ಹಾಸ್ಯೋತ್ಸವದಲ್ಲಿ ಹೀಗೊಂದು ಪ್ರಸಂಗ
ನಿಮಗೀಗಾಗಲೇ ತಿಳಿದಿರಬಹುದು. ಪ್ರತಿ ವರ್ಷದ ಡಿಸೆಂಬರ್ ೨೫ ರಂದು ಹಾಸ್ಯಬ್ರಹ್ಮ, ಮತ್ತು ಕೊರವಂಜಿ ಅಪರಂಜಿ ಟ್ರಸ್ಟ್ ನವರು , ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಹಾಸ್ಯೋತ್ಸವ ನಡೆಸುತ್ತಾರೆಂಬುದು. ನೆನ್ನೆ ಅಲ್ಲಿಗೆ ಹೋಗಿದ್ದೆ. ಅನೇಕ ಗಣ್ಯರಿಂದ ಬಾಷಣಗಳು (ಹಾಸ್ಯ ಚಟಾಕಿಗಳು) ಅಣಿಮುತ್ತುಗಳಂತೆ ಉದುರುತ್ತಿದ್ದವು. ಆದರೆ, ಬಹುಶಃ ನಾನು ಮತ್ತು ನನ್ನ ಸ್ನೇಹಿತನಷ್ಟು ನಕ್ಕಿರುವವರು ಯಾರು ಇಲ್ಲ. ಏನಾಯಿತು ಹೇಳುತ್ತೇನೆ, ಕೇಳಿ, ನನ್ನ ಸ್ನೇಹಿತನ ಪಕ್ಕದಲ್ಲಿ, ¬ಂದು ಸಣ್ಣ ಹೆಣ್ಣು ಮಗು (ಸುಮಾರು ೩.೫ ,೪ ವರ್ಷವಿರಬಹುದು) ಕುಳಿತಿತ್ತು. ಆಗ ಅತ್ತಿತ್ತ ನೋಡದಿರು, outside bad weather'u ಹಾಡನ್ನು ಸ್ಟೇಜಿನ ಮೇಲೆ ಹಾಡುತ್ತಿದ್ದರು. ಚೆನ್ನಾಗಿತ್ತು. ಆಗ ಇದ್ದಕ್ಕಿದ್ದಂತೆ ಆ ಮಗು A, B, C, D , E , F ಅಂತ ರಾಗವಾಗಿ ಹಾಡಲಪ ಶುರುವಿಟ್ಟುಕೊಂಡುಬಿಡುವುದೆ. ಇರಲಿ ಅಂತ ನಾವಿಬ್ಬರು ಸುಮ್ಮನೆ ಕುಳಿತ್ತಿದ್ದೆವು. ಸರಿ Z, ಬಂತು ನಿಲ್ಲುತ್ತೇನೋ ಅಂದುಕೊಂಡರೆ, ಇನ್ನೊಂದು ಪದ ಹೊರಬಂತು. ಯಾವುದು ಗೊತ್ತೆ, A for apple ಅಲ್ಲರೀ, small a, small b, small c, small d, small e, small f,......small z. ಯಪ್ಪ ಮೊಬೈಲು ತಂದುಕೊಡುವೆ, ಡಾಲರ್ ಮನಿಯದುರು ರುಪಾಯಿ ಪೂರು. ಹಾಡಿಗಿಂತ, ಈ ಹಾಡು ಸಖತ್ ನಗು ಬರುಸ್ತು ಕಣ್ರೀ

- Login or register to post comments
- 1021 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಹಾಸ್ಯ ಬ್ರಹ್ಮ
ಆ ಮಗು ನಿಮ್ಮೆಲ್ಲರನ್ನೂ ರಂಜಿಸಿದೆ ಅಂದ ಮೇಲೆ ಹಾಸ್ಯ ಬ್ರಹ್ಮ ಅಥವಾ ಬ್ರಹ್ಮಿಣಿ ಆಗೋದ್ರಲ್ಲಿ ಸಂದೇಹವೇ ಇಲ್ಲ, ಬಿಡಿ.
ಆ ಮಗುವನ್ನು ವೇದಿಕೆ ಮೇಲೆ ಕರೆದೊಯ್ದಿದ್ದರೆ ಚೆನ್ನಾಗಿರ್ತಿತ್ತು.
ಅಂದ ಹಾಗೆ ಅಂದು ಹಾಸ್ಯ ಚಟಾಕಿ ಏರಿಸುತ್ತಿದ್ದ ಗಣ್ಯರು ಯಾರು? ಅವರೂ ಈ ಮಗುವಿನ ಹಾಡನ್ನು ಕೇಳಿದರೇ?
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಹಾಸ್ಯ ಭಾಷಣ
ಹಾಸ್ಯ ಚ(ಪ)ಟಾಕಿ (ಭಾಷಣ) ಹಚ್ಚಿಸಿದವರು ಕೃಷ್ಣೇಗೌಡ್ರು. ಆ ದಿನ ಎಸ್.ಎಂ ಕೃಷ್ಣ ಕೂಡ ಬಂದಿದ್ರು. ಈ ಬಾರಿ, ಬಿ.ಜಿ.ಎಲ್. ಸ್ವಾಮಿಯವರಿಗೆ ಮುಡಿಪಾಗಿಟ್ಟಿದ್ದರು.