Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಅನನ್ಯ ಅಲ್ಲಮ (೪)

March 20, 2008 - 10:18am — csomsekraiah

ಮಂಗಳವೇಡೆಯ ಕಲಚುರ್ಯರು , ಚಾಲುಕ್ಯ ಸಮ್ರಾಜ್ಯದಲ್ಲಿ ಪ್ರಬಲರಾದ ಮಾಂಡಲಿಕರು .ಅವರನ್ನು ಒಲಿಸಿಕೊಳ್ಳಲು ಚಾಲುಕ್ಯರ ಆರನೇ ವಿಕ್ರಮಾದಿತ್ಯನು , ಬಿಜ್ಜಳನ ತಾತ ಜೋಗಮನ ಮಗಳನ್ನು ಮದುವೆಯಾದನು . ಈ ಸಂಬಂಧ ಮುಂದುವರಿದು , ವಿಕ್ರಮಾದಿತ್ಯನ ಮಗಳನ್ನು ಬಿಜ್ಜಳನ ತಂದೆ ಪೆರ್ಮಾಡಿಗೆ ಕೊಟ್ಟು ವಿವಾಹವಾಗಿತ್ತು .ಹೀಗಾಗಿ ಚಾಲುಕ್ಯರ ಆರನೇ ವಿಕ್ರಮಾದಿತ್ಯನ ಮಗಳ ಮಗನೇ ಬಿಜ್ಜಳ .

ಮಂಗಳವೇಡೆಯಲ್ಲಿ ಮಾಂಡಲಿಕನಾಗಿದ್ದರೂ ,ಬಿಜ್ಜಳನ ಕಣ್ಣು ಚಾಲುಕ್ಯರ ರಾಜಧಾನಿ ಕಲ್ಯಾಣದ ಮೇಲಿತ್ತು .ದುರ್ಬಲಗೊಳ್ಳುತ್ತಿದ್ದ ಚಾಲುಕ್ಯರ ಕೈಯ್ಯಿಂದ ಅಧಿಕಾರವನ್ನು ಕಿತ್ತುಕೊಳ್ಳಬೇಕೆಂಬ ರಾಜಕೀಯ ಮಹತ್ವಾಕಾಂಕ್ಷೆಯಲ್ಲಿದ್ದ ಬಿಜ್ಜಳನಿಗೆ ,ಬಸವಣ್ಣನವರು ಆಪ್ತರೇ ಆಗಿದ್ದರೂ ,ಅವರ ಸಮಾಜ ಸುಧಾರಣೆಯ ವಿಷಯದಲ್ಲಿ ಅಷ್ಟು ಆಸಕ್ತಿ ಇರಲಿಲ್ಲ.ಅವರನ್ನು ಕೇವಲ ದಾಳವಾಗಿ ಉಪಯೋಗಿಸಿಕೊಳ್ಳುವಲ್ಲಿ ಅವನಿಗೆ ಆಸಕ್ತಿ ಇತ್ತು .

ಜನ ಕಲ್ಯಾಣದ ವಿಷಯದಲ್ಲಿ ಈ ಪ್ರಭುತ್ವದ ನೆರವನ್ನು ನಿರೀಕ್ಷಿಸುವುದು ಕೇವಲ ಮರೀಚಿಕೆ ಎಂಬುದು ಬಸವಣ್ಣನವರಿಗೆ ಮನದಟ್ಟಾಗಿ ಹೋಗಿತ್ತು ; ಅಧಿಕಾರ ದಾಹವೆಂಬ ನಿತ್ಯ ನರಕದಲ್ಲಿ ಒದ್ದಾಡುತ್ತಿರುವ ರಾಜ ವಂಶಸ್ಥರಿಂದ , ತೋರಿಕೆಯ ಉಪಚಾರದ ಹೊರತಾಗಿ , ಬೇರಾವ ಉಪಯೋಗವೂ ಇಲ್ಲವೆಂಬುದನ್ನು ಬಸವಣ್ಣನವರು ಅರಿತಿದ್ದರು .ಅದರಿಂದಾಗಿ ನೇರವಾಗಿ ಜನರನ್ನೇ ಜಾಗೃತಿಗೊಳಿಸಲು ಅವರು ಸಿದ್ದರಾದರು .

ಜನರೊಡನೆ ಬೆರೆಯಲು ಪ್ರಮುಖವಾದ ಅಡ್ಡಿ ಅಧಿಕಾರ .ಆದರೆ ರಾಜ ಕಾರ್ಯಗಳಿಗೆ ಮತ್ತು ಸಾಮಾಜಿಕ ವ್ಯವಹಾರಗಳಿಗೆ ಪ್ರತ್ಯೇಕ ಸಮಯಗಳನ್ನು ನಿಗದಿಪಡಿಸಿಕೊಂಡ ಬಸವಣ್ಣನವರು ,ಬಿಜ್ಜಳನ ಆಸ್ಥಾನದಲ್ಲಿದ್ದಾಗ ಮಾತ್ರ ಅವರು ಮಂತ್ರಿ , ಉಳಿದ ಸಮಯವನ್ನು ಜನರ ನಡುವೆ ಸಾಮಾನ್ಯರಂತೆ ಕಳೆಯತೊಡಗಿದರು .ಅದಕ್ಕಾಗಿ ಸಕಲರಿಗೂ ತಮ್ಮ ಮನೆಯ ಬಾಗಿಲನ್ನು ಅವರು ತೆರೆದಿಟ್ಟರು .

ಬಸವಣ್ಣನವರ ಈ ವ್ಯಕ್ತಿತ್ವ ಜನರು ಅವರೆಡೆಗೆ ಆಕರ್ಷಿತರಾಗಲು ಕಾರಣವಾಯಿತು .ಅನೇಕ ವಿಶಿಷ್ಟ ವ್ಯಕ್ತಿಗಳು ಅವರ ಸುತ್ತ ನೆರೆಯಲಾರಂಭಿಸಿದರು .ಈ ವೇಳೆಗೆ ಬಿಜ್ಜಳನೂ , ತನ್ನ ಕಾರ್ಯ ಕ್ಷೇತ್ರವನ್ನು ಮಂಗಳವೇಡೆಯಿಂದ ಕಲ್ಯಾಣಕ್ಕೆ ಬದಲಾಯಿಸಿಕೊಂಡುದರಿಂದ ,ಬಸವಣ್ಣನವರ ಕಾರ್ಯಕ್ಷೇತ್ರವೂ ಕಲ್ಯಾಣವೇ ಆಯಿತು .ಕಲ್ಯಾಣದಲ್ಲಿ ಬಸವಣ್ಣನವರ ಮನೆ , ಮಹಾಮನೆಯೇ ಆಯಿತು .

ಅರಸು ಮನೆ ,ದೇವಸ್ಥಾನಗಳ ಹತ್ತಿರವೂ ಸುಳಿಯಲು ಆಸ್ಪದವಿಲ್ಲದ , ದರಿದ್ರರೂ , ಅಂತ್ಯಜರೂ ಮೊದಲಾದವರಿಗೆ ಮೊದಲ ಬಾರಿಗೆ ಮಹಾಮಂತ್ರಿಯ ಮನೆ ಮುಕ್ತ ದ್ವಾರವಾಯಿತು .ದಿನದಿಂದ ದಿನಕ್ಕೆ ಬೆಳೆಯುತ್ತಿದ್ದ ಬಸವಣ್ಣನವರ ಕೀರ್ತಿಯಿಂದ ಬಸವಣ್ಣನವರ ಮನೆ ಜನಾಕರ್ಷಣೆಯ ಕೇಂದ್ರವಾಯಿತು .ಪ್ರತಿಯೊಂದು ಕಾಯಕದವರೂ ಬೇಧಭಾವವಿಲ್ಲದೆ ಮೊದಲ ಬಾರಿಗೆ ಅಲ್ಲಿ ಒಟ್ಟಾಗತೊಡಗಿದರು .ಸತತ ರಾಜಕಾರ್ಯಗಳ ನಡುವೆ ಬಿಡುವೇ ಇಲ್ಲದ ಬಸವಣ್ಣನವರಿಗೆ ನೆರೆಯುತ್ತಿದ್ದ ಜನಸ್ತೋಮವನ್ನು ವ್ಯವಸ್ಥೆಗೊಳಿಸಲು ಅವರ ಅಕ್ಕ ನಾಗಲಾಂಬಿಕೆ ಮತ್ತು ನಾಗಲಾಂಬಿಕೆಯ ಮಗ ಚನ್ನಬಸವಣ್ಣ ನೆರವಿಗೆ ನಿಂತದ್ದು ಅವರಿಗೆ ದೊಡ್ಡ ಬಲವೇ ಬಂದಂತಾಯಿತು .

ಚನ್ನಬಸವಣ್ಣನವರಿಗೆ ಅತಿ ಸಣ್ಣ ವಯಸ್ಸಿನಲ್ಲಿಯೇ ಅಧ್ಯಯನದಲ್ಲಿ ಅಪಾರ ಆಸಕ್ತಿ , ಧರ್ಮ, ದರ್ಶನಗಳ ಬಗ್ಗೆ ಹೆಚ್ಚು ತಿಳುವಳಿಕೆ .ಧಾರ್ಮಿಕತೆಯ ಲೇಪವಿಲ್ಲದ ಸಮಾಜ ಸುಧಾರಣೆ ನಿರ್ಜೀವ ಸುಂದರ ಪ್ರತಿಮೆ ಮಾತ್ರ , ಅದು ಜೀವದಳೆಯಲು ಧರ್ಮ ಅದರ ಪ್ರಾಣವಾಯು . ಧರ್ಮವೆಂದರೆ ಕಂದಾಚಾರವಲ್ಲ,ಯಾವುದೇ ಮತವಲ್ಲ, ಬೂಟಾಟಿಕೆಯೂ ಅಲ್ಲ ,ಮನುಷ್ಯ ಸಹಜವಾದ ಅಂತರಂಗದ ಹುಡುಕಾಟ ಮತ್ತು ಅದರ ಅಭಿವ್ಯಕ್ತಿ .ಅದಕ್ಕಾಗಿ ಕಲ್ಯಾಣಕ್ಕೆ ಸಮರ್ಥ ಧಾರ್ಮಿಕ ನಾಯಕನೊಬ್ಬನ ಅಗತ್ಯವಿತ್ತು .

ಅಲ್ಲಮಪ್ರಭುವಿನ ಹೆಸರನ್ನು ಬಸವಣ್ಣನವರು ಕೇಳಿದ್ದರು , ಆದರೆ ಅದು ಒಂಟಿ ಸಲಗವೆಂಬುದು ಅವರಿಗೆ ಗೊತ್ತಿತ್ತು . ಆನೆ ನಡೆದದ್ದೇ ದಾರಿ ,ಹಾಗೆ ಪ್ರಭು ತುಳಿದದ್ದೇ ಮಾರ್ಗ .ಅವರನ್ನು ಕಟ್ಟಿ ಹಾಕಬಲ್ಲ ಮಹಾನುಭಾವ ಯಾರು? ಅಷ್ಟಕ್ಕೂ ಅವರು ಎಲ್ಲಿರುತ್ತಾರೆಂದು ಯಾರಿಗೆ ಗೊತ್ತು ? ಅವತ್ತೆಲ್ಲೋ ಯಾರೋ ತೋಟಗಾರನ ಜೊತೆಗೆ ವಾದ ಮಾಡುತ್ತಾ ಕುಳಿತಿದ್ದರಂತೆ ,ಇನ್ನೊಮ್ಮೆ ಯಾರೋ ಯೋಗಿಯ ಜೊತೆ ಸಂವಾದ .ಅಜಗಣ್ಣನೆಂಬ ಶರಣ ಮರಣ ಹೊಂದಿದಾಗ ,ತುಂಬಾ ವಿಚಾರವಂತೆಯಾದರೂ , ಅಣ್ಣನ ಅಗಲಿಕೆಯಿಂದ ಮನ ನೊಂದು ಕುಳಿತಿದ್ದ ಅವನ ತಂಗಿ ಮುಕ್ತಾಯಕ್ಕನ ಮನಸ್ಸನ್ನು ಸಮಾಧಾನ ಪಡಿಸಲು ಅಲ್ಲಿಗೂ ಬಂದಿದ್ದರಂತೆ .ಒಂದು ದಿನ ಪೂರ್ವ ಪ್ರಾಂತದಲ್ಲಿ ಕಂಡರೆ ,ಇನ್ನೊಮ್ಮೆ ಪಶ್ಚಿಮದಲ್ಲಿ ,ಈ ಮಹಾನುಭಾವನಿಗೆ ಒಂದು ನೆಲೆಯೇ ಇಲ್ಲವೇ ?

  • ಜ್ಞಾನವಾಹಿನಿ
Ornamental seperator
  • Login or register to post comments
  • 229 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 22, 2008 - 10:55am — roopablrao

ಉ: ಅನನ್ಯ ಅಲ್ಲಮ (೪)

roopablrao's picture

ಅಲ್ಲಮ ಪ್ರಭುವಿನ ಬಗ್ಗೆ 8ನೇ ತರಗತಿಯಲ್ಲಿ ಓದಿದ್ದೆ ಅವರ ಯಾವುದೋ ಪವಾಡದ ಕುರಿತಾದ ಕತೆ ಅದು ಅದಾದ ಮೇಲೆ ಅವರ ಬಗೀ ತಿಳಿಯುವ ಸಂದರ್ಭ್ಹವೇ ವರಲಿಲ್ಲ
ಅವರ ಬಗ್ಗೆ ಮಾಹಿತಿ ಕೊಡುತ್ತಿರುವುದಕ್ಕಾಗಿ ಧನ್ಯವಾದಗಳು
ಸುಪ್ತ ಮನಸಿನ ಕನವರಿಕೆಗಳೊಂದಿಗೆ
ರೂಪ

  • Login or register to post comments
  • link
  • Email this ಪ್ರತಿಕ್ರಿಯೆ
March 25, 2008 - 2:49pm — Sunil Jayaprakash

ಉ: ಅನನ್ಯ ಅಲ್ಲಮ (೪)

Sunil Jayaprakash's picture

ಸಿಸೋಮಶೇಖರಯ್ಯನವರೇ, ಅಲ್ಲಮನ ಬಗ್ಗೆ ಚೆನ್ನಾದ ಲೇಖನ ಮೂಡಿಬರುತ್ತಿದೆ. ಮುಂದೆ ಸಾಗಲಿ, ನಾನಂತು ಈ ಸರಣಿಯನ್ನು ತಪ್ಪದೆ ಓದುತ್ತಿದ್ದೇನೆ. ನಮ್ಮ ಮನೆಯಲ್ಲಿ, "ವಚನ ಕಟ್ಟಿದ ಅಲ್ಲಮ" ಎಂಬ ಪುಸ್ತಕ ಇದೆ. ಸಿದ್ದಲಿಂಗಯ್ಯನವರು ಬರೆದಿರೋದು ಇರಬೇಕು.

ಅಲ್ಲಮಪ್ರಭು, ಶಂಕರತತ್ವಗಳನ್ನು ಗಿಳಿಯೋದು ಅಂತ ಹಂಗಿಸಿದ್ದಾರಂತೆ, ಹೌದಾ ?

  • Login or register to post comments
  • link
  • Email this ಪ್ರತಿಕ್ರಿಯೆ
March 31, 2008 - 10:05am — Sunil Jayaprakash

ಉ: ಅನನ್ಯ ಅಲ್ಲಮ (೪)

Sunil Jayaprakash's picture

ಮನ್ನಿಸಿ, ಅದು ಎನ್.ಬೋರಲಿಂಗಯ್ಯನವರದ್ದು.

  • Login or register to post comments
  • link
  • Email this ಪ್ರತಿಕ್ರಿಯೆ
March 29, 2008 - 8:24pm — csomsekraiah

ಉ: ಅನನ್ಯ ಅಲ್ಲಮ (೪)

csomsekraiah's picture

ಸುನಿಲ್ ಜಯಪ್ರಕಾಶ್ ರವರೆ , ಅಲ್ಲಮ ಎಲ್ಲಿಯೂ ಯಾವುದೇ ಸಿದ್ದಾಂತವನ್ನು ನಿಂದಿಸದೆಯೇ , ತನ್ನ ದರ್ಶನವನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸಬಲ್ಲ ವ್ಯಕ್ತಿತ್ವ . ಮನುಷ್ಯರ ಕುಟಿಲ ಸ್ವಭಾವವನ್ನಷ್ಟೇ ಅಲ್ಲಮ ವಿಡಂಬಿಸುವುದು , ನನಗೆ ಕಂಡು ಬಂದಂತೆ ಆ ರೀತಿಯ ವಚನಗಳು ಎಲ್ಲಿಯೂ ನನಗೆ ಸಿಕ್ಕಿಲ್ಲ . ಯಾರಾದರೂ ತೋರಿಸಿಕೊಟ್ಟರೆ ಅದರ ಬಗ್ಗೆ ಅಧ್ಯಯನ ಮಾಡಬಹುದು ಧನ್ಯವಾದಗಳು

  • Login or register to post comments
  • link
  • Email this ಪ್ರತಿಕ್ರಿಯೆ
March 31, 2008 - 10:48am — Sunil Jayaprakash

ಉ: ಅನನ್ಯ ಅಲ್ಲಮ (೪)

Sunil Jayaprakash's picture

ಸೋಮಶೇಖರಯ್ಯನವರೆ, ಎನ್.ಬೋರಲಿಂಗಯ್ಯನವರ "ವಚನ ಕಟ್ಟಿದ ಅಲ್ಲಮ" ಪುಸ್ತಕದ 'ಆತ್ಮದರ್ಶನದ ಆತ್ಯಂತಿಕತೆ' ಎಂಬ ಅಧ್ಯಾಯದಲ್ಲಿ ಪ್ರಸ್ತಾಪವಾಗಿರುವ ವಿಷಯಗಳನ್ನು ಶಂಕರ ಮತ್ತು ಅಲ್ಲಮಪ್ರಭು ಎಂಬ ಎಳೆಯಲ್ಲಿ ಹಾಕಿದ್ದೇನೆ. ಬಿಡುವಾದಾದ ಓದಿ. ಈ ವಿಚಾರವಾಗಿ ಹೆಚ್ಚಿನ ಮಾಹಿತಿ ಇದ್ದಲ್ಲಿ ಎಲ್ಲರೊಡನೆ ಹಂಚಿಕೊಳ್ಳಿರಿ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಸವಣ್ಣನವರ ವಚನಗಳ ಬಗ್ಗೆ ಒಂದು ಚಿಂತನೆ
  • ಅನನ್ಯ ಅಲ್ಲಮ (೩)
  • ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ
  • ಅನನ್ಯ ಅಲ್ಲಮ (೧)
  • ಬಸವ ಜಯಂತಿಗೆ ರಜೆ!
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator