Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಮಾತು, ಸಮಯ, ಸಂದರ್ಭ..

March 19, 2008 - 5:55pm — msprasad

"ಏನಮ್ಮಾ ಸಮಾಚಾರ, ತಿಂಡಿ, ಕಾಫಿ ಆಯ್ತಾ ??"...

ನನ್ನದೇ ಲೋಕದಲ್ಲಿ, ಜಲಬಾಧೆ ತೀರಿಸುತ್ತಾ, ಆನಂದ ಅನುಭವಿಸುತ್ತಾ ನಿಂತಿದೀನಿ...

ಯಾವುದಪ್ಪಾ ಈ VOICEಉ ಅಂತ ತಿರುಗಿ ನೋಡ್ತೀನಿ...ನನ್ನ Colleague..

ಅದೂ ಎಲ್ಲಿ ?? ಆಫೀಸಿನ ಟಾಯ್ಲೆಟ್ಟು... ತಿಂಡಿ, ಕಾಫಿ ಆಯ್ತಾ ಅನ್ನೋ ಪ್ರಶ್ನೆ ಕೇಳಕ್ಕೆ ಬೇರೆ ಜಾಗ ಸಿಗ್ಲಿಲ್ವಾ ಬಡ್ಡಿ ಮಗಂಗೆ ??

ಇನ್ನೂ ಖರಾಬ್ ಆಗಿ ನಡೆದ ಘಟನೆ ಅಂದ್ರೆ, ನಮ್ಮ ಕಂಪೆನಿಯ ಪಾರ್ಟಿಯಲ್ಲಿ, ಸಿಕ್ಕಾಪಟ್ಟೆ ತಿಂದು ಅದರ ಬಾಧೆ ತೀರಿಸೋಣ ಅಂತ
ಆ ಹೋಟೆಲ್ ನ ಟಾಯ್ಲೆಟ್ಟಿಗೆ ಹೋದೆ...ಕೆಲಸ ಸಾಂಗವಾಗಿ ಮುಗಿಸಿದೆ...
ಬಂದು ಸಿಂಕಿನಲ್ಲಿ ಕೈ ತೊಳೀತಾ ನಿಂತಿದೀನಿ...ನಮ್ಮ ಒಬ್ಬ ಮ್ಯಾನೇಜರ್ ಕೂಡಾ ಬಂದ್ರು...
ನನ್ನ ಮುಖ ನೋಡಿ ಏನು ಅನ್ನುಸ್ತೋ ಏನೋ..."ಊಟ ಆಯ್ತಾ ??" ಅಂತಾನಾ ಕೇಳೋದು ??

ನಾನ್ ಕೂಡಾ ಒಮ್ಮೆ ಈ ಥರಾ ಖರಾಬ್ ಡೈಲಾಗ್ ಹಾಕಿದ್ದೆ...
ನಾನು ಮುಂಚೆ ಬಾಡಿಗೆಗೆ ಇದ್ದ ಮನೆ 1st ಫ್ಲೋರ್ ನಲ್ಲಿ ಇತ್ತು. ಮನೆ ಮಾಲೀಕರು ಗ್ರೌಂಡ್ ಫ್ಲೋರ್ ನಲ್ಲಿ ಇದ್ದದ್ದು..
ಗೇಟ್ ತೆರೆದು ಎರಡು ಹೆಜ್ಜೆಯಲ್ಲಿ, ಓನರ್ ಮನೆಯ ಪಾಯಖಾನೆ..

ಒಂದು ದಿನ ಸಂಜೆ, ಕೆಲಸ ಮುಗಿಸಿ ಮನೆಗೆ ಬಂದು ಗೇಟ್ ತೆಗೆದು ಒಳಗೆ ಬಂದೆ, ಟಾಯ್ಲೆಟ್ ಇಂದ ಮನೆ ಓನರ್ ಹೊರಗೆ ಬಂದ್ರು.
ನಾನು ಏನೋ ದೊಡ್ಡದಾಗಿ ಕುಶಲವೇ, ಕ್ಷೇಮವೇ ಅಂತ ಕೇಳೋ ಹಾಗೆ

ನಾನು : "ನಂಸ್ಕಾರ ಸಾ...."
ಮ.ಮಾ : ಒಂದು ಕೈಲಿ ಚೊಂಬು, ಇನ್ನೊಂದು ಕೈಲಿ ಲುಂಗಿ BALANCE ಮಾಡ್ತಾ ಒಂದು ACCEPTANCE SMILE ಕೊಟ್ರು..
ನಾನು : (ಬೇರೆ ಏನೂ ಮಾತಾಡಕ್ಕೆ ಹೊಳಿಯದೆ) "ಊಟ ಆಯ್ತಾ ಸಾ....???"

ಮ.ಮಾ ಅವತ್ತು ಖರಾಬ್ ಆಗಿ ಗುರಾಯ್ಸಿ ಮಾತಾಡದೆ ಹೋಗಿದ್ದು.. ಮನೆ ಖಾಲಿ ಮಾಡಬೇಕಾದ್ರೆ ಮತ್ತೆ ADVANCE ಹಣ ವಾಪಸ್ ಇಸ್ಕೊಬೇಕಾದ್ರೆ ಮಾತ್ರ 4 ಮಾತು ಆಡಿದ್ದು...

ಏನೆಲ್ಲಾ ಅವಾಂತರ ಆಗತ್ತೆ.. ಶಿವ ಶಿವಾ...

ಕಟ್ಟೆ ಶಂಕ್ರ

ನಮ್ಮ ಸೋಮಾರಿ ಕಟ್ಟೆಗೆ ಒಮ್ಮೆ ಭೇಟಿ ಕೊಡಿ : http://somari-katte.blogspot.com

  • ಲಲಿತ ಪ್ರಬಂಧ, ಹಾಸ್ಯ
Ornamental seperator
  • Login or register to post comments
  • 530 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 19, 2008 - 8:06pm — Sunil Jayaprakash

ಉ: ಮಾತು, ಸಮಯ, ಸಂದರ್ಭ..

Sunil Jayaprakash's picture

ಎಂಪ್ರಸಾದ, ಸೂಪರ್ ಕಣ್ರೀ. ಈ ರೀತಿ ಮಡಿವಂತಿಕೆ ಇಟ್ಟುಕೊಳ್ಳದೆ ಬರೆಯೋರು, ತುಂಬಾ ಕಡಿಮೆ ಸಂಪದದಲ್ಲಿ. ನೀವು ಆ ಕೊರಗನ್ನು ನೀಗಿಸುವ ಲಕ್ಷಣಗಳು ಕಾಣಿಸುತ್ತಿವೆ.

  • Login or register to post comments
  • link
  • Email this ಪ್ರತಿಕ್ರಿಯೆ
March 20, 2008 - 8:22am — Aravinda

ಉ: ಮಾತು, ಸಮಯ, ಸಂದರ್ಭ..

Aravinda's picture

ಸೂಪರ್ ಕಣ್ರಿ,.... ಅಂದಹಾಗೆ ಊಟ ಆಯ್ತಾ ? Laughing out loud

ನಿಮ್ಮವನೇ,
ಅರವಿಂದ
http://www.belaku.net

  • Login or register to post comments
  • link
  • Email this ಪ್ರತಿಕ್ರಿಯೆ
March 20, 2008 - 8:26am — ವೈಭವ

ಉ: ಮಾತು, ಸಮಯ, ಸಂದರ್ಭ..

ವೈಭವ's picture

ಹ , ಹ Smiling ಸಕ್ಕತ್
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
March 21, 2008 - 4:47pm — agilenag

ಉ: ಮಾತು, ಸಮಯ, ಸಂದರ್ಭ..

agilenag's picture

ತುಂಬಾ ಚೆನ್ನಾಗಿದೆ.
ನಾಕಂಡ ಎರಡು ಸಂದರ್ಭಗಳನ್ನು ತಿಳಿಸ ಬಯಸುತ್ತೇನೆ:
ಅದು ಡಾ|| ರಾಜ್ ಕುಮಾರ್ ಅಭಿನಯಿಸಿದ ಭಕ್ತ ಕುಂಬಾರ ಚಿತ್ರ ಪ್ರದರ್ಶನ ನಡೆಯುತ್ತಿದ್ದ ಕಾಲ. ಯಥಾಪ್ರಕಾರ ಮಧ್ಯಂತರದಲ್ಲಿ ಮೂತ್ರಾಲಯಕ್ಕೆ ಹೋಗಿ ದೇಹಬಾದೆ ತೀರಿಸಿಕೊಳ್ಳುತ್ತಿದ್ದಾಗ, ಹಿಂದಿನಿಂದ ಬಂದಿತು ಒಂದು ಮಾತು "ಏನ್ರೀ ನಾಗರಾಜ್, ಇಲ್ಲಿ ಏನ್ಮಾಡ್ತಿದ್ದೀರಿ, ನೀವು . . ." ಏನೆಂದು ಉತ್ತರಿಸಲಿ.

ಇನ್ನೊಂದುಬಾರಿ ನಾನು ನಮ್ಮ ಬ್ಯಾಂಕಿನ ಹಳ್ಳಿ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಅಲ್ಲಿನ ಮಹನೀಯರೊಬ್ಬರ ಮನೆಯಲ್ಲಿ ಮಗಳ ಮದುವೆಯ ಸಂಬಂದದಲ್ಲಿ ಆರತಕ್ಷತೆ ಏರ್ಪಡಿಸಿದ್ದರು. ಈಗಿನಂತಲ್ಲಾ, ಆಗ ಮನೆಯಲ್ಲಿಯೆ ಹಜಾರದಲ್ಲಿ ಜಮಖಾನಗಳನ್ನು ಹಾಸಿ, ಬಂದವರನ್ನು ಕೂರಿಸಿ, ಹಾಡು, ಹಸೆ ಇತ್ಯಾದಿಗಳ ನಂತರ ನೆಲದ ಮೇಲೆ ಬಾಳೆ ಎಲೆ ಹಾಕಿ, ಊಟ ಹಾಕಿ ಕಳುಹಿಸುತ್ತಿದ್ದರು. ಈ ಸಂದರ್ಭದಲ್ಲಿ ಆರತಕ್ಷತೆಗೆ ಮುಂಚೆ ಬಂದ ಅತಿಥಿ ಅಭ್ಯಾಗತರಿಂದ ಹಾಡು ಹೇಳಿಸುವ ಕಾರ್ಯಮವೂ ಇತ್ತು. ಕೆಲವರು ಕೆಲವು ದೇವರ ಹಾಡುಗಳನ್ನು ಹೇಳಿದರು. ಒಬ್ಬ ಹುಡುಗನನ್ನು ಹಾಡು ಹೇಳಲು ಬಲವಂತ ಮಾಡಿದರು. ಆ ಹಳ್ಳಿಗೆ ಅವನೇ ಗಾನ ಭಯಂಕರ. ಸರಿ, ಅವನು ಹಾಡಲು ಪ್ರಾರಂಭಿಸಿಯೇ ಬಿಟ್ಟ "ಈ ದೇಹದಿಂದ ದೂರನಾದೆ ಏಕೆ ಆತ್ಮನೇ . . . ಈ ಸಾವು ನ್ಯಾಯವೇ . . " ಎಂದು. ಅವನ ಹಿಂದೆ ಕುಳಿತಿದ್ದ ಅವನ ಶಾಲಾ ಮಾಸ್ತರು ಅವನ ತಲೆಯ ಮೇಲೆ ಒಂದು ಟೊಕ್ಕಿಸಿ, ಹಾಡು ನಿಲ್ಲಿಸುವಂತೆ ಹೇಳಿದರು. ಬಂದವರೆಲ್ಲರೂ ನಕ್ಕಿದ್ದೇ ನಕ್ಕಿದ್ದು.

ಧನ್ಯವಾದಗಳು.
ಎ.ವಿ. ನಾಗರಾಜು

  • Login or register to post comments
  • link
  • Email this ಪ್ರತಿಕ್ರಿಯೆ
March 21, 2008 - 5:34pm — rameshbalaganchi

ಉ: ಮಾತು, ಸಮಯ, ಸಂದರ್ಭ..

rameshbalaganchi's picture

ಕೆಲವು ಸಾರಿ ಕೆಲವರು ಸಂದರ್ಥದ ಸ್ಥಳದ ಔಚಿತ್ಯ ತಿಳಿಯದೆ ಮುಜುಗರದ ಮಾತಾಡಿದರೆ ಮತ್ತೆ ಕೆಲವರು ತಾವಾಡುತ್ತಿರುವ ಮಾತಿನ ಸರಿಯಾದ್ ಅರ್ಥ ತಿಳಿಯದೆ ಮುಜುಗರ ಪೇಚು ಉಂಟುಮಾಡುತ್ತಾರೆ. ಅಂಥದ್ದೇ ಒಂದು ಪ್ರಸಂಗ
ನನ್ನ ಮದುವೆಯಾದ ಹೊಸದು. ಆ ವರ್ಷದ ಗೌರಿಹಬ್ಬದ ಪೂಜೆ ಮತ್ತು ವ್ರತಾಚರಣೆಗಾಗಿ ನನ್ನ ಮಡದಿ ತವರಿಗೆ ಹೋಗಿದ್ದವರು ವಾಪಸಾಗಿದ್ದರು. ಮನೆ ತುಂಬಾ ಅವರು ತಂದ ತಿಂಡಿಯೋ ತಿಂಡಿ. ತಿಂದು ತಿಂಡಿ ಹಂಚಿಕೊಳ್ಳಲು ಗೆಳೆಯ, ಸಹೋದ್ಯೋಗಿಯೊಬ್ಬನನ್ನು ಮನೆಗೆ ಆಹ್ವಾನಿಸಿದೆ. ನನ್ನ ಮನೆಗೆ ಅವನು ಬಂದ. ಲೋಕಾಭಿರಾಮದ ಮಾತುಕತೆಯಾದ ಮೇಲೆ ನನ್ನ ಹೆಂಡತಿ ಗೆಳೆಯನಿಗೆ ತಿಂಡಿ ತಟ್ಟೆ ತಂದು ಕೊಟ್ಟರು. ಗೆಳೆಯ ಕುತೂಹಲದಿಂದ ನನ್ನ ಹೆಂಡತಿಗೆ "ಏನ್ರೀ ಮೇಡಮ್, ಏನ್ಸಮಾಚಾರ? ಇಷ್ಟೊಂದು ತಿಂಡಿ ಕೊಡ್ತಾ ಇದೀರಾ? ಋಷಿಪಂಚಮಿ ವ್ರತ ಏನಾದ್ರೂ ಮಾಡಿದ್ರಾ?" ಅಂದ ಕೂಡಲೆ ನನ್ನ ಬಾಯಲ್ಲಿ ತಡೆಯಲಾರದ ನಗೆ ಸ್ಫೋಟಿಸಿ ಬಾಯಲ್ಲಿದ್ದ ಚಕ್ಕುಲಿ ಕೋಡುಬಳೆ ತುಂಡುಗಳು ಅವನ ಬಟ್ಟೆಯ ಮೇಲೆ ಹಾರಿದವು. ಮೊದಲು ಮೊದಲು ಕೆಂಪು ಕೆಂಪಾದ ನನ್ನ ಮಡದಿ ಇದು ಇಂಥದ್ದೇ ಕಾರಣದಿಂದ ಆಗಿದ್ದು ಎಂದರಿತು ನನ್ನ ನಗೆಯಲ್ಲಿ ಪಾಲ್ಗೊಂಡರು.

  • Login or register to post comments
  • link
  • Email this ಪ್ರತಿಕ್ರಿಯೆ
March 25, 2008 - 7:08am — venkatesh

ಉ: ಮಾತು, ಸಮಯ, ಸಂದರ್ಭ..

venkatesh's picture

ಒಮ್ಮೆ,. ನಮ್ಮ ಆಫೀಸಿನ ಗೆಳೆಯರೊಬ್ಬರ ಮಯ್ಯತ್ ಗೆ ಹೋದಾಗ, ಎಲ್ಲಾ ವಿಧಿಗಳು ಮುಗಿದ್ ಮೇಲೆ, ಒಕ್ ಸಾರ್, ನಾಳೆ ಸಿಗೋಣ ಎಂದಾಗ, ಆಫೀಸಿನಲ್ಲೋ ಬೇರೆ ಮತ್ತೆ ಅದೇ ಸ್ಮಶಾನದಲ್ಲೊ ಅನ್ನುವ ಅನುಮಾನ !

ಬಟನ್ ಹಾಕಿಕೊಳ್ಳುತ್ತ್ತಾ ಯುರಿನಲ್ಸ್ ನಿಂದ ಕಟ್ಟೆಯ ಹೊರಗೆ ಬಂದಾಗ, ನನ್ನ ಗೆಳೆಯ ಹಲೊ ಸಾರ್, ನೈಸ್ ಟು ಮೀಟ್ ಯು, ಎನ್ ಸಾರ್ ಸಿಗೋದೆ ಇಲ್ಲ. ಅಂತ ದೊಡ್ಡದಾಗಿ ಹಲ್ಲು ಕಿರಿದು ಸ್ವಾಗತ ಬಯಸಿದಾಗ, ಗುಂಡಿ ಯನ್ನು ಹಾಗೆ ಹಾಕದೆ ಕೊಳಕುಕೈನ ಅವರಿಗೆ ಕೊಡದೆ, ನಲ್ಲಿ ಬಳಿ ಓಡಿದ ನೆನೆಪು ಇನ್ನೂ ಹಸಿರಾಗಿದೆ. ಗೆಳೆಯ ನಂತರ ಸಾರಿ ಕೇಳಿದರು. ಆದರೆ ಅವರು ನಾನು ಬಿದ್ದು ಬಿದ್ದು ನಗೆಯಾಡಿದೆವು !

  • Login or register to post comments
  • link
  • Email this ಪ್ರತಿಕ್ರಿಯೆ
March 25, 2008 - 7:17am — venkatesh

ಉ: ಮಾತು, ಸಮಯ, ಸಂದರ್ಭ..

venkatesh's picture

ನಮ್ಮ ಗೆಳೆಯರು ಮಾಧ್ವರ ಮನೆಯ ಹೆಣ್ಣನ್ನು ತಂದುಕೊಂಡಿದಾರೆ. ಆತ ಸ್ಮಾರ್ತರು. ಹಾಗೆ, ಒಮ್ಮೆ ನಾನು ಹುಡುಗಿಯ ತಾಯಿಯ ಹತ್ತಿರ ಅದು-ಇದು ಬೊಗಳೆ ಬಿಡುತ್ತಿರುವಾಗ, ಸ್ಮಾರ್ತರ ಮನೆ ಸಂಪ್ರದಾಯ ಹಾಗೂ ಅವರ ಒಳ್ಳೆತನಗಳ ಬಗ್ಗೆ ಹೇಳುತ್ತಿದ್ದೆ. ಸ್ವಾಭಾವಿಕವಾಗಿ ನನ್ನ ಗೆಳೆಯನ ಮನೆಯವರ ಬಗ್ಗೆ ಸ್ವಲ್ಪ ದೊಡ್ಡದಾಗಿ ಹೇಳುತ್ತಿದ್ದೆ. ಕೇಳುತ್ತಿದ್ದ ಆಕೆ, ಹೌದು, ಸ್ಮಾರ್ತರಲ್ಲೂ ಒಳ್ಳೆಯವರಿರ್ತಾರ್ರಿ - ಅಂತ ಒಂದು ಬಾಂಬ್ ಹಾಕಿಬಿಡೋದೆ ?

ನಾನು ಅಲ್ಲಿಂದ ಎದ್ದು ಪರಾರಿಯಾದೆ !

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆಟೋ ಅಣಿಮುತ್ತುಗಳು
  • ಇದೆಂಥಾ ವಿಪರ್ಯಾಸ ?
  • ವಾರ್ತಾ ಮಾಧ್ಯಮದ ಈ ಪಾಡು - "ಐಟಂ ಕ್ವೀನ್ ಯಾರು ?"
  • ನಗು ತಡೆಯಕ್ಕಾಗ್ದೆ ಪೇಚಾಡಿದ ಸಂದರ್ಭಗಳು
  • ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ?
Syndicate content

ಲೇಖಕರು

msprasad's picture

ಪೂರ್ಣ ಹೆಸರು
ಶಂಕರ ಪ್ರಸಾದ

ಪರಿಚಯ

ಮೂಲತಃ ಮೈಸೂರು, ಓದಿದ್ದು ಮೈಸೂರು ಹಾಗು ಹೈದ್ರಬಾದು. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಒಂದು ಫ್ರೆಂಚ್ ಏರೋಸ್ಪೇಸ್ ಕಂಪೆನಿಯಲ್ಲಿ ಡಿಜೈನ್ ಎಂಜಿನಿಯರ್ ಆಗಿ ಕಾಯಕ.
ಮನಸ್ಸಿನ ತುಡಿತ, ಮಿಡಿತ, ಕಡಿತ ತೀರಿಸಿಕೊಳ್ಳೋಕ್ಕೆ ಬ್ಲಾಗಿಂಗ್ ಮಾಡ್ತೀನಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಂತಿಮ ಸಂಸ್ಕಾರ:ಹೊಸ ವಿಧಾನ
  • ದಾವೂದ್ ಇಬ್ರಾಹಿಂ ಬಂಧನ......ನಂತರ
  • ಪ್ರತ್ಯಕ್ಷ ನೋಡಿದರೂ...
  • ನಶಿಸುತ್ತಿರುವ ಶಬ್ದ ಬಳಕೆ
  • ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ
  • ಭಾರತದ ಜ್ಞಾನಾವತಾರ
  • ಹೆಣ್ಣು ಜೀವವಿಮುಖಿ, ಜೀವವಿರೋಧಿಯಾಗುವ ಕ್ಷಣ

ಇತ್ತೀಚಿನ ಪ್ರತಿಕ್ರಿಯೆಗಳು

  • prasannasp
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 3:32pm
  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
  • madhava_hs
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 2:38pm
  • roopablrao
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 2:12pm
  • ಗಣೇಶ
    ಉ: ದಾವೂದ್ ಇಬ್ರಾಹಿಂ ಬಂಧನ......ನಂತರ
    May 12, 2008 - 2:12pm
  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:59pm
  • vikashegde
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 1:38pm
  • vikashegde
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:23pm
  • sushil
    ಉ: ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?
    May 12, 2008 - 1:19pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 21 ಅತಿಥಿಗಳು ಆನ್ಲೈನ್ ಇರುವರು.

ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...

— ಎಮರ್ಸನ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator