Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಕಾರಂತರ ಜೀವಂತ ಪಾತ್ರಗಳು -೪ (೧)

March 29, 2008 - 4:52pm — csomsekraiah

( ಸಂಕಲನ , ೩೮ನೆಯ ಸಂಚಿಕೆಯಲ್ಲಿ ಪ್ರಕಟವಾದ ಲೇಖನ )

(ಫೋಟೋ: ದಿ ಹಿಂದೂ ಪತ್ರಿಕೆ)
Karanth (ಶಿವರಾಮ ಕಾರಂತ)

ಬಡತನಕ್ಕೆ ಉಂಬುವ ಚಿಂತೆ ,ಎಂದು ಆರಂಭವಾಗುವ ಒಂದು ವಚನ , ಉಡುವ ಚಿಂತೆ , ಹೆಂಡಿರ ಚಿಂತೆ , ಮಕ್ಕಳ ಚಿಂತೆ , ಎಂದೆಲ್ಲಾ ಒಂದೊಂದಾಗಿ ಚಿಂತೆಗಳ ಸಂತೆಯನ್ನು ಎದುರಿಗೆ ಹರವಿಡುತ್ತದೆ . ಕಾರಂತರ ’ಇದ್ದರೂ ಚಿಂತೆ’ ಕಾದಂಬರಿ ಇದ್ದಾಗಿನ ಚಿಂತೆಗಳ ಮೇಲೆ ಬೆಳಕು ಚಲ್ಲುತ್ತದೆ . ಕಾದಂಬರಿಯನ್ನು ರಚಿಸುವ ಕಾಲಕ್ಕೇನೇ (೧೯೬೪) ಇದು ಇವತ್ತಿನ ಸಮಾಜಕ್ಕೆ ರುಚಿಸುವ ವಿಷಯವಾಗಿರಲಿಕ್ಕಿಲ್ಲ ,ಎಂಬ ಸಂದೇಹವನ್ನು ಕಾರಂತರು ವ್ಯಂಗ್ಯವಾಗಿ ವ್ಯಕ್ತಪಡಿಸುತ್ತಾರೆ .ಏಕೆಂದರೆ ಆರ್ಥಿಕ ಚಿಂತನೆಗಳು , ಎಲ್ಲ ಕಾಲಕ್ಕೂ ಒಂದೇ ತೆರನಾಗಿರುವುದು ಸಾಧ್ಯವಿಲ್ಲ.ಅಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಅವಕಾಶಗಳಿದ್ದೇ ಇವೆ .ಆದರೆ ಆ ಪ್ರಯೋಗಗಳು ಮಾನವೀಯವಾಗಿರುವ ವರೆಗೆ ಅಂತಹ ಸಮಸ್ಯೆಗಳಿಲ್ಲ ; ಅಮಾನವೀಯವಾದರೆ ಮಾನವ ಸಮಾಜ ತೆರಬೇಕಾದ ಬೆಲೆ ಮಾತ್ರ ಸಾಮಾನ್ಯವಾದುದಲ್ಲ .

’ಇದ್ದರೂ ಚಿಂತೆ’ ಯನ್ನು ಬರೆಯುವ ಕಾಲಕ್ಕೇನೇ ಸಮಕಾಲೀನವಲ್ಲ ಎನಿಸಿದ ವಿಷಯ , ಇವತ್ತಿನ ಆರ್ಥಿಕ ಜಗತ್ತಿನ ದೃಷ್ಟಿಯಿಂದಂತೂ ಅಸಂಗವೆನಿಸುವಂತೆ ಕಂಡರೆ ಆಶ್ಚರ್ಯವಿಲ್ಲ! ಏಕೆಂದರೆ ಇಪ್ಪತ್ತನೆಯ ಶತಮಾನದ ಆರಂಭದ ಕಾಲದ ಆರ್ಥಿಕ ಚಿಂತನೆಗಳು , ಒಂದು ರೀತಿಯ ಅತಿಯಾದರೆ ; ಇವತ್ತಿನ ವಿದ್ಯಮಾನಗಳು ಇನ್ನೊಂದು ರೀತಿಯ ಅತಿರೇಕದಿಂದ ಕೂಡಿ ಸಮಾಜವನ್ನು ಕಂಗೆಡಿಸುತ್ತಿವೆ .ಮದ್ಯ ಪಾನ ಮಾಡಿಸಿರುವ ಹುಚ್ಚು ಕುದುರೆಯು ನಾಗಾಲೋಟದಿಂದ ಓಡುತ್ತಿರುವ ರೀತಿಯಲ್ಲಿ ಜರುಗುತ್ತಿರುವ ಆರ್ಥಿಕ ವಿದ್ಯಮಾನಗಳು , ಮಾನವ ಪ್ರಾಣಿಯನ್ನು ಯಾವ ದಡ ಮುಟ್ಟಿಸುತ್ತವೆಯೋ ; ಅಥವಾ ಯಾವ ಪ್ರಪಾತಕ್ಕೆ ಕೆಡವುತ್ತವೆಯೋ ಹೇಳಬಲ್ಲ ನರ ಮಾನವ ಯಾರೂ ಇದ್ದಂತೆ ಕಾಣುತ್ತಿಲ್ಲ .

ಆದರೂ ಇದ್ದರೂ ಚಿಂತೆಯನ್ನು ಇಲ್ಲಿ ಪ್ರಸ್ತಾಪಿಸತೊಡಗಿರುವುದು , ಅಲ್ಲಿನ ಪಾತ್ರಗಳ ತೊಳಲಾಟವನ್ನು ಗುರುತಿಸುವ ಉದ್ದೇಶದಿಂದ . ಆರ್ಥಿಕ ಏರು ಪೇರುಗಳು ಏನಾದರೂ ಆಗಲಿ ; ಚಿಂತನೆಗಳ ರೀತಿಯಲ್ಲಿಯೇ ಅಜ ಗಜಾಂತರ ವ್ಯತ್ಯಾಸಗಳೇ ಆಗಲಿ , ಅವುಗಳ ನಡುವೆ ತೊಳಲಾಡುವ ಮನುಷ್ಯ ಮಾತ್ರ ಅವನೇ ಆಗಿರುವುದರಿಂದ ; ಕಾಲದ ಹಂಗನ್ನು ತೊರೆದು ,ಮನುಷ್ಯನ ಕೆಲವು ಮೂಲಭೂತ ಪ್ರವೃತ್ತಿಗಳು ನಿರಂತರವಾಗಿರುವುದರಿಂದ , ’ಇದ್ದರೂ ಚಿಂತೆ’ಯ ಪ್ರಸ್ತಾಪ ಪ್ರಸ್ತುತವೆನಿಸುತ್ತದೆ .

ಇದ್ದರೂ ಚಿಂತೆಯ ರಾಘವೇಂದ್ರರಾಯ ಮುಂಬಯಿ ಶಹರಿನ ಆಢ್ಯ ಮನುಷ್ಯರಲ್ಲೊಬ್ಬ ,ಅವನಿಗೆ , ಅವನ ’ಯಜಮಾನ್ ಅಂಡ್ ಕಂಪನಿ’ ಗೆ ಅಲ್ಲಿ ತುಂಬಾ ಬೆಲೆ , ಆರ್ಥಿಕ ರಂಗದಲ್ಲಿ ಮುಂದುವರಿಯುವವನಿಗೆ , ಹಣದ ಜೊತೆಗೆ ಹೆಸರು ಮತ್ತು ಬೆಲೆ ಇರಲೇಬೇಕಾದುವು .ಅವು ರಾಘವೇಂದ್ರರಾಯರಿಗೆ , ಅವರ ಶ್ರಮದಿಂದಾಗಿಯೋ ,ಅದೃಷ್ಟದಿಂದಾಗಿಯೋ , ಇನ್ನಾವ ಕಾರಣದಿಂದಲೋ ಅಂತೂ ಪ್ರಾಪ್ತಿಸಿದ್ದವು . ಹಾಗೆಂದು ರಾಘವೇಂದ್ರರಾಯ ಹುಟ್ಟುತ್ತಲೇ ಶ್ರೀಮಂತನೇನಲ್ಲ .ಕರಾವಳೀ ಕರ್ನಾಟಕದ ಅತ್ಯಂತ ಸಾಮಾನ್ಯ ಬಡ ಕುಟುಂಬದಿಂದ ಬಂದವನು .ಮುಂಬೈಗೆ ಬಂದ ಹೊಸದರಲ್ಲಿ ಒಂದು ತುತ್ತು ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ ಅವನದಾಗಿತ್ತು .ಅಲ್ಲಿ ಕರ್ನಾಟಕದ ಉತ್ತರ ಕನ್ನಡಜಿಲ್ಲೆಯಿಂದಲೇ ಬಂದು . ಮಸಾಲೆಗಳ ಮತ್ತು ಬಣ್ಣಗಳ ವ್ಯಾಪಾರದಲ್ಲಿ ತೊಡಗಿದವರೊಬ್ಬರ ಪರಿಚಯ ಅವನಿಗಾಗದಿದ್ದರೆ ,ಅವನ ಬಾಳಿನ ದಾರಿ ಯಾವ ಮಾರ್ಗ ಹಿಡೀಯುತ್ತಿತ್ತೋ ಗೊತ್ತಿಲ್ಲ .

ಅವನ ಮಡದಿ ಸಾವಿತ್ರಿಯಾದರೆ ಹಾಗಲ್ಲ . ಅವಳೂ ಸಹ ಕರಾವಳಿಯ ಮನೆತನದ ಮೂಲದವಳೇ ಆದರೂ , ಮುಂಬೈಯಲ್ಲಿ ಹೆಸರು ಮಾಡಿದ ಹೋಟೆಲ್ ಉದ್ಯಮಿಯೊಬ್ಬರ ಮಗಳು .ಅವಳ ತಂದೆ ಬಹಳ ಹಿಂದೆಯೇ ಮುಂಬೈ ಸೇರಿದುದರಿಂದ ಅವಳಲ್ಲಿ ಮುಂಬೈನ ಸಂಸ್ಕೃತಿ ಸಹಜವಾಗಿಯೇ ಮೈಗೂಡಿತ್ತು .ಸಾವಿತ್ರಿ ಬರಿಯ ಸಾಮಾನ್ಯ ಹೆಣ್ಣುಮಗಳು ಮಾತ್ರ ಅಲ್ಲ .ಪ್ರಗತಿಪರ ವಿಚಾರಗಳನ್ನುಳ್ಳವಳು ; ಮುಂಬಯಿಯ ಮಹಿಳಾ ಸಮಾಜದ ಬೆನ್ನೆಲುಬಾಗಿದ್ದವಳು .ಸಮಾಜ ಸೇವೆ ಅವಳ ಇಷ್ಟದ ಕೆಲಸ ; ಜೊತೆಗೆ ಆ ಕಾಲದ ಸ್ವಾತಂತ್ರ್ಯ ಹೋರಾಟದ ಪ್ರಭಾತ ಪೇರಿಗಳಲ್ಲಿ ಮುಂಬಯಿ ಬೀದಿಗಳಲ್ಲಿ ಅಲೆದಾಡಿ , ಪೋಲೀಸರಿಂದ ಪೆಟ್ಟು ತಿಂದವಳು ,ಈ ವಿಷಯ ಮುಂಬಯಿಯ ಪತ್ರಿಕೆಗಳಲ್ಲೂ ಪ್ರಕಟವಾಗಿ ಸಾವಿತ್ರಿಯ ಹೆಸರು ಶಹರದಲ್ಲಿ ಪರಿಚಿತವಾದುದಾಗಿತ್ತು ಇಷ್ಟಲ್ಲದೆ ಗಂಡನ ವ್ಯವಹಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ , ಕಂಪನೆಯ ಉತ್ಕರ್ಷಕ್ಕೆ ಕಾರಣಳೂ ಆಗಿದ್ದವಳು .ಕತೆ ಇಷ್ಟೇ ಆಗಿದ್ದರೆ ’ ಇದ್ದರೂ ಚಿಂತೆ’ ಬರೆಯುವ ಅಗತ್ಯವೇ ಇರಲಿಲ್ಲ .

ಇದ್ದರೂ ಚಿಂತೆಯಲ್ಲಿ ಅತಿ ಮುಖ್ಯ ತಿರುವು ಬರುವುದು ರಾಘವೇಂದ್ರ ಸಾವಿತ್ರಿಯರ ಕಿರಿಯ ಕೂಸು ಸೀತಾರಾಮನಿಂದ . ಸೀತಾರಾಮನೆಂದರೆ ಸಾವಿತ್ರಿಯ ಪಾಲಿಗೆ ಸಮಸ್ಯೆಯ ಮಗು .ಅವನ ಸ್ವಭಾವವೇ ಅವಳಿಗೆ ಅರ್ಥವಾಗದಂತಹುದು . ತಾಯಿಯೆಂಬ ಮಮತೆಯಾಗಲೀ , ಗೌರವವಾಗಲೀ ಅವನಲ್ಲಿರುವ ಬಗ್ಗೆಯೇ ಅವಳಿಗೆ ಸಂದೇಹ .ಅವನು ಚಿಕ್ಕವನಾದಾಗಿನಿಂದ ಬೆಳೆದದ್ದು ಅವನ ಅಜ್ಜಿಯ ಆಸರೆಯಲ್ಲಿ , ತನ್ನ ತಾಯಿಯೇ ತನ್ನ ವಿರೋಧಿಯಾಗಿ ಅವನನ್ನು ರೂಪಿಸಿದಳೇ ? - ಎಂಬ ಅನುಮಾನ ಸಹ ಅವಳನ್ನು ಕಾಡದಿರಲಿಲ್ಲ .’ಯಜಮಾನ್ ಅಂಡ್ ಕಂಪನಿಯ ಯಾವ ವ್ಯವಹಾರಗಳ ಬಗ್ಗೆಯೂ ಅವನು ಆಸಕ್ತಿ ತಾಳಿದುದೆಂಬುದೇ ಇಲ್ಲ .ಅವನ ಕುಟುಂಬದ ಯಾರೊಂದಿಗೂ ಅವನ ಆಪ್ತತೆ ಬೆಳೆಯಲೇ ಇಲ್ಲ .

ಸೀತಾರಾಮ ಈ ವ್ಯವಹಾರ , ರಾಜಕೀಯ ,ಮುಂಬೈನ ಸಮಾಜ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ , ಸಸ್ಯ ಶಾಸ್ತ್ರದಲ್ಲಿ ಎಂ, ಎಸ್ ಸಿ ಮುಗಿಸಿ , ಕರ್ನಾಟಕದ ಧಾರವಾಡಕ್ಕೆ ಬಂದು ಸಸ್ಯ ಶಾಸ್ತ್ರದ ಪ್ರಾಧ್ಯಾಪಕನಾಗುತ್ತಾನೆ .ತನ್ನ ತಾಯಿ ಸಾವಿತ್ರಿಯ ಬಗ್ಗೆ ಯವ್ಯಾವುದೋ ಕಾರಣಕ್ಕೆ ಅವನಿಗೆ ಅನಾದರ .ಅವಳ ರಾಜಕೀಯ ಚಳುವಳಿ ,ಅವನಿಗೆ ಪ್ರಾಮಾಣಿಕವಾಗಿ ಕಾಣಿಸುವುದಿಲ್ಲ .ಅವಳ ಚಟುವಟಿಕೆಗಳು ಅವನಿಗೆ ತೋರಿಕೆಯವಾಗಿ , ನಾಟಕೀಯವಾಗಿ , ಅಸಹಜವಾಗಿ ಕಾಣುತ್ತವೆ .ಸಾಮಾನ್ಯವಾಗಿ ದೊಡ್ಡವರ ಈ ರೀತಿಯ ಬಯಲಾಡಂಬರದ ನಾಟಕಗಳು , ಅವನಲ್ಲಿ ತಿರಸ್ಕರಿಸಲು ಯೋಗ್ಯವಾದ ನಡಾವಳಿಗಳೆನಿಸುತ್ತವೆ . ಆದರೂ ತಾಯಿ ಎಂಬ ವ್ಯಕ್ತಿಯನ್ನು ಇಂತಹ ಕಾರಣಗಳಿಗಾಗಿ ಕಡೆಗಣಿಸುವುದು ಅಷ್ಟೊಂದು ಸಕಾರಣವಲ್ಲ .ಏಕೆ ಸೀತಾರಾಮ ಹೀಗೆ ? ಎಂಬ ಪ್ರಶ್ನೆಗೆ ಸೀತಾರಾಮನಲ್ಲಿ , ಯಾವುದೋ ರೀತಿಯ ತಾಯಿಯ ವಿಚಾರದಲ್ಲಿ ಮನಸ್ಸು ಕಹಿಯಾಗುವ ಸಂಗತಿಗಳಿವೆ . ಆ ವಿಚಾರವನ್ನು ಕಾರಂತರು ಎಲ್ಲಿಯೂ ಸೀತಾರಾಮನ ಬಾಯಿಂದಲಾಗಲೀ ಅಥವಾ ಅವರ ನಿರೂಪಣೆಯಲ್ಲಾಗಲೀ ನೇರವಾಗಿ ಪ್ರಸ್ತಾಪಿಸುವುದಿಲ್ಲ .ಆದರೆ ಅವರ ಕಂಪನಿಯ ಮೇನೇಜರನಾದ ಸದಾಶಿವರಾಯನ ವಿಷಯದಲ್ಲಿ, ಸೀತಾರಾಮ ತಳೆಯುವ ನಿಷ್ಟುರ ನಿಲುಮೆ ಮತ್ತು ಅಸಹಜ ಕೋಪ ಓದುಗರ ಗಮನಕ್ಕೆ ಕೆಲವು ಸಂಗತಿಗಳನ್ನು ಸೂಚಿಸುತ್ತವೆ .

  • ವಿಮರ್ಶೆ
Ornamental seperator
  • Login or register to post comments
  • 161 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾರಂತರ ಜೀವಂತ ಪಾತ್ರಗಳು ೪ (೨)
  • ಕಾರಂತರ ಜೀವಂತ ಪಾತ್ರಗಳು -೫ (೧)
  • ನಿಮಗ್ಯಾವ ಚಿಂತೆ
  • ಕಾರಂತರ ಜೀವಂತ ಪಾತ್ರಗಳು -೫ (೨)
  • ಕಾರಂತರ ಜೀವಂತ ಪಾತ್ರಗಳು ೨ (ಮುಂದುವರಿದುದು)
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ಸು:ಖ ದು:ಖ ಗಳನು ತಟಸ್ಥಭಾವದಿ
ಸಕಲಕು ವಿತರಿಸುವುದು ಪ್ರಕೃತಿ
ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ
ಯುಕುತಿಯೆನಿಸುವುದು ಸ೦ಸ್ಕೃತಿ.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator