August 1, 2005 - 9:06pm
ರಾವಣನ ಮಕ್ಕಳು ರಾಮನ ಮಕ್ಕಳಿಗೆ
ಹೊಡೆದದ್ದೊಂದು ಸುದ್ದಿ
ಎಂದೂ ಎಲ್ಲಿಯೂ ಹೊಡೆಸಿಕೊಳ್ಳುವ
ಜಾಯಮಾನದವರೀ ನಮ್ಮ ಮಕ್ಕಳು
ದಾಂಡಿಗರಾದ ರಾವಣನ ಮಕ್ಕಳ ಮುಂದೆ
ಕುಬ್ಜರಾಗಿ ಲವಲೇಶವೂ ಇಲ್ಲದಂತಾದರು ರಾಮನ ಮಕ್ಕಳು
ಬದಿಯ ಬೀದಿಯಲಿ ತೋರಿಸಲಾರರು ಇವರ ಪೌರುಷ
ಅದೆಲ್ಲಾ ನಮ್ಮ ಮುಂದೆಯೇ ತೋರಿಸುವ ಉತ್ತರ ಕುಮಾರರಿವರು
ಇವರಿಗೆ ಸಿಗುವ ಕೋಚುಗಳೆಂಥವರು
ರೈಟ್ ಎಂದು ಒಬ್ಬ ಅಂದು ಬಂದ
ಬಂದು ಸ್ವಲ್ಪ ದಿನಗಳಿಗೇ
ಇವರ ಮೊಂಡುತನ ನೋಡಿ ರೈಟ್ ಹೇಳಿದ
ಈಗ ಬಂದಿಹ ಚಾಪೆಲ್
ಮೊದಲ ಬಾಲಿಗೇ ಮುಗ್ಗರಿಸಿಹ
ಇವನಿಗೆ ಅಲ್ಲಿ ಕಾದಿದೆ ಒಂದು ಚಾಪೆಲ್
(ಮನೆಗಂಟಿದ ದೇವಸ್ಥಾನ)
ಇವರಿಗೆ ಬೇಕೇ ಸರಿಯಾದ ಕೋಚು
ನಮ್ಮಲ್ಲಿದ್ದೂ ನಾವು ಅರಿಯಲಿಲ್ಲವೇ
ಮೊದಲ ಇನ್ನಿಂಗ್ಸಿನಲೇ ಬಾರಿಸಿದ
ಸಹಸ್ರ ಶವಗಳ ಬಲಿ
ಈಗ ಎರಡನೆ ಇನ್ನಿಂಗ್ಸ್ ಆರಂಭಿಸಿದ
ಮುಂಬೈ ಚಂಡಿ ಮಳೆಯೇ
ನಮ್ಮ ದಾಂಡಿಗರಿಗೆ ಸರಿಯಾದ ಕೋಚು
ಲೇಖನ ವರ್ಗ (Category):









ಪ್ರತಿಕ್ರಿಯೆಗಳು
well said
its really good.
ಕನ್ನಡದಲ್ಲಿ ಬರೆಯಿರಿ
ಹರೀಶ್, ಸಂಪದಕ್ಕೆ ಸ್ವಾಗತ. ಸಾಧ್ಯವಾದಷ್ಟು ಕನ್ನಡದಲ್ಲಿ ಕಾಮೆಂಟ್ ಹಾಕಲು ಪ್ರಯತ್ನಿಸಿ. ಧನ್ಯವಾದಗಳು.