ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಪರಸ್ಪರ ಮೂರ್ಖರನ್ನು ಮಾಡುವಾಟ ಎಷ್ಟು ಸರಿ?

April 1, 2008 - 4:27pm — agilenag
ಏನಪ್ಪಾ, ನಮ್ಮವರೇ ನನ್ನನ್ ಮೂರ್ಖನನ್ನಾಗಿಸ್ರಿದ್ರಲ್ಲಪ್ಪೋ

ಪರಸ್ಪರರಿಗೆ ಬಣ್ಣದೋಕುಳಿಯನ್ನೆರಚಿ ಸಂತೋಷವನ್ನು ಹಂಚಿಕೊಳ್ಳುವುದೇನೋ ದ್ವಾಪರದಿಂದ ಬಂದ ಭಾರತೀಯ ಹಬ್ಬ ಪರಂಪರೆ ಎಂದು ಹೇಳಬಹುದು. ಆದರೆ, ಈ ಪರಸ್ಪರರನ್ನು ಸುಳ್ಳಿನ ಕಂತೆ ಹೊಸೆದು ನಮ್ಮ ಅಚ್ಚುಮೆಚ್ಚಿನ ಗೆಳೆಯರು, ಸಂಬಂಧಿಕರನ್ನೇ ಕ್ಷಣ ಮಾತ್ರ ಮೂರ್ಖರನ್ನಾಗಿಸಿ ಆನಂದಿಸುವುದು ಎಷ್ಟು ಸರಿ? ನಮ್ಮಂತಹ ಹಬ್ಬ ಹರಿದಿನಗಳಿಲ್ಲದ, ವಿಶ್ವ ಬಂಧುತ್ವದ ವಿವೇಚನೆ ಇಲ್ಲದ ಪಾಶ್ಚಾತ್ಯರ ಈ ಮೂರ್ಖರಾಟವನ್ನು ನಾವೂ ಅನುಸರಿಸಿ ಆನಂದಿಸುವುದು ಎಷ್ಟು ಹಿತ ಮತ್ತು ಸರಿ? ಮೂರ್ಖರಾಗಲು ಏಪ್ರಿಲ್ ಒಂದನೇ ದಿನವೇ ಬೇಕೆ? ಬೇರೆ ದಿನಗಳಲ್ಲಿ ಯಾರೂ ಮೂರ್ಖರಾಗುವುದಿಲ್ಲವೆ? ಮೂರ್ಖರಾದವರ ಮನಸ್ಥಿತಿ ಕ್ಷಣದ ಮಟ್ಟಿಗಾದರೂ ಎಷ್ಟು ಪರಿತಪಿಸಿರಬಹುದೆಂಬ ವಿವೇಚನೆ ಮೂರ್ಖರನ್ನಾಗಿಸಿದವರಿಗಿರುತ್ತದೆಯೇ? ಇದು ನಂಬಿಕೆ ದ್ರೋಹವೂ ಆಗುವುದಿಲ್ಲವೆ? ಇನ್ನೊಬ್ಬರನ್ನು ಪೇಚಿಗೆ ಸಿಲುಕಿಸಿ ನಾವು ಸಂತೋಷ ಪಡುವುದು ಬಾಲಿಶವೆನಿಸುವುದಿಲ್ಲವೆ? ಸಂಪದದ ಓದುಗರು ಉತ್ತರವಿತ್ತಾರೇ?
ಇಂದಿನ ಯುವಜನಾಂಗ ನಮ್ಮ ಹಬ್ಬ ಹರಿದಿನಗಳನ್ನು ಬದಿಗೊತ್ತಿ, ಪ್ರೇಮದ ದಿನ, ಮೂರ್ಖರ ದಿನ, ಅಪ್ಪನ ದಿನ, ಅಮ್ಮನ ದಿನ ಹೀಗೆ ವಿವಿಧ ಬಗೆಯ ದಿನ (ಎಂದರೆ ತಿಥಿ - ಶ್ರಾದ್ಧ) ಆಚರಿಸುವುದನ್ನು ನೋಡಿದಾಗ ಮನಸ್ಸು ಕಸಿವಿಸಿಯಾಗುವುದಿಲ್ಲವೇ?
ಎ.ವಿ. ನಾಗರಾಜು.

  • ಚಿಂತನೆ
~.~
  • Login or register to post comments
  • 398 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 1, 2008 - 8:59pm — ಶ್ರೀನಿಧಿ

ಉ: ಪರಸ್ಪರ ಮೂರ್ಖರನ್ನು ಮಾಡುವಾಟ ಎಷ್ಟು ಸರಿ?

ಶ್ರೀನಿಧಿ's picture

ಯಾಕಾಗ್ಬಾರ್ದು? ಯಾರಿಗೂ ಮೈ-ಕೈ ನೋವಾಗದಂತೆ ಸ್ವಲ್ಪ ಹಾಸ್ಯ ಮಾಡಿ ಮಜ ತಗೊಂಡರೆ ಏನು ತಪ್ಪು? ಏಲ್ಲದಕ್ಕೂ ನಮ್ಮ ಪರಂಪರೆ ಹಾಗಲ್ಲ-ಹೀಗಲ್ಲ ಅಂತ ಬೇಲಿ ಕಟ್ಟಿಕೊಳ್ಳುವುದು ಯಾಕೆ?

ಅಷ್ಟಕ್ಕೂ ಈ ರೀತಿ ತಮಾಷೆ ಎಲ್ಲಾನಮ್ಮ ಪರಂಪರೆ ಅಲ್ಲ ಎಂದರೆ ನಿಮಗೆ ತೆನಾಲಿ ರಾಮ, "ನಗೆಗಾರ" ನಯಸೇನ ಮುಂತಾದವರು ಗೊತ್ತಿಲ್ಲ್ ಎಂದೇ ಹೇಳಬೇಕು.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 1, 2008 - 10:35pm — hpn

ಉ: ಪರಸ್ಪರ ಮೂರ್ಖರನ್ನು ಮಾಡುವಾಟ ಎಷ್ಟು ಸರಿ?

hpn's picture

ಹೌದಲ್ವ Smiling ಅಲ್ಲದೆ ತೆನಾಲಿರಾಮ ಏಪ್ರಿಲ್ ೧ ರವರೆಗೂ ಕಾದಿರುತ್ತಿದ್ದಂತಿಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 1, 2008 - 11:35pm — ಗಣೇಶ

ಉ: ಪರಸ್ಪರ ಮೂರ್ಖರನ್ನು ಮಾಡುವಾಟ ಎಷ್ಟು ಸರಿ?

ಗಣೇಶ's picture

ತಾವು ದಿನಾ ಟಿ.ವಿ.ಯಲ್ಲಿ ಬರುವ 'ಕುರಿಗಳು ಸಾರ್ ಕುರಿಗಳು', ಮಕ್ಮಲ್ ಟೋಪಿ ಇತ್ಯಾದಿ ಸೀರಿಯಲ್ಗಳನ್ನು ನೋಡಿಲ್ಲ ಕಾಣುತ್ತದೆ.
ಎಲ್ಲಾ ಸೀರಿಯಲ್ ಗಳೂ ನಮ್ಮನ್ನು ಖ ಖ ಖ ಮಾಡುವವೇ.
ಎಲ್ಲಾ ರಾಜಕಾರಣಿಗಳೂ " " "
ಎಲ್ಲಾ ವ್ಯಾಪಾರಿಗಳೂ " " "
ಎಲ್ಲಾರು ದಿನಾ ಖಖಖ ಮಾಡುತ್ತಿದ್ದಾರೆ ಸಾರ್.

ಆದರೆ ಎಪ್ರಿಲ್ ೧ ಹಾಗಲ್ಲ. ಎಲ್ಲರೂ ಜಾಗರೂಕರಾಗಿದ್ದಾಗಲೂ ಅವರನ್ನು(ತಮ್ಮವರನ್ನೇ) ಪೇಚಿಗೆ ಸಿಲುಕಿಸುವುದರ ಮಜವೇ ಬೇರೆ. ಆ ಕ್ಷಣಕ್ಕೆ ಬೇಸರವಾದರೂ ನಂತರ ಆಗಾಗ ನೆನೆಸಿ ಖುಷಿ ಪಡುವರು.
ಅದು ಕುರಿಗಳು,ಮಕ್ಮಲ್ ಟೋಪಿ ತರಹ ಜನಕ್ಕೆ ಹಿಂಸೆ ಆಗಬಾರದು ಅಷ್ಟೆ.
ಟಿ.ವಿ ೯ ನಲ್ಲಿ- ಕೃಷ್ಣ ಮುಖ್ಯಮಂತ್ರಿ ಅಭ್ಯರ್ಥಿ,ಧರ್ಮಸಿಂಗ್ ಜಮ್ಮು ಕಾಶ್ಮೀರದ ರಾಜ್ಯಪಾಲ..ಇತ್ಯಾದಿ ನ್ಯೂಸ್ ನೋಡಿ ನಕ್ಕೂ ನಕ್ಕೂ ಸುಸ್ತಾಯ್ತು. ಎಂದಾದರೂ ನ್ಯೂಸ್ ಗೆ ನಗುವ ಚಾನ್ಸ್ ಸಿಗುವುದಾ?
ಇದೇ ರೀತಿ 'ಸಂಪದದ ಕೊನೆಯ ದಿನಗಳು' ಒಳ್ಳೆ ಐಡಿಯ.ನಿಮ್ಮ ಪ್ರತಿಕ್ರಿಯೆಯೂ ಚೆನ್ನಾಗಿತ್ತು.

ಒಂದು ದಿನವಾದರೂ ನಮ್ಮಂತಹ ಖಖಖರಿಗೆ ಮೀಸಲಿರಲಿ.
ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 2, 2008 - 3:53am — rameshbalaganchi

ಉ: ಪರಸ್ಪರ ಮೂರ್ಖರನ್ನು ಮಾಡುವಾಟ ಎಷ್ಟು ಸರಿ?

rameshbalaganchi's picture

ನೀವೆಲ್ಲ ಹೇಳುವುದರಲ್ಲೂ ನಿಜದ ತುಣುಕಿದೆ. ಆದರೆ ನಾಗರಾಜು ಅವರ ಮಾತಿನಲ್ಲಿರುವ ಗಂಭೀರ ತಧ್ಯವನ್ನು ಕಡೆಗಣಿಸುವಂತಿಲ್ಲ. ಯಾವ ತಮಾಷೆ ಯಾರನ್ನು ಎಷ್ಟು ಕಲಕಬಹುದು ಎಂಬ ಅರಿವಿಲ್ಲದೆ ವರ್ತಿಸುವುದರ ಬಗ್ಗೆ ನಾವು ಯೋಚಿಸಬೇಕು. ಇಂಥದ್ದೇ ವರ್ತನೆಯ ಮತ್ತೊಂದು ಮುಖ ನೋಡಿ!! ನಿನ್ನೆ ನನಗೆ ಪರಿಚಿತರಿಂದ ಬೆಳಿಗ್ಗೆ ತಿಂಡಿಯ ಹೊತ್ತಿನಲ್ಲಿ ಒಂದು ಎಸ್.ಎಂ.ಎಸ್. ಬಂತು. ಅದರಲ್ಲಿ "ವಾಜಪೇಯಿಯವರು ತೀರಿಕೊಂಡಿದ್ದಾರೆಂದು ತಿಳಿಸಲು ವಿಷಾದಿಸುತ್ತೇವೆ. ವಿವರ ಸುದ್ದಿಗಾಗಿ ಟಿ.ವಿ. ನೋಡಿ" ಎಂದಿತ್ತು. ನಮ್ಮ ಮನೆಯವರು ಇದು ಏಪ್ರಿಲ್ ಕುಚೇಷ್ಟೆ ಇರಬಹುದು ಎಂದು ಹೇಳಿದರೂ ದೇಶವಾಳಿದ ಹಿರಿಯರೊಬ್ಬರ ವಿಷಯದಲ್ಲಿ ಯಾರೂ ತಮಾಷೆ ಮಾಡಲಾರರು ಎಂದು ತಿಳಿದು ಟಿ.ವಿ. ಹಾಕಿದೆ. ನಮ್ಮ ಮನೆಯವರ ಅನುಮಾನ ಪೂರ್ತಿ ನಿಜವಾಗಿತ್ತು. ವಾಜಪೇಯಿಯವರು ಬದುಕಿರುವುದಕ್ಕೆ ಸಂತೋಷವಾದರೂ (ನಾನು ಬಿ.ಜೆ.ಪಿಯವನೂ ಅಲ್ಲ ಮತ್ತವರ ಅಭಿಮಾನಿಯೂ ಅಲ್ಲ) ಇಂಥ ತಮಾಷೆಗಳ ಉದ್ದೇಶದ ಬಗ್ಗೆ ಗಂಭೀರವಾಗಿ ಯೋಚಿಸುವಂತಾಯಿತು. ಕಹಿ ಸತ್ಯ ಹೇಳಿರುವುದಕ್ಕಾಗಿ ನಾಗರಾಜು ಅವರಿಗೆ ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 2, 2008 - 10:46am — agilenag

ಉ: ಪರಸ್ಪರ ಮೂರ್ಖರನ್ನು ಮಾಡುವಾಟ ಎಷ್ಟು ಸರಿ?

agilenag's picture

ನನ್ನ ಅನಿಸಿಕೆಗಳಿಗೆ ಪ್ರತಿಕ್ರಿಯಿಸಿರುವುದಕ್ಕೆ ಧನ್ಯವಾದಗಳು. ನನಗೆ ತಿಳಿದಂತೆ ತೆನಾಲಿ ರಾಮಕೃಷ್ಣ, ನಯಸೇನ, ಬೀರಬಲ್ ಇವರೆಲ್ಲರೂ ಬುದ್ದಿವಂತರು. ವಿನಾಕಾರಣ ಯಾರನ್ನೂ ತಮಾಶಿ ಮಾಡಿ ಮಜ ತೆಗೆದುಕೊಂಡವರಲ್ಲ. ಯಾರಾದರೂ ತಮ್ಮನ್ನಾಗಲೀ, ತಮ್ಮನ್ನಾಳುತ್ತಿದ್ದ ರಾಜರನ್ನಾಗಲೀ ಮೂರ್ಖರನ್ನಾಗಿಸಲು ಬಂದರೆ, ಅದಕ್ಕೆ ಮಾರುತ್ತರವನ್ನು ಅದೇ ವರಸೆಯಲ್ಲಿ ನೀಡುತ್ತಿದ್ದರು. ತಮ್ಮ ದೊರೆಯೇ ಮೂರ್ಖತನವನ್ನು ತೋರಿದಾಗ, ಅದಕ್ಕೂ ಅವರು ಜಾಣ್ಮೆಯ ಉತ್ತರ ನೀಡಿ, ದೊರೆಯ ಅಜ್ಞಾನವನ್ನು ಹೋಗಲಾಡಿಸುತ್ತಿದ್ದರು. ಅವರು ನಡೆಸುತ್ತಿದ್ದುದು ಒಂದು ರೀತಿಯ ಮಾರಲ್ ಟೀಚಿಂಗ್. ಅವರಾಗಿಯೇ ಎಂದೂ ಯಾರನ್ನೂ ಮೂರ್ಖರನ್ನಾಗಿಸಿದ ಕಥೆಯನ್ನು ನಾನೆಲ್ಲೂ ಓದಿಲ್ಲ, ಕೇಳಿಲ್ಲ. ತಮ್ಮಲ್ಲಿ ಯಾರಿಗಾದರೂ ಈ ನನ್ನ ಅನಿಸಿಕೆಗಳಿಗೆ ವಿರುದ್ದವಾದ ಕಥೆಯೊಂದಾದರೂ ಗೊತ್ತಿದ್ದರೆ, ದಯವಿಟ್ಟು ತಿಳಿಸಿ.
ಅಲ್ಲದೆ, ಈ ಮೂರ್ಖರ ದಿನ ಹಾಗು ಇನ್ನಿತರ ದಿನಗಳು ಪಾಶ್ಚಿಮಾತ್ಯರ ಅಂಧಾನುಕರಣೆ ಎಂದೇ ನನ್ನ ಅನಿಸಿಕೆ. ವಿಶ್ವಕ್ಕೇ ನಾಗರಿಕತೆಯ ವಿಶ್ವವಿದ್ಯಾಲಯವಾಗಬಲ್ಲ ಭಾರತಕ್ಕೆ ಇವೆಲ್ಲಾ ಬೇಕೆ?
ಎ.ವಿ. ನಾಗರಾಜು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 2, 2008 - 3:15pm — madhava_hs

ಉ: ಪರಸ್ಪರ ಮೂರ್ಖರನ್ನು ಮಾಡುವಾಟ ಎಷ್ಟು ಸರಿ?

madhava_hs's picture

ಅಗಿಲೆನಾಗ್ ರ ಅಭಿಪ್ರಾಯ ನನಗೂ ಸರಿ ಎನ್ನಿಸಿತು. ನಾವೇಕೆ ಎಲ್ಲದರಲ್ಲೂ ಪಾಶ್ಚಾತ್ಯರನ್ನನುಸರಿಸುತ್ತೇವೆ? ಗುಲಾಮಗಿರಿಯ ಸಂಕೇತವೇ?ಇನ್ನೊಬ್ಬನನ್ನು ಮಂಗ ಮಾಡಿ ಮಜ ತೆಗೆದುಕೊಳ್ಲುವುದು ಎಷ್ಟು ಸರಿ? ಇವೆಲ್ಲಾ ವ್ಯರ್ಥಕಾಲಕ್ಷೇಪಗಳಷ್ಟೇ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 2, 2008 - 4:53pm — vikashegde

ಉ: ಪರಸ್ಪರ ಮೂರ್ಖರನ್ನು ಮಾಡುವಾಟ ಎಷ್ಟು ಸರಿ?

vikashegde's picture

ಎ.ವಿ.ನಾಗರಾಜು ರವರ ಅಭಿಪ್ರಾಯಕ್ಕೆ ನನ್ನದೂ ಸಹಮತವಿದೆ. ಏಪ್ರಿಲ್ ಒಂದು ಮೂರ್ಖರ ದಿನ ಎಂದು ಬಾಲಿಶವಾದ ತಂತ್ರಗಳನ್ನು ಮಾಡುತ್ತಾ ಇತರರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುವವರೇ ನಿಜವಾದ ಮೂರ್ಖರು. ಮೂರ್ಖರ ದಿನ ಹೇಗೆ ರೂಢಿಗೆ ಬಂತು ಎಂದು ತಿಳಿದುಕೊಳ್ಳದಿರುವ ಮೂರ್ಖರು ಸುಮ್ಮನೇ ಅಂಧಾನುಕರಣೆ ಮಾಡಿ ಮೂರ್ಖರಾಗುತ್ತಿರುವುದನ್ನು ನೋಡಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗ್ನು/ಲಿನಕ್ಸ್ ಹಬ್ಬ - ಏಪ್ರಿಲ್ ೨೬ ರಂದು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ
  • ತಪ್ಪಿದ ಲೆಕ್ಕ
  • ನಾಳೆ ಹಬ್ಬ!
  • ಕ್ಷಣ - ಬದುಕು
  • ಹಬ್ಬ ಬಂತು ಹಬ್ಬ
Syndicate content

ಲೇಖಕರು

agilenag's picture

ಪೂರ್ಣ ಹೆಸರು
A.V. Nagaraju

ಪರಿಚಯ

I am a retired (VRS) Bank Officer. I have a flair for writing in Kannada as well as English.

Recently, I along with the help of my family members released a book on Family Tree of our family, commencing from 1700 AD. The book was acclaimed by many well known historians and writers like Prof. Suryanatha Kamath, Horeyala Doreswamy and Babu Krishnamurthy. Late Mathighatta Krishnamurthy who has given foreword to the book has called it as a unique contribution to Kannada literary world.

Another achievement is renovation of a 1200 year old Udbhava Kalleshwara Temple at Belavadi, Chikkamagalur Dist, Karnataka and that too was appreciated many luminaries like Sri Gowrishankar, Administrator, Shringeri Sharada and the like.

I am working presently on the Editorial Board of GEJJEHEJJE Monthly Theatre Magazine.

I also undertake translation of legal, technical and literary works from Kannada to English and vice-versa.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • Atlantadalli gaade gaurajji
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
  • ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
  • ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 7, 2008 - 12:57pm
  • harshab
    ಉ: ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
    October 7, 2008 - 12:52pm
  • Shivakumar.Revadi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 7, 2008 - 12:44pm
  • anil.ramesh
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:44pm
  • savithasr
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:30pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:29pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:29pm
  • ASHOKKUMAR
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:25pm
  • ASHOKKUMAR
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 7, 2008 - 12:18pm
  • savithasr
    ಉ: ಕಳೆದ ನೆನೆಪುಗಳು
    October 7, 2008 - 11:44am
ಇನ್ನಷ್ಟು
ಈಗಿನಂತೆ 17 ಸದಸ್ಯರು ಮತ್ತು 175 ಅತಿಥಿಗಳು ಆನ್ಲೈನ್ ಇರುವರು.


ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator