳಿ ನನಗೂ ಬೇಸರವಾಗಿಬಿಟ್ಟಿದೆ. ಹೀಗಾಗಿಯೇ ಸರ್ವೀಸ್ ಪ್ಯಾಕ್ ಬಂತೆಂದು ಓದಿದ ಕೂಡಲೆ ಹಾಗು ಅದರಲ್ಲಿ ಪಾಸಿಟಿವ್ ಪ್ರಯತ್ನಗಳು ಕೆಲವು ಎಂದು ಅನ್ನಿಸಿದ ಕೂಡಲೆ ಎಲ್ಲ ಕೆಲಸ ಬದಿಗಿಟ್ಟು ಈ ಲೇಖನ ಬರೆದೆ!

--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
March 20, 2008 - 8:00pm — rameshbalaganchi

ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು?

rameshbalaganchi's picture

ಎಚ್.ಪಿ.ಎನ್. ಅವರೆ, ವಿಸ್ತಾದ ಸರ್ವೀಸ್ ಪ್ಯಾಕ್-೧ ಅನ್ನು ಎಲ್ಲಿಂದ ಡೌನ್‌ಲೋಡ್ ಮಾಡಿಕೊಳ್ಳುವುದು? ಅದರ ಕೊಂಡಿ ಸಿಕ್ಕರೆ ಕಳಿಸುತ್ತೀರಾ? ನನ್ನ ಅಣ್ಣನ ಕಂಪ್ಯೂಟರ್‌ನಲ್ಲಿ ವಿಸ್ತಾನೇ ಇರೋದು. ಅದನ್ನು ಡೌನ್‌ಲೋಡ್ ಪೇಜ್‌ಗೇ ಹೋಗಿ ಇಳಿಸಿಕೊಳ್ಳಬೇಕಾ? ಯಾರಾದರೂ ತಿಳಿಸಿ

  • Login or register to post comments
  • link
  • Email this ಪ್ರತಿಕ್ರಿಯೆ
March 21, 2008 - 12:12am — hpn

ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು?

hpn's picture

ರಮೇಶ್,

ಈ ಲಿಂಕು ನೋಡಿ. ಡೌನ್ಲೋಡ್ ಮಾಡುವ ಮುನ್ನ ಅಲ್ಲಿ ಕೊಟ್ಟಿರುವ ಸೂಚನೆಗಳನ್ನು ಓದಿಕೊಳ್ಳುವುದು ಮರೆಯದಿರಿ. ಇಲ್ಲವಾದರೆ ತೊಂದರೆಯಾಗಬಹುದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭಾರತಕ್ಕಾಗಿ ಕಡಿಮೆ ಬೆಲೆಯ ವಿಂಡೋಸ್ ತಂತ್ರಾಂಶ
  • ಮ್ಯಾಕ್ ನೊಂದಿಗೆ ವಿಂಡೋಸ್
  • ವಿಂಡೋಸ್‌ಗೆ ಕನ್ನಡದ ಹೊದಿಕೆ
  • ಸಫಾರಿಯಲ್ಲಿ ಕನ್ನಡ
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !
  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 17, 2008 - 2:00pm
  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುಧ್ಧಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರ ಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ.

— ಅಲ್‌ಬರ್ಟ್ ಐನ್‌ಸ್ಟೀನ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator