ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ರಾಘವೇಂದ್ರಪಾಟೀಲರ "ತೇರು" ಕಾದಂಬರಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಬಹುಮಾನ

December 23, 2005 - 8:27pm — olnswamy

ಈ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ, ಐವತ್ತು ಸಾವಿರ ರೂ ಮತ್ತು ಪ್ರಶಸ್ತಿ ಫಲಕ, ಕನ್ನಡದ ಕಾದಂಬರಿ "ತೇರು" ಗೆ ಬಂದಿದೆ. ಇದನ್ನು ಬರೆದ ರಾಘವೇಂದ್ರಪಾಟೀಲರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮ ಸಂಸ್ಥೆಯ ಆಡಳಿತಾಧಿಕಾರಿ ಮತ್ತು ಅಲ್ಲಿನ ಜೂನಿಯರ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದಾರೆ. ಜೀವಶಾಸ್ತ್ರ ಅವರ ಅಧ್ಯಯನ ವಿಷಯ. ಒಟ್ಟು ಹದಿಮೂರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಜೊತೆಗೇ ಆನಂದಕಂದ ಗ್ರಂಥಮಾಲೆಯನ್ನು ನಡೆಸುತ್ತಿದ್ದಾರೆ. ಸಂವಾದ ಎಂಬ ಸಾಹಿತ್ಯ ಪತ್ರಿಕೆಯನ್ನು ಕಳೆದ ಎರಡು ದಶಕಗಳಿಂದ ಸಂಪಾದಿಸುತ್ತಿದ್ದಾರೆ. ಹಳ್ಳಿಯ ಆ ಶಾಲೆಯ ಮಕ್ಕಳಿಗಾಗಿ ಕಳೆದ ಮೂರು ವರ್ಷಗಳಿಂದ ರಂಗತರಬೇತಿ ಶಿಬಿರ ನಡೆಸುತ್ತಿದ್ದಾರೆ. ಈ ವರ್ಷದ ನಾಟಕೋತ್ಸವನ್ನು ನೋಡಿ ನನಗೆ ಬಹಳ ಸಂತೋಷ ಮತ್ತು ಹೆಮ್ಮೆ ಅನ್ನಿಸಿತು. ಸಾಹಿತ್ಯದಲ್ಲಿ ಒಳ್ಳೆಯ ಕೆಲಸಮಾಡಲು, ನಮ್ಮ ಜನರ ಬದುಕನ್ನು ಒಂದಿಷ್ಟು ಉತ್ತಮಗೊಳಿಸಲು ಅಪಾರ ಹಣ, ನಗರದ ಮಾಧ್ಯಮಗಳ ಪ್ರಚಾರ ಇವೆಲ್ಲಕ್ಕಿಂತ ನಮ್ಮ ಸುತ್ತಲಿನವರ ಬಗ್ಗೆ ಕಳಕಳಿ, ಮಾಡುವ ಕೆಲಸದಲ್ಲಿ ನಿಷ್ಠೆ ಮುಖ್ಯ ಅನಿಸಿತು. ಪಾಟೀಲರಿಗೆ ಬಂದ ಪ್ರಶಸ್ತಿ ಸಜ್ಜನರೊಬ್ಬರಿಗೆ ದೊರೆತದ್ದು ಇನ್ನೂ ಅಚ್ಚರಿ ಸಂತೋಷಗಳನ್ನು ಮೂಡಿಸಿತು.
ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನವರಾದ ಶ್ರೀ ಪಾಟೀಲರು ಕನ್ನಡದ ಗ್ರಾಮೀಣ ಬದುಕು ಬದಲಾಗುತ್ತಿರುವ ಪರಿಯನ್ನು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ. ಅವರ "ಲಯ" ಎಂಬ ಕತೆ, "ದೇಸಗತಿ" ಎಂಬ ಇನ್ನೊಂದು ಕತೆ ಹೆಚ್ಚು ಚರ್ಚಿತವಾಗಿವೆ. ಅವರ "ತೇರು" ಕಾದಂಬರಿ ಜಮೀನುದಾರಿಕೆ, ಧರ್ಮ, ನಂಬಿಕೆಗಳು, ರಾಜಕೀಯದ ಚಲನವಲನ, ಮನುಷ್ಯ ಸಂಬಂಧಗಳ ಅಚ್ಚರಿ ಇವನ್ನೆಲ್ಲ ಬಿಡಿಸಿಡುತ್ತದೆ. ಕತೆ ಹೇಳುವ ರೀತಿಯಲ್ಲೂ ಪಾಟೀಲರು ಮಹತ್ವದ ಪ್ರಯೋಗಗಳನ್ನು ಮಾಡಿದ್ದಾರೆ. ಆನಂದಕಂದ ಪ್ರಕಾಶನದಿಂದಲೇ ಪ್ರಕಟಗೊಂಡಿರುವ ಈ ಕಾದಂಬರಿ ಸಿಕ್ಕರೆ ಒಮ್ಮೆ ಓದಿ ನೋಡಿ. ಹಾಗೆಯೇ ಲಯ, ಮತ್ತು ದೇಸಗತಿ ಕತೆಗಳನ್ನೂ. ಮಾಹಿತಿ ತಂತ್ರಜ್ಞಾನದ ಲೋಕದಿಂದ ಹೊರತಾದ ಇನ್ನೊಂದ ವಾಸ್ತವದ ಜೀವಂತ ಚಿತ್ರಣ ಪಾಟೀಲರ ಕತೆಗಳಲ್ಲಿ ದೊರೆಯುತ್ತದೆ.

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • Login or register to post comments
  • 879 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 23, 2005 - 9:17pm — hpn

ಒಳ್ಳೆಯ ಮಾಹಿತಿ

hpn's picture

ಇವತ್ತು ಬೆಳಿಗ್ಗೆ ಪತ್ರಿಕೇಲಿ ಓದಿದ್ ಮೇಲೆ ನಾನೇ ಡಿಸ್ಕಶನ್ ಫಾರಮ್ನಲ್ಲಿ ಹಾಕೋಣ ಅಂತಿದ್ದೆ, ಹಾಕಲಿಲ್ಲ. ಒಳ್ಳೇದಾಯ್ತು. ನೀವು ಅವರ ಬಗ್ಗೆ ಒಳ್ಳೆಯ ಮಾಹಿತಿ ನೀಡಿರುವಿರಿ. Smiling

ನಿಮ್ಮ ಅನುಮತಿ ಪಡೆಯದೆ ರಾ.ಪ. ರವರ ಬಗ್ಗೆ ನೀವು ಇಲ್ಲಿ ನೀಡಿರುವ ಮಾಹಿತಿಯನ್ನು ವಿಕಿಪೀಡಿಯಕ್ಕೆ ಸೇರಿಸಿರುವೆ. ನಿಮ್ಮ ಆಕ್ಷೇಪಣೆಯಿಲ್ಲವೆಂದು ತಿಳಿದಿರುತ್ತೇನೆ.

ಇವರಿರುವ ಮಲ್ಲಾಡಿಹಳ್ಳಿ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಹೋಗುವಾಗ ಸಿಗುವ ಮಲ್ಲಾಡಿ ಹಳ್ಳಿ ಅಲ್ವೆ?
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 23, 2005 - 10:29pm — olnswamy

ಅದೇ ಮಲ್ಲಾಡಿಹಳ್ಳಿ

olnswamy's picture

ಹೊಳಲ್ಕೆರೆಯಿಂದ ಸುಮಾರು ಹತ್ತು ಕಿಮೀ. ಚಿಕ್ಕಜಾಜೂರು ರೇಲ್ವೆ ಸ್ಟೇಶನ್ನಿನಿಂದ ಹದಿಮೂರು ಕಿಮೀ. ಇದೆ. ಅಲ್ಲೇ ರಾಘವೇಂದ್ರಸ್ವಾಮಿಗಳು ತಮ್ಮ ಅನಾಥಾಲಯ, ಯೋಗಶಿಕ್ಷಣ ಕೇಂದ್ರ, ಆಯುರ್ವೇದ ಆಸ್ಪತ್ರೆ ಸ್ಥಾಪಿಸಿದ್ದು. ಅವರು ತಿರುಕ ಎಂಬ ಹೆಸರಿಟ್ಟುಕೊಂಡು ಜನರಿಂದ ಪಡೆದ ದೇಣಿಗೆಯಿಂದ ಈ ದೊಡ್ಡ ಸಂಸ್ಥೆ ನಿರ್ಮಿಸಿದ್ದಾರೆ. ಅವರಿಗೆ ನಾಟಕ, ಕಲೆಗಳಲ್ಲೂ ಆಸಕ್ತಿ ಇತ್ತು. ಆದುದರಿಂದಲೇ ಈಗ ಕಳೆದ ಮೂರು ವರ್ಷಗಳಿಂದ ತಿರುಕ-ರಂಗ ಎಂಬ ಹೆಸರಿನ ನಾಟಕೋತ್ಸವ ನಡೆಯುತ್ತಿದೆ. ಸಮಾಜಕ್ಕೆ ಉಪಕಾರಿಯಾದ ಇಂಥ ಸಂತರ ಬಗ್ಗೆ ಸಂಪದದಲ್ಲಿ ಮಾಹಿತಿ ಸಿಗುವಂತಾದರೆ ಚೆನ್ನ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 23, 2005 - 10:59pm — hpn

ತಿರುಕ

hpn's picture

ನಮ್ಮ ಮನೆಯಲ್ಲಿ ಇವರ ಪ್ರಾಣಾಯಾಮ, ಮತ್ತು 'ಯೋಗಾಸನ ಕೈಪಿಡಿ' ಮತ್ತಿತರೇ ಪುಸ್ತಕಗಳಿವೆ. ನಮ್ಮ ತಾಯಿ ತಂದೆಗೆ ಇವರ ಬಗ್ಗೆ ಸಾಕಷ್ಟು ಗೊತ್ತಿರುವ ಹಾಗಿದೆ. ನಾವು ಸ್ವಲ್ಪ ವರ್ಷಗಳ ಕಾಲ ಚಿತ್ರದುರ್ಗದಲ್ಲೂ ಇದ್ದೆವು.

>ಸಮಾಜಕ್ಕೆ ಉಪಕಾರಿಯಾದ ಇಂಥ ಸಂತರ ಬಗ್ಗೆ ಸಂಪದದಲ್ಲಿ ಮಾಹಿತಿ ಸಿಗುವಂತಾದರೆ ಚೆನ್ನ.

ನಮ್ಮ ತಾಯಿಯವರಿಗೆ ಕೇಳಿ ನೋಡ್ತೀನಿ. ಅವರಿಗೆ ಗೊತ್ತಿರುವುದನ್ನ ಬರೆದುಕೊಡಬಹುದು.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗೆಳೆಯರೆ ಇದು ನನ್ನ ಮೊದಲ ಕನ್ನಡ ಬ್ಲಾಗಿಂಗ ಪ್ರಯತ್ನ,
  • ಕನ್ನಡತಿ, ಪ್ರೊ. ಮಾಲತಿರಾವ್ ರವರಿಗೆ ಅಭಿನಂದನೆಗಳು.
  • ಮೂರು ದೀಪಾವಳಿ ವಿಶೇಷಾಂಕಗಳು
  • ಬದುಕು ಬವಣೆಯಾಗದಿರಲಿ
  • ಈಶ್ವರಚಂದ್ರರ ಸಾಹಿತ್ಯ ಸೇವೆ
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಯಾರ ಮುಡಿಗೆ ಸೌಂದರ್ಯ ಕಿರೀಟ...
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ‘ಇರುವೆ’ (ನೀ ಎಲ್ಲೆಲ್ಲೂ ಇರುವೆ)ಗಳು ಅಂತರ್ಜಲ ಮಟ್ಟ ಹೆಚ್ಚಿಸುವ ‘ಬ್ಯಾಂಕರ್’ಗಳು!
  • ‘ಸಂತೆ’ ಎಂಬ ವ್ಯಾವಹಾರಿಕ ಚೌಕಾಶಿಯ ‘ನಾಟಕ’!

ಇತ್ತೀಚಿನ ಪ್ರತಿಕ್ರಿಯೆಗಳು

  • sathishcv
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 8:40pm
  • ಮನಹ್ಪಠಲ
    ಉ: ಎಂ ಪಿ ಶಂಕರ್ - ಟಾಟಾ
    July 20, 2008 - 5:47pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:45pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:32pm
  • rasheedgm
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 4:49pm
  • anil.ramesh
    ಉ: ಧಾರವಾಡದ ನವಿಲೂರ ಕೆರೆಯಲ್ಲಿ ಆಹಾರ ಹೆಕ್ಕುತ್ತಿರುವ ಶಾಪಗ್ರಸ್ಥ ! ಟಿಟ್ಟಿಭ ಹಕ್ಕಿ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
    July 20, 2008 - 11:49am
  • ASHOKKUMAR
    ಉ: ನನ್ನಜ್ಜನ ಬೆಚ್ಚಗಿನ ನೆನಪುಗಳು
    July 20, 2008 - 11:32am
  • Ananth.R
    ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
    July 20, 2008 - 11:22am
  • ರೇಖಾ
    ಉ: ಒ೦ದು ಬೆಚ್ಚನೆಯ ನೆನಪು..
    July 20, 2008 - 9:45am
  • Jayalaxmi.Patil
    ಉ: ಕತ್ತಲೆಯಿಂದ ಹೊರ ಬಂದ ಖಾದಿ
    July 19, 2008 - 11:01pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 44 ಅತಿಥಿಗಳು ಆನ್ಲೈನ್ ಇರುವರು.


ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator