ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಮುಕ್ತ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳಿಗೆ ನಿಗೂಢ ಪುಟದ ಸವಾಲು

March 31, 2008 - 9:39pm — ASHOKKUMAR

(ಇ-ಲೋಕ-68)(31/3/2008)
     ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವುದು ಕಡಿಮೆ.ಅವರ ಮತ್ತು ಮುಕ್ತವಿಶ್ವವಿದ್ಯಾಲಯದ ನಡುವಣ ಸಂಪರ್ಕಕ್ಕೆ ಹಿಂದೆಲ್ಲಾ ಅಂಚೆಯೇ ಗತಿ.ಈಗ ಅಂತರ್ಜಾಲ ತಾಣಗಳು ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸಲು ಸಹಾಯ ಮಾಡುತ್ತವೆ.ಆದರೆ ಮುಕ್ತ ವಿವಿಯ ಅಂತರ್ಜಾಲ ತಾಣದಲ್ಲಿ ನೀಡಿರುವ ಪ್ರಕಟಣೆಯು ಗೂಢ ಭಾಷೆಯಲ್ಲಿದ್ದರೆ,ಅದನ್ನು ವಿದ್ಯಾರ್ಥಿಗಳು ಅಥವ ಸಾರ್ವಜನಿಕರು ಅರ್ಥೈಸಿಕೊಳ್ಳುವುದು ಹೇಗೆ? ಕರ್ನಾಟಕ ರಾಜ್ಯ ಮುಕ್ತ ವಿವಿ ಇತ್ತೀಚೆಗೆ ತನ್ನ ’ಮಾಹಿತಿ ಫಲಕ’ದಲ್ಲಿ ಪ್ರಕಟಣೆಯನ್ನು ನೀಡಿತ್ತು.ಸ್ನಾತಕೋತ್ತರ ಅಧ್ಯಯನದ ಪರೀಕ್ಷೆಗಳ ಬಗೆಗೆ ಇದ್ದ ಕನ್ನಡ ಪ್ರಕಟಣೆ ಪಿಡಿಎಫ್ ಕಡತದ ರೂಪದಲ್ಲಿದೆ.ಇದನ್ನು ತೆರೆದರೆ.ಯಾವುದೋ ನಿಗೂಢ ಲಿಪಿಯಲ್ಲಿ ಪ್ರಕಟಣೆ ಮೂಡುತ್ತದೆ!ಅದನ್ನು ಅರ್ಥೈಸುವುದು ಹೇಗೆ ಎಂದು ತಲೆ ಕೆರೆಯುವ ಪ್ರಸಂಗ.ನಿಟ್ಟೆಯ ಮಂಜುನಾಥರ ಮಡದಿಯೂ ಈ ಪರೀಕ್ಷೆ ತೆಗೆದುಕೊಳ್ಳಬೇಕಿತ್ತು.ಪ್ರಕಟಣೆಯ ಅರ್ಥ ತಿಳಿಯಲು ಅವರು ಸಾಕಷ್ಟು ಬುದ್ಧಿ ಓಡಿಸಿದರು.ಪಿಡಿಎಫ್ ಕಡತದ ಮಾಹಿತಿಯನ್ನು ’ಬರಹ’ಕ್ಕೆ ರವಾನಿಸಿದರೂ ಗೂಢ ಲಿಪಿ ಗುಟ್ಟು ಬಿಟ್ಟು ಕೊಡಲಿಲ್ಲ.ಕೊನೆಗೆ ಅದನ್ನು ವರ್ಡ್ ತಂತ್ರಾಶಕ್ಕೆ ಹಚ್ಚಿ ನೋಡಿದರೂ ಫಲಿತಾಂಶ ಅಷ್ಟೇ. ಕೊನೆಗೆ ವರ್ಡ್‍ನಲ್ಲಿ ’ಬರಹ’ ಲಿಪಿಯನ್ನು ಆಯ್ದಾಗ--ಹುರ್ರೇ..ಕನ್ನಡ ಅಕ್ಷರಗಳು ಮೂಡಿಬಂತು!ತನ್ನ ವಿದ್ಯಾರ್ಥಿಗಳನ್ನು ಪತ್ತೇದಾರರಾಗಲು ತರಬೇತಿ ನೀಡುವತ್ತ ಮುಕ್ತ ವಿವಿ ಹೆಜ್ಜೆ ಹಾಕುತ್ತಿದೆಯೇ ಎನ್ನುವ ಸಂಶಯ ಮೂಡಿಸುವಂತೆ ಮಾಡುತ್ತದಲ್ಲವೇ ಈ ಪ್ರಸಂಗ?
ಐಸಿ:ಮಡಚುವುದೀಗ ಈಸಿ
    ಇಲೆಕ್ಟ್ರಾನಿಕ್ ಮಂಡಲಗಳನ್ನುಹೊತ್ತ ಐಸಿ(ಇಂಟಗ್ರೇಟೆಡ್ ಸರ್ಕ್ಯೂಟ್) ಸಿಲಿಕಾ‍ನಿಂದ ತಯಾರಿಸಿದ್ದು.ಇದು ಬಲವಾಗಿದ್ದು,ಮಡಚಲು ಆಗದು.ಆದರೆ ಹೊಸ ತಂತ್ರಜ್ಞಾನದಲ್ಲಿ ರಬ್ಬರ್ ಹಾಳೆಗಳ ಮೇಲೆ ಮುದ್ರಿಸಿದ ಚಿಪ್‍ಗಳು ಆಕಾರವನ್ನು ಬದಲಿಸಬಲ್ಲುವು.ಇಲಿನಾಯಿಸ್ ವಿಶ್ವವಿದ್ಯಾಲಯದಲ್ಲಿ ಇಂತಹ ಚಿಪ್‍ಗಳನ್ನು ತಯಾರಿಸಲಾಗಿದೆ.ವೈದ್ಯಕೀಯ ಇಲೆಕ್ಟ್ರ್‍ಆನಿಕ್ಸ್ ಕ್ಷೇತ್ರದಲ್ಲಿ ಇವುಗಳ ಅಗತ್ಯ ಹೆಚ್ಚು.ಮಿದುಳಿನಲ್ಲಿ ಹುದುಗಿಸಿ ಇಡಲು,ದೇಹದ ಪರಿಸ್ಥಿಯ ಮೇಲೆ ಕಣ್ಣಿಡಲು ದೇಹದೊಳಗೆ ಅವಿತಿರಿಸಬಲ್ಲ ಚಿಪ್‍ಗಳನ್ನು ಬಳಸಿದರೆ,ಅವು ಈ ರೀತಿ ಬಗ್ಗಿಸಲಾದರೇ ಹೆಚ್ಚು ಒಳಿತು.ವೈದ್ಯರ ಕೈಗವಸುಗಳಲ್ಲಿ ಈ ರೀತಿಯ ಐಸಿಗಳನ್ನು ಅಳವಡಿಸಿ,ಅವರು ಶಸ್ತ್ರಕ್ರಿಯೆ ಮಾಡುತ್ತಿರುವಂತೆಯೇ,ರಕ್ತದಲ್ಲಿ ಸಕ್ಕರೆ ಪ್ರಮಾಣ,ಆಮ್ಲಜನಕ ಪ್ರಮಾಣ ಇತ್ಯಾದಿಗಳ ಬಗ್ಗೆ ಗಮನವಿರಿಸಿ,ದೇಹ ಸುಸ್ಥಿತಿಯಲ್ಲಿರುವುದನ್ನು ಖಚಿತ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಚಿಪ್‍ಗಳನ್ನು ದುಡಿಸಿಕೊಳ್ಳುವ ಆಲೋಚನೆಯನ್ನು ಸಂಶೋಧಕರು ಮಾಡುತ್ತಿದ್ದಾರೆ.ಈ ರೀತಿಯ ಐಸಿಗಳು ಮಾಮೂಲಿ ಐಸಿಗಳಷ್ಟು ಚೆನ್ನಾಗಿ ಕೆಲಸ ಮಾಡವು.
ಜನಗಣತಿಗೆ ಕಂಪ್ಯೂಟರ್ ಬಳಕೆ ಇಲ್ಲ
    ಎರಡು ವರ್ಷಗಳ ನಂತರ 2010ರಲ್ಲಿ ಜನಗಣತಿ ನಡೆಯುವಾಗ ಕೈಯಲ್ಲಿ ಹಿಡಿಯುವ ಕಂಪ್ಯೂಟರುಗಳ ಬಳಕೆಗೆ ಅಮೆರಿಕಾದಲ್ಲಿ ಯೋಜಿಸಲಾಗಿತ್ತು.ಆದರೆ ಅಣಕು ಗಣತಿಯ ವೇಳೆ ಗಣತಿ ಕೆಲಸಕ್ಕೆ ನಿಯುಕ್ತರಾದ ತಾತ್ಕಾಲಿಕ ನೌಕರರು,ಕಂಪ್ಯೂಟರುಗಳನ್ನು ಬಳಸಲು ಕಷ್ಟ ಪಟ್ಟರು.ಜತೆಗೆ ಆ ಕಿರುಗಣಕಗಳು ಗಣತಿ ಕಾರ್ಯದಲ್ಲಿ ತೊಡಗಿದವರು ಸಂಗ್ರಹಿಸಿದ ಮಾಹಿತಿಯನ್ನು ಕಂಪ್ಯೂಟರ್ ಜಾಲಕ್ಕೆ ಸೇರಿಸಲೂ ಪರದಾಡುವ ಪ್ರಸಂಗ ಬಂತು.ಗಣಕಗಳನ್ನು ಪೂರೈಸಲು ಆದೇಶ ಪಡೆದ ಹ್ಯಾರಿಸ್ ಕೋರ್ಪೊರೇಷನ್ ಬೇಕಾದ ಸಂಖ್ಯೆಯಲ್ಲಿ ಅವನ್ನು ಪೂರೈಸಲು ಅಸಾಧ್ಯವೆಂದು ಹೇಳಿರುವುದು  ಮತ್ತಷ್ಟು ಪ್ರಶ್ನೆಗಳು ಏಳಲು ಕಾರಣವಾಗಿದೆ.ಕಂಪ್ಯೂಟರುಗಳನ್ನು ಹಿಡಿದು ಹೊಗುವ ಗಣತಿಕಾರರು,ವಾಸ್ತವ್ಯದ ವಿಳಾಸ ದೃಡೀಕರಿಸಲು,ಜನರ ಬಗ್ಗೆ ಮಾಹಿತಿ ಸಂಗ್ರಹಿಸಲು ಮತ್ತು ಸಂಗಹಿಸಿದ ಮಾಹಿತಿಯನ್ನು ಜಾಲಕ್ಕೆ ಸೇರಿಸಲು ಕಂಪ್ಯೂಟರ್ ಬಳಸುವ ಯೋಜನೆಯಿತ್ತು.ಇನ್ನು ಗಣತಿ ಕಾರ್ಯ ನಡೆದಾಗ ಹಳೆಯ ಕಾಗದದಲ್ಲಿ ಬರೆದು ತೆಗೆದುಕೊಳ್ಳುವ ವಿಧಾನಕ್ಕೆ ಶರಣಾಗಬೇಕಾದೀತು. ಈಗ ಅಂದಾಜಿಸಿದ ಹತ್ತು ಬಿಲಿಯನ್ ಡಾಲರುಗಳಿಗೆ ಮೀರಿ ಖರ್ಚು ಬರಬಹುದು ಎಂಬ ಮಾತು ಕೇಳಿ ಬರುತ್ತಿದೆ.ಹೆಚ್ಚಿಗೆ ಬೇಕಾದ ಮೊತ್ತ ಎರಡು ಬಿಲಿಯನ್ ಆಗಬಹುದು.
ವಿಕಿಪೀಡಿಯಾಗೆ ದೊಡ್ದ ಸಹಾಯಹಸ್ತ
    ಮೂರು ಮಿಲಿಯನ್ ಡಾಲರು ಸಣ್ಣ ಮೊತ್ತವೇನೂ ಅಲ್ಲ. ಜಗತ್ತಿನ ಮೊದಲ ಜನರೇ ಅಭಿವೃದ್ಧಿ ಪಡಿಸಿದ ವಿಶ್ವಕೋಶಕ್ಕೆ ಮುಂದಿನ ಮೂರು ವರ್ಷಗಳಲ್ಲಿ ಮೂರು ಮಿಲಿಯನ್ ಡಾಲರು ನೆರವನ್ನು

ಪ್ರತಿಷ್ಠಾನವೊಂದು ನೀಡಲಿದೆ.ಜಾಹೀರಾತು ನೆರವು ಇಲ್ಲದೆ,ಜನರ ಕಾಣಿಕೆಯ ಮೂಲಕವೇ ನಿಘಂಟು,ವಿಶ್ವಕೋಶ ರಚಿಸುತ್ತಾ,ಸ್ಥಳೀಯ ಭಾಷೆಗಳಲ್ಲಿಯೂ ಇಂತಹ ಕೆಲಸ ಮಾಡುತ್ತಿರುವ ವಿಕಿಮೀಡಿಯಾ ಪ್ರತಿಷ್ಠಾನಕ್ಕೆ ಈ ಕೊಡುಗೆ ಉತ್ಸಾಹ ಹುಟ್ಟಿಸಿದೆ.2001ರಲ್ಲಿ ಈ ಕೆಲಸಕ್ಕೆ ಕೈಹಚ್ಚಿದ ವಿಕಿಮೀಡಿಯ,ಸದ್ಯ ಅಮೆರಿಕಾದ ಅತ್ಯಂತ ಜನಪ್ರಿಯ ಅಂತರ್ಜಾಲ ತಾಣದ ನಿರ್ಮಾತೃ.ವರ್ಷಕ್ಕೆ ಸುಮಾರು ಐದು ದಶಲಕ್ಷ ಡಾಲರುಗಳನ್ನು ಸರ್ವರ್ ಮತ್ತು ಅಂತರ್ಜಾಲ ಸಂಪರ್ಕಕ್ಕೆ ಖರ್ಚು ಮಾಡಬೇಕಾಗುತ್ತದೆ.ಇದು ವರೆಗೆ ಎರಡು ದಶಲಕ್ಷ ಡಾಲರುಗಳ ಕೊಡುಗೆಯೇ ದೊಡ್ಡದೆನಿಸಿತ್ತು.ಈ ಹೊಸ ಕೊಡುಗೆಯ ಮೂಲಕ ತನ್ನಲ್ಲಿ ಬಳಕೆಯಾಗುವ ತಂತ್ರಾಶವನ್ನು ಸುಧಾರಿಸಿಕೊಳ್ಳುವ ಯೋಚನೆ ಪ್ರತಿಷ್ಠಾನಕ್ಕಿದೆ.ಜತೆಗೆ ಹೆಚ್ಚು ನೌಕರರನ್ನು ನೇಮಿಸಿಕೊಂಡು ಕೆಲಸದಲ್ಲಿ ಹೆಚ್ಚಿನ ವೇಗದಲ್ಲಿ ಸಾಧಿಸಲೂ ಪ್ರಯತ್ನಿಸಲಾಗುತ್ತದಂತೆ.ಕನ್ನಡದ ಸಂಪದವೂ ಜನರ ನೆರವಿನಿಂದಲೇ ನಡೆಯುವ ಪಣ ತೊಟ್ಟಿರುವುದು ನಿಮಗೆ ಗೊತ್ತೇ ಇದೆ.
ಚಿತಾಭಸ್ಮ ಚಂದ್ರನ ಮೇಲೆ ವಿಸರ್ಜಿಸಬಹುದು!
    ಚಂದ್ರನ ಮೇಲೆ ಚಿತಾಭಸ್ಮ ವಿಸರ್ಜಿಸುವ ಬಯಕೆ ಇದ್ದವರಿಗೆ ಈಗ ಬಯಕೆ ಈಡೇರಿಸಿಕೊಳ್ಳಲು ಸಾಧ್ಯ.ಹತ್ತು ಸಾವಿರ ಡಾಲರು ನೀಡಿದರೆ ಸರಿ! ಸೆಲೆಸ್ಟಿಸ್ ಇಂಕ್ ಎಂಬ ಕಂಪೆನಿಯು ಅಲ್ಪಪ್ರಮಾಣದಲ್ಲಿ ಮಾನವ ಚಿತಾಭಸ್ಮವನ್ನು ಚಂದ್ರನ ಮೇಲೆ ಚೆಲ್ಲಲು ತಯಾರಿ ನಡೆಸಿದೆ.ರಾಕೆಟುಗಳಲ್ಲಿರುವ ರೊಬೋಟಿಕ್ ಹಸ್ತ ಈ ಕೆಲಸವನ್ನು ನೆರವೇರಿಸಲಿದೆ.
udayavani

ashokworld
*ಅಶೋಕ್‍ಕುಮಾರ್ ಎ

  • ಪ್ರಚಲಿತ
~.~
  • Login or register to post comments
  • 293 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 2, 2008 - 9:09am — rameshbalaganchi

ಉ: ಮುಕ್ತ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳಿಗೆ ನಿಗೂಢ ಪುಟದ ಸವಾಲು

rameshbalaganchi's picture

ಅಶೋಕ ಕುಮಾರ್ ಅವರೆ, ನಿಮ್ಮ ಲೇಖನದಲ್ಲಿ ನನಗೆ ಅರ್ಥವಾಗದ ಅಂಶಗಳು ಹೀಗಿವೆ.
ವಿಶ್ವವಿದ್ಯಾಲಯಗಳು ಮತ್ತು ಅಂತಹ ಸಂಸ್ಥೆಗಳು ತಮ್ಮ ಪ್ರಕಟಣೆಗಳನ್ನು ಯಾರೂ ಯಾವ ರೀತಿಯೂ ಮಾರ್ಪಾಟು ಮಾಡಬಾರದೆಂದು ಮಾಹಿತಿಗಳನ್ನು ಪಿಡಿಎಫ್ ರೂಪಕ್ಕೆ ಮಾರ್ಪಡಿಸಿದರೆ ಅದರಲ್ಲಿ ತಪ್ಪೇನು? ಸಾಮಾನ್ಯವಾಗಿ ಮುಖ್ಯ ದಾಖಲೆಗಳನ್ನು ಅವುಗಳ ಮೂಲರೂಪ ಕಾಪಾಡಲು ಮತ್ತು ಕಡತದ ಗಾತ್ರ ಚಿಕ್ಕದು ಮಾಡಲು ಹಾಗೆ ಮಾಡುವುದು ವಾಡಿಕೆಯಲ್ಲವೆ? ಹಾಗಾಗಿ ಇಂದು ಸಾಧಾರಣವಾಗಿ ಎಲ್ಲರೂ ತಮ್ಮ ಕಂಪ್ಯೂಟರ್‌ಗಳಲ್ಲಿ ಪಿಡಿಎಫ್ ರೀಡರ್‌ಗಳನ್ನು ಅಳವಡಿಸಿರುತ್ತಾರೆ. ಹಾಗೆ ಮಾಡಿದರೆ ಯಾವುದೇ ಪಿಡಿಎಫ್ ಕಡತಗಳು ಸುಲಭವಾಗಿ ತೆರೆದುಕೊಳ್ಳುತ್ತವಲ್ಲ!!
ನನಗೆ ಆಶ್ಚರ್ಯವೆಂದರೆ ನೀವು ಅದು ವರ್ಡ್‌ನಲ್ಲಿ ಬರಹ ಕನ್ನಡ ಫಾಂಟ್‌ಗಳನ್ನು ಆಯ್ದುಕೊಂಡಾಗ ಕಡತ ಸರಿಯಾಗಿ ಮೂಡಿತು ಎಂದಿದ್ದೀರಲ್ಲ!!
ಪಿಡಿಎಫ್ ರೂಪದಲ್ಲಿರುವ ಕಡತಗಳು ಅಂಥ ಸಹಾಯವನ್ನು ಬೇಡುತ್ತವೆಯೇ?ಹಾಗಾದರೆ ಕಡತದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಲಿಪಿಗಳನ್ನು ಬಳಸಿದ್ದರೆ ಅದನ್ನು ತೆರೆಯುವ ಬಗೆ ಹೇಗೆ?
ಕಂಪ್ಯೂಟರ್‌ಗಳ ಬಗ್ಗೆ ಹೊಸದಾಗಿ ಕಲಿಯುತ್ತಿರುವ ನನಗೆ ಈ ವಿಷಯಗಳನ್ನು ಬಗೆಹರಿಸುತ್ತೀರಾ? ನಾನು ಕೇಳಿದ ಪ್ರಶ್ನೆಗಳು ತೀರ ಪೆದ್ದುತನದ್ದಾಗಿದ್ದರೆ ಮನ್ನಿಸಿಬಿಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 2, 2008 - 9:25am — ASHOKKUMAR

ಉ: ಮುಕ್ತ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳಿಗೆ ನಿಗೂಢ ಪುಟದ ಸವಾಲು

ASHOKKUMAR's picture

ಈ ಕೊಂಡಿಯನ್ನು ನೋಡಿ ,ಅರ್ಥವಾಗುತ್ತದೆ.
http://www.ksoumysore.com/MAMCOMCIRKAN1STPAGE.pdf
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಂತರ್ಜಾಲದ ಮೂಲಕ ಪದವಿ ಪರೀಕ್ಷೆಗಳು!
  • ಐಐಟಿ ಪ್ರವೇಶದಲ್ಲಿ ಸಿಂಹಪಾಲು ಯಾರಿಗೆ?
  • ಶೂನ್ಯದಿಂದ ಹದಿನೈದು ಸಾವಿರ ಕೋಟಿ ರುಪಾಯಿ ಸೃಷ್ಟಿ!
  • ಸಮಸ್ಯಾತ್ಮಕ ಸುಳಿ
  • ಡಿಟಿಎಚ್ ಮೂಲಕವೂ ಖರೀದಿಸಿ!
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 23 ಅತಿಥಿಗಳು ಆನ್ಲೈನ್ ಇರುವರು.


ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator